Breaking News

Daily Archives: ಸೆಪ್ಟೆಂಬರ್ 23, 2020

BIG BREAKING ಸುರೇಶ್ ಅಂಗಡಿ ದೆಹಲಿ ಏಮ್ಸ್ ಆಸ್ಪತ್ರೆ ಯಲ್ಲಿ ವಿಧಿವಶ

ಬೆಳಗಾವಿ ಸಂಸದ ನಮ್ಮ ಬೆಳಗಾವಿ ಜನ ನಾಯಕ ಸುರೇಶ್ ಅಂಗಡಿ ವಿಧಿವಶ ಸಪ್ಟೆಂಬರ್ 11ರಂದು ಕ ರೋನ ಧೃಡ ಆಗಿದ್ದರ್ ಬಗ್ಗೆ ಟ್ವೀಟ್ ಯಾವುದೇ ಲಕ್ಷಣ ಇಲ್ಲ ಆದ್ರೂ ಚಿಕಿತ್ಸೆ ತಿಗೊಳುತ್ತಿದ್ದೇನೆ ಎಂದು ಟ್ವೀಟ್ ದೆಹಲಿ ಏಮ್ಸ್ ಆಸ್ಪತ್ರೆ ಯಲ್ಲಿ ರೈಲ್ವೇ ಸಚಿವ ಸುರೇಶ್ ಅಂಗಡಿ ವಿಧಿವಶ  ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ (55) ಅವರು ದಿಲ್ಲಿಯ …

Read More »

ಲಾಕ್‍ಡೌನ್ ಅವಧಿಯನ್ನು ಮುಗಿಸಿ ಮತ್ತೆ ಚಿತ್ರೀಕಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಧ್ರುವ

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಕ್‍ಡೌನ್ ಅವಧಿಯನ್ನು ಮುಗಿಸಿ ಮತ್ತೆ ಚಿತ್ರೀಕಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಸದ್ಯಕ್ಕೆ ಧ್ರುವ ಬಹು ನಿರೀಕ್ಷೆಯ ‘ಪೊಗರು’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಈಗ ಮತ್ತೊಂದು ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಚಿತ್ರತಂಡ ‘ಪೊಗರು’ ಸಿನಿಮಾದ ಟೈಟಲ್ ಸಾಂಗ್ ಸೆರೆಹಿಡಿಯುತ್ತಿದೆ. ಈ ಹಾಡನ್ನು ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಲಾಗುತ್ತಿದೆ. ಅಲ್ಲದೇ ‘ಪೊಗರು’ ಚಿತ್ರದ ಟೈಟಲ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 1.50 ಕೋಟಿಯ …

Read More »

ತಂದೆಯ ಟಾರ್ಚರ್ ತಾಳಲಾರದೆ ಅನಾಥಾಶ್ರಮಕ್ಕೆ ಸೇರಿಸುವಂತೆ ಬಾಲಕಿ ಮನವಿ

ಮಡಿಕೇರಿ: ತನ್ನ ತಂದೆ ಪ್ರತಿನಿತ್ಯ ಕೊಡುತ್ತಿದ್ದ ಹಿಂಸೆಯನ್ನು ಸಹಿಸಿಕೊಳ್ಳಲಾರದೆ 8 ವರ್ಷದ ಬಾಲಕಿಯೊಬ್ಬಳು ನನ್ನನ್ನು ಅನಾಥ ಆಶ್ರಮಕ್ಕೆ ಸೇರಿಸುವಂತೆ ಗ್ರಾಮಸ್ಥರನ್ನು ಕೇಳಿಕೊಂಡಿರುವ ಹೃದವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ನಡೆದಿದೆ. ಮಗುವಿನ ಕಷ್ಟವನ್ನು ಮನಗಂಡ ಸ್ಥಳೀಯರು ಮಕ್ಕಳ ಸಹಾಯವಾಣಿಗೆ ಕರೆಮಾಡಿ ಬಾಲಕಿಯನ್ನು ರಕ್ಷಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪಾಪಿ ತಂದೆ ತನ್ನ 8 ವರ್ಷದ ಮಗಳಿಂದ ಕಷ್ಟವಾದ ಕೆಲಸಗಳನ್ನು ಮಾಡಿಸುತ್ತಿದ್ದ. ಒಂದು ವೇಳೆ ಕೆಲಸಗಳನ್ನು ಮಾಡದಿದ್ದರೆ ದಿನನಿತ್ಯ …

Read More »

ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರು ಮಂದಿಯನ್ನು ಬೆಂಗಳೂರು ಕ್ರೈಮ್ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರು ಮಂದಿಯನ್ನು ಬೆಂಗಳೂರು ಕ್ರೈಮ್ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಸೆಪ್ಟೆಂಬರ್ 19ರಿಂದ ಆರಂಭವಾಗಿದೆ. ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿವೆ. ಇದರ ಜೊತೆಗೆ ಐಪಿಎಲ್ ಬೆಟ್ಟಿಂಗ್ ದಂಧೆಗಳು ಕೂಡ ಆರಂಭವಾಗಿವೇ. ತಡರಾತ್ರಿ ಐಪಿಎಲ್ ದಂಧೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ತಡರಾತ್ರಿ ಬೆಟ್ಟಿಂಗ್ …

Read More »

ಹಬ್ಬಕ್ಕೆ ಸಾಮಗ್ರಿ ತರಲು ಹೋದ ಮಹಿಳೆ – ವಾಪಸ್ ಬರುವಾಗ ಲಾರಿ ಡಿಕ್ಕಿ

ಮಂಡ್ಯ: ಹಬ್ಬಕ್ಕೆಂದು ಸಾಮಗ್ರಿಗಳನ್ನು ತರಲು ಹೋಗಿದ್ದ ಮಹಿಳೆಗೆ ಗಣಿಗಾರಿಕೆಯ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ನಡೆದಿದೆ. ಚೋಕನಹಳ್ಳಿ ಗ್ರಾಮದ ಜ್ಯೋತಿ ಮೃತ ಮಹಿಳೆ. ಜ್ಯೋತಿ ಇಂದು ಮಧ್ಯಾಹ್ನ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡಲು ಚೋಕನಹಳ್ಳಿಯಿಂದ ಬೂಕನಕೆರೆಗೆ ಬಂದಿದ್ದರು. ನಂತರ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡಿ ಮನೆಗೆ ವಾಪಸ್ಸು ಹೋಗುವ ವೇಳೆ ಗಣಿಗಾರಿಕೆಯ ಲಾರಿಯೊಂದು ಜ್ಯೋತಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ …

Read More »

ಮಳೆಯಿಂದ ರೈತ ಮಹಿಳೆಯ ಮನೆ ಕುಸಿತ – ಎತ್ತುಗಳಿಗೆ ಗಾಯ, 3 ಮೇಕೆ ಸಾವು

ಹಾಸನ: ನಿರಂತರ ಮಳೆಯಿಂದ ರೈತ ಮಹಿಳೆಯ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಪುಟ್ಟಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಮಳೆಗೆ ಸಂಪೂರ್ಣ ಮನೆ ಕುಸಿದು ಬಿದಿದ್ದು, ಈ ವೇಳೆ ಕೊಟ್ಟಿಗೆಯಲ್ಲಿದ್ದ ಮೂರು ಮೇಕೆ ಸಾವನ್ನಪ್ಪಿವೆ ಜೊತೆಗೆ ಎರಡು ಎತ್ತುಗಳಿಗೆ ಗಾಯವಾಗಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಣಾಪಾಯದಿಂದ ಪಾರಾಗಿದ್ದಾರೆಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗಿದ್ದ ಪರಿಣಾಮ ಶಿಥಿಲಗೊಂಡಂತಾಗಿದ್ದ, ರೈತ ಮಹಿಳೆ ಜಯಮ್ಮ ಅವರ ಮನೆ ಮತ್ತು ಕೊಟ್ಟಿಗೆ …

Read More »

ಮಹಾ ಮಳೆಗೆ ಮುಂಬೈನ ರಸ್ತೆಗಳೇ ಮಾಯ-

ಮುಂಬೈ: ಮಂಗಳವಾರ ರಾತ್ರಿ ಸುರಿದ ಮಳೆದ ವಾಣಿಜ್ಯ ನಗರಿ ಮುಂಬೈನ ರಸ್ತೆಗಳೇ ಮಾಯವಾಗಿದ್ದು, ತಗ್ಗು ಪ್ರದೇಶಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿದೆ. ನಗರದ ಬಹುತೇಕ ರಸ್ತೆಗಳಲ್ಲಿ ಮೂರರಿಂದ ನಾಲ್ಕು ಅಡಿಯವರೆಗೆ ನೀರು ನಿಂತಿದೆ. ಮಂಗಳವಾರ ರಾತ್ರಿ ಆರಂಭವಾದ ಮಳೆ ಬುಧವಾರ ಬೆಳಗ್ಗೆಯವರೆಗೆ ಸುರಿದಿದೆ. ಮುಂದಿನ 24 ಗಂಟೆಯೂ ಸಹ ಭಾರೀ ಮಳೆಯಾಗಲಿದೆ. ಈ ವಾರ ನಗರದಲ್ಲಿ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಬುಧವಾರದ ನಂತರ ತುಂತುರು ಮಳೆಯಾಗುವ ಸಾಧ್ಯತೆಗಳಿವೆ …

Read More »

ಸೆಪ್ಟೆಂಬರ್ 28ಕ್ಕೆ ಕರ್ನಾಟಕ ಬಂದ್‍ಗೆ ಕರೆ/2 ಬಸ್‍ಗಳಲ್ಲಿ ರೈತರನ್ನ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಅಧಿವೇಶನದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಎಪಿಎಂಸಿ ಮಸೂದೆ ಮಂಡಿಸಿದ ಬೆನ್ನಲ್ಲೇ ರಾಜ್ಯ ರೈತ ಸಂಘದ ಅಧ್ಯಕ್ಷ ಸೆಪ್ಟೆಂಬರ್ 28ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ. ಈಗಾಗಲೇ ಫ್ರೀಡಂಪಾರ್ಕ್ ಮತ್ತು ಮೌರ್ಯ ಸರ್ಕಲ್‍ನಲ್ಲಿ ರೈತರು ರಸ್ತೆ ತಡೆಗೆ ಸಜ್ಜಾಗುತ್ತಿದ್ದರು. ಇದೀಗ ಪೊಲೀಸರು ಹಲವು ರೈತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೆದ್ದಾರಿ ಬಂದ್ ಮಾಡಿ ಶುಕ್ರವಾರ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಆದರೆ ಈಗಲೇ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು …

Read More »

ಕೆಪಿಸಿಸಿ_ಕಾರ್ಯಾಧ್ಯಕ್ಷ_ಸತೀಶ_ಜಾರಕಿಹೊಳಿ_ನೇತೃತ್ವದಲ್ಲಿ_ಸಹಕಾರ_ಸಚಿವ_ಟಿ_ಸೋಮಶೇಖರಗೆ_ಮನವಿ…

ಬೆಂಗಳೂರು- ಬೆಂಗಳೂರಲ್ಲಿ ಹಂಗೇನಿಲ್ಲ,ಎಲ್ಲಾರೂ ಸೇರ್ಕೊಂಡು ಮನವಿ ಕೊಡ್ತಾರೆ ಅನ್ನೋದು,ಪೋಟೋ ನೋಡಿದ್ರೆ ನಿಮಗೆ ಗೊತ್ತಾಗುತ್ತದೆ. ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಆಡಳಿತ ಮಂಡಳಿಯ ನಿಯೋಗ ಇಂದು,ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿ ಸಹಕಾರ,ಮತ್ತು ಎಪಿಎಂಸಿ ಸಚಿವ ಟಿ‌.ಸೋಮಸೇಖರ್ ಅವರು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತು. ಬೆಳಗಾವಿ ಎಪಿಎಂಸಿಯ ಬಾಕಿ ಉಳಿದಿರುವ ಆರ್ ಡಿ ಪಿ ಯೋಜನೆಯ 15 ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು,ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಅಭಿವೃದ್ಧಿಗಾಗಿ,ಹೆಚ್ಚುವರಿಯಾಗಿ 15 ಕೋಟಿ …

Read More »

ಕೋವಿಡ್ ನಿರ್ವಹಣೆ ಹಾಗೂ ನೈಸರ್ಗಿಕ ಪ್ರಕೃತಿ ವಿಕೋಪ ನಿರ್ವಹಣೆಗೆಂದೇ ಸರಕಾರ ಕೋಟ್ಯಾಂತರ ರೂ ತಹಶೀಲ್ದಾರ ಖಾತೆಗೆ ಹಣ ಜಮಾ: ತಹಶೀಲ್ದಾರ ಖಾತೆಯಿಂದಲೇ ಲಕ್ಷಾಂತರ ಹಣ ಲೂಟಿ

ಯಾದಗಿರಿ: ಕೋವಿಡ್ ನಿರ್ವಹಣೆ ಹಾಗೂ ನೈಸರ್ಗಿಕ ಪ್ರಕೃತಿ ವಿಕೋಪ ನಿರ್ವಹಣೆಗೆಂದೇ ಸರಕಾರ ಕೋಟ್ಯಾಂತರ ರೂ ತಹಶೀಲ್ದಾರ ಖಾತೆಗೆ ಹಣ ಜಮಾ ಮಾಡುತ್ತದೆ. ಆದರೆ, ಈಗ ತಹಶೀಲ್ದಾರ ಖಾತೆಯಿಂದಲೇ ಲಕ್ಷಾಂತರ ಹಣ ಲೂಟಿ ಮಾಡಿದ್ದಕ್ಕೆ ಈಗ ತಹಶೀಲ್ದಾರರಿಗೆ ಟೆನ್ಶನ್​​ ಶುರುವಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿಯೇ ಸರಕಾರಕ್ಕೆ ವಂಚನೆ ಮಾಡಿದ್ದ ದಂಧೆ ಬೆಳಕಿಗೆ ಬಂದಿದೆ. ಸುರಪುರ ತಹಶೀಲ್ದಾರ ನಿಂಗಪ್ಪ ಬಿರಾದಾರ ಹೆಸರಿನಲ್ಲಿಯೇ ಚೆಕ್ ಪಡೆದು ತಹಶೀಲ್ದಾರ ಸುರಪುರ ಹೆಸರಿನಲ್ಲಿ ನಕಲಿ ಸಹಿ …

Read More »