Breaking News

Daily Archives: ಅಕ್ಟೋಬರ್ 19, 2020

ಕಾಪು ಬೀಚ್‍ಗೆ ಪ್ರವಾಸಕ್ಕೆಂದು ಬಂದ ಬೆಂಗಳೂರಿನ ಇಬ್ಬರು ಯುವಕರು ನೀರುಪಾಲಾಗಿದ್ದಾರೆ.

ಉಡುಪಿ: ಜಿಲ್ಲೆಯ ಕಾಪು ಬೀಚ್‍ಗೆ ಪ್ರವಾಸಕ್ಕೆಂದು ಬಂದ ಬೆಂಗಳೂರಿನ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಬೆಂಗಳೂರಿನ ಹೇಸರಘಟ್ಟದಿಂದ ಐವರು ಯುವಕರ ತಂಡ ಉಡುಪಿ ಪ್ರವಾಸಕ್ಕೆ ಬಂದಿತ್ತು. ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿ ಸಾವನ್ನಪ್ಪಿದ್ದಾರೆ. ಸಂಜೆ ಕಾಪು ಬೀಚ್‍ನಲ್ಲಿ ಆಟವಾಡುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಾಮೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. …

Read More »

ಸ್ವಲ್ಪ ಮಟ್ಟಿಗೆ ಮಳೆ ಹಾಗೂ ಪ್ರವಾಹ ತಗ್ಗಿದರೂ ಜನರಲ್ಲಿರುವ ಭೀತಿ ಮಾತ್ರ ಕಡಿಮೆಯಾಗಿಲ್ಲ.

ಬೆಂಗಳೂರು: ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಅಕ್ಷರಸಹ ನಲುಗಿ ಹೋಗಿವೆ, ಒಂದೆಡೆ ಮಳೆ, ಮತ್ತೊಂದೆಡೆ ಭೀಮಾ, ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಜನ ಕಂಗಾಲಾಗಿದ್ದಾರೆ. ಮನೆ ಕಳೆದುಕೊಂಡು ಬೀದಿಯಲ್ಲಿ ನಿಲ್ಲುವಂತಾಗಿದೆ. ಇದೀಗ ಸ್ವಲ್ಪ ಮಟ್ಟಿಗೆ ಮಳೆ ಹಾಗೂ ಪ್ರವಾಹ ತಗ್ಗಿದರೂ ಜನರಲ್ಲಿರುವ ಭೀತಿ ಮಾತ್ರ ಕಡಿಮೆಯಾಗಿಲ್ಲ. ವಿಜಯಪುರ ಹಾಗೂ ಕಲಬುರಗಿಯ ಭೀಮಾ ನದಿ ತೀರಗಳಲ್ಲಿ ಹಲವು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದು, ಜನ ಅನ್ನ, …

Read More »

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ 15 ಸ್ಥಾನಗಳಿಗೆ ಕತ್ತಿ ಸಹೋದರರ ಬೆಂಬಲಿತ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆ

ಬೆಳಗಾವಿ : ಹುಕ್ಕೇರಿ ತಾಲ್ಲೂಕಿನ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ 15 ಸ್ಥಾನಗಳಿಗೆ ಕತ್ತಿ ಸಹೋದರರ ಬೆಂಬಲಿತ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆಯಾಗಿದ್ದಾರೆ.  ರಾಜಕೀಯ ಜಟಾಪಟಿ ಸಾಕ್ಷಿಯಾಗಿದ್ದ ಹುಕ್ಕೇರಿ ತಾಲ್ಲೂಕು ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಕಳೆದ ಎರಡು ದಶಕದಿಂದ ಕತ್ತಿ ಸಹೋದರರ ತಂಡ ಗೆಲುವು ಸಾಧಿಸುತ್ತಾ ಬಂದಿದೆ. ಈ ಬಾರಿಯೂ ಸಹ ಶಾಸಕ ಉಮೇಶ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ  …

Read More »

ಕಾರಜೋಳ ಪುತ್ರ‌ ಅವರ ಆರೋಗ್ಯ ಸ್ಥಿತಿ ಗಂಭೀರ

ಕಲಬುರಗಿ : ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪುತ್ರ‌ ಡಾ.ಗೋಪಾಲ ಕಾರಜೋಳ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅವರ ಪುತ್ರನಿಗೆ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಉಸಿರಾಟದ ತೊಂದರೆಯಾದ ಹಿನ್ನೆಲೆ ಚೆನ್ನೈ ಖಾಸಗಿ ಆಸ್ಪತ್ರೆ ಶಿಪ್ಟ್ ಮಾಡಲಾಗಿದೆ.

Read More »