Breaking News

Daily Archives: ಡಿಸೆಂಬರ್ 11, 2020

ತಂದೆಯನ್ನೇ ಕೊಂದಿದ್ದಾನೆ. ಬೇಸತ್ತ ಮಗ,

ಮಂಡ್ಯ: ಪತ್ನಿ ಶೀಲ ಶಂಕಿಸುತ್ತಿದ್ದ ಪತಿಯನ್ನು ಆತನ ಮಗನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.ಜಿಲ್ಲೆಯ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿ ಘಟನೆ ನಡೆದಿದ್ದು, 44 ವರ್ಷದ ದೇವರಾಜುನನ್ನು ಆತನ ಮಗ ಕೊಲೆ ಮಾಡಿದ್ದಾನೆ. ಕೂಲಿ ಮಾಡಿ ಬದುಕುತ್ತಿದ್ದ ಬಡ ಕುಟುಂಬದಲ್ಲಿ ಇದ್ದದ್ದು ಪತಿ, ಪತ್ನಿ ಹಾಗೂ ಒಬ್ಬನೇ ಮಗ. ಈ ನಡುವೆ ಮನೆಯ ಯಜಮಾನ ಎನಿಸಿಕೊಂಡ ಪತಿಗೆ ಪತ್ನಿ ನಡತೆ ಬಗ್ಗೆ ಅನುಮಾನ ಶುರುವಾಗಿತ್ತು. ಈ ವಿಚಾರಕ್ಕೆ ಮನೆಯಲ್ಲಿ ನಿತ್ಯ …

Read More »

ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯಲ್ಲಿ ಗ್ಯಾಸ್ ಸೋರಿಕೆ

ಮಂಗಳೂರು: ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯಲ್ಲಿ ಗ್ಯಾಸ್ ಸೋರಿಕೆಯಾದ ಘಟನೆ ಮಂಗಳೂರಿನ ತೊಕ್ಕೊಟ್ಟು ಬಳಿ ನಡೆದಿದೆ. ನಗರದ ಬೈಕಂಪಾಡಿಯಿಂದ ಕೇರಳ ಕಡೆಗೆ ಅಡುಗೆ ಅನಿಲದ ಸಿಲಿಂಡರನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಗ್ಯಾಸ್ ಸೋರಿಕೆ ಕಾಣಿಸಿಕೊಂಡಿದೆ. ಈ ವಿಚಾರ ಗೊತ್ತಾದ ತಕ್ಷಣ ಚಾಲಕ ಪರಿಶೀಲಿಸಿದ್ದು, ಒಂದು ಸಿಲಿಂಡರ್ ಸೋರಿಕೆ ಆಗಿರೋದು ಬೆಳಕಿಗೆ ಬಂದಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸಿದ್ದಾರೆ‌. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ 66 …

Read More »

ಕುಮಾರಸ್ವಾಮಿ ಸರ್ಕಾರವನ್ನ ಸ್ಕೆಚ್ ಹಾಕಿ ತೆಗೆದಿದ್ದು ನಾನೇ. ನನ್ನನ್ನ ಡಿಕೆಶಿ-ಹೆಚ್‍ಡಿಕೆ ಸೇರಿ ಸೋಲಿಸಿದ್ದರು.

ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಎಂಎಲ್‍ಸಿ ಸಿ ಪಿ ಯೋಗೇಶ್ವರ್ ಅವರು ಹೆಚ್‍ಡಿಕೆ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗ್ರಾ.ಪಂ ಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಅವರು, ಕುಮಾರಸ್ವಾಮಿ ಸರ್ಕಾರವನ್ನ ಸ್ಕೆಚ್ ಹಾಕಿ ತೆಗೆದಿದ್ದು ನಾನೇ. ನನ್ನನ್ನ ಡಿಕೆಶಿ-ಹೆಚ್‍ಡಿಕೆ ಸೇರಿ ಸೋಲಿಸಿದ್ದರು. ಅದಕ್ಕಾಗಿ ನಾನು ಬೆಂಗಳೂರಿನಲ್ಲಿ ಸ್ಕೆಚ್ ಹಾಕಿ ಸರ್ಕಾರ …

Read More »

ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದ ಬಳಿಕ ಪತ್ನಿಯ ತಲೆ ಹಾಗೂ ಮುಖಕ್ಕೆ ಗುದ್ದಲಿಯಿಂದ ಹೊಡೆದು ಬರ್ಬರವಾಗಿ ಕೊಲೆ

ಬಾಗಲಕೋಟೆ: ವ್ಯಕ್ತಿಯೊಬ್ಬ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದ ಬಳಿಕ ಪತ್ನಿಯ ತಲೆ ಹಾಗೂ ಮುಖಕ್ಕೆ ಗುದ್ದಲಿಯಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸುಮಿತ್ರಾ ಉಳ್ಳಾಗಡ್ಡಿ(48) ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಲೆಗೈದ ಬಳಿಕ ಆರೋಪಿ ಪತಿ ಮಲ್ಲಪ್ಪ ಉಳ್ಳಾಗಡ್ಡಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕೊಲೆ ಯಾಕೆ..? ಪತ್ನಿಗೆ ಶ್ರೀಶೈಲ ಎಂಬ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ 2017ರಲ್ಲಿ ಜಗಳವಾಗಿತ್ತು. ಅಲ್ಲದೆ ಇದೇ …

Read More »

ಸಾರಿಗೆ ನೌಕರರ ಸಂಪೂರ್ಣವಾಗಿ ಬಂದ್ ಗೆ ಕರೆ

ಬೆಂಗಳೂರು: ಇಂದು ರೋಡಿಗೆ ಇಳಿಯೋ ಮುನ್ನ ಎಚ್ಚರವಾಗಿರಿ. ಯಾಕಂದ್ರೆ ಇಂದು ಸಾರಿಗೆ ನೌಕರರು ಸಂಪೂರ್ಣವಾಗಿ ಬಂದ್ ಗೆ ಕರೆಕೊಟ್ಟಿದ್ದಾರೆ.ಹೌದು. ಬಂದ್ ಕರೆಕೊಟ್ಟ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರಲ್ಲಿ ಬಸ್ಸುಗಳ ಓಡಾಟ ಬಹುತೇಕ ಸ್ಥಗಿತಗೊಂಡಿದೆ. ಬಸ್ ಹೊರಡದೆ ಡಿಪೋದಲ್ಲಿಯೇ ಸ್ಥಗಿತಗೊಳಿಸಲಾಗಿದೆ. ವಿವಿಧ ಡಿಪೋಗಳಿಂದ ಸಿಬ್ಬಂದಿ ಒಂದೆಡೆ ಸೇರಿದ್ದು, ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಗಣಿಸುವವವರೆಗೆ ಹೋರಾಟ ಕೈ ಬಿಡಲ್ಲ ಎಂದು ಆಗ್ರಹಿಸುತ್ತಿದ್ದಾರೆ. ನಿನ್ನೆ ವಿಧಾನ ಸೌಧ ಮುತ್ತಿಗೆ ಹಾಕಿದರೂ ಸರ್ಕಾರ ಅಹವಾಲು ಆಲಿಸಲಿಲ್ಲ ಎಂದು …

Read More »

ಖಾಸಗಿ ಆಸ್ಪತ್ರೆಗಳು ಮುಷ್ಕರ ಆಸ್ಪತ್ರೆಯ ಓಪಿಡಿಗಳು ಬಂದ್

ಬೆಂಗಳೂರು : ಆಯುರ್ವೇದ ವೈದ್ಯರಿಗೆ ಸರ್ಜರಿ ಮಾಡಲು ಅವಕಾಶ  ನೀಡಿರುವುದನ್ನು ವಿರೋಧಿಸಿ  ಖಾಸಗಿ ಆಸ್ಪತ್ರೆಗಳು ಮುಷ್ಕರಕ್ಕೆ ಕರೆ ಕೊಟ್ಟಿವೆ. ಹೀಗಾಗಿ ಖಾಸಗಿ ಆಸ್ಪತ್ರೆಯ ಓಪಿಡಿಗಳು ಬಂದ್ ಇರಲಿವೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಓಪಿಡಿ ಸೇವೆ ಸ್ಥಗಿತಗೊಳ್ಳಲಿವೆ. ಆದರೆ ಎಮರ್ಜನ್ಸಿ ಸೇವೆ ಎಂದಿನಂತೆ ಇರಲಿದೆ. ಐಎಂಎ ನೀಡಿರುವ ಬಂದ್ ಕರೆಗೆ PHANA ಸೇರಿ ಹಲವು ಸಂಘಟನೆಗಳು ಸಾಥ್ ನೀಡಿವೆ. ಕೇಂದ್ರ ಸರ್ಕಾರ ಆಯುರ್ವೇದ ಶಿಕ್ಷಣ ತಿದ್ದುಪಡಿ …

Read More »