Breaking News

Daily Archives: ನವೆಂಬರ್ 24, 2020

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ

ಬೆಂಗಳೂರು, ನ.24- ರಾಜ್ಯದ ಜನಸಂಖ್ಯೆಯಲ್ಲಿ ಎರಡನೆ ಸ್ಥಾನದಲ್ಲಿರುವ ಒಕ್ಕಲಿಗ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದ್ದು, ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಹಲವಾರು ಮುಖಂಡರು ಮನವಿ ಮಾಡಿದ್ದಾರೆ. ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂಬ ಒತ್ತಾಯದ ಸಮಿತಿಯ ನಿಯೋಗ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿತು. ನಿಯೋಗದಲ್ಲಿ ತಲಕಾಡು ಚಿಕ್ಕರಂಗೇ ಗೌಡ, ರಾಜ್ಯ ಬಿಜೆಪಿ ವಕ್ತಾರ ಎ.ಎಚ್.ಆನಂದ್, …

Read More »

ಐಎಂಎ ಹಗರಣ: ಇಬ್ಬರು ಐಪಿಎಸ್ ಅಧಿಕಾರಿಗಳ ವಿಚಾರಣೆ..!

ಸಂಸ್ಥೆಗೆ ಸಹಕಾರ ನೀಡಿದ ಆರೋಪದ ಮೇಲೆ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ಪೊಲೀಸರನ್ನು ವಿಚಾರಣೆಗೊಳ ಪಡಿಸುವ ಸಾಧ್ಯತೆ ಇದೆ. ಕಾನ್‍ಸ್ಟೆಬಲ್, ಸಬ್‍ಇನ್‍ಸ್ಪೆಕ್ಟರ್‍ಗಳಿಂದ ಹಿಡಿದು ಆಗಿನ ಜಂಟಿ ಆಯುಕ್ತರವರೆಗೂ ಹಲವಾರು ಮಂದಿಯ ಹೆಸರುಗಳು ಪ್ರಕರಣದಲ್ಲಿ ಕೇಳಿಬಂದಿದೆ. ಆಗಿನ ಡಿಸಿಪಿ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳ ಹೆಸರನ್ನು ಪಟ್ಟಿ ಮಾಡಿಕೊಳ್ಳಲಾಗಿದ್ದು, ಅವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಸದ್ಯಕ್ಕೆ ಬಂಧಿತರಾಗಿರುವ ರೋಷನ್ ಬೇಗ್ ಅವರ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, …

Read More »

ಆಸ್ಟ್ರೇಲಿಯಾ ಸರಣಿಯಿಂದ ರೋಹಿತ್, ಇಶಾಂತ್ ಔಟ್..!

ಸಿಡ್ನಿ, ನ. 24- ಆಸ್ಟ್ರೇಲಿಯಾ ವಿರುದ್ಧ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾಗೆ ಭಾರೀ ಹೊಡೆತ ಬಿದ್ದಿದೆ. ಐಪಿಎಲ್ ವೇಳೆ ಗಾಯಗೊಂಡಿದ್ದ ಮುಂಬೈ ಇಂಡಿಯನ್ಸ್‍ನ ನಾಯಕ ರೋಹಿತ್ ಶರ್ಮಾ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ಸರಣಿಯಿಂದ ಹೊರಬಿದ್ದಿದ್ದು ಟೆಸ್À್ಟ ಪಂದ್ಯಕ್ಕೆ ಆಯ್ಕೆಯಾಗುವ ಮೂಲಕ ಭಾರತ ತಂಡದ ಬಲವನ್ನು ಹೆಚ್ಚಿಸುವ ಸೂಚನೆ ನೀಡಿದ್ದರಾದರೂ ಬೆಂಗಳೂರಿನ ಎನ್‍ಸಿಎ ಫಿಟ್ನೆಸ್ ಸೆಂಟರ್‍ನಲ್ಲಿ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಬಳಿ ತರಬೇತಿ …

Read More »

ಮಹಾದಾಯಿ, ಮೇಕೆದಾಟು, ಗಟ್ಟಿ ಬಸವಣ್ಣದಂತಹ ಹಲವಾರು ಯೋಜನೆಗಳು ಡಿಪಿಆರ್ ಸಿದ್ಧಗೊಂಡಿದ್ದು

ಬೆಂಗಳೂರು, ನ.24- ಮೇಕೆದಾಟು, ಎತ್ತಿನಹೊಳೆ, ಗಟ್ಟಿ ಬಸವಣ್ಣ ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಪಡೆದುಕೊಳ್ಳಲು ಕ್ರಮ ಕೈಗೊಳ್ಳುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೂಚನೆ ನೀಡಿದ್ದಾರೆ. ಇಂದು ಹಿರಿಯ ಅ ಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದ ಅವರು, ನೀರಾವರಿ ಯೋಜನೆಗಳು ಹಾಗೂ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅರಣ್ಯ ಇಲಾಖೆಯ ಅನುಮತಿ ಪತ್ರ ಪಡೆಯುವಲ್ಲಿ ವಿಳಂಬವಾಗುತ್ತಿದೆ. ಅರಣ್ಯ ಇಲಾಖೆ ಕೇಳುವ ಅಗತ್ಯ ದಾಖಲಾತಿಗಳನ್ನು ತುರ್ತಾಗಿ …

Read More »

43 ಆ್ಯಪ್ ಗಳನ್ನು ಕೇಂದ್ರ ಸರ್ಕಾರ ಹೊಸದಾಗಿ ನಿಷೇಧಿಸಿದೆ.

ನವದೆಹಲಿ: ಇತ್ತೀಚೆಗಷ್ಟೇ ಚೀನಾ ಮೂಲದ 118 ಆ್ಯಪ್ ಗಳನ್ನು ಬ್ಯಾನ್ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ 43 ಆ್ಯಪ್ ಗಳನ್ನು ನಿಷೇಧಿಸಿದೆ. ಐಟಿ ಆ್ಯಕ್ಟ್ 69 ಎ ಅಡಿ ಚೀನಾ ಮೂಲದ 43 ಆ್ಯಪ್ ಗಳನ್ನು ಕೇಂದ್ರ ಸರ್ಕಾರ ಹೊಸದಾಗಿ ನಿಷೇಧಿಸಿದೆ. ಅಲಿಬಾಬ ವರ್ಕ್ ಬೆಂಚ್, ಕ್ಯಾಮ್ ಕಾರ್ಡ್, ಸ್ನ್ಯಾಕ್ ವಿಡಿಯೋ, ಅಲಿ ಎಕ್ಸ್ ಪ್ರೆಸ್, ಅಡೋರ್ ಆ್ಯಪ್, ಲಾಲಾ ಮೂವ್ ಇಂಡಿಯಾ, ಡೇಟ್ ಇನ್ ಏಷ್ಯಾ, ಅಲಿಪೇ …

Read More »

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಾಧನೆಯ ಬಗ್ಗೆ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಮೆಚ್ಚುಗೆ

ಬೆಳಗಾವಿ: ಕೋವಿಡ್-19 ಸಂದರ್ಭದಲ್ಲಿಯೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇ.100ಕ್ಕೆ ನೂರರಷ್ಟು ಪ್ರವೇಶ ಮತ್ತು ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ಗಳಿಸುತ್ತಿರುವ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಾಧನೆಯ ಬಗ್ಗೆ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಮಂಗಳವಾರ ಭೇಟಿ ನೀಡಿದ ಅವರು, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಜತೆ ಚರ್ಚೆ ನಡೆಸಿದರು. ಪ್ರತಿವರ್ಷ ಅತ್ಯುತ್ತಮ ಫಲಿತಾಂಶಗಳಿಸುತ್ತಿರುವ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ …

Read More »

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಸ್ಪರ್ಧಿಸುವಂತಿಲ್ಲ.

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಸ್ಪರ್ಧಿಸುವಂತಿಲ್ಲ. ಈ ಕುರಿತು ಚುನಾವಣೆ ಆಯೋಗ ಸ್ಪಷ್ಟನೆ ನೀಡಿದೆ. ಆ ಪಂಚಾಯಿತಿ ವ್ಯಾಪ್ತಿಯಲ್ಲಿ ಗುತ್ತಿಗೆ ಕಾಮಗಾರಿ ನಿರ್ವಹಿಸುವವರ ಸ್ಪರ್ಧೆ ಮಾಡುವಂತಿಲ್ಲ ಎಂದು ತಿಳಿಸಿದೆ. ಸರ್ಕಾರಿ ನೌಕರಿಯಲ್ಲಿರುವವರ ಪತಿ ಅಥವಾ ಪತ್ನಿ ಚುನಾವಣೆಗೆ ಸ್ಪರ್ಧಿಸಬಹುದು ಎಂದೂ ತಿಳಿಸಿದೆ. ಅಭ್ಯರ್ಥಿ ಅದೇ ಪಂಚಾಯಿತಿಗೆ ಸೇರಿದವನಾಗಿರಬೇಕು. ಮೀಸಲು ಸ್ಥಾನಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕು. ಸಾಮಾನ್ಯ ವರ್ಗಕ್ಕೆ 200ರೂ. …

Read More »

ಅಜಯ್ ಹಿಲೋರಿಗೆ ಸಿಬಿಐ ಅಧಿಕಾರಿಗಳು ನೋಟೀಸ್

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿಗೆ ಸಿಬಿಐ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ಐಎಂಎ ಹಗರಣದಲ್ಲಿ ವಂಚಿತರ ಸಂಕಷ್ಟ ಆಲಿಸದೇ ಆರೋಪಿ ಮನ್ಸೂರ್ ಖಾನ್ ಗೆ ಸಹಕರಿಸಿದ್ದಾರೆ. ಅಲ್ಲದೇ ಕಿಕ್ ಬ್ಯಾಕ್ ಪಡೆದುಕೊಂದಿದ್ದಾರೆ ಎಂಬ ಆರೋಪ ಅಜಯ್ ಹಿಲೋರಿ ವಿರುದ್ಧ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿವಂತೆ ಸಿಬಿಐ ಹಿಲೋರಿಗೆ ನೋಟೀಸ್ ನೀಡಿದೆ. ಈ ಹಿಂದೆ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿಗಳಾದ ಹೇಮಂತ್ …

Read More »

ಯತ್ನಾಳ್‍ಗೆ ತಲೆ ಸರಿಯಿಲ್ಲ ನಾವೇ ನಿಮಾನ್ಸ್ ಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ:ವಾಟಾಳ್ ನಾಗರಾಜ್

ಕೊಪ್ಪಳ: ಯತ್ನಾಳ್‍ಗೆ ತಲೆ ಸರಿಯಿಲ್ಲ ನಾವೇ ನಿಮಾನ್ಸ್ ಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು. ರೋಲ್‍ಕಾಲ್ ಕನ್ನಡಪರ ಸಂಘಟನೆಗಳ ಬಂದ್‍ಗೆ ಕಿವಿಗೊಡಬೇಕಿಲ್ಲ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್‍ಗೆ ತಲೆ ಸರಿಯಿಲ್ಲ, ನಾವೇ ನಿಮಾನ್ಸ್ ಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ. ಈ ಹಿಂದೆ ಯಡಿಯೂರಪ್ಪ ಅವರನ್ನೇ ಬೈದಂತವರು, ಅವರ ತಂದೆ ತಾಯಿಗೂ ಬೈಯೋದಿಲ್ಲ ಎಂದು …

Read More »

ಅರಭಾವಿ ಕ್ಷೇತ್ರದ ಯುವ ಜನಾಂಗಕ್ಕೆ ಹೊಸ ಚೈತನ್ಯ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಜಿ.ಟಿ.ಟಿ. ಸಂಸ್ಥೆ ಸಹಕಾರಿ

ಅರಬಾವಿ –  ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ಗಳು ಉದ್ಯೋಗ ತರಬೇತಿ ನೀಡುವ ಮೂಲಕ ಯುವಜನಾಂಗಕ್ಕೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ.ಅಶ್ವಥ್ ನಾರಾಯಣ ಸಿ.ಎನ್‌. ಅವರು ಹೇಳಿದರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಅರಭಾವಿಯಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿ.ಟಿ.ಟಿ.ಸಿ) …

Read More »