ಚೆನ್ನೈ, ಡಿ.9- ಖಿನ್ನತೆಗೆ ಒಳಗಾಗಿದ್ದ ಕಿರುತೆರೆ ನಟಿ ಹಾಗೂ ನಿರೂಪಕಿಯೊಬ್ಬರು ಚೆನ್ನೈನ ನಜರೆತ ಪೆಟ್ಟೈನಲ್ಲಿರುವ ಪಂಚತಾರಾ ಹೋಟೆಲ್‍ನ ಕೊಠಡಿಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿ.ಜೆ. ಚಿತ್ರಾ (28) ಆತ್ಮಹತ್ಯೆ ಮಾಡಿಕೊಂಡಿರುವ ನಟಿ. ಇವಿಪಿ ಫಿಲ್ಮ್ ಸಿಟಿಯಲ್ಲಿ ನಿನ್ನೆ ಧಾರಾವಾಹಿಯೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಚಿತ್ರಾ ಆತ್ಮಹತ್ಯೆಗೆ ಶರಣಾಗಿರುವುದು ಕಿರುತೆರೆ ಕಲಾವಿದರು, ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಆಘಾತ ಉಂಟುಮಾಡಿದೆ. ಪಾಂಡಿಯನ್ ಸ್ಟೋರ್ಸ್ ಧಾರಾವಾಹಿಯ ಮುಲೈ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದ್ದ …
Read More »Daily Archives: ಡಿಸೆಂಬರ್ 9, 2020
ವಿಧಾನಪರಿಷತ್ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಸಾರಿಗೆ ನೌಕರರಿಗೆ ಸಂಬಳ ನೀಡದ ವಿಚಾರದ ಕುರಿತಂತೆ ಶಾಸಕ ಹರ್ಷವರ್ಧನ್ ಪ್ರಸ್ತಾಪ
ಬೆಂಗಳೂರು : ಕೆಎಸ್ಆರ್ ಟಿಸಿ, ಬಿಎಂಟಿಸಿ ನೌಕರರಿಗೆ ಡಿಸೆಂಬರ್ ತಿಂಗಳ ಸಂಬಳವನ್ನು 10 ದಿನದೊಳಗೆ ನೀಡುತ್ತೇವೆ ಎಂದು ಸಾರಿಗೆ ಸಚಿವ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ವಿಧಾನಪರಿಷತ್ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಸಾರಿಗೆ ನೌಕರರಿಗೆ ಸಂಬಳ ನೀಡದ ವಿಚಾರದ ಕುರಿತಂತೆ ಶಾಸಕ ಹರ್ಷವರ್ಧನ್ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಲಕ್ಷ್ಮಣ ಸವದಿ ನವೆಂಬರ್ ತಿಂಗಳ ತನಕ ಎಲ್ಲಾ ನೌಕರರಿಗೆ ಸಂಬಳ ನೀಡಲಾಗಿದೆ. ಡಿಸೆಂಬರ್ ತಿಂಗಳ ಸಂಬಳವನ್ನು 8 ರಿಂದ …
Read More »ರೈತರ ಬಾಯಿಗೆ ಕುಮಾರಸ್ವಾಮಿ ಮಣ್ಣು ಹಾಕೋ ಕೆಲಸ ಮಾಡಿದ್ರು. ಅವರು ಒಬ್ಬ ಡೀಲಿಂಗ್ ಮಾಸ್ಟರ್: ಕೋಡಿಹಳ್ಳಿ ಚಂದ್ರಶೇಖರ್:
ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರನ್ನು ರೈತರು ಮಣ್ಣಿನ ಮಗ ಅಂತಾರೆ. ಆದ್ರೇ ರೈತರ ಬಾಯಿಗೆ ಕುಮಾರಸ್ವಾಮಿ ಮಣ್ಣು ಹಾಕೋ ಕೆಲಸ ಮಾಡಿದ್ರು. ಅವರಿಗೆ ರೈತರ ಪರ ಕಾಳಜಿಯೇ ಇಲ್ಲ. ಕುಮಾರಸ್ವಾಮಿ ಮಣ್ಣಿನ ಮಕ್ಕಳ ದ್ರೋಹಿ ಹಾಗೂ ಅವರು ಒಬ್ಬ ಡೀಲಿಂಗ್ ಮಾಸ್ಟರ್ ಎಂಬುದಾಗಿ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ. ನಗರದಲ್ಲಿ ವಿಧಾನಸೌಧ ಮುತ್ತಿಗೆ ಪ್ರತಿಭಟನೆ ಚಳುವಳಿ ನಡೆಸುತ್ತಾ ಮಾಜಿ ಸಿಎಂ ಭೂ ಸುಧಾರಣಾ ತಿದ್ದುಪಡಿ …
Read More »250 ರೂ.ಗೆ 1 ಡೋಸ್ – ಮಾರ್ಚ್‌ನಲ್ಲಿ ಮೆಡಿಕಲ್ ಸ್ಟೋರ್‌ನಲ್ಲಿ ಲಭ್ಯ?
ನವದೆಹಲಿ: ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಲಸಿಕೆ ಖರೀದಿ ವಿಚಾರವಾಗಿ ಶೀಘ್ರವೇ ಪುಣೆಯ ಸೀರಂ ಮತ್ತು ಭಾರತ ಸರ್ಕಾರದ ನಡುವೆ ಒಪ್ಪಂದ ನಡೆಯುವ ಸಾಧ್ಯತೆಯಿದೆ.ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಸೀರಂ 1 ಡೋಸ್‌ಗೆ 250 ರೂ. ದರ ನಿಗದಿ ಪಡಿಸಿದ್ದು ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆಈ ಕುರಿತು ಮಾತನಾಡಿದ ಸಂಸ್ಥೆ ಸಿಇಒ ಅದರ್ ಪೂನಾವಾಲಾ, …
Read More »ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ವ್ಯಕ್ತಿಯೊಬ್ಬನಿಗೆ ಕಾರ್ ಡಿಕ್ಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ
ಬೆಳಗಾವಿ : ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ವ್ಯಕ್ತಿಯೊಬ್ಬನಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಹುಕ್ಕೇರಿ ತಾಲ್ಲೂಕಿನ ಬೊಳಶ್ಯಾನಟ್ಟಿ ಗ್ರಾಮದ ಶಂಕರ ಕೊಂಕಣಿ ಮೃತ ವ್ಯಕ್ತಿ. ಸಮೀಪದ ಏಕಸ್ ಕಂಪನಿ ಸಮೀಪದಲ್ಲಿ ಘಟನೆ ನಡೆದಿದ್ದು, ಬೆಳಗಾವಿಯಿಂದ ಸಂಕೇಶ್ವರ ಕಡೆಗೆ ಹೊರಟ್ಟಿದ್ದ ಕಾರ್ ಡಿಕ್ಕಿ ಹೊಡೆದಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಡಿಕೆಶಿ ರಾಜಿನಾಮಗೆ ಒತ್ತಾಯ! ಸತೀಶ ಜಾರಕಿಹೋಳಿ ಹೇಳಿದ್ದೇನು
ಬೆಂಗಳೂರು: ನಮ್ಮದು ಸಾಮೂಹಿಕ ನಾಯಕತ್ವ. ಸೋಲಿನ ಹೊಣೆಗೆ ಡಿ.ಕೆ. ಶಿವಕುಮಾರ್ ಒಬ್ಬರೇ ಕಾರಣವಲ್ಲ. ಅವರು ರಾಜೀನಾಮೆ ಕೊಡಬೇಕಾದ ಅಗತ್ಯವಿಲ್ಲ. ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷವೇ ಗೆಲ್ಲುತ್ತೆ. ಹಾಗಾಗಿ ರಾಜೀನಾಮೆ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ಸೋಲಿನ ಹೊಣೆ ಹೊತ್ತು ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕೆಂಬ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
Read More »ಆಟವಾಡಲು ಹೋದ ಇಬ್ಬರು ಬಾಲಕರು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ
ಬೆಳಗಾವಿ: ಸಂಬಂಧಿಕರ ಜಮೀನಿನಲ್ಲಿ ಆಟವಾಡಲು ಹೋದ ಇಬ್ಬರು ಬಾಲಕರು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಬೆಕ್ಕಿನಕೇರಿಯಲ್ಲಿ ನಡೆದಿದೆ. ಮೃತ ಬಾಲಕರನ್ನು ಲೋಕೇಶ ವಿಠಲ (10) ಹಾಗೂ ನಿಕೀಲ (7) ಎಂದು ಗುರುತಿಸಲಾಗಿದೆ. ಬಾಳು ಮಲ್ಲಪ್ಪ ಗಾವಡೆ ಎಂಬುವವರ ಜಮೀನೊಂದರಲ್ಲಿ ಆಟವಾಡಲೆಂದು ಮೂವರು ಬಾಲಕರು ಹೋಗಿದ್ದಾರೆ. ಈ ವೇಳೆಮೀನು, ಏಡಿ ಹಿಡಿಯಲೆಂದು ಬಾವಿಯತ್ತ ಸಾಗಿದ ಇಬ್ಬರು ಬಾಲಕರು, ಏಕಾಏಕಿ ಬಾವಿಗೆ ಬಿದ್ದಿದ್ದಾರೆ. ಇನ್ನೋರ್ವ ಬಾಲಕ ರಕ್ಷಣೆಗಾಗಿ ಕೋಗಿದ್ದಾನೆ. ಗ್ರಾಮಸ್ಥರು ಬಂದು …
Read More »ಮೂರು ದಿನಗಳ ಕಾಲ ಮಲೆ ಮಾದಪ್ಪ ತನ್ನ ಭಕ್ತರಿಗೆ ದರ್ಶನ ಕೊಡಲ್ಲ.
ಚಾಮರಾಜನಗರ: ಮೂರು ದಿನಗಳ ಕಾಲ ಮಲೆ ಮಾದಪ್ಪ ತನ್ನ ಭಕ್ತರಿಗೆ ದರ್ಶನ ಕೊಡಲ್ಲ.ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ದಿನ ಭಕ್ತರಿಗೆ ದೇವರ ದರ್ಶನ ಸಿಗಲ್ಲ. ಕೊನೆಯ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಬರುವ ಸಾಧ್ಯತೆ ಇದೆ. ಕೊರೊನಾ ಮುಂಜಾಗ್ರತಾ ಕ್ರಮವಾಗಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಡಿ.12 ರಿಂದ ಡಿ.14 ರ ವರೆಗೆ ಮಾದಪ್ಪನ ದರ್ಶನ ಭಕ್ತರಿಗಿಲ್ಲ ಸಿಗಲ್ಲ. …
Read More »ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ ಎಂದ ನೇಪಾಳ ಹಾಗೂ ಚೀನಾ
ನವದೆಹಲಿ: ವಿಶ್ವದ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ ಎಂದು ನೇಪಾಳ ಹಾಗೂ ಚೀನಾ ಹೇಳಿವೆ.ಹೊಸ ಅಧ್ಯಯನದ ಪ್ರಕಾರ ಮೌಂಟ್ ಎವರೆಸ್ಟ್ ಎತ್ತರ 8,848.86 ಮೀಟರ್ ಎಂದು ನೇಪಾಳ ಮತ್ತು ಚೀನಾ ಜಂಟಿಯಾಗಿ ಘೋಷಣೆ ಮಾಡಿವೆ. ಈ ಮೂಲಕ ಮೌಂಟ್ ಎವರೆಸ್ಟ್ ಮತ್ತಷ್ಟು ಎತ್ತರ ಬೆಳೆದಿದೆ. 1954ಕ್ಕೆ ಹೋಲಿಸಿದರೆ ಮೌಂಟ್ ಎವರೆಸ್ಟ್ ಎತ್ತರ 86 ಸೆಂಟಿಮೀಟರ್ ಹೆಚ್ಚಿದೆ ಎಂದು ತಿಳಿಸಿದೆ. 2015ರಲ್ಲಿ ಸಂಭವಿಸಿದ ಭೂಕಂಪ ಸೇರಿದಂತೆ …
Read More »ಬೆಳಗ್ಗೆ ಬಂದ್‍ಗೆ ಸಪೋರ್ಟ್, ಮಧ್ಯಾಹ್ನ ಬಿಲ್‍ಗೆ ಬೆಂಬಲ- ಮೇಲ್ಮನೆಯಲ್ಲಿ ಭೂಸುಧಾರಣೆ ಮಸೂದೆ ಪಾಸ್
ಬೆಂಗಳೂರು: ಭಾರತ್ ಬಂದ್ ನಡುವೆಯೇ ವಿವಾದಾತ್ಮಕ ಭೂಸುಧಾರಣಾ ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ಪಾಸ್ ಆಗಿದೆ. ಸದನದ ಹೊರಗೆ ರೈತರ ಹೋರಾಟವನ್ನು ಬೆಂಬಲಿಸಿದ್ದ ಜೆಡಿಎಸ್, ಪರಿಷತ್‍ನಲ್ಲಿ ಮಾತ್ರ ವಿಧೇಯಕವನ್ನು ಇದ್ದಕ್ಕಿದ್ದಂತೆ ಬೆಂಬಲಿಸಿ ಅಚ್ಚರಿ ಮೂಡಿಸಿತು. ಮರಿತಿಬ್ಬೇಗೌಡ ಹೊರತುಪಡಿಸಿ ಉಳಿದೆಲ್ಲಾ ಜೆಡಿಎಸ್ ಸದಸ್ಯರು ವಿಧೇಯಕದ ಪರವಾಗಿ ಎದ್ದು ನಿಂತು ಬೆಂಬಲ ಸೂಚಿಸಿದರು. ಇದನ್ನು ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ವಿಧೇಯಕದ ಪರ 37 ಮತ ಬಿದ್ದರೆ, ವಿರುದ್ಧ 21 ಮತ ಬಿದ್ದವು. …
Read More »