Breaking News

Monthly Archives: ಅಕ್ಟೋಬರ್ 2020

500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿ ವೆಡ್ಡಿಂಗ್ ಡೇ ಆಚರಿಸಿಕೊಂಡ ದಂಪತಿ

ಭುವನೇಶ್ವರ್: ಸಾಮಾನ್ಯವಾಗಿ ವಿವಾಹ ಮಹೋತ್ಸವವನ್ನು ತಮ್ಮ ಹತ್ತಿರದ ಸಂಬಂಧಿಗಳಿಗೆ ಪಾರ್ಟಿಗಳನ್ನು ಆಯೋಜಿಸುವ ಮೂಲಕ ಸೆಲೆಬ್ರೆಟ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ದಂಪತಿ ಮಾತ್ರ ವಿವಾಹವಾದ ದಿನವನ್ನು 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಹೌದು. ಒಡಿಶಾ ಮೂಲದ ಯುರೇಕಾ ಅಪ್ತಾ ಹಾಗೂ ಜೋವಾನ್ನಾ ವಾಂಗ್ ದಂಪತಿ ಇಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೆಪ್ಟೆಂಬರ್ 25ರಂದು ದಂಪತಿ ಭುವನೇಶ್ವರದಲ್ಲಿ ವಿವಾಹವಾಗಿದ್ದಾರೆ. ಇದೇ …

Read More »

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‍ಡಿಕೆ, ಆರ್ ಆರ್ ನಗರ ಚುನಾವಣೆ ಮೂಲಕ ಜೆಡಿಎಸ್ ಪಕ್ಷದ ಸಮಾಧಿ ಅಂತ ನಮ್ಮ ಪಕ್ಷದ ಮುಖಂಡರ ಮನೆಯಲ್ಲಿ ಡಿಕೆಶಿ ಹೇಳಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ. ಈಗ ಡಿಕೆಶಿ ಯವರು ಅವರಿಗೆ ಕೈ ಜೋಡಿಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಆರ್ ಆರ್ ನಗರದಲ್ಲಿ ನನ್ನ …

Read More »

ಬಾಲಿವುಡ್ ನಟ ವಿವೇಕ್  ಓಬೇರಾಯ್ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ

ಮುಂಬೈ:  ಡ್ರಗ್ಸ್ ಪ್ರಕರಣ ಸಂಬಂಧ  ಬಾಲಿವುಡ್ ನಟ ವಿವೇಕ್  ಓಬೇರಾಯ್ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಯಾಂಡಲ್ ವುಡೇ ಡ್ರಗ್ಸ್ ಪ್ರಕರಣದಲ್ಲಿ ಎ-6 ಆರೋಪಿಯಾಗಿರುವ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಆತನನ್ನು  ವಿಚಾರಣೆಗೆ ಒಳಪಡಿಸಲು  ಪೊಲೀಸರು ಹುಡುಕಾಟ ನಡೆಸಿದ್ದರೆ.  ಆದಿತ್ಯ ಆಳ್ವಾ, ನಟ ವಿವೇಕ ಅವರ ಸಂಬಂಧಿಯಾಗಿದ್ದು, ಅವರ  ಮನೆಯಲ್ಲಿ ಇರುವ ಶಂಕೆ ವ್ಯಕ್ತವಾದ ಹಿನ್ನೆಲೆ ದಾಳಿ ನಡೆಸಿದ್ದಾರೆ. ಇದೇ ಕಾರಣದಿಂದ ಬೆಂಗಳೂರಿನ ಸಿಸಿಬಿ ಪೊಲೀಸರು ಸರ್ಚ್ …

Read More »

ಕಳೆದ ನಾಲ್ಕು ದಿನಗಳಿಂದ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಯಾರೂ ಸಹಾ ಹಳ್ಳ ಅಥವಾ ನದಿಗಳನ್ನು ದಾಟುವ ಆತುರ ಮಾಡಬೇಡಿ: ರಮೇಶ್ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯಾದ್ಯಂತ, ಕಳೆದ ನಾಲ್ಕು ದಿನಗಳಿಂದ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಯಾರೂ ಸಹಾ ಹಳ್ಳ ಅಥವಾ ನದಿಗಳನ್ನು ದಾಟುವ ಆತುರ ಮಾಡಬೇಡಿ ಎಂದು ಸಚಿವ ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ. ಗೋಕಾಕ್ ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ನದಿ ಹಳ್ಳ ತುಂಬಿ ಹರಿಯುತ್ತಿವೆ. ನದಿ ಸಮೀಪದ ಗ್ರಾಮಸ್ಥರು ಜಾನುವಾರುಗಳನ್ನು ನದಿ, ಹಳ್ಳದ ತೀರದ ಕಡೆ ಬಿಡಬೇಡಿ. ಯಾರೂ ಸಹಾ ಹಳ್ಳ ಅಥವಾ ನದಿಗಳನ್ನು …

Read More »

ಜೇಮ್ಸ್ ಚಿತ್ರ ತಂಡದಿಂದ ಸಿಹಿ ಸುದ್ದಿ ಹೊರ ಬಿದ್ದಿದ್ದು, ಹೀರೋಯಿನ್ ಆಯ್ಕೆ ಮಾಡಲಾಗಿದೆ.

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಪುನೀತ್ ರಾಜ್‍ಕುಮಾರ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರ ತಂಡದಿಂದ ಸಿಹಿ ಸುದ್ದಿ ಹೊರ ಬಿದ್ದಿದ್ದು, ಹೀರೋಯಿನ್ ಆಯ್ಕೆ ಮಾಡಲಾಗಿದೆ. ಅನ್‍ಲಾಕ್ ಬಳಿಕ ಬಹುತೇಕ ಚಿತ್ರಗಳ ಶೂಟಿಂಗ್ ಚುರುಕುಗೊಂಡಿದ್ದು, ಯುವರತ್ನ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಮೊನ್ನೆಯಷ್ಟೇ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಅಪ್ಪು ಜೇಮ್ಸ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಲಾಕ್‍ಡೌನ್ ವೇಳೆ ಫುಲ್ …

Read More »

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆನಾಸೀರ್ ಬಾಗವಾನ್ ಪೆನಲ್ ಭರ್ಜರಿ ಜಯಗಳಿಸಿದೆ.

ಬೆಳಗಾವಿ: ಎಂ.ಕೆ.ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಾಸೀರ್ ಬಾಗವಾನ್ ಪೆನಲ್ ಭರ್ಜರಿ ಜಯಗಳಿಸಿದೆ. ನಿನ್ನೆ ಸಂಜೆ 7 ಗಂಟೆಗೆ ಮತ ಎಣಿಕೆ ಆರಂಭವಾಗಿ, ಮದ್ಯರಾತ್ರಿ 2 ಗಂಟೆಗೆ ಮುಕ್ತಾಯವಾಯಿತು. ನಾಸೀರ ಬಾಗವಾನ್ ಗುಂಪಿನ ಎಲ್ಲಾ ಅಭ್ಯರ್ಥಿಗಳು ಗೆಲವು ಸಾಧಿಸಿದ್ದು, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಪುತ್ರ ಪ್ರಕಾಶಗೌಡ ಪಾಟೀಲ ಅವರ ತಂಡ ಸೋಲು ಅನುಭವಿಸಿದೆ. ಆರಂಭದಲ್ಲಿ ನಾಸೀರ್ ಬಾಗವಾನ್ ಬೆಂಬಲಿತ …

Read More »

ಅಮರನಾಥ್ ಜಾರಕಿಹೊಳಿ ಲೋಕಸಭಾ ಟಿಕೆಟ್ ಆಕಾಂಕ್ಷಿಯಲ್ಲ: ರಮೇಶ್ ಜಾರಕಿಹೊಳಿ

ಬೆಳಗಾವಿ: ಪಕ್ಷದ ನಾಯಕರು, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ದರಿದ್ದೇವೆ. ಸಂತೋಷ ಜಾರಕಿಹೊಳಿ ಅವರಿಗೆ ರಾಜಕಾರಣ ಸಂಬಂಧವಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ಗೋಕಾಕ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂತೋಷ ಜಾರಕಿಹೊಳಿಗೂ  ರಾಜಕಾರಣಕ್ಕೂ ಸಂಬಂಧವಿಲ್ಲ. ಅಮರನಾಥ್ ಅವರು ಮಾತ್ರ ರಾಜಕೀಯದಲ್ಲಿ ಇರಲಿದ್ದಾರ. ಈಗಾಗಲೇ ಅಮರನಾಥ್  ಜಾರಕಿಹೊಳಿ ಲೋಕಸಭಾ ಟಿಕೆಟ್ ಆಕಾಂಕ್ಷಿಯಲ್ಲ. ಪಕ್ಷಕ್ಕಾಗಿ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತೆನೆ ಎಂದು ಸ್ಪಷ್ಟ ಪಡಿಸಿದ್ದಾರೆ. ಲೋಕಸಭಾ ಟಿಕೆಟ್ ಅಭ್ಯರ್ಥಿಯ ಬಗ್ಗೆ …

Read More »

ಕಳೆದ 24 ಗಂಟೆಯಲ್ಲಿ 67,708 ಜನರಲ್ಲಿ ಕೊರೊನಾ ಸೋಂಕು

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 67,708 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 73,07,098 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 680 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,11,266ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 8,12,390 ಕೊವಿಡ್ ಸಕ್ರಿಯ ಪ್ರಕರಣಗಳಿದ್ದು, 63,83,442 ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ …

Read More »

ಮಂಗಳಾರತಿಯಲ್ಲಿದ್ದ ಹಣವನ್ನು ಖತರ್ನಾಕ್ ಭಕ್ತೆಯೊಬ್ಬಳು ಎಗರಿಸಿದ ಘಟನೆ

ಮಡಿಕೇರಿ: ದೇವರಿಗೆ ವಿನಮ್ರವಾಗಿ ಕೈ ಮುಗಿದು, ಸುತ್ತು ಬಂದ ಬಳಿಕ ಮಂಗಳಾರತಿಯಲ್ಲಿದ್ದ ಹಣವನ್ನು ಖತರ್ನಾಕ್ ಭಕ್ತೆಯೊಬ್ಬಳು ಎಗರಿಸಿದ ಘಟನೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ. ಅಕ್ಟೋಬರ್ 12 ರಂದು ನಡೆದಿರುವ ಮಹಿಳೆಯ ಖತರ್ನಾಕ್ ಕೆಲಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬುಧವಾರ ಸಂಜೆ ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ವೀಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲೇನಿದೆ? ಮಹಿಳೆ ಮೊದಲು ದೇವರಿಗೆ ಕೈಮುಗಿದು ಅತ್ತ-ಇತ್ತ ನೋಡುತ್ತಾಳೆ. ನಂತರ …

Read More »

ಕೈ-ಕಮಲ-ದಳ ಸಾಥ್: ಕಾಫಿನಾಡಿನ ಎನ್.ಆರ್.ಪುರ ಬಂದ್

ಚಿಕ್ಕಮಗಳೂರು: ಶತಮಾನಗಳ ಬದುಕೇ ಬೀದಿಗೆ ಬೀಳುತ್ತೆ ಅಂದಾಗ ಹೋರಾಟ ಅನಿವಾರ್ಯ. ಅಂತಹ ಹೋರಾಟಕ್ಕೆ ಜಿಲ್ಲೆಯ ಎನ್.ಆರ್.ಪುರ ತಾಲೂಕು ಮುಂದಾಗಿದೆ. ಬದುಕಿಗಿಂತ ರಾಜಕೀಯ-ರಾಜಕಾರಣ ದೊಡ್ಡದ್ದಲ್ಲ. ಹಾಗಾಗಿ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮರಣ ಶಾಸನವಾಗಿರೋ ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್, ಪರಿಸರ ಸೂಕ್ಷ್ಮ ವಲಯದ ವಿರುದ್ಧ ಎನ್.ಆರ್.ಪುರ ತಾಲೂಕಿನ ಜನ ಪಕ್ಷಾತೀತವಾಗಿ ಹೋರಾಟಕ್ಕಿಳಿದಿದ್ದಾರೆ. ಇಂದು ಬೆಳಗ್ಗೆ ಏಳು ಗಂಟೆಯಿಂದ ಇಡೀ ದಿನ ಎನ್.ಆರ್.ಪುರ ತಾಲೂಕು ಸಂಪೂರ್ಣ ಸ್ತಬ್ಧಗೊಂಡಿದೆ. ಮೈಸೂರಿನ ಅರಸರಾದ ನರಸಿಂಹರಾಜ …

Read More »