ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಲ್ಲಿಸಿದ ನಾಮಪತ್ರವನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲವೆಂದು ಶಾಸಕಿ ಅಂಜಿಲಿ ನಿಂಬಾಳ್ಕರ್ ಹೇಳಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಹಕಾರ ಸಂಘದಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ವಾಪಾಸ್ ಪಡೆಯುವುದಿಲ್ಲವೆಂದು ತಿಳಿಸಿದ್ದಾರೆ. ನನ್ನ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ, ಎಂಇಎಸ್ ಮುಖಂಡರೊಂದಿಗೂ ಸಹ ಮಾತನಾಡಿದ್ದೇನೆ. …
Read More »Yearly Archives: 2020
ಪ್ರೇಮ ಕವಿ, ಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿಸಿದ ಪ್ರಮುಖ ಆರೋಪಿ ಗಂಗಾ ಕುಲಕರ್ಣಿ ವಿಷ ಸೇವಿಸಿ ಆತ್ಮಹತ್ಯೆ
ಕೊಪ್ಪಳ : ಪ್ರೇಮ ಕವಿ, ಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿಸಿದ ಪ್ರಮುಖ ಆರೋಪಿ ಗಂಗಾ ಕುಲಕರ್ಣಿ ಗುರುವಾರ ಜಿಲ್ಲೆಯ ಕುಷ್ಟಗಿ ನ್ಯಾಯಾಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ 3 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಳು. ಈ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಗಂಗಾಳನ್ನು ಪೊಲೀಸರು ಕರೆ ತಂದಿದ್ದರು. ಆದರೆ ಗಂಗಾ ನ್ಯಾಯಾಲಯಕ್ಕೆ ಆಗಮಿಸುವ ಮೊದಲೇ ವಿಷ ಸೇವಿಸಿ ಕೋರ್ಟ್ ಆಗಮಿಸಿದ್ದರು. ಇದರಿಂದ ಕೋರ್ಟ್ …
Read More »ಉಪಚುನಾವಣೆ ಬೆನ್ನಲ್ಲೇ ಸಿಎಂ ಕುರ್ಚಿ ಕಾಲೆಳೆಯುವ ವಾಕ್ಸಮರ ಆರಂಭ ಇನ್ನು 15-20ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆB.S.Y..: ಸಿದ್ದರಾಮಯ್ಯ:
ಬೆಂಗಳೂರು: ಉಪಚುನಾವಣೆ ಬೆನ್ನಲ್ಲೇ ಸಿಎಂ ಕುರ್ಚಿ ಕಾಲೆಳೆಯುವ ವಾಕ್ಸಮರ ಆರಂಭವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನು 15-20ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿದ ಸಿದ್ದರಾಮಯ್ಯ, ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಕೂಡ ಅಂತ್ಯವಾಗಲಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾದರೆ ಬಿಜೆಪಿ ಸರ್ಕಾರ ಪತನವಾಗಿ, ಮತ್ತೆ ಚುನಾವಣೆ ಎದುರಾಗುವುದು ಖಚಿತ ಎಂದು ಹೇಳಿದರು. ಇದೇ ವೇಳೆ …
Read More »ಡಿಸಿಸಿ ಬ್ಯಾಂಕಿಗೆ ಈವರೆಗೆ ಅವಿರೋಧ ಆಯ್ಕೆಯಾದವರ ಹೆಸರುಗಳನ್ನು ರಮೇಶ ಕತ್ತಿ ತಿಳಿಸಿದರು.
ಡಿಸಿಸಿ ಬ್ಯಾಂಕಿಗೆ ಈವರೆಗೆ ಅವಿರೋಧ ಆಯ್ಕೆಯಾದವರ ಹೆಸರುಗಳನ್ನು ರಮೇಶ ಕತ್ತಿ ತಿಳಿಸಿದರು. ಅಪ್ಪಾಸಾಹೇಬ ಮಾರುತಿ ಕುಲಗುಡೆ, ಅಣ್ಣಾಸಾಹೇಬ ಜೊಲ್ಲೆ, ರಮೇಶ ಕತ್ತಿ, ಶಿವಾನಂದ ಡೋಣಿ, ರಾಜೇಂದ್ರ ಅಂಕಲಗಿ, ಆನಂದ ಮಾಮನಿ, ಅಶೋಕ ರಾಜಗೌಡ, ಸುಭಾಷ ಡವಳೇಶ್ವರ, ನೀಲಕಂಠ ಕಪ್ಪಲಗುದ್ದಿ, ಪಂಚನಗೌಡ ದ್ಯಾಮನಗೌಡ ಅವಿರೋಧ ಆಯ್ಕೆಯಾಗಿದ್ದಾರೆ.ಇನ್ನೂ 6 ಕ್ಷೇತ್ರಗಳಿಗೆ ಆಯ್ಕೆಯಾಗಬೇಕಿದ್ದು, ನಾಳೆ ಅವಿರೋಧ ಆಯ್ಕೆ ಮಾಡುವುದಾಗಿ ರಮೇಶ ಕತ್ತಿ ತಿಳಿಸಿದ್ದಾರೆ.ಪಕ್ಷದ ಪರಿವಾರದ ಸೂಚನೆಯಂತೆ ರೈತರ ಏಳಿಗೆಗಾಗಿ ನಮ್ಮಲ್ಲಿರುವ ಭಿನ್ನಾಪ್ರಾಯ ಬದಿಗಿಟ್ಟು ಒಗ್ಗಟ್ಟಾಗಿ …
Read More »ಉತ್ತರ ಕರ್ನಾಟಕದವರು ಬಹಳ ವರ್ಷಗಳಿಂದ ಮುಖ್ಯಮಂತ್ರಿಯಾಗಿಲ್ಲ. ಹೀಗಾಗಿ ಮುಂದಿನ ಸಿಎಂ ಈ ಭಾಗದವರೇ ಆಗಬೇಕು: ರಮೇಶ ಕತ್ತಿ
ಬೆಳಗಾವಿ : ಉತ್ತರ ಕರ್ನಾಟಕದವರು ಬಹಳ ವರ್ಷಗಳಿಂದ ಮುಖ್ಯಮಂತ್ರಿಯಾಗಿಲ್ಲ. ಹೀಗಾಗಿ ಮುಂದಿನ ಸಿಎಂ ಈ ಭಾಗದವರೇ ಆಗಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು. ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿದ ಅವರು, ಸಹೋದರ ಉಮೇಶ್ ಕತ್ತಿ ಮಂತ್ರಿನೇ ಆಗುತ್ತಿಲ್ಲ. ಇನ್ನು ಮುಖ್ಯಮಂತ್ರಿ ಹೇಗೆ ಆಗುತ್ತಾರೆ. ಸಹೋದರನಿಗೆ ಸಿಪಾಯಿ ಆಗಾಕ್ ಆಗವಲ್ದು, ಡಿಸಿ ಹೆಂಗ್ ಆಗ್ತಾನಾ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಉಮೇಶ ಕತ್ತಿ ಹಿರಿಯ ರಾಜಕಾರಣಿಯಾಗಿದ್ದು, ಅನುಭವ ಇದೆ. ಮೂವರು …
Read More »ಕರಾವಳಿಯ 5 ಭಾಗಗಳಲ್ಲಿ ಎಂಕೆ-4 ಮಾದರಿಯ ಡೈರಕ್ಷನಲ್ ವೇವ್ ರೈಡರ್ ಬಾಯ್
ಕಾರವಾರ: ಕಳೆದ ಹಲವು ವರ್ಷಗಳಿಂದ ಹವಾಮಾನ ವೈಪರಿತ್ಯ ಸೇರಿದಂತೆ ದೇಶದ ಕಡಲಿನಲ್ಲಾಗುವ ಬದಲಾವಣೆಯನ್ನು ತಕ್ಷಣ ಗುರುತಿಸಿ ಮಾಹಿತಿ ರವಾನೆ ಮಾಡಲು ಹವಾಮಾನ ಇಲಾಖೆಗೆ ಕಷ್ಟಸಾಧ್ಯವಾಗುತಿತ್ತು. ಇದರಿಂದ ಮಳೆ, ಸಮುದ್ರದಲ್ಲಿ ವೈಪರಿತ್ಯ ಆಗುವ ಮೊದಲೇ ನಿಖರವಾಗಿ ಮಾಹಿತಿ ನೀಡಲಾಗುತ್ತಿರಲಿಲ್ಲ. ಆದರೆ ಕೇಂದ್ರ ಸರ್ಕಾರ ಈಗ ದೇಶದ ಕರಾವಳಿ ಭಾಗದಲ್ಲಿ ಹೊಸ ತಂತ್ರಜ್ಞಾನ ಹೊಂದಿದ ಎಂಕೆ-4 ಮಾದರಿಯ ಡೈರಕ್ಷನಲ್ ವೇವ್ ರೈಡರ್ ಬಾಯ್ ಅನ್ನು ಕರಾವಳಿಯ 5 ಭಾಗಗಳಲ್ಲಿ ಅಳವಡಿಸುತ್ತಿದೆ. ಕರ್ನಾಟಕ ರಾಜ್ಯದ …
Read More »ಹದಗೆಟ್ಟ ರಸ್ತೆಗಳಿಗಿಲ್ಲ ಮುಕ್ತಿ – ಅಂಬುಲೆನ್ಸ್ ನಲ್ಲೇ ಹೆರಿಗೆ
ರಾಯಚೂರು: ಕೆಟ್ಟ ರಸ್ತೆಗಳನ್ನ ಕಂಡಾಗ ಗರ್ಭಿಣಿಯರಿಗೆ ಇಲ್ಲೆ ಹೆರಿಗೆಯಾಗಿ ಬಿಡುತ್ತೆ ಅಂತ ಉದ್ಘಾರ ತೆಗೆಯುವುದು ಸಾಮಾನ್ಯ. ಆದರೆ ಅದು ರಾಯಚೂರು ಪಾಲಿಗೆ ಬಹುತೇಕ ನಿಜವಾಗಿದೆ. ಯಾಕಂದ್ರೆ ರಾಯಚೂರಿನ ರಸ್ತೆಗಳಲ್ಲೇ ಹೆರಿಗೆಯಾಗುವುದು ಸಾಮಾನ್ಯವಾಗಿದೆ. ಈ ಅಂಕಿ ಅಂಶಗಳನ್ನ ನೋಡಿದ್ರೆ ನೀವು ಗಾಬರಿಯಾಗದೆ ಇರಲ್ಲ. ಆಸ್ಪತ್ರೆ ಸೇರುವ ಮುನ್ನವೇ ಅಂಬುಲೆನ್ಸ್ ನಲ್ಲಿ ಹೆರಿಗೆಯಾಗುವುದರಲ್ಲಿ ರಾಜ್ಯದಲ್ಲೇ ರಾಯಚೂರು ಈಗ ನಂಬರ್ 1 ಆಗಿದೆ.ಅಂಬುಲೆನ್ಸ್ ನಲ್ಲಿ ಆರೋಗ್ಯ ಕವಚ ಸಿಬ್ಬಂದಿ ಸುಲಭ ಹೆರಿಗೆ ಮಾಡುವ ಮೂಲಕ …
Read More »ನಕಲಿ ಸಹಿ ಬಳಸಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಆರೋಪದಡಿ ಸುಧೀರ್ ಅಂಗೂರ್, ಶೈಲಜಾ ಸೇರಿ 10 ಜನರ ವಿರುದ್ಧ FIR ದಾಖಲಾಗಿದೆ.
ಆನೇಕಲ್: ನಕಲಿ ಸಹಿ ಬಳಸಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಆರೋಪದಡಿ ಸುಧೀರ್ ಅಂಗೂರ್, ಶೈಲಜಾ ಸೇರಿ 10 ಜನರ ವಿರುದ್ಧ FIR ದಾಖಲಾಗಿದೆ. ಕಾಲೇಜ್ ಶುಲ್ಕ, ಟ್ಯೂಷನ್ ಫೀ, ಹಾಸ್ಟೆಲ್ ಫೀ ಎಂದು ಮಧುಕರ್ ಅವರ ನಕಲಿ ಸಹಿ ಬಳಸಿಕೊಂಡು ವಿದ್ಯಾರ್ಥಿಗಳ ಬಳಿ ಹಣ ವಸೂಲಿ ಮಾಡಿ ದುರುಪಯೋಗ ಮಾಡಿದ್ದಾರೆ ಎಂದು ಅಲಯನ್ಸ್ ವಿವಿ ಸಂಸ್ಥಾಪಕ ಮಧುಕರ್ ಅಂಗೂರ್ ದೂರು ದಾಖಲಿಸಿದ್ದರು. ದೂರು ಆಧರಿಸಿ ಸುಧೀರ್ ಅಂಗೂರ್, ಶೈಲಜಾ ಸೇರಿ …
Read More »ರಾತ್ರೋರಾತ್ರಿ ಎಡಿಜಿಪಿ ಶ್ರೇಣಿಯ IPS ಅಧಿಕಾರಿ ಡಾ.ಪಿ. ರವೀಂದ್ರನಾಥ್ ಕಂಟ್ರೋಲ್ ರೂಂಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು: ರಾತ್ರೋರಾತ್ರಿ ಎಡಿಜಿಪಿ ಶ್ರೇಣಿಯ IPS ಅಧಿಕಾರಿ ಡಾ.ಪಿ. ರವೀಂದ್ರನಾಥ್ ಕಂಟ್ರೋಲ್ ರೂಂಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ 10.30ಕ್ಕೆ ಕಂಟ್ರೋಲ್ ರೂಂಗೆ ತೆರಳಿ ಅಲ್ಲಿದ್ದ ಸಿಬ್ಬಂದಿ ಕೈಗೆ ರವೀಂದ್ರನಾಥ್ ರಾಜಿನಾಮೆ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಸಮಾಧಾನ ಭುಗಿಲೆದ್ದಿರುವುದು ಗೋಚರವಾಗುತ್ತಿದೆ. ಸೀನಿಯಾರಿಟಿ ಇಲ್ಲದಿದ್ದರೂ ಸುನಿಲ್ ಕುಮಾರ್‌ಗೆ ಎಡಿಜಿಪಿ ಶ್ರೇಣಿಯಿಂದ ಡಿಜಿಪಿ ಶ್ರೇಣಿಗೆ ಬಡ್ತಿ ನೀಡಿರುವುದಕ್ಕೆ ರವೀಂದ್ರನಾಥ್ ಅಸಮಧಾನಗೊಂಡು ಈ ರೀತಿ ನಿರ್ಧಾರ …
Read More »ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಮಲ್ಪೆ ಮೀನುಗಾರಿಕಾ ಬಂದರಲ್ಲಿ ಮೀನು ಹೆಕ್ಕುತ್ತಿದ್ದ 17 ಮಕ್ಕಳು ಇಲಾಖೆ ರಕ್ಷಿಸಿದೆ.
ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣಾ ಘಟಕ ಕಾರ್ಮಿಕ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 17 ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಮಲ್ಪೆ ಮೀನುಗಾರಿಕಾ ಬಂದರಲ್ಲಿ ಮೀನು ಹೆಕ್ಕುತ್ತಿದ್ದ 17 ಮಕ್ಕಳು ಇಲಾಖೆ ರಕ್ಷಿಸಿದೆ. ರಕ್ಷಿಸಲ್ಪಟ್ಟ ಬಾಲಕಾರ್ಮಿಕರೆಲ್ಲ ಕೊಪ್ಪಳ, ಬಳ್ಳಾರಿ ಮೂಲದವರು. ಈ ಜಂಟಿ ಕಾರ್ಯಾಚರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಾಥ್ ನೀಡಿದೆ. ಹಾಗೂ ಮಕ್ಕಳ ಸಹಾಯವಾಣಿ ನಾಗರಿಕ ಸೇವಾ ಟ್ರಸ್ಟ್ ಕಾರ್ಯಕರ್ತರು ರಕ್ಷಣೆಗೆ …
Read More »