Breaking News

Monthly Archives: ಅಕ್ಟೋಬರ್ 2020

ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

ಹೈದರಾಬಾದ್: ಪ್ರೀತಿ ಒಪ್ಪಿಕೊಳ್ಳದ ಯುವತಿಗೆ ಪ್ರೇಮದ ಹೆಸರಲ್ಲಿ ಪಾಗಲ್ ಪ್ರೇಮಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದ ಹನುಮಾನ್ ಪೇಟ್​ನಲ್ಲಿ ನಡೆದಿದೆ. ಈ ಪಾಗಲ್ ಪ್ರೇಮಿಯಿಂದಾಗಿ ಯುವತಿ ಸಜೀವ ದಹನವಾಗಿದ್ದಾಳೆ. ಚಿನ್ನಾರಿ.. ನರ್ಸ್​​ ಆಸ್ಪತ್ರೆಯೊಂದರಲ್ಲಿ ನರ್ಸ್​​ ಆಗಿದ್ದ ಚಿನ್ನಾರಿ ಎಂಬ ಯುವತಿಗೆ‌ ಪ್ರೇಮದ ಹೆಸರಲ್ಲಿ ನಾಗಭೂಷಣ್ ಎಂಬ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ಸಹ ನೀಡಿದ್ದಳು. ಆದರೆ ಪೊಲೀಸರು ಈ ವಿಷಯನ್ನು …

Read More »

ನಾನಿದ್ದಾಗ ಸಾವಿರ ಕೇಸ್​ ಇತ್ತಷ್ಟೇ, ಸುಧಾಕರ ಬಂದ್ಮೇಲೆ 5000 ಆಯ್ತು -ರಾಮುಲು ನೇರ ಟಾಂಗ್

ಬೆಂಗಳೂರು: ಸಿಎಂ ಬಿಎಸ್‌ವೈ ನಿವಾಸದಲ್ಲಿ ಸಚಿವರಾದ ಕೆ.ಸುಧಾಕರ್ ಮತ್ತು ಶ್ರೀರಾಮುಲು ಮಧ್ಯೆ ನಡೆದ ಸಂಧಾನ ಸಭೆ ಬಳಿಕ ಇಬ್ಬರು ಸಚಿವರು ಸುದ್ದಿಗೋಷ್ಠಿ ನಡೆಸಿದರು.   ಸಚಿವ ಶ್ರೀರಾಮುಲು ಖಾತೆ ಬದಲಾವಣೆ ಮಾಡಿದ ವಿಚಾರವಾಗಿ ಒಳ್ಳೆಯ ಕೆಲಸ ಮಾಡಲು ಸಿಎಂ ಸಲಹೆ ಕೊಟ್ಟಿದ್ದಾರೆ. ನಮ್ಮಿಬ್ಬರನ್ನೂ ಕರೆಸಿ ಸಿಎಂ ಬಿಎಸ್‌ವೈ ಸೂಚನೆ ಕೊಟ್ಟಿದ್ದಾರೆ ಎಂದು ಶ್ರೀರಾಮುಲು ಹೇಳಿದರು. ಸಿಎಂ ಬಿಎಸ್‌ವೈ ಬಳಿ ಸಮಾಜ ಕಲ್ಯಾಣ ಖಾತೆ ಕೇಳಿದ್ದೆ. ಸಿಎಂ ನನಗೆ ಈಗ ಸಮಾಜ ಕಲ್ಯಾಣ …

Read More »

ಜೈಲು ಹಕ್ಕಿಯಾಗಿರೋ ಸಂಜನಾ ವಿವಾಹಿತೆಯಾ.. ಅವಿವಾಹಿತೆಯಾ..?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿಯ ಮದುವೆ ಫೋಟೋ ಬಹಿರಂಗಗೊಂಡಿತ್ತು. ನನಗೆ ವಿವಾಹವಾಗಿಲ್ಲ ಎಂದು ಹೇಳುತ್ತಿದ್ದ ನಟಿಯ ಮದುವೆ ಫೋಟೋ ನೋಡಿ ಜನ ಶಾಕ್ ಆಗಿದ್ರು. ಈ ಬಗ್ಗೆ ಸಂಜನಾ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದ್ರೆ ಈಗ ಜೈಲು ಹಕ್ಕಿಯಾಗಿರೋ ನಟಿ ಸಂಜನಾ ಗಲ್ರಾನಿ ವಿವಾಹಿತೆಯಾ.. ಅವಿವಾಹಿತೆಯಾ ಎಂಬ ಗೊಂದಲ ಉಂಟಾಗಿದೆ. ಯಾಕಂದ್ರೆ ಈಗಲೂ ತಾನು ಅವಿವಾಹಿತೆ ಎಂದೇ …

Read More »

ದುಷ್ಕರ್ಮಿಗಳಿಂದ ದನದ ಕೊಟ್ಟಿಗೆಗೆ ಬೆಂಕಿ: 3 ಹಸುಗಳು ಸಜೀವ ದಹನ

ಧಾರವಾಡ: ದನದ ಕೊಟ್ಟಿಗೆಗೆ ಬೆಂಕಿ ತಾಗಿ 3 ಹಸುಗಳ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಗುಡ್ಡದ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಅವಘಡದಲ್ಲಿ ಗ್ರಾಮದ ನೀಲಕಂಠಗೌಡ ಪಾಟೀಲ್‌ ಎಂಬುವವರಿಗೆ ಸೇರಿದ್ದ ದನದ ಕೊಟ್ಟಿಗೆ ಸಂಪೂರ್ಣ ಭಸ್ಮವಾಗಿದೆ. ಗ್ರಾಮದ ಹೊರವಲಯದಲ್ಲಿರುವ ಕೊಟ್ಟಿಗೆಗೆ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಕೊಟ್ಟಿಗೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ರಾಸುಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸಹ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ. …

Read More »

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕಾರು ಕೊಚ್ಚಿ ಹೋಗಿ ಮಹಿಳೆ ಸಾವು

ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಆಂಧ್ರಪ್ರದೇಶ, ತೆಲಂಗಾಣ, ವಿಜಯನಗರಂ, ನೆಲ್ಲೂರು, ಚಿತ್ತೂರು, ಅನಂತಪುರಂ,ಗುಂಟೂರು, ವಿಶಾಖಪಟ್ಟಣಂ ಸೇರಿ ಹಲವೆಡೆ ಭಾರಿ ಮಳೆ ಸಂಭವಿಸುತ್ತಿದೆ. ಈ ಪರಿಣಾಮ ಭಾರಿ ನೀರಿನಲ್ಲಿ ಕಾರು ಕೊಚ್ಚಿ ಹೋದ ಘಟನೆ ಆಂಧ್ರದ ನರ್ಶಿಪಟ್ನಂ-ತೂನಿ ಹೆದ್ದಾರಿಯಲ್ಲಿ ನಡೆದಿದೆ.   ಸದ್ಯ ಅಗ್ನಿ ಶ್ಯಾಮಕದಳ ತಂಡ ಕಾರಿನಲ್ಲಿದ್ದ ಮೂವರ ರಕ್ಷಣೆ ಮಾಡಲಾಗಿದ್ದು, ಓರ್ವ ಮಹಿಳೆ ಪ್ರವಾಹದಲ್ಲಿ ಕೊಚ್ಚಿ ಕೊಂಡು ಹೋಗಿ ಮೃತಪಟ್ಟಿದ್ದಾರೆ. ಅಲ್ಲದೆ ಶ್ರೀಕಾಕುಳಂ ಜಿಲ್ಲೆಯಲ್ಲಿ ರಾತ್ರಿಯಿಂದ ಸುರಿದ …

Read More »

ಎಲ್ಲದಕ್ಕೂ ಸಿದ್ಧರಾಗಿ, ಖಾಸಗಿ ಕಾರಿನಲ್ಲಿ ಸಿಎಂ ಮನೆಗೆ ಬಂದ ರಾಮುಲು

ಬೆಂಗಳೂರು: ಸಚಿವ ಬಿ. ಶ್ರೀರಾಮುಲು ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಿಎಸ್​ವೈ ಮತ್ತು ರಾಮುಲು ಮಹತ್ವದ ಭೇಟಿಗೆ ಕೌಂಟ್​ಡೌನ್ ಶುರುವಾಗಿದೆ. ಚಿಕ್ಕಜಾಲ ಬಳಿಯ ಫಾರ್ಮ್​ಹೌಸ್​ನಿಂದ ನೇರವಾಗಿ ಸಿಎಂ ನಿವಾಸಕ್ಕೆ ರಾಮುಲು ಹೊರಟುಬಂದಿದ್ದಾರೆ. ಇನ್ನೂ ಗರಂ ಆಗಿರೋ ಶ್ರೀರಾಮುಲು ಅವರನ್ನ ಮಾತುಕತೆ ನಡೆಸಿ ಮನವೊಲಿಕೆ ಮಾಡ್ತಾರಾ ಸಿಎಂ ಎಂದು ಕಾದು ನೋಡಬೇಕಿದೆ. ಇನ್ನು ಸಿಎಂ ಭೇಟಿ ವೇಳೆ 2 ಖಾತೆ ಬೇಕು ಅಂತಾ ರಾಮುಲು ಪಟ್ಟು ಹಿಡೀತಾರಾ? ಅಥವಾ ಸಿಎಂ …

Read More »

ಜಾರಕಿಹೊಳಿ ಕುಟುಂಬದ ಸಾಮ್ರಾಜ್ಯ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ.

ಬೆಳಗಾವಿ: ಕುಟುಂಬ ರಾಜಕಾರಣಕ್ಕೆ ಹೆಸರಾಗಿರುವ ಬೆಳಗಾವಿಯಲ್ಲಿ ಈಗ ಮತ್ತೆರಡು ಕುಡಿಗಳು ರಾಜಕೀಯ ಪ್ರವೇಶ ಮಾಡಲು ತಯಾರಾಗಿದ್ದು, ಜಾರಕಿಹೊಳಿ ಕುಟುಂಬದ ಸಾಮ್ರಾಜ್ಯ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ. ರಮೇಶ ಜಾರಕಿಹೊಳಿ ಪುತ್ರ ಅಮರನಾಥ ರಾಜಕೀಯ ಪ್ರವೇಶಿಸಿದ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿಯ ಮಕ್ಕಳು ಇದೇ ಹಾದಿಯಲ್ಲಿದ್ದಾರೆ. 3 ದಶಕಗಳಿಂದ ರಾಜಕೀಯದಲ್ಲಿರುವ ಸತೀಶ್‌ ಈಗ ಮಕ್ಕಳಾದ ರಾಹುಲ್‌ ಹಾಗೂ ಪ್ರಿಯಂಕಾ ಅವರನ್ನು ರಾಜಕೀಯಕ್ಕೆ ಸಿದ್ಧಗೊಳಿಸುತ್ತಿದ್ದಾರೆ. ಇದೇ ಉದ್ದೇಶದಿಂದ ಅವರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿದೆ. ಕನಿಷ್ಠ ಐದು ವರ್ಷ ಅವರು …

Read More »

ಆರೋಗ್ಯ ಸಮಸ್ಯೆಯಿದ್ರೂ ರಾಗಿಣಿಗೆ ಸಿಗುತ್ತಿಲ್ಲ ಜಾಮೀನು!

ಬೆಂಗಳೂರು: ಡ್ರಗ್ಸ್​ ಪ್ರಕರಣದಲ್ಲಿ ಜೈಲು ಸೇರಿರುವ ‘ನಶೆ’ರಾಣಿ ರಾಗಿಣಿಗೆ ಹೊಸ ಸಮಸ್ಯೆ ಎದುರಾಗಿದೆ. ಆರೋಗ್ಯ ಸಮಸ್ಯೆಯಿದ್ರೂ ನಟಿಗೆ ಜಾಮೀನು ಸಿಗುತ್ತಿಲ್ಲ. ಜಾಮೀನು ಪಡೆಯಲು ಅವಕಾಶವಿದ್ರೂ ಅರ್ಜಿ ಸಲ್ಲಿಸಿಲ್ಲ. ಯಾಕಂದ್ರೆ ರಾಗಿಣಿ ಹಿರಿಯ ವಕೀಲರ ಹುಡುಕಾಟದಲ್ಲಿದ್ದಾರೆ. ಹೌದು ರಾಗಿಣಿ ಸಂಬಂಧಿಕರು ಹೈಕೋರ್ಟ್ ಮುಂದೆ ವಾದಿಸಲು ಯಾರು ಸೂಕ್ತವೆಂದು ಲಾಯರ್​ನ ಹುಡುಕಾಟದಲ್ಲಿದ್ದಾರೆ. ರಾಗಿಣಿ ಈ ಪ್ರಕರಣದಲ್ಲಿ ಈಗಾಗಲೇ ಒಬ್ಬರು ವಕೀಲರನ್ನು ಬದಲಿಸಿದ್ದಾರೆ. ವಕೀಲ ಸುದರ್ಶನ್ ಬದಲಿಗೆ ಕಲ್ಯಾಣ್​ಕೃಷ್ಣ ಬಂಡಾರು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ …

Read More »

ರಾಜ್ಯದಲ್ಲಿ ಯಾಕೆ ಕಂಟ್ರೋಲ್​ಗೆ ಬರ್ತಿಲ್ಲ ಕ್ರೂರಿ ಕೊರೊನಾ?

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗ ತಾನೇ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದೇವೆ. ಆದ್ರೆ ಈಗ ಮತ್ತೇ ಆ ದಿನಗಳು ಮರುಕಳಿಸುತ್ತಾ ಎಂಬ ಆತಂಕ ಉಂಟಾಗಿದೆ. ಮತ್ತೆ ವಾಪಸ್ ಬರುತ್ತಿದೆಯಾ ಹೋಂ ಕ್ವಾರಂಟೈನ್ ನಿಯಮಗಳು? ಎಂಬ ಪ್ರಶ್ನೆ ಎದ್ದಿದೆ. ಕರುನಾಡಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಹಾಗೂ ರಾಜಧಾನಿಯಲ್ಲಿಯೇ 3,362 ಮಂದಿ ಜೀವ ಕಳೆದುಕೊಂಡಿದ್ದಾರೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 3,498 ಮಂದಿಗೆ ವೈರಸ್ ಅಟ್ಯಾಕ್ ಆಗಿದೆ. ಇನ್ನು 2,85,055 ಸೋಂಕಿತರು …

Read More »

ಕಡಲ ಒಡಲಲ್ಲಿ ನಾಪತ್ತೆಯಾಗುತ್ತಿರುವ ಮೀನುಗಾರರಿಗೆ ಬೇಕಿದೆ ಉಪಗ್ರಹ ಆಧಾರಿತ ನೇವಿಗೇಷನ್‌ ವ್ಯವಸ್ಥೆ..

ಉಡುಪಿ: ಅರಬ್ಬೀ ಸಮುದ್ರ ಕಳೆದ ಒಂದೆರಡು ವರ್ಷಗಳಿಂದ ಆತಂಕದ ಸಮುದ್ರ ಆಗ್ತಿದೆ. ಮೇಲಿಂದ ಮೇಲೆ ಅವಘಡಗಳು ಸಂಭವಿಸುತ್ತಲೇ ಇವೆ. ದಡದಿಂದ ಹೊರಟು 15 ದಿನ ಸಮುದ್ರದಲ್ಲಿ ಜೀವನ ಮಾಡೋ ಕಡಲ ಮಕ್ಕಳು ಇದೀಗ ಉಪಗ್ರಹ ಆಧಾರಿತ ನೇವಿಗೇಷನ್‌ ವ್ಯವಸ್ಥೆಗೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಮೋದಿ ಸರ್ಕಾರದ ಮೀನುಗಾರಿಕಾ ಸಚಿವಾಲಯದ ಕದ ತಟ್ಟಿದ್ದಾರೆ. ಅರಬ್ಬೀ ಸಮುದ್ರ ಒಂದು ಕಾಲದಲ್ಲಿ ಸೇಫ್‌ ಸಮುದ್ರ ಎಂಬ ಖ್ಯಾತಿ ಪಡೆದಿತ್ತು. ಕಡಲ ಮಕ್ಕಳು ಕಸುಬು ಮಾಡಿ …

Read More »