ವಿಜಯಪುರ: ರಾಜ್ಯದೆಲ್ಲೆಡೆ ಗ್ರಾಮ ಪಂಚಾಯಿತಿ ಚುನಾವಣೆ ಕಾವು ಜೋರಾಗಿದೆ. ಚುನಾವಣಾ ಅಭ್ಯರ್ಥಿಗಳು ಲೋಕಲ್ ದಂಗಲ್ ನಲ್ಲಿ ಜಯಗಳಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಇನ್ನು ವಿಜಯಪುರ ಜಿಲ್ಲೆಯಲ್ಲಿ ಒಂದೇ ವಾರ್ಡ್ ನಲ್ಲಿ ಪತಿ- ಪತ್ನಿ ಅಖಾಡಕ್ಕಿಳಿಯುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಹೌದು.. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗುಣಶ್ಯಾಳ ಪಿ.ಬಿ. ಗ್ರಾಮ ಪಂಚಾಯತಿಯ ಸಂನಾಳ ಗ್ರಾಮದಲ್ಲಿ ಒಂದೇ ವಾರ್ಡ್ ನಲ್ಲಿ ಚುನಾವಣೆ ಅಖಾಡಕ್ಕಿಳಿಯುವ ಮೂಲಕ ಪತ್ನಿ ಪತ್ನಿ ಎಲ್ಲರ …
Read More »Daily Archives: ಡಿಸೆಂಬರ್ 16, 2020
ಜಮೀನಿಗೆ ನುಗ್ಗಿದ ಬಸ್: ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ
ಧಾರವಾಡ: ರಾಜ್ಯ ಸಾರಿಗೆ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಮತ್ತು ಮೊರಬ ಗ್ರಾಮಗಳ ರಸ್ತೆಯ ಮಧ್ಯ ಸಂಭವಿಸಿದೆ. ನವಲಗುಂದ ತಾಲೂಕಿನ ಹನಸಿ ಗ್ರಾಮದಿಂದ ಧಾರವಾಡದತ್ತ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ, ಹೊಲದೊಳಗೆ ನುಗ್ಗಿದೆ. ಕೆಲವರು ಕಿಡಕಿಯಿಂದ ಜಿಗಿದು ಹೊರಗಡೆ ಹೋಗಿದ್ದಾರೆ. ಇನ್ನೂ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಶಾಹತ್ …
Read More »ಗಡಿಯಲ್ಲಿ ಚೀನಾ ಕಿರಿಕ್ : ಭಾರತದ ಬೆಂಬಲಕ್ಕೆ ನಿಂತ ಅಮೆರಿಕಾ
ವಾಷಿಂಗ್ಟನ್, ಡಿ.16-ಭಾರತದ ಗಡಿಯಲ್ಲಿ ಚೀನಾ ತೋರುತ್ತಿರುವ ಕ್ರೂರ ವರ್ತನೆ ಖಂಡಿಸುವುದು ಸೇರಿದಂತೆ 740 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ರಕ್ಷಣಾ ನೀತಿ ಮಸೂದೆಗೆ ಅಮೆರಿಕಾ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ. ಗಡಿಯಲ್ಲಿ ಭಾರತ ಸೇನೆಯ ವಿರುದ್ಧ ಚೀನಿಯರು ನಡೆಸುತ್ತಿರುವ ಕ್ರೂರ ವರ್ತನೆಯನ್ನು ಖಂಡಿಸಿರುವ ಅಮೆರಿಕಾ ಈ ಕೂಡಲೆ ಚೀನಿಯರು ತಮ್ಮ ಧೋರಣೆಯನ್ನ ಕೈಬಿಡಬೇಕು ಎಂದು ಅಮೆರಿಕಾ ಒತ್ತಾಯಿಸಿದೆ. 740 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ರಕ್ಷಣಾ ಮಸೂದೆಗೆ ಅಮೆರಿಕ ಜನಪ್ರತಿನಿಧಿಗಳ ಸಭೆ …
Read More »ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಹುಬ್ಬಳ್ಳಿಯಲ್ಲೂ ರೈತರಿಂದ ಪ್ರತಿಭಟನೆ
ಹುಬ್ಬಳ್ಳಿ; ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಹುಬ್ಬಳ್ಳಿಯಲ್ಲೂ ರೈತರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಶಿರಗುಪ್ಪಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ಮಾಡಿದ್ದು, ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೈಬಿಡಲು ಒತ್ತಾಯಿಸಲಾಗಿದೆ. ರೈತರು ಹೆದ್ದಾರಿ ಮಧ್ಯ ಟ್ರ್ಯಾಕ್ಟರ್ ನಿಲ್ಲಿಸಿ ರಸ್ತೆ ತಡೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ರೈತರ ಬೇಡಿಕೆಗಳನ್ನು ಮೋದಿಯವರ ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ. ರೈತ ಮುಖಂಡರಾದ ಶಿವಣ್ಣ ಹುಬ್ಬಳ್ಳಿ, ಅಮೃತ …
Read More »ರೈತರು ಮತ್ತೆ ಪ್ರತಿಭಟನೆ ಆರಂಭಿಸಿದರೆ ಇನ್ನೊಂದೆಡೆ ಖಾಸಗಿ ಶಾಲಾ ಶಿಕ್ಷಕರು ಧರಣಿ ನಡೆಸುತ್ತಿದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ರೈತರು ಮತ್ತೆ ಪ್ರತಿಭಟನೆ ಆರಂಭಿಸಿದರೆ ಇನ್ನೊಂದೆಡೆ ಖಾಸಗಿ ಶಾಲಾ ಶಿಕ್ಷಕರು ಧರಣಿ ನಡೆಸುತ್ತಿದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯ, ಶಿಕ್ಷಕರನ್ನು ಕೊರೊನಾ ಯೋಧರೆಂದು ಪರಿಗಣಿಸಬೇಕು, ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜಧಾನಿಯಲ್ಲಿ ಶಿಕ್ಷಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಪ್ರತಿಭಟನಾ ರ್ಯಾಲಿ ಬಳಿಕ ಶಿಕ್ಷಕರು ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿದ್ದು, ಬಸವರಾಜ್ ಹೊರಟ್ಟಿ …
Read More »ರಾಜ್ಯ ಸರ್ಕಾರ ಬಿಡಿಗಾಸೂ ನೆರೆಪರಿಹಾರ ಕೊಟ್ಟಿಲ್ಲ : ರೇವಣ್ಣ
ಹಾಸನ, ಡಿ.16- ಹಾಸನ ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಉಂಟಾಗಿರುವ ಹಾನಿಗೆ ರಾಜ್ಯ ಸರ್ಕಾರ ಬಿಡಿಗಾಸೂ ಕೊಟ್ಟಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ಬೆಳೆನಷ್ಟವಲ್ಲದೆ ಮನೆಗಳೂ ಬಿದ್ದು ಹೋಗಿವೆ. ಅವುಗಳಿಗೆ ಪರಿಹಾರ ನೀಡಿಲ್ಲ. ಹೂವಿನ ಬೆಳೆ ಕೂಡ ಹಾನಿಯಾಗಿದ್ದು, ಅದರ ಸರ್ವೆ ಕೂಡ ಸರ್ಕಾರ ಮಾಡಿಲ್ಲ ಎಂದು ದೂರಿದರು. ಈ ಎಲ್ಲ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಆದರೆ, ಅವರು ಗ್ರಾಪಂ …
Read More »ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಒಂದು ಕೋಟಿ!
ನವದೆಹಲಿ,ಡಿ.16-ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಒಂದು ಕೋಟಿಯತ್ತ ಮುಖ ಮಾಡಿದೆ. ಕಳೆದ 24 ಗಂಟೆಗಳಲ್ಲಿ 26,382 ಹೊಸ ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 99.32ಲಕ್ಷಕ್ಕೆ ಏರಿಕೆಯಾಗಿದೆ. 99 ಲಕ್ಷ ಮಂದಿಯಲ್ಲಿ ಈಗಾಗಲೇ 95 ಲಕ್ಷ ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿ ಅಂಶಗಳು ಬಹಿರಂಗಗೊಳಿಸಿದೆ. ಸೋಂಕಿತರ ಸಂಖ್ಯೆ 99.32,547 ಕ್ಕೆ ಏರಿಕೆಯಾಗಿದ್ದು, ನಿನ್ನೆಯಿಂದೀಚೆಗೆ 387 ಹೊಸ ಸಾವು ಪ್ರಕರಣದಿಂದ ಇದುವರೆಗೂ ಮಹಾ ಮಾರಿಗೆ ಬಲಿಯಾದವರ …
Read More »ಪರಿಷತ್‍ನಲ್ಲಿ ಗೂಂಡಾಗಿರಿ ಮಾಡಿದವರನ್ನು ಅಮಾನತು ಮಾಡಲಿ : ಸಚಿವ ಸೋಮಶೇಖರ್
ಮೈಸೂರು, ಡಿ.16- ಸಭಾಪತಿಗಳ ಖುರ್ಚಿಗೆ ಅದರದ್ದೇ ಆದ ಗೌರವವಿದೆ. ಆದರೆ, ಮೊದಲ ಬಾರಿ ಎಂಎಲ್ ಸಿ ಆದವರೂ ಸಹ ಆ ಖುರ್ಚಿಯಲ್ಲಿ ಕೂರುತ್ತಾರೆಂದರೆ ಏನರ್ಥ? ಸಭಾಪತಿಗಳ ಮೇಲೆ ಅವಿಶ್ವಾಸ ನಿರ್ಣಯವನ್ನು ನಮ್ಮ ಪಕ್ಷದ ಸದಸ್ಯರು ಮಂಡಿಸಿದ್ದು ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ? ಎಲ್ಲರಿಗೂ ನೀತಿ, ಕಾನೂನು ಹೇಳುವ ಅವರು ತಮ್ಮ ಪಕ್ಷದ ನಾಯರಿಗೆ ಬುದ್ಧಿ ಹೇಳಲಿ, ಗೂಂಡಾಗಿರಿ ಮಾಡಿದವರನ್ನು ಅಮಾನತು ಮಾಡಲಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ …
Read More »ಗೋಹತ್ಯೆ ನಿಷೇಧ ಮಸೂದೆಗೆ ಸುಗ್ರೀವಾಜ್ಞೆ ಹೊರಡಿಸಲು ಬಿಜೆಪಿ ಸಿದ್ಧತೆ..!
ಬೆಂಗಳೂರು,ಡಿ.16- ಗೋಹತ್ಯೆ ನಿಷೇಧ ಮಸೂದೆಗೆ ವಿಧಾನಪರಿಷತ್‍ನಲ್ಲಿ ಅಂಗೀಕಾರ ಪಡೆಯುವಲ್ಲಿ ವಿಫಲವಾಗಿರುವ ಕಾರಣ ಸುಗ್ರೀವಾಜ್ಞೆ ಮೂಲಕ ಮಸೂದೆಯನ್ನು ಜಾರಿಗೊಳಿಸಲು ಆಡಳಿತಾರೂಢ ಬಿಜೆಪಿ ಮುಂದಾಗಿದೆ. ವಿಧಾನಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರಕ್ಕೆ ಅಡ್ಡಿ ಉಂಟಾದ ಕಾರಣಕ್ಕೆ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಹಸು, ಕರು ಮತ್ತು ಎಮ್ಮೆ ಸೇರಿದಂತೆ ದನಗಳನ್ನು ಅಕ್ರಮವಾಗಿ ಮಾರಾಟ ಮಾಡುವುದು, ಖರೀದಿಸುವುದು ಮತ್ತು ಸಾಗಿಸುವುದನ್ನು ನಿಷೇಧಿಸುವ ಮಸೂದೆಯನ್ನು ಕಳೆದ ವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಗೋಹತ್ಯೆ …
Read More »ಕಳೆದ 20 ದಿನಗಳಿಂದ ಪ್ರಧಾನಿ ಮೋದಿ ನಮ್ಮೊಂದಿಗೆ ಮಾತನಾಡಿಲ್ಲ” ಎಂದ ಭಾರತೀಯ ಕಿಸಾನ್ ಯೂನಿಯನ್ (ಟಿಕಾಯತ್) ಪ್ರಧಾನ ಕಾರ್ಯದರ್ಶಿ ಯದುವೀರ್ ಸಿಂಗ್ ಶೇರಾವತ್
ಹೊಸದಿಲ್ಲಿ : “ನಾವು ಪ್ರಧಾನಿಯನ್ನು ಆಯ್ಕೆ ಮಾಡಿ ಅವರಿಗೆ ಮಾತನಾಡುವ ಅಧಿಕಾರ ನೀಡಿದ್ದೇವೆ. ಆದರೆ ಕಳೆದ 20 ದಿನಗಳಿಂದ ಪ್ರಧಾನಿ ಮೋದಿ ನಮ್ಮೊಂದಿಗೆ ಮಾತನಾಡಿಲ್ಲ” ಎಂದು ಭಾರತೀಯ ಕಿಸಾನ್ ಯೂನಿಯನ್ (ಟಿಕಾಯತ್) ಪ್ರಧಾನ ಕಾರ್ಯದರ್ಶಿ ಯದುವೀರ್ ಸಿಂಗ್ ಶೇರಾವತ್ ಹೇಳಿದ್ದಾರೆ. ಕೇಂದ್ರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರಾಜಧಾನಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರೈತ ಸಮುದಾಯದ ಬಗ್ಗೆ ಸರ್ಕಾರಕ್ಕೆ ಕರುಣೆ …
Read More »