ಕೋಲಾರ: ಕೆಜಿಎಫ್‍ನ ರಾಬರ್ಟ್ ಸನ್ ಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು ಒಂದು ಕೋಟಿ ಮೌಲ್ಯದ 185 ಕೆಜಿಯಷ್ಟು ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಓರ್ವನನ್ನು ಬಂಧಿಸಿದ್ದು, ಆರೋಪಿಯನ್ನು ರೌಡಿ ಶೀಟರ್ ತಂಗಂ ಅಣ್ಣ ಜೋಸೆಫ್ ಎಂದು ಗುರುತಿಸಲಾಗಿದೆ. ಈತ ಸುಮಾರು ನಾಲ್ಕು ರಾಜ್ಯಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಕೆಜಿಎಫ್ ಎಸ್‍ಪಿ ಇಲಕ್ಕಿಯಾ ಕರುಣಾಗರನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಓರ್ವ ಆರೋಪಿ ಸೇರಿ ಸುಮಾರು …
Read More »Monthly Archives: ಸೆಪ್ಟೆಂಬರ್ 2020
ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್ ಈ ವರ್ಷ ಪ್ರಸಾರವಾಗುವುದಿಲ್ಲ
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗಾಗಲೇ ಅನೇಕ ಧಾರಾವಾಹಿ, ಸಿನಿಮಾಗಳಿಗೆ ಬ್ರೇಕ್ ಇದ್ದಿದೆ. ಇತ್ತೀಚೆಗೆ ಒಂದೊಂದೆ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಿದೆ. ಈ ಕನ್ನಡ ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್ ಈ ವರ್ಷ ಪ್ರಸಾರವಾಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ತೆಲುಗಿನಲ್ಲಿ ಬಿಗ್‍ಬಾಸ್ ಸೀಸನ್ 4 ಆರಂಭವಾಗಿದೆ. ಹಿಂದಿಯಲ್ಲಿ ಹೊಸ ಆವೃತ್ತಿಗೆ ಎಲ್ಲ ತಯಾರಿ ನಡೆಯುತ್ತಿದ್ದು, ಅಕ್ಟೋಬರ್‍ನಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಆದರೆ ಕನ್ನಡದಲ್ಲಿ ಈ ವರ್ಷ ಅಂದರೆ 2020ರಲ್ಲಿ …
Read More »ನೀರು ಪೂರೈಕೆ ಯೋಜನೆ ಪ್ರಗತಿ ಪರಿಶೀಲನೆ
ಬೆಳಗಾವಿ: ತಾಲ್ಲೂಕಿನ ತುಮ್ಮರಗುದ್ದಿ, ಕುಂದರಗಿ, ಬಸವಸನಕೊಳ್ಳ ಹಾಗೂ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯಕ್ಕೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಮಂಗಳವಾರ ಭೇಟಿ ನೀಡಿದರು. ಮಂಡಳಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕುಡಿಯುವ ನೀರು ಪೂರೈಕೆ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ‘ಸೆ. 15ರಂದು ಬೆಂಗಳೂರಿನಲ್ಲಿ ಮಂಡಳಿ ಸಭೆ ನಡೆಯಲಿದೆ. ಮಂಡಳಿತ ಅಧ್ಯಕ್ಷರೊಂದಿಗೆ ಚರ್ಚಿಸಿ, ಅಭಿವೃದ್ಧಿ ಕೆಲಸಕ್ಕೆ ವೇಗ ನೀಡಲಾಗುವುದು. ಎಲ್ಲ ಕಾಮಗಾರಿಗಳನ್ನು …
Read More »ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ…………..
ಗದಗ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕಾರಿನ ಮುಂಭಾಗ ಸಂಪೂರ್ಣ ಸುಟ್ಟಿದೆ. ಆದರೆ ಪವಾಡವೆಂಬಂತೆ ತಾಲೂಕು ಪಂಚಾಯತ್ ಅಧ್ಯಕ್ಷ ಪರಸಪ್ಪ ಇಮ್ಮಡಿ ಪಾರಾಗಿದ್ದಾರೆ.ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಬಟ್ಟೂರು ಬಳಿ ಘಟನೆ ನಡೆದಿದೆ. ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿ ಅಧ್ಯಕ್ಷರ ಪರಸಪ್ಪ ಇಮ್ಮಡಿ ಅವರ ಡಸ್ಟರ್ ಕಾರಿನ ಮುಂಭಾಗ ಹಾಗೂ ಒಳಗಡೆಯ ಸೀಟ್‍ಗಳು ಸುಟ್ಟು ಕರಕಲಾಗಿವೆ. ಬಟ್ಟೂರಿನಿಂದ ಲಕ್ಷ್ಮೇಶ್ವರಕ್ಕೆ ಹೋಗುವ ವೇಳೆ ಆಡರಗಟ್ಟಿ ಬಳಿ ದಾರಿ ಮಧ್ಯೆ ಕಾರಿನಲ್ಲಿ ಏಕಾಏಕಿ ಬೆಂಕಿ …
Read More »ಶ್ರೀಕ್ಷೇತ್ರ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಮಾಮನಿ ನೇಮಕ
ಸವದತ್ತಿ / ಉಗರಗೋಳ: ಇಲ್ಲಿನ ಶ್ರೀಕ್ಷೇತ್ರ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರನ್ನಾಗಿ ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಕ್ಷೇತ್ರದ ಶಾಸಕರೂ ಆದ ಆನಂದ ಮಾಮನಿ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ. ‘2018ರ ಮಾರ್ಚ್ 23ರಂದು 16 ಸದಸ್ಯರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ಸರ್ಕಾರ ರಚಿಸಿತ್ತು. ಅದರ ಅಧಿಕಾರದ ಅವಧಿ ಮುಗಿದಿದ್ದು, ಹೊಸದಾಗಿ ರಚನೆ ಆಗಬೇಕಿದೆ. ಅಲ್ಲಿವರೆಗೆ ಅಧ್ಯಕ್ಷರನ್ನಾಗಿ ಆನಂದ ಮಾಮನಿ ಅವರನ್ನು ನೇಮಿಸಲಾಗಿದೆ’ ಎಂದು …
Read More »ಕರ್ಮ ನಿಮ್ಮನ್ನ ಬಿಡಲ್ಲ- ರಿಯಾ ಬಂಧನಕ್ಕೆ ಅಂಕಿತಾ ಪ್ರತಿಕ್ರಿಯೆ
ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯ ಬಂಧನವಾಗಿದ್ದು, ಸುಶಾಂತ್ ಸಿಂಗ್ ರಜಪೂತ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕರ್ಮ ನಿಮ್ಮ ವಿಧಿಯನ್ನ ನಿರ್ಧರಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಅದೃಷ್ಟದಿಂದ ಏನು ಸಾಧಿಸಲು ಸಾಧ್ಯವಿಲ್ಲ. ಅದು ಕೇವಲ ಕ್ಷಣಿಕ. ನೀವು ಮಾಡುವ ಕೆಲಸಗಳು ನಿಮ್ಮ ಅದೃಷ್ಟವನ್ನ ಬದಲಾಯಿಸುತ್ತದೆ. ಅದುವೇ ಕರ್ಮ ಎಂದು ಬರೆದಿರುವ ಸಾಲುಗಳ ಫೋಟೋವನ್ನ ಅಂಕಿತಾ ಲೋಖಂಡೆ ಹಂಚಿಕೊಂಡಿದ್ದಾರೆ. ಮೂರು ದಿನದ …
Read More »ರಾಜ್ಯದಲ್ಲಿ ಕೊರೋನಾಕ್ಕೆ 2ನೇ ಗರಿಷ್ಠ ಸಾವು
ಬೆಂಗಳೂರು : ರಾಜ್ಯದಲ್ಲಿ ಮಂಗಳವಾರ ಕೊರೋನಾ ಹೆಮ್ಮಾರಿಗೆ 146 ಮಂದಿ ಬಲಿಯಾಗಿದ್ದು, ಹೊಸದಾಗಿ 8,225 ಮಂದಿ ಕೊರೋನಾ ಸೋಂಕಿತರಾಗಿದ್ದಾರೆ. ತನ್ಮೂಲಕ ರಾಜ್ಯದಲ್ಲಿನ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 4.12 ಲಕ್ಷ ತಲುಪಿದೆ. ಕರೋನಾ ಸೋಂಕಿಗೆ ಮಂಗಳವಾರ 146 ಮಂದಿ ಬಲಿಯಾಗಿರುವುದು ಇದುವರೆಗಿನ ಎರಡನೇ ಗರಿಷ್ಠ ಸಾವಿನ ಪ್ರಮಾಣವಾಗಿದೆ. ಆಗಸ್ಟ್ 25 ರಂದು 148 ಮಂದಿ ಸೋಂಕಿಗೆ ಮೃತಪಟ್ಟಿದ್ದು ಇದುವರೆಗಿನ ದಾಖಲೆ. ರಾಜ್ಯದಲ್ಲಿ ಸದ್ಯ 96,918 ಸಕ್ರೀಯ ಕೊರೋನಾ ಪ್ರಕರಣಗಳಿದ್ದು ಇದರಲ್ಲಿ …
Read More »ರಾಜಕೀಯದ ನಿಖರ ಭವಿಷ್ಯದ ಮೂಲಕ ಖ್ಯಾತಿಗಳಿಸಿದ್ದ ಪಂ.ಶ್ರೀಪಾಲ್ ಇನ್ನಿಲ್ಲ
ಅಥಣಿ : ರಾಜಕೀಯ ಭವಿಷ್ಯ ನುಡಿಯುವ ಮೂಲಕ ಖ್ಯಾತಿಗಳಿಸಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿಯ ಪಂಡಿತ ಶ್ರೀಪಾಲ್ ಉಪಾಧ್ಯೆ (78) ಮಂಗಳವಾರ ಬೆಳಗ್ಗೆ ನಿಧನರಾದರು. ನ್ಯುಮೋನಿಯಾದಿಂದ ಬಳಲುತ್ತಿದ್ದ ಉಪಾಧ್ಯೆ ಅವರು ಬೆಳಗಿನ ಜಾವ 6.30ಕ್ಕೆ ನಿಧನರಾದರು.1985ರಲ್ಲಿ ಚುನಾವಣೆಗೆ ಸ್ಪರ್ಧಿಸದ ಆ ಧೀಮಂತ ವ್ಯಕ್ತಿ ಮುಖ್ಯಮಂತ್ರಿ ಆಗ್ತಾರೆ ಎಂದು ಕವಡೆ ಭವಿಷ್ಯ ನುಡಿದಿದ್ದರು. ಅದರಂತೆ ಅಂದು ಚುನಾವಣೆಗೆ ಸ್ಪರ್ಧಿಸದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. 2018ರ ವಿಧಾನಸಭೆ ಚುನಾವಣೆ ವೇಳೆ ಎಚ್.ಡಿ.ಕುಮಾರಸ್ವಾಮಿಯೇ …
Read More »ಕೊರೋನಾಗೆ ಸೋಂಕಿಗೆ ಇಬ್ಬರು ವೈದ್ಯರು ಬಲಿ
ಕುಣಿಗಲ್/ಗಂಗಾವತಿ : ಕೊರೋನಾ ಸೋಂಕಿಗೆ ವೈದ್ಯರಿಬ್ಬರು ಮಂಗಳವಾರ ಬಲಿಯಾಗಿರುವ ಘಟನೆ ತುಮಕೂರಿನ ಕುಣಿಗಲ್ ಹಾಗೂ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ. ಕುಣಿಗಲ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ದೇವರಾಜ್(37) ಅವರಿಗೆ 5 ದಿನಗಳ ಹಿಂದೆ ಕೊರೋನಾ ಸೋಂಕು ಕಾಣಿಸಿಕೊಂಡು ತಾಲೂಕಿನ ಚಿನ್ನತಿಮ್ಮನಪಾಳ್ಯದ ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಮಂಗಳವಾರ ಕೂಡ ಕೊರೋನಾ ಅಬ್ಬರ: ಗುಣಮುಖ ಸಂಖ್ಯೆಯಲ್ಲೂ ಹೆಚ್ಚಳ . ಗಂಗಾವತಿಯ ಖ್ಯಾತ …
Read More »45 ವರ್ಷ ಬಳಿಕ ಚೀನಾ ಗಡಿಯಲ್ಲಿ ಗುಂಡಿನ ಸದ್ದು, ತೀವ್ರವಾದ ಯುದ್ಧಾತಂಕ!
ನವದೆಹಲಿ :ಲಡಾಖ್‌ನ ಗಡಿಯಲ್ಲಿ ನಾಲ್ಕೈದು ತಿಂಗಳಿನಿಂದ ಭಾರತದ ಸ್ಥಳಗಳನ್ನು ಆಕ್ರಮಿಸಿಕೊಳ್ಳಲು ಯತ್ನಿಸುತ್ತಲೇ ಇರುವ ಚೀನಾ ಸೇನೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೊದಲ ಬಾರಿ ಗುಂಡು ಹಾರಿಸಿದೆ. ಗಾಳಿಯಲ್ಲಿ ಗುಂಡು ಹಾರಿಸಿ ನಡೆಸಿದ ಈ ಬೆದರಿಕೆ ಯತ್ನಕ್ಕೆ ಭಾರತೀಯ ಸೇನೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದು, ಗಡಿಯಲ್ಲಿ ಯುದ್ಧದ ಆತಂಕ ಇನ್ನಷ್ಟುತೀವ್ರವಾಗಿದೆ. ಸೋಮವಾರ ರಾತ್ರಿ ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರದ ದಕ್ಷಿಣದ ದಂಡೆಯ ಮುಖ್‌ಪರಿ ಎಂಬಲ್ಲಿ ಈ …
Read More »