Breaking News

Daily Archives: ನವೆಂಬರ್ 12, 2020

10 ಜನ ಪೊಲೀಸರು ಜೂಜು ಆಡುತ್ತಿದ್ದ ವೇಳೆ ಧಾರವಾಡ ಸಿಎಸ್‍ಪಿ ತಂಡ ದಾಳಿ

ಧಾರವಾಡ: ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಬೇಕಾದ ಪೊಲೀಸರೇ ಅಂದರ್ ಬಾಹರ್ ಆಡುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ಮುಮ್ಮಿಗಟ್ಟಿ ಬಳಿಯ ನೀಲಕಮಲ್ ಹೋಟೆಲ್ ಹತ್ತಿರದ ಉಡುಪಿ ಹೋಟೆಲ್ ಹಿಂಭಾಗದ ಕೋಣೆಯೊಂದರಲ್ಲಿ 10 ಜನ ಪೊಲೀಸರು ಜೂಜು ಆಡುತ್ತಿದ್ದ ವೇಳೆ ಧಾರವಾಡ ಸಿಎಸ್‍ಪಿ ತಂಡ ದಾಳಿ ನಡೆಸಿದೆ. ಇನ್ನೇನು ಅವರನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಹತ್ತೂ ಜನ ಪೊಲೀಸರು ಪರಾರಿಯಾಗಿದ್ದಾರೆ. ಗರಗ ಗ್ರಾಮದ ಅನೀಲ್ ಉಳವಣ್ಣವರ್ …

Read More »

ಯಾರಿಗೆ ಯಾವ ಖಾತೆ ಮೇಲೆ ಕಣ್ಣು?

ಯಾರಿಗೆ ಯಾವ ಖಾತೆ ಮೇಲೆ ಕಣ್ಣು? ಗೃಹಸಚಿವರಾಗಿರುವ ಬೊಮ್ಮಾಯಿ ಇಂಧನ ಖಾತೆ ಮೇಲೆ ಕಣ್ಣು ಇಟ್ಟಿದ್ದರೆ ಕೈಗಾರಿಕಾ ಖಾತೆಯನ್ನು ನೋಡಿಕೊಳ್ಳುತ್ತಿರುವ ಜಗದೀಶ್ ಶೆಟ್ಟರ್ ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆ ಮೇಲೆ ಕಣ್ಣಿಟ್ಟಿದ್ದಾರೆ. ಆರ್. ಅಶೋಕ್ ಅವರು ಹಾಲಿ ಕಂದಾಯ ಸಚಿವರಾಗಿದ್ದು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಬಯಸಿದ್ದಾರೆ. ಸದ್ಯ ಸಿಎಂ ಯಡಿಯೂರಪ್ಪನವರು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೋಡಿಕೊಳ್ಳುತ್ತಿದ್ದಾರೆ. ವಸತಿ ಇಲಾಖೆಯನ್ನು ನೋಡಿಕೊಳ್ಳುತ್ತಿರುವ ವಿ.ಸೋಮಣ್ಣ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಮೇಲೆ ಕಣ್ಣು …

Read More »

B.S.Y. ಸಂಪುಟಕ್ಕೆ ಹೊಸ ಮಂತ್ರಿಗಳು ಸೇರ್ಪಡೆ ಹೈಕಮಾಂಡ್ ಅನುಮತಿ ಸೂಚಿಸಿದರೆ ,ಹಿರಿಯರಿಗೆ ಕೊಕ್ ….!

ಬೆಂಗಳೂರು: ಹೈಕಮಾಂಡ್ ಅನುಮತಿ ನೀಡಿದರೆ ದೀಪಾವಳಿಯ ನಂತರ ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟಕ್ಕೆ ಹೊಸ ಮಂತ್ರಿಗಳು ಸೇರ್ಪಡೆಯಾಗಲಿದ್ದಾರೆ. ಸಂಪುಟ ಪುನಾರಚನೆಯೋ ಅಥವಾ ವಿಸ್ತರಣೆಯೋ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಆದರೆ ಸಂಪುಟ ಪುನಾರಚನೆ ಮಾಡುವಂತೆ ಹೈಕಮಾಂಡ್ ಸೂಚಿಸಿದರೆ ಬಿಎಸ್‍ವೈ ಧರ್ಮಸಂಕಟಕ್ಕೆ ಸಿಲುಕಲಿದ್ದಾರೆ. ಸಂಪುಟದಲ್ಲಿ ಹಿರಿಯ ಕುರ್ಚಿಗೆ ಕೈ ಹಾಕುವಂತಿಲ್ಲ. ಆದರೆ ಹಿರಿಯರನ್ನು ಬಿಟ್ಟುಬಿಡಿ ಎನ್ನುವುದು ಯಡಿಯೂರಪ್ಪನವರ ಪ್ಲ್ಯಾನ್. ಸಾಫ್ಟ್ ಸಚಿವರನ್ನು ಮಾತ್ರ ಸಂಪುಟದಿಂದ ಕೈಬಿಟ್ಟು ಜಾತಿ ಆಧಾರಿತ, ಪ್ರಾದೇಶಿಕ ಲೆಕ್ಕಾಚಾರ …

Read More »

ಬೆಳಗಾವಿ ಲೋಕಸಭಾ ಅಭ್ಯರ್ಥಿಯ ಆಯ್ಕೆ ಎಂ.ಬಿ ಪಾಟೀಲ್& ಸತೀಶ್ ಜಾರಕಿಹೊಳಿ ಆಯ್ಕೆ ಮಾಡಿ: ಡಿ.ಕೆ. ಶಿವುಕುಮಾರ್

ಬೆಂಗಳೂರು: ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿಯವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಯ ಆಯ್ಕೆಗಾಗಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವುಕುಮಾರ್ ಅವರು ಸಮಿತಿ ರಚನೆ ಮಾಡಿದ್ದಾರೆ. ಸಮಿತಿ ಅಧ್ಯಕ್ಷರಾಗಿ ಶಾಸಕ ಎಂ.ಬಿ ಪಾಟೀಲ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಸಂಯೋಜಕರಾಗಿ ಹಾಗೂ ಸದಸ್ಯರಾದ ಎಲ್.ಹನುಮಂತಯ್ಯ, ಹೆಚ್.ಎಂ.ರೇವಣ್ಣ, ವೀರಕುಮಾರ್ ಎ ಪಾಟೀಲ್, ಅಜಯ್ ಕುಮಾರ್ ಸರ್ ನಾಯಕ್, ಅನಿಲ್ ಲಾಡ್, ಜಿ.ಎಸ್.ಪಾಟೀಲ್, ಬಸವರಾಜ್ ಶಿವಣ್ಣನವರ್, ಶ್ರೀನಿವಾಸ್ ವಿ.ಮಾನೆ, …

Read More »