Breaking News

Daily Archives: ನವೆಂಬರ್ 15, 2020

ಗೋಕಾಕ ಬಳಿ ಭೀಕರ ರಸ್ತೆ ಅಪಘಾತ ನಾಲ್ವರು ದುರ್ಮರಣ…

    https://youtu.be/Dg6L9OFWlVU   ಗೋಕಾಕ: ಟಾಟಾ ಎಸಿ ಮತ್ತು ಕಾರು ಮಧ್ಯ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಸ್ಥಳದಲ್ಲಿ‌ ನಾಲ್ವರು ಮೃತಪಟ್ಟ ಘಟನೆ ತಾಲೂಕಿನ ಸಂಕೇಶ್ವರ – ನರಗುಂದ ರಾಜ್ಯ ಹೆದ್ದಾರಿ ಮಮದಾಪೂರ ಕ್ರಾಸ್ ದ ಬಳಿ ನಡೆದಿದೆ. ಟಾಟಾ ಎಸಿ ಹಾಗೂ ಇಂಡಿಕಾ ಕಾರ್ ಮಧ್ಯ ಡಿಕ್ಕಿ ಸಂಭವಿಸಿ ಓರ್ವ ಯುವಕ , ಇಬ್ಬರು ಮಹಿಳೆಯರು , ಒಂದು ಹೆಣ್ಣುಮಗು ಸೆರಿ ನಾಲ್ಕು ಜನ ದುರ್ಮರಣ ಗೊಂಡಿದ್ದು, …

Read More »

ಮರಾಠ ಸಮುದಾಯ ಓಲೈಸುವ ಸಲುವಾಗಿ50 ಕೋಟಿಇದು ಉಪಚುನಾವಣೆ ತಂತ್ರ ನಾವು ಸುಮನಿರಲ್ಲ ಪ್ರತಿಭಟನೆ ಮಾಡ್ತೀವಿ :ಸಾ.ರಾ. ಗೋವಿಂದ

ಬೆಂಗಳೂರು: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ 50 ಕೋಟಿ ರೂಪಾಯಿ ಅನುದಾನ ನೀಡಿರುವುದನ್ನು ನಾನು ವಿರೋಧಿಸುತ್ತೇನೆ ಎಂದು ಸಾ.ರಾ ಗೋವಿಂದ್ ಅವರು ಹೇಳಿದ್ದಾರೆ. ಅವರು, ಸಿಎಂ ನಿರ್ಧಾರವನ್ನು ಖಂಡಿಸಿ ನಾಡಿದ್ದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತೇವೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿ ಎಂದು ಮನವಿ ಮಾಡಿದರು. . 2020-21ರಲ್ಲಿ ಕನ್ನಡ ಅನುಷ್ಟಾನ ಮತ್ತು ಅಭಿವೃದ್ಧಿಗಾಗಿ ಪ್ರಯತ್ನ ಮಾಡೋಣ …

Read More »

ಕಲಿಯುಗದ ಕರ್ಣನಿಗೆ ಗುಡಿ ಕಟ್ಟಿದ್ದಾರೆ. ಅಂಬರೀಶ್‍ರವರ ವ್ಯಕ್ತಿತ್ವದ ನೆನಪನ್ನು ಮುಂದಿನ ಪೀಳಿಗೆಯೂ ತಿಳಿಯುವಂತೆ ಮಾಡುತ್ತಿದ್ದಾರೆ.

ಮಂಡ್ಯ; ಅಂಬರೀಶ್ ಅಂದರೆ ಅಭಿಮಾನಿಗಳ ಆರಾಧ್ಯದೈವ. ಅಂಬಿಯ ಮಗ್ದ ಮನಸಿನ ಒರಟು ಮಾತಿಗೆ ತಲೆಬಾಗದವರೆ ಇಲ್ಲ. ಆದರೆ ರೆಬೆಲ್ ಸ್ಟಾರ್ ನಮ್ಮನ್ನೆಲ್ಲಾ ಅಗಲಿ 2 ವರ್ಷ ತುಂಬುತ್ತಿದೆ. ವ್ಯಕ್ತಿ ಸತ್ತರು ಪ್ರೀತಿ ಸಾಯಲ್ಲ ಅನ್ನೋ ಹಾಗೇ ಅಭಿಮಾನಿಗಳು ಅಂಬಿ ಮೇಲಿನ ಪ್ರೀತಿ ಕಡಿಮೆ ಮಾಡಿಲ್ಲ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಕಲಿಯುಗದ ಕರ್ಣನಿಗೆ ಗುಡಿ ಕಟ್ಟಿದ್ದಾರೆ. ಅಂಬರೀಶ್‍ರವರ ವ್ಯಕ್ತಿತ್ವದ ನೆನಪನ್ನು ಮುಂದಿನ ಪೀಳಿಗೆಯೂ ತಿಳಿಯುವಂತೆ ಮಾಡುತ್ತಿದ್ದಾರೆ. ನವೆಂಬರ್ 24, …

Read More »

ಬಿಹಾರದ ಚುನಾವಣೆಯಲ್ಲಿಹೆಚ್ಚು ಸ್ಥಾನ ಗೆದ್ದಿದ್ದರೂ ಕೂಡ ಅನಿವಾರ್ಯವಾಗಿ ಈಗ ಜೆಡಿಯು ಮುಂದೆ ಬಿಜೆಪಿ ನಡು ಬಗ್ಗಿಸಿ ನಿಲ್ಲುವಂತಹ ಪರಿಸ್ಥಿತಿ

ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ನಾಯಕರ ಮಾನ ಹರಾಜಾಕಿತ್ತು. ಬಿಜೆಪಿಯ ವ್ಯಂಗ್ಯ , ಲೇವಡಿಗೆ ಉತ್ತರಿಸಲಾಗದೆ ಕಾಂಗ್ರೆಸಿಗರು ಪರದಾಡಿದ್ದರು. ಈಗ ಬಿಜೆಪಿ ಪರಿಸ್ಥಿತಿ 2018ರಲ್ಲಿ ಕಾಂಗ್ರೆಸ್ ಅನುಭವಿಸಿದಂತಿಯೇ ಇದೆ. ಬಿಹಾರದ ಚುನಾವಣೆಯಲ್ಲಿ ಬಿಜೆಪಿ 74 ಸ್ಥಾನಗಳನ್ನು ಗೆದ್ದಿದೆ. ಜೆಡಿಯು ಕೇವಲ 43 ಸ್ಥಾನಗಳನ್ನು ಗೆದ್ದಿದೆ. ಆದರೆ, ಚುನಾವಣಾ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಹಾರ ಜನತೆಗೆ ನೀಡಿದ ಭರವಸೆ ಪ್ರಕಾರ ನಿತೀಶ್‍ಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡುವ ಅನಿವಾರ್ಯತೆ ಎದುರಾಗಿದೆ. ಹೆಚ್ಚು ಸ್ಥಾನ …

Read More »

ರಾಜ್ಯ ಸರ್ಕಾರ ದಿಢೀರನೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಕನ್ನಡ ಪರ ಸಂಘಟನೆಗಳಿಂದಲ್ಲದೇ ವಿವಿಧ ಸ್ತರಗಳಿಂದಲೂ ತೀವ್ರ ವಿರೋಧ

ಬೆಂಗಳೂರು, : ರಾಜ್ಯ ಸರ್ಕಾರ ದಿಢೀರನೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದ್ದು, ಇದಕ್ಕೆ ರಾಜ್ಯದ ನಾನಾ ಭಾಗಗಳಲ್ಲಿ ಅಪಸ್ವರ ಕೇಳಿ ಬಂದಿದೆ.ಯಾವುದೇ ಮಾಹಿತಿಯನ್ನು ಕೊಡದೆ ಏಕಾಏಕಿ ಪ್ರಾಧಿಕಾರ ರಚನೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಬಸವ ಕಲ್ಯಾಣದ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮರಾಠಿಗರ ಮತ ಸೆಳೆಯುವ ಏಕೈಕ ಉದ್ದೇಶದಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಮುಂದಾಗಿರುವ ಸರ್ಕಾರದ ಧೋರಣೆಗೆ ಕನ್ನಡ ಪರ ಸಂಘಟನೆಗಳಿಂದಲ್ಲದೇ ವಿವಿಧ ಸ್ತರಗಳಿಂದಲೂ …

Read More »

ಭಾರತೀಯ ಚಿತ್ರರಂಗದ ಅಭಿನೇತ್ರ ಮತ್ತು ನಾಟಕಕಾರ ಸೌಮಿತ್ರ ಚಟರ್ಜಿ (85) ಇನ್ನಿಲ್ಲ.

ಭಾರತೀಯ ಚಿತ್ರರಂಗದ ಹಿರಿಯ ಅಭಿನೇತ್ರ ಮತ್ತು ನಾಟಕಕಾರ ಸೌಮಿತ್ರ ಚಟರ್ಜಿ (85) ಇನ್ನಿಲ್ಲ. ಒಂದು ತಿಂಗಳಿಗೂ ಹೆಚ್ಚು ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಚಟರ್ಜಿ ಇಂದು ಮಧ್ಯಾಹ್ನ 12.15ರ ಸಮಯದಲ್ಲಿ ವಯೋಸಹಜ ಬಹು ಅನಾರೋಗ್ಯದಿಂದ ಕೊನೆಯುಸಿರೆಳದರು. ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಅಭಿಮಾನಿಗಳನ್ನು ಸೌಮಿತ್ರ ಚಟರ್ಜಿ ಅಗಲಿದ್ದಾರೆ. ಕೋವಿಡ್ ವೈರಸ್ ಸೋಂಕಿನಿಂದಾಗಿ ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಸೌಮಿತ್ರ ನಂತರ ಚೇತರಿಸಿಕೊಂಡರೂ ವಿವಿಧ ಅಂಗಾಂಗಗಳ ವೈಫಲ್ಯದಿಂದ ಕೊನೆಯುಸಿರೆಳೆದರು.

Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತೀಶ್ ಸಾಹುಕಾರರ ಹವಾ ಫುಲ್ ಜೋರು…

ಉಡುಪಿ : ದಕ್ಷಿಣ ಕನ್ನಡ ಜಿಲ್ಲೆಯನ್ನ ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮರು ಸ್ಥಾಪಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಂಗಳೂರು, ಉಡುಪಿ  ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು.  ಆ ಕೋಟೆಯನ್ನು ಮತ್ತೊಮ್ಮೆ ಭದ್ರಕೋಟೆಯನ್ನಾಗಿ ಮರು ಸ್ಥಾಪಿಸುವ ಕಾಲ ಸನ್ನದವಾಗಿದೆ ಎಂದರು. ಕಾಂಗ್ರೆಸ್ ಪಕ್ಷವನ್ನು ಕೇಡರ್ ಮಾದರಿಯಲ್ಲಿ ಒಗ್ಗಟ್ಟಾಗಿ  ಬೂತ್ ಮಟ್ಟದಿಂದ ಸಂಘಟಿಸಲು ಈಗಾಗಲೇ ರಾಜ್ಯಾದ್ಯಂತ …

Read More »

R.S.S. ಅಂದ್ರೆ. ಸುಳ್ಳು ಸುಳ್ಳು ಅಂದ್ರೆ R.S.S. ಸಿದ್ದರಾಮಯ್ಯ

ಬೆಂಗಳೂರು: ಸುಳ್ಳು ಹುಟ್ಟಿದ್ದೇ ಆರ್ ಎಸ್ ಎಸ್ ನಿಂದ, ಸುಳ್ಳು ಹೇಳುವುದೇ ಆರ್ ಎಸ್‍ಎಸ್‍ನ ಅಜೆಂಡವಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಆರ್ ಎಸ್‍ಎಸ್‍ನ ಪಾತ್ರವೇನಿದೆ ಅವರ ಬಲಿದಾನವೇನಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ  ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನೆಹರು ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಆರ್ ಎಸ್‍ಎಸ್‍ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದರು. ನೆಹರು ನಿಧನರಾದಾಗ ಇಡೀ ವಿಶ್ವವೇ ಸಂತಾಪ ವ್ಯಕ್ತಪಡಿಸಿತ್ತು. ನ್ಯೂಯಾರ್ಕ್ ಟೈಮ್ಸ್ ಆಧುನಿಕ …

Read More »

ಪಟಾಕಿ ನಿಷೇಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ನೆಪ ಮಾತ್ರಕ್ಕೆ ಎಂಬಂತಾಗಿದ್ದು, ಬೆಳಕಿನ ಹಬ್ಬದ ಮೊದಲ ದಿನವೇ ಪಟಾಕಿ ಸದ್ದು ಜೋರಾಗಿತ್ತು.

ಬೆಂಗಳೂರು, ನ.15- ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪಟಾಕಿ ನಿಷೇಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ನೆಪ ಮಾತ್ರಕ್ಕೆ ಎಂಬಂತಾಗಿದ್ದು, ಬೆಳಕಿನ ಹಬ್ಬದ ಮೊದಲ ದಿನವೇ ಪಟಾಕಿ ಸದ್ದು ಜೋರಾಗಿತ್ತು. ಪಟಾಕಿ ಮಾರಾಟ ಮತ್ತು ಸಿಡಿಸುವುದರ ಮೇಲೆ ರಾಜ್ಯ ಸರ್ಕಾರ ನಿಷೇಧ ವಿಸಿತ್ತು. ರಾಸಾಯನಿಕ ಮಿಶ್ರಣದ ಪಟಾಕಿಗಳ ಬದಲಾಗಿ ಪರಿಸರಕ್ಕೆ ಹೆಚ್ಚಿನ ಹಾನಿಯಾಗದ ಹಸಿರು ಪಟಾಕಿಗಳನ್ನು ಬಳಸಲು ಸಲಹೆ ನೀಡಲಾಗಿತ್ತು. ದೀಪಾವಳಿಯ ಮೊದಲ ದಿನ ವಾದ ನಿನ್ನೆ ಸಂಜೆ ಪಟಾಕಿಯ ಸದ್ದು …

Read More »

ಎರಡನೇ ಹಂತದ ಕೋವಿಡ್ ಸೋಂಕಿನ ಅಲೆ ಅಪ್ಪಳಿಸುವ ಆತಂಕದ ನಡುವೆಯೂ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿರುವ ಮಹಾರಾಷ್ಟ್ರ ಸರ್ಕಾರ

ಮುಂಬೈ, :- ಎರಡನೇ ಹಂತದ ಕೋವಿಡ್ ಸೋಂಕಿನ ಅಲೆ ಅಪ್ಪಳಿಸುವ ಆತಂಕದ ನಡುವೆಯೂ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿರುವ ಮಹಾರಾಷ್ಟ್ರ ಸರ್ಕಾರ ಸುರಕ್ಷತೆ ದೃಷ್ಟಿಯಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್ ಬಳಸಬೇಕು. ದೇವರ ಪ್ರತಿಮೆ, ಪವಿತ್ರ ಗ್ರಂಥಗಳು ಸೇರಿದಂತೆ ಯಾವುದೇ ವಸ್ತುಗಳನ್ನು ಮುಟ್ಟುವಂತಿಲ್ಲ. ತೀರ್ಥ, ಪ್ರಸಾದ ವಿತರಣೆಯನ್ನು ನಿಷೇಸಲಾಗಿದೆ. ಪಾದರಕ್ಷೆಗಳನ್ನು ಧಾರ್ಮಿಕ ಕೇಂದ್ರಗಳಿಂದ …

Read More »