Breaking News

Daily Archives: ನವೆಂಬರ್ 17, 2020

ಗನ್​ನಿಂದ ಶೂಟ್ ಮಾಡಿ ಪತ್ನಿಯನ್ನು ಕೊಂದು ಪತಿರಾಯನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಸವೇಶ್ವರನಗರದಲ್ಲಿ ನಡೆದಿದೆ.

ಬೆಂಗಳೂರು: ಗನ್​ನಿಂದ ಶೂಟ್ ಮಾಡಿ ಪತ್ನಿಯನ್ನು ಕೊಂದು ಪತಿರಾಯನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಸವೇಶ್ವರನಗರದಲ್ಲಿ ನಡೆದಿದೆ. ಸುಮಿತ್ರಾ ಕೊಲೆಯಾದ ದುರ್ದೈವಿ. ಕೊಲೆಗೆ ದಂಪತಿಯ ನಡುವಿನ ಕಲಹವೇ ಕಾರಣ ಎಂಬುದು ತಿಳಿದುಬಂದಿದೆ. ಪತ್ನಿ ಸುಮಿತ್ರಾಗೆ ಗುಂಡಿಕ್ಕಿ ಹತ್ಯೆಗೈದ ಪತಿ ಕಾಳಪ್ಪ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪತಿ ಕಾಳಪ್ಪ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನೆಡೆಸಿದ್ದಾರೆ.

Read More »

ಬೆಂಕಿ ಹಚ್ಚಿಸಿ ತಲೆಮರೆಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಕೊನೆಗೂ ಅರೆಸ್ಟ್ ಆಗಿದ್ದಾರೆ.

ಬೆಂಗಳೂರು: ಬೆಂಕಿ ಹಚ್ಚಿಸಿ ತಲೆಮರೆಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಕೊನೆಗೂ ಅರೆಸ್ಟ್ ಆಗಿದ್ದಾರೆ. ಈ ಸಂಬಂಧ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ. ಮಾಧ್ಯಮಗಳು, ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ನನ್ನ ಬೆನ್ನಿಗೆ ನಿಂತಿದೆ. ನಮ್ಮ ಕೆಪಿಸಿಸಿ ಅಧ್ಯಕ್ಷರು ಈಗಲಾದ್ರೂ ನಮ್ಮ ಪರ ನಿಲ್ಲಲಿ. ನನ್ನ ಪರ ಯಾಕೆ ನಿಂತಿಲ್ಲವೆಂದು ಇಂದು ಡಿಕೆ ಶಿವಕುಮಾರ್​ …

Read More »

ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಬಯಲಯಸೀಮೆಯ ಏಕೈಕ ಪ್ರಾಣಿ ಸಂಗ್ರಹಾಲಯ.ಅಭಿವೃದ್ಧಿ

ಕೋಟೆನಾಡು ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಬಯಲಯಸೀಮೆಯ ಏಕೈಕ ಪ್ರಾಣಿ ಸಂಗ್ರಹಾಲಯ. ಆದ್ರೆ, ಸರ್ಕಾರದ ನಿರ್ಲಕ್ಷದಿಂದಾಗಿ ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. ಹಾಗೇ ಪ್ರಾಣಿಗಳು ಸಹ ಸಂಕಟಕ್ಕೆ ಸಿಲುಕುವ ದುಸ್ಥಿತಿ ಎದುರಾಗಿದೆ. ಚಿತ್ರದುರ್ಗ ನಗರದ ಬಳಿಯ ಜೋಗಿಮಟ್ಟಿ ತಪ್ಪಲಲ್ಲಿರುವ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯವು ಸಾಕಷ್ಟು ವರ್ಷಗಳ ಹಿಂದೆಯೇ ನಿರ್ಮಾಣ ಆಗಿದ್ದು, ಈ ಭಾಗದ ಜನರಿಗೆ ಕಾಡುಪ್ರಾಣಿಗಳನ್ನು ನೋಡುವ ಭಾಗ್ಯ ಕರುಣಿಸಿದೆ.   ಈ ಪ್ರಾಣಿ ಸಂಗ್ರಹಾಲಯ ವಿಸ್ತೀರ್ಣಗೊಳಿಸಿ …

Read More »

ಕಳೆದ ಸುಮಾರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಾಜಿ ಮೇಯರ್​ ಸಂಪತ್​ ರಾಜ್​​ ಕೊನೆಗೂ ನಿನ್ನೆ ಅರೆಸ್ಟ್​ ಆಗಿದ್ದಾರೆ.

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಆರೋಪ ಹೊತ್ತು, ಕಳೆದ ಸುಮಾರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಾಜಿ ಮೇಯರ್​ ಸಂಪತ್​ ರಾಜ್​​ ಕೊನೆಗೂ ನಿನ್ನೆ ಅರೆಸ್ಟ್​ ಆಗಿದ್ದಾರೆ. ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಡಿಸ್ಚಾರ್ಜ್​​​ ಆದ ಬಳಿಕ ಸಣ್ಣ ಸುಳಿವು ಸಿಗದೆ ಸಂಪತ್​ ರಾಜ್ ಕಣ್ಮರೆಯಾಗಿದ್ದರು. ಅವರನ್ನ ಹುಡುಕಲು ಪೊಲೀಸರು ಒಂದು ತಿಂಗಳಿನಿಂದ ಪ್ರಯತ್ನಿಸಿದ್ದರು. ಸಂಪತ್ ರಾಜ್​ರನ್ನ ಹಿಡಿಯೋದಿರಲಿ, ಅವರ ಸುಳಿವು ಪತ್ತೆ ಮಾಡೋದ್ರಲ್ಲೇ ಹೈರಾಣಾಗಿದ್ದರು. ನಾಗರಹೊಳೆ, …

Read More »

ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು,

ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ನವೆಂಬರ್ 18 ರಿಂದ ಶಿಕ್ಷಕರ ವರ್ಗಾವಣೆಯ ಪ್ರಕ್ರಿಯೆ ಆರಂಭವಾಗಲಿದೆ. ನವೆಂಬರ್ 18 ರಿಂದ 30 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಜನವರಿ 4 ರಿಂದ ಮೂರು ಹಂತದ ಕೌನ್ಸಲಿಂಗ್ ನಡೆಯಲಿದೆ. ಮಾರ್ಚ್ ಮಧ್ಯಂತರದ ವರೆಗೆ ಮುಂದುವರೆಯಲಿದೆ. ಈ ವರ್ಷ ಲಕ್ಷಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಲಿದ್ದಾರೆ. ಇವರಲ್ಲಿ ಶೇ. …

Read More »