ಗೋಕಾಕ : ನಾಳೆ ಬೆಳಿಗ್ಗೆ 8.00 ಗಂಟೆಗೆ ಗ್ರಾಮ ಪಂಚಾಯತ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಾರಂಭವಾಗುವುದು. Covid ಇರುವ ಕಾರಣ ಅಭ್ಯರ್ಥಿ ಅಥವಾ ಏಜೆಂಟ್ ಒಬ್ಬರಿಗೆ ಮಾತ್ರ ಒಳಗೆ ಅವಕಾಶ ಇದೆ. ಎಣಿಕೆ ಕೊಠಡಿಯ ಒಳಗೆ ಮೊಬೈಲ್, ನೀರಿನ ಬಾಟಲ್, ಯಾವುದೇ ದ್ರವ ವಸ್ತು, ಗುಟ್ಕಾ, ಪಾನ, ಸಿಗರೇಟ್ , ಕಡ್ಡಿ ಪೊಟ್ಟಣ, ಬ್ಲೇಡ್ ಅಥವಾ ಹರಿತವಾದ ವಸ್ತು, ಇತ್ಯಾದಿಗಳಿಗೆ ಅವಕಾಶ ಇರುವುದಿಲ್ಲ. ಸಂಪೂರ್ಣ ನಿಷೇಧ ಇರುತ್ತದೆ ಮತ್ತು …
Read More »Daily Archives: ಡಿಸೆಂಬರ್ 29, 2020
ನಾಳೆ ಅಬ್ಯರ್ಥಿಗಳ ನಡೆ ಮತ ಎಣಿಕೆಯ ಕಡೆ, ಆದರೆ…….?
ಗ್ರಾಮ ಪಂಚಾಯತ ಚುನಾವಣೆ ಮುಗಿದಿದೆ.ಮತ ಎಣಿಕೆ ಮಾತ್ರ ಬಾಕಿ ಇದೆ .ನಾಳೆ ಪಲಿತಾಂಶ ಹೊರಬಿಳಲಿದೆ.ಫಲಿತಾಂಶ ಹೊರಬಿದ್ದ ಕೂಡಲೆ ಸೋಲು ಗೆಲುವು ತಿಳಿಯುತ್ತದೆ.ಆದರೆ ಸೋಲು – ಗೆಲುವು ಇದ್ದದೇ. ನಾವೆಲ್ಲರೂ ಯೊಚಿಸಬೇಕಾದ ವಿಷಯ ಕೂಡ ಅದೆ ಎನೆಂದರೆ ಸೋಲುವವರು ಗೆಲ್ಲೂವವರೂ ನಮ್ಮದೆ ಊರಿನವರು,ನಮ್ಮದೆ ಗ್ರಾಮದವರೂ ಆದಕಾರಣ ಗೆದ್ದವರೂ ಸೊತವರ ಮನಸ್ಸನ್ನು ನೋವಿಸುವಂತಹ,ಹಿಯ್ಯಾಳಿಸುವಂತಹ ಕಾರ್ಯಕ್ಕೆ ಯಾರು ಇಳಿಯಬಾರದು.ಎಕೆಂದರೆ ಗ್ರಾಮ ಪಂಚಾಯತ ಚುನಾವಣೆಯೂ ಯಾವುದೆ ಜಾತಿ – ಧರ್ಮ ಅಥವಾ ವರ್ಗಕ್ಕೆ ಸಂಬಂದಿಸಿದಲ್ಲ.ಈ ಚುನಾವಣೆಯು …
Read More »ನಾಡಿನ ಒಳಿತಿಗಾಗಿ ಈ ಪುಣ್ಯಕಾರ್ಯವನ್ನು ಹಮ್ಮಿಕೊಂಡಿದ್ದ ಜೊಲ್ಲೆ
ಯಕ್ಸಂಬಾ ಇಂದು 9ನೇ ಪ್ರೇರಣಾ ಉತ್ಸವದ ಅಂಗವಾಗಿ, ಶ್ರೀ ಜ್ಯೋತಿಬಾ ಮಂದಿರದವರೆಗೆ ನಡೆದ ಭಕ್ತಿ ಸಮರ್ಪಣೆಯ ಸಾಮೂಹಿಕ ಗುಗ್ಗುಳೋತ್ಸವಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ …
Read More »ನಟ ರಾಮ್ ಚರಣ್, ನನಗೆ ಕೋವಿಡ್ ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಟ್ವೀಟ್ ಮೂಲಕ ಸ್ಪಷ್ಟ
ಹೈದರಾಬಾದ್: ಟಾಲಿವುಡ್ ನಟ ರಾಮ್ ಚರಣ್ ತೇಜಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ಸ್ವತ: ರಾಮ್ ಚರಣ್ ಮಾಹಿತಿ ನೀಡಿದ್ದಾರೆ. ಟ್ವೀಟ್ ಮೂಲಕ ಸ್ಪಷ್ಟಪಡಿಸಿರುವ ನಟ ರಾಮ್ ಚರಣ್, ನನಗೆ ಕೋವಿಡ್ ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಯಾವುದೇ ರೋಗಲಕ್ಷಣಗಳು ಇಲ್ಲ. ಆದರೆ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ನನ್ನ ಸುತ್ತಮುತ್ತ ಇದ್ದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
Read More »ಅನಾರೋಗ್ಯ ಕಾರಣದಿಂದಾಗಿ ರಾಜಕೀಯ ಪ್ರವೇಶ ನಿರ್ಧಾರದಿಂದ ಇದೀಗ ಹಿಂದೆ ಸರಿದಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಮ್ಮ ರಾಜಕೀಯ ಪ್ರವೇಶದ ನಿರ್ಧಾರದಿಂದ ಹಿಂದೆ ಸರಿದಿದ್ದು, ಹೊಸ ಪಕ್ಷ ಸ್ಥಾಪನೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಟ ರಜನಿಕಾಂತ್, ಅನಾರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಸಧ್ಯಕ್ಕೆ ರಾಜಕೀಯ ಪ್ರವೇಶದ ತೀರ್ಮಾನ ಮಾಡುತ್ತಿಲ್ಲ. ಯಾವುದೇ ಹೊಸ ಪಕ್ಷ ಸ್ಥಾಪನೆಯನ್ನೂ ಮಾಡುತ್ತಿಲ್ಲ. ನಾನೀಗ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ರಾಜಕೀಯಕ್ಕೆ ಬರದಿದ್ದರೂ ಜನ ಸೇವೆ ಮುಂದುವರೆಸುತ್ತೇನೆ ಎಂದು ಬೆಂಬಲಿಗರಿಗೆ …
Read More »ಬ್ರಿಟನ್‍ನ ರೂಪಾಂತರಗೊಂಡ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಮತ್ತೆ ಲಾಕ್‍ಡೌನ್ ಅಥವಾ ಸೀಲ್‍ಡೌನ್?
ಬೆಂಗಳೂರು,ಡಿ.29- ಬ್ರಿಟನ್‍ನ ರೂಪಾಂತರಗೊಂಡ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಮತ್ತೆ ಲಾಕ್‍ಡೌನ್ ಅಥವಾ ಸೀಲ್‍ಡೌನ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಜನವರಿ ತಿಂಗಳಿಗೆ ಕೋವಿಡ್-19ಕ್ಕೆ ಲಸಿಕೆ ಲಭ್ಯವಾಗುವುದರಿಂದ ಜನರು ಆತಂಕಪಡುವ ಅಗತ್ಯವಿಲ್ಲ. ಇದು 2ನೇ ರೂಪಾಂತರಗೊಂಡ ಸೋಂಕು ಆಗಿರುವುದರಿಂದ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಪುನಃ ಲಾಕ್‍ಡೌನ್ ಅಥವಾ ಸೀಲ್‍ಡೌನ್ ಮಾಡುವುದಿಲ್ಲ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ …
Read More »ಬ್ರಿಟನ್ ದೇಶದಿಂದ ಭಾರತಕ್ಕೆ ಮರಳಿರುವ ಜನರ ಪೈಕಿ ಆರು ಮಂದಿಯಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್
ಬೆಂಗಳೂರು(ಡಿ. 29): ಬ್ರಿಟನ್ ದೇಶದಿಂದ ಭಾರತಕ್ಕೆ ಮರಳಿರುವ ಜನರ ಪೈಕಿ ಆರು ಮಂದಿಯಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಪೈಕಿ ಬೆಂಗಳೂರಿನ ಮೂವರು ಮಂದಿ ಇದ್ದಾರೆ. ಹೈದರಾಬಾದ್ನ ಇಬ್ಬರು ಹಾಗೂ ಪುಣೆಯ ಒಬ್ಬರೂ ಇದರಲ್ಲಿ ಸೇರಿದ್ದಾರೆ. ಬೆಂಗಳೂರಿನ ಮೂವರಲ್ಲಿ ನೂತನ ವೈರಸ್ ಮ್ಯೂಟೆಂಟ್ ಪತ್ತೆಯಾಗಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಅಧಿಕೃತ ಮಾಹಿತಿ ಪ್ರಕಾರ ಬ್ರಿಟನ್ ದೇಶದಿಂದ ಡಿಸೆಂಬರ್ 1ರಿಂದ 21ರವರೆಗೆ ಬೆಂಗಳೂರಿಗೆ ಬಂದವರ ಸಂಖ್ಯೆ 1,594 ಇದೆ. …
Read More »ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಕಠಿಣ ಸಂದೇಶ ರವಾನಿಸಿದ ನ್ಯಾಯಾಲಯ
ತುಮಕೂರು: ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆ -2012 ರಡಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 11 ಪ್ರಕರಣಗಳಿಗೆ ಸಂಬಂಧಿಸಿದಂತೆ 2019-20 ಹಾಗೂ 2020 21 ನೇ ಸಾಲಿನಲ್ಲಿ 18 ಆರೋಪಿಗಳಿಗೆ ಶಿಕ್ಷೆ ನೀಡಿ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ . ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಒಂದು ವರ್ಷದಿಂದ ಜೀವಾವಧಿಯವರೆಗೂ ಕಠಿಣ …
Read More »ಬಾಯಿಹುಣ್ಣಿಗೆ ಸೇವಿಸುವ ಔಷಧವೆಂದು ಕ್ರಿಮಿನಾಷಕ ಸೇವಿಸಿ ಗ್ರಾಮ ಪಂಚಾಯಿತಿ ಅಭ್ಯರ್ಥಿ ಮೃತ
ಮಂಗಳೂರು: ಔಷಧವೆಂದು ಭಾವಿಸಿ ಕ್ರಿಮಿನಾಷಕ ಸೇವಿಸಿ ಗ್ರಾಮ ಪಂಚಾಯಿತಿ ಅಭ್ಯರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳದ ಕಾವಳಮುಡೂರಿನ ಅರ್ಗತ್ಯಾರು ನಿವಾಸಿ ಜಯಂತ ಪ್ರಭು ಮೃತ ದುರ್ದೈವಿ. ಬಾಯಿಹುಣ್ಣಿಗೆ ಸೇವಿಸುವ ಔಷಧವೆಂದು ತಿಳಿದು ಕ್ರಿಮಿನಾಶಕ ಸೇವಿಸಿ ಜಯಂತ ತೀವ್ರ ಅಸ್ವಸ್ಥರಾಗಿದ್ದರು. ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Read More »ಬೆಳಗಾವಿ ಚೆನ್ನಮ್ಮವೃತ್ತದಲ್ಲಿ ಪ್ರತಿಮೆ ಬಳಿಯಿರುವ ಕನ್ನಡ ಧ್ವಜ ಕಂಬ ಇದ್ದಕ್ಕಿದ್ದಂತೆ ಕಿರಿದಾದ ಘಟನೆ
ಬೆಳಗಾವಿ: ಬೆಳಗಾವಿ ಚೆನ್ನಮ್ಮವೃತ್ತದಲ್ಲಿ ಪ್ರತಿಮೆ ಬಳಿಯಿರುವ ಕನ್ನಡ ಧ್ವಜ ಕಂಬ ಇದ್ದಕ್ಕಿದ್ದಂತೆ ಕಿರಿದಾದ ಘಟನೆ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಇದು ಕಿಡಿಗೇಡಿಗಳ ಕೃತ್ಯವಿರಬೇಕು ಎಂಬ ಶಂಕೆ ಮೂಡಿತ್ತು. ಆದರೆ ಇದೀಗ ಕಬ್ಬಿನ ವಾಹನ ಡಿಕ್ಕಿಯಾಗಿ ಧ್ವಜ ಕಂಭಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಚೆನ್ನಮ್ಮನ ಪ್ರತಿಮೆ ಬಳಿಯಿರುವ ಕನ್ನಡ ಧ್ವಜ ಕಂಬ ರಾತ್ರಿ ಬೆಳಗಾಗುವಷ್ಟರಲ್ಲಿ ಕಿರಿದಾಗಿದ್ದು, ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಕಿಡಿಗೇಡಿಗಳು ಕಂಭವನ್ನು ಕತ್ತರಿಸಿ ಅಪಮಾನ ಮಾಡಿದ್ದಾರೆ ಎಂಬ …
Read More »