Breaking News

Daily Archives: ನವೆಂಬರ್ 20, 2020

ಕೆಎಸ್ ಆರ್ ಟಿಸಿ ಬಸ್ ಹಾಗೂ ಲಾರಿ ಡಿಕ್ಕಿಪ್ರಯಾಣಿಕರೊಬ್ಬರು ಮೃತ

ಧಾರವಾಡ: ಕೆಎಸ್ ಆರ್ ಟಿಸಿ ಬಸ್ ಹಾಗೂ ಲಾರಿ ಡಿಕ್ಕಿಯಾದ ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಘಟನೆ ಅಣ್ಣಿಗೇರಿ ತಾಲ್ಲೂಕಿನ ಬದ್ರಾಪುರ ಗ್ರಾಮದ ಬಳಿ ತಡರಾತ್ರಿ ನಡೆದಿದೆ. ಓಂಕಾರ ಗೊಂದಕರ(25) ಮೃತ ದುರ್ದೈವಿ. ಬಳ್ಳಾರಿಯಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಅಣ್ಣಿಗೇರಿ ಬಳಿಯ ಬದ್ರಾಪುರದ ಬಳಿ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಣ್ಣಿಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮರಾಠರು ಈ ನೆಲದ ಮಕ್ಕಳು. ಮರಾಠಾ ಸಮುದಾಯವನ್ನು ಪ್ರೀತಿಸೋಣ:ಲಕ್ಷ್ಮಣ ಸವದಿ

ಕಲಬುರಗಿ :  ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದು ಭಾಷೆ ಗಳ ನಡುವೆ ಗೊಂದಲ ಸೃಷ್ಟಿಸಲು ಅಲ್ಲ. ಸಮುದಾಯಕ್ಕೆ ಆರ್ಥಿಕ ಬಲ ತುಂಬುವ ಉದ್ದೇಶವಾಗಿದೆ. ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ ಬೇಡವೆಂದು ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ.  ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ  ಅಜಿತ್ ಪವಾರ್ ಉದ್ದಟತನದ ಮಾತು ಯಾರಿಗೂ ಹಿತವನ್ನು ತರುವುದಿಲ್ಲ. ಅವರು ಇತಿಹಾಸವನ್ನು …

Read More »

ಡಿ.5ರಂದು ಕರ್ನಾಟಕ ಬಂದ್ ಹೆಸರಲ್ಲಿ ವಿಜಯಪುರ ಬಂದ್ ಹೇಗೆ ಮಾಡುತ್ತಾರೆ ನೋಡೋಣ

ವಿಜಯಪುರ: ಕನ್ನಡಿಗರ ಮತ ಹೋಗುತ್ತೆ ಎಂದು ಸಿಎಂ ಯಡಿಯೂರಪ್ಪನವರು ಭಯ ಪಡಬೇಕಿಲ್ಲ. ಡಿ.5ರಂದು ಕರ್ನಾಟಕ ಬಂದ್ ಮಾಡುವುದಾಗಿ ಬೆದರಿಕೆ ಹಾಕಿರುವ ರೋಲ್ ಕಾಲ್ ಹೋರಾಟಗಾರರಿಗೂ ಅಂಜಬೇಕಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಮರಾಠ ಅಭಿವೃದ್ಧಿ ನಿಗಮ ಹಿಂಪಡೆದರೆ ದೊಡ್ಡ ಅನಾಹುತ ಸಂಭವಿಸುತ್ತೆ. ನಮ್ಮ ರಕ್ಷಣೆ ಮಾಡಿದ ಶಿವಾಜಿ ಮಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಬೆಳಗಾವಿ ವಿಚಾರ, ಮರಾಠಿ …

Read More »

ಮರಾಠಿ ಭಾಷೆಯ ಬ್ಯಾನರ್  ಗೆ  ಕಪ್ಪು ಮಸಿ ಬಳಿಯುತ್ತಿರುವ ವೀಡಿಯೋ ವೈರಲ್

ಮರಾಠಿ ಭಾಷೆಯ ಬ್ಯಾನರ್ ಗೆ ಕಪ್ಪು ಮಸಿ: ವೀಡಿಯೋ ವೈರಲ್ VIDEO CREDITS TO UDAYANADU ಬೆಳಗಾವಿ: ರಾಜ್ಯ ಸರಕಾರ ಮರಾಠ ಪ್ರಾಧಿಕಾರ ರಚನೆಗೆ ಆದೇಶ ನೀಡಿದ್ದ ಹಿನ್ನೆಲ್ಲೆಯಲ್ಲಿ ಮರಾಠ ಪ್ರಾಧಿಕಾರ ರಚನೆಗೆ ಸಂಬಂಧಿಸಿ  ನಗರದಲ್ಲಿ  ಹಾಕಲಾಗಿದ್ದ ಮರಾಠಿ ಭಾಷೆಯ ಬ್ಯಾನರ್  ಗೆ  ಕಪ್ಪು ಮಸಿ ಬಳಿಯುತ್ತಿರುವ ವೀಡಿಯೋ ವೈರಲ್ ಆಗಿದೆ. ಮರಾಠ ಪ್ರಾಧಿಕಾರ ರಚನೆಯ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕನ್ನಡ ಪರ ಸಂಘಟನೆಗಳು ಹಾಗೂ …

Read More »

ಬಿಜೆಪಿ ಸರ್ಕಾರ ಬಂದಾಗಲೆಲ್ಲ ಅಶಕ್ತರೇ ಮಂತ್ರಿಯಾಗಿದ್ದಾರೆ: ಅಪ್ಪಚ್ಚು ರಂಜನ್

ಮಡಿಕೇರಿ: ನಮ್ಮ ಸರ್ಕಾರ ರಚನೆಯಾದಗಲೆಲ್ಲ ಅವರೇ ಮಂತ್ರಿಗಳಾಗಿದ್ದಾರೆ. ಜೊತೆಗೆ ಕೆಲಸ ಮಾಡದ ಅಶಕ್ತ ಸಚಿವರು ಇದ್ದಾರೆ. ಅಂತಹವರನ್ನು ಕೈಬಿಟ್ಟು ನಮಗೆ ಸಚಿವ ಸ್ಥಾನ ಕೊಡಲಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ನಾಲ್ಕೈದು ಬಾರಿ ಸಚಿವರಾದವರೇ ಮತ್ತೆ ಸಚಿವರಾಗಿದ್ದಾರೆ. ಈಗಿರುವ ಕ್ಯಾಬಿನೆಟ್ ನಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಸಚಿವರೂ ಇದ್ದಾರೆ. ಅಂತಹವರನ್ನು ಕೈಬಿಡಲಿ. ಉಮೇಶ್ ಕತ್ತಿ ಸೇರಿದಂತೆ ನಾನೂ ಐದು ಬಾರಿ ಶಾಸಕನಾಗಿದ್ದೇನೆ. …

Read More »

ಶೀಘ್ರವೇ 16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಾತಿ: ಬಸವರಾಜ ಬೊಮ್ಮಾಯಿ 

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ 16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಾತಿ ನಡೆಯಲಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ  ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುಮತಿ ನೀಡಿದ್ದು, ಶೀಘ್ರವೇ ನೇಮಕಾತಿ ನಡೆಯಲಿದೆ ಎಂದಿದ್ದಾರೆ. ಈಗಾಗಲೇ ಹಲವು ಉದ್ಯೋಗಗಳಿಗೆ ನೇಮಕಾತಿ ನಡೆಯುತ್ತಿದೆ. ಇನ್ನೂ ಹೆಚ್ಚಿನ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರವೇ ನೇಮಕಾತಿ ನಡೆಯಲಿದೆ …

Read More »

ದೆಹಲಿ ಬಿಟ್ಟು ಗೋವಾ ಅಥವಾ ಚೆನ್ನೈನಲ್ಲಿ ತಂಗಲಿದ್ದಾರೆಸೋನಿಯಾ ಗಾಂಧಿ

ನವದೆಹಲಿ,ನ.20- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೆಲ ದಿನಗಳ ಮಟ್ಟಿಗೆ ಹೊರಭಾಗದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ವೈದ್ಯರು ಹಾಗೂ ಕುಟುಂಬ ಸದಸ್ಯರ ಸಲಹೆ ಮೇರೆಗೆ ಇಂದು ಸಂಜೆಯೊಳಗೆ ಸೋನಿಯಾ ಗಾಂಧಿ ಅವರು ಗೋವಾ ಅಥವಾ ಚೆನ್ನೈನಲ್ಲಿ ತಂಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಳೆದ ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಸೋನಿಯಾ ಗಾಂಧಿಗೆ ಉಸಿರಾಟದ ತೊಂದರೆಯಿದೆ. ದೆಹಲಿಯಲ್ಲಿ …

Read More »

ಛಿದ್ರವಾಯ್ತು 906 ವರ್ಷಗಳ ಪುರಾತನ ಮಹಾಕಾಳಿ ವಿಗ್ರಹ..!

ಹಾಸನ, ನ.20- ಸುಮಾರು 906 ವರ್ಷಗಳ ಇತಿಹಾಸಹೊಂದಿರುವ ಬೇಲೂರು ರಸ್ತೆಯ ದೊಡ್ಡಗದವಳ್ಳಿ ಲಕ್ಷ್ಮೀದೇವಾಲಯದಲ್ಲಿರುವ ಮಹಾಕಾಳಿ ವಿಗ್ರಹ ಇದ್ದಕ್ಕಿದ್ದಂತೆ ಛಿದ್ರವಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಹಾಸನ-ಬೇಲೂರು ರಸ್ತೆಯ ಹಗರೆ ಬಳಿ ಇರುವ ಪುರಾತನ ಲಕ್ಷ್ಮೀದೇವಾಲಯದಲ್ಲಿ ಮಹಾಕಾಳಿ ವಿಗ್ರಹವಿತ್ತು. ಈ ವಿಗ್ರಹ ಕೊಲ್ಲಾಪುರದ ಮಹಾಲಕ್ಷ್ಮಿ ವಿಗ್ರಹಕ್ಕೆ ಸ್ವಾಮ್ಯತೆ ಇತ್ತು. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒಳಪಟ್ಟಿದ್ದು, ಇದೀಗ ಈ ವಿಗ್ರಹ ಹಾನಿಗೀಡಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಪುರಾತನ ದೇವಾಲಯಕ್ಕೆ ಪ್ರತಿನಿತ್ಯ ಹಲವಾರು …

Read More »

ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸಿದ್ಧತೆ

ಬೆಂಗಳೂರು,ನ.20- ವಿಧಾನಸಭೆಯಲ್ಲಿ ಬಹುಮತದಿಂದ ಅಂಗೀಕೃತವಾದ ಮಸೂದೆಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಗುತ್ತದೆ ಎಂಬ ಕಾರಣಕ್ಕೆ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸಜ್ಜಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಪರಿಷತ್‍ಗೆ ಹೊಸ ಸಭಾಪತಿ ಆಯ್ಕೆ ಮಾಡಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ. ಉಭಯ ಪಕ್ಷಗಳ ನಡುವೆ ಮೈತ್ರಿಯಾದರೆ, ಬಿಜೆಪಿಗೆ ಸಭಾಪತಿ ಹಾಗೂ ಜೆಡಿಎಸ್‍ಗೆ ಉಪಸಭಾಪತಿ ಸ್ಥಾನ ಹಂಚಿಕೆಯಾಗಲಿದೆ. ಡಿಸೆಂಬರ್ 7 ರಿಂದ 15 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸಭಾಪತಿ …

Read More »

ರೈಲು ಏರಿ ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಯುವಕ ಸಾವು

ಚೆನ್ನೈ,ನ.20- ಸರಕು ರೈಲಿನ(ಗೂಡ್ಸ್ ರೈಲ್) ಮೇಲೆ ಹತ್ತಿ ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿದ್ದ ಯುವಕನಿಗೆ ಹೈಟೆಕ್ಷಂನ್ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವೆನಲಿಯಲ್ಲಿ ನಡೆದಿದೆ. ಎಂ.ಗಣೇಶ್ವರ(15) ವಿದ್ಯುದ್ಘಾತಕ್ಕೆ ತುತ್ತಾಗಿರುವ ಯುವಕ. ರೈಲ್ವೆ ಜಂಕ್ಷನ್‍ನಲ್ಲಿ ಗೂಡ್ಸ್ ರೈಲು ಮೂಲಕ ಸಾಗಿಸುವ ಆಹಾರ ಧಾನ್ಯಗಳನ್ನು ಪರಿಶೀಲಿಸುವ ಇನ್‍ಸ್ಪೆಕ್ಟರ್ ಮಗ ಈತ. ನಿನ್ನೆ ತನ್ನ ತಂದೆಯೊಂದಿಗೆ ಬಂದಿದ್ದ. ಬೇರೆ ಪ್ಲಾಟ್‍ಫಾರ್ಮ್‍ನಲ್ಲಿ ರೈಲು ಹತ್ತಿದ್ದನು. ಅಲ್ಲೇ ಹಾದುಹೋಗಿರುವ ಹೈಟೆನ್ಷನ್ ತಂತಿಯನ್ನು ಗಮನಿಸದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದನು.ಈ ವೇಳೆ …

Read More »