ಚಿತ್ರದುರ್ಗ: ಇಷ್ಟು ದಿನ ಜನ ಸಾಮಾನ್ಯರು ಕೋವಿಡ್ ಕೇಂದ್ರಗಳಲ್ಲಿ ಹಾಗೂ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ವ್ಯವಸ್ಥೆ ಸರಿ ಎಲ್ಲ ಎಂದು ವಿಡಿಯೋ ಹರಿಬಿಟ್ಟು ಅಳಲು ತೋಡಿಕೊಂಡಿರುವುದನ್ನು ನೋಡಿದ್ದೇವೆ. ಆದರೆ ಇದೀಗ ಕೊರೊನಾ ವಾರಿಯರ್ಸ್‍ಗೂ ಇದೇ ರೀತಿ ಸಮಸ್ಯೆಯಾಗುತ್ತಿದ್ದು, ಇದೀಗ ಜೀವ ಉಳಿಸುವ ಕೆಲಸ ಮಾಡುವರಿಗೇ ಜೀವ ಭಯ ಶುರುವಾಗಿದೆ. ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಹಿರೇಗುಂಟನೂರು ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ವಿಡಿಯೋ ಮಾಡಿ ಅವ್ಯವಸ್ಥೆ ಕುರಿತು …
Read More »Daily Archives: ಸೆಪ್ಟೆಂಬರ್ 14, 2020
ಅರ್ಚಕರನ್ನು ಬರ್ಬರಾಗಿ ಹತ್ಯೆ ಮಾಡಿದ್ದ ಮೂವರು ಹಂತಕರ ಮೇಲೆ ಪೊಲೀಸರು ಶೂಟ್‍ಔಟ್
ಮಂಡ್ಯ: ಜಿಲ್ಲೆಯ ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರನ್ನು ಬರ್ಬರಾಗಿ ಹತ್ಯೆ ಮಾಡಿದ್ದ ಮೂವರು ಹಂತಕರ ಮೇಲೆ ಪೊಲೀಸರು ಶೂಟ್‍ಔಟ್ ಮಾಡಿದ್ದು, ಶೂಟ್‍ಔಟ್‍ನಲ್ಲಿ ಹಂತಕರಿಗೆ ಗಂಭೀರ ಗಾಯಗಳಾಗಿವೆ. ಇಂದು ಬೆಳಗ್ಗೆ ಮದ್ದೂರು ಮಳವಳ್ಳಿ ರಸ್ತೆಯ ಸಾದೊಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ಆರೋಪಿಗಳನ್ನು ಆಂಧ್ರ ಮೂಲದ ವಿಜಿ (25), ಮದ್ದೂರಿನ ಅರೆಕಲ್ ದೊಡ್ಡಿಯ ಗಾಂಧಿ (28) ಮತ್ತು ತೊಪ್ಪನಹಳ್ಳಿಯ ಮಂಜು (30) ಎಂದು ಗುರುತಿಸಲಾಗಿದೆ. ಹಂತಕರು ಈ ಸ್ಥಳದಲ್ಲಿರುವ ಖಚಿತ …
Read More »ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು:H.D.K.
ಬೆಂಗಳೂರು: ವಿವಿಧ ಭಾಷೆ, ವಿಭಿನ್ನ ಸಂಸ್ಕೃತಿ, ಪರಂಪರೆಗಳನ್ನು ಒಡಲಲ್ಲಿಟ್ಟುಕೊಂಡ ಭಾರತದಲ್ಲಿ, ಕನ್ನಡಿಗರೂ ಸೇರಿದಂತೆ ಅನ್ಯ ಭಾಷಿಕರ ಮೇಲೆ ಹಿಂದಿಯನ್ನು ಬಲವಂತವಾಗಿ ಹಲವು ಮಾರ್ಗಗಳ ಮೂಲಕ ಹೇರಲಾಗುತ್ತಿದೆ. ಇಂದಿನ ಹಿಂದಿ ದಿವಸ್ ಕೂಡ ಅಂಥದ್ದೇ ಅಪಮಾರ್ಗ. ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ಪ್ರಬಲ ವಿರೋಧವಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ, ಹಿಂದಿ ರಾಷ್ಟ್ರಭಾಷೆಯಲ್ಲ. ರಾಷ್ಟ್ರಭಾಷೆ ಎಂಬ ಕಲ್ಪನೆ …
Read More »ರಾಗಿಣಿ ಡ್ರಗ್ಸ್ ಕೇಸ್- ಹುಬ್ಬಳ್ಳಿ ‘ಕೈ’ ಮುಖಂಡನಿಗೆC.C.B.ಯಿಂದ ವಿಚಾರಣೆ
ಹುಬ್ಬಳ್ಳಿ: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಂದು ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಅವರನ್ನ ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗಿರೀಶ್ ಗದಿಗೆಪ್ಪಗೌಡರ್ ಮಾಜಿ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸ್ಥಳೀಯ ಕಾಂಗ್ರೆಸ್ ಮುಖಂಡ. ನಟಿ ರಾಗಿಣಿ ದ್ವಿವೇದಿ ಮೊಬೈಲ್ ನಲ್ಲಿ ಗಿರೀಶ್ ಗದಿಗೆಪ್ಪಗೌಡರ್ ಫೋಟೋ ಲಭ್ಯವಾದ ಹಿನ್ನೆಲೆ ಸಿಸಿಬಿ ಪೊಲೀಸರು ಗಿರೀಶ್ ಅವರನ್ನ ವಿಚಾರಣೆ ನಡೆಸಿದ್ದಾರೆ. ರಾಗಿಣಿ ಮತ್ತು ಗಿರೀಶ್ ಜೊತೆಯಾಗಿ …
Read More »ಡ್ಯೂಟಿಗೆ ಹೋಗುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಪೊಲೀಸ್
ಬೆಂಗಳೂರು: ಡ್ಯೂಟಿಗೆ ಹೋಗುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಪ್ಪ ಜಡೆಮ್ಮನವರ್, ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‍ಫೋನ್ ಮತ್ತು ಲ್ಯಾಪ್‍ಟಾಪ್‍ಗಳು ಇಲ್ಲದ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿದಿನ ಶಾಂತಪ್ಪ ಅವರು ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ತೆರಳುತ್ತಾರೆ. …
Read More »ಕೊರೊನಾ ಸಂಕಷ್ಟದ ಬಳಿಕ ಸಂಸತ್ ಮೊದಲ ಅಧಿವೇಶನ
ನವದೆಹಲಿ: ಕೊರೊನಾ ಭಾರತವನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಈ ಸಂಕಷ್ಟದ ನಡುವೆ ಇಂದಿನಿಂದ ಸಂಸತ್ ಅಧಿವೇಶನಗಳು ಆರಂಭವಾಗಲಿದೆ. ಕೊರೊನಾ ಭೀತಿ ಎದುರಾದ ಬಳಿಕ ಇದೇ ಮೊದಲ ಬಾರಿಗೆ ಸಂಸತ್ ಕಲಾಪಗಳನ್ನು ನಡೆಯುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಹಲವು ಹೊಸತನಕ್ಕೆ ಆದ್ಯತೆ ನೀಡಲಾಗುತ್ತಿದೆ. ಕೊರೊನಾ, ಆರ್ಥಿಕತೆ ಕುಸಿತ ಸೇರಿದಂತೆ ದೇಶದ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚಿಸಲು ಮುಂಗಾರು ಸಂಸತ್ ಅಧಿವೇಶನ ಆರಂಭಿಸುವಂತೆ ವಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಒತ್ತಾಯ ಮೇರೆಗೆ ಕೊರೊನಾ ಸಂಕಷ್ಟದ …
Read More »ರೋಚಕ ಕದನದಲ್ಲಿ ಗೆದ್ದು ಬೀಗಿದ ಡೊಮಿನಿಕ್ ಥೀಮ್ ಗೆ ಚೊಚ್ಚಲ ಗ್ರಾಂಡ್ ಸ್ಲ್ಯಾಮ್ ಕಿರೀಟ
ನ್ಯೂಯಾರ್ಕ್: ರೋಚಕ ಫೈನಲ್ ಹಣಾಹಣಿಯಲ್ಲಿ ಅಲೆಕ್ಸಾಂಡರ್ ಜ್ವರೇವ್ ವಿರುದ್ಧ ಗೆದ್ದು ಬೀಗಿದ ಡೊಮಿನಿಕ್ ಥೀಮ್ ಚೊಚ್ಚಲ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಜರ್ಮನಿಯ ಆಟಗಾರನ ವಿರುದ್ಧ ಆಸ್ಟ್ರೀಯಾದ ಆಟಗಾರ 2-6 4-6 6-4 6-3 7-6(6) ಸೆಟ್ ಗಳ ಅಂತರದಿಂದ ಗೆಲುವು ಸಾಧಿಸಿದರು. ಮೊದಲ ಎರಡು ಸೆಟ್ ಗಳನ್ನು ಸೋತ ಥೀಮ್ ನಂತರ ಅದ್ಭುತವಾಗಿ ಕಮ್ ಬ್ಯಾಕ್ ಮಾಡಿ ಜಯ ಸಾಧಿಸಿದರು. 16 ವರ್ಷಗಳ …
Read More »“ತಾಯಿ-ಮಕ್ಕಳಂತಿರುವ ರೈತರು ಮತ್ತು ಭೂಮಿಯನ್ನು ಬೇರೆ ಮಾಡುತ್ತಿದೆ ರಾಜ್ಯ ಸರ್ಕಾರ”
ಬೆಂಗಳೂರು, – ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ತಾಯಿ ಮಕ್ಕಳಂತಿರುವ ರೈತರು ಮತ್ತು ಭೂಮಿಯನ್ನು ರಾಜ್ಯ ಸರ್ಕಾರ ಬೇರೆ ಮಾಡುತ್ತಿದೆ ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಎಸ್. ಆರ್.ಪಾಟೀಲ್ ಆರೋಪಿಸಿದರು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಬರೆದಿರುವ ರೈತರ ಭದ್ರತೆ, ದೇಶದ ಭದ್ರತೆ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ಆಹಾರ ಭದ್ರತೆ ಸಾಧಿಸಿದೆ, ರೈತರ ಬದುಕು ಮಾತ್ರ ಸುಧಾರಣೆಯಾಗಿಲ್ಲ. ಕಾರ್ಮಿಕರ ಸಂಕಷ್ಟಗಳು …
Read More »ನಟಿ ರಾಗಿಣಿ, ಸಂಜನಾಗೆ ಇಂದು ಸಿಗುತ್ತಾ ಬೇಲ್..?
ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಲಿಂಕ್ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ನಟಿ ರಾಗಿಣಿ, ಸಂಜನಾ ಸೇರಿದಂತೆ ಪ್ರಕರಣದ 5 ಆರೋಪಿಗಳ ಜಾಮೀನು ಅರ್ಜಿಗಳು ಇಂದು ವಿಚಾರಣೆ ಬರಲಿವೆ. ಸಿಟಿ ಸಿವಿಲ್ ಅವರಣದಲ್ಲಿನ ಎನ್ಡಿಪಿಎಸ್ ನ್ಯಾಯಾಲಯದಲ್ಲಿ ರಾಗಿಣಿ, ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ರಾಹುಲ್ ತೋಷೆ, ವೈಭವ್ ಜೈನ್ ಹಾಗೂ ವಿನಯ್ ಕುಮಾರ್ನ ಅರ್ಜಿಗಳ ವಿಚಾರಣೆ ನಡೆಯಲಿದೆ. ರಾಗಿಣಿ ಹಾಗೂ ರಾಹುಲ್ ಸಾಮಾನ್ಯ ಜಾಮೀನು ಅರ್ಜಿ ಸಲ್ಲಿಸಿದ್ರೆ, ಶಿವಪ್ರಕಾಶ್, ವೈಭವ್ ಜೈನ್ ಹಾಗೂ …
Read More »ಸಾರ್ವಜನಿಕರೇ ಎಚ್ಚರ : ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಬಂದ್
ಬೆಂಗಳೂರು : ಕೊರೋನಾ ಅವಧಿಯಲ್ಲಿ ಮೃತಪಟ್ಟವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪರಿಹಾರ ನೀಡದಿರುವುದು ಹಾಗೂ ವೇತನ ತಾರತಮ್ಯ ಸೇರಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮಂಗಳವಾರದಿಂದ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿನ ಹೊರ ರೋಗಿ ಸೇವೆಯನ್ನು ಬಹಿಷ್ಕರಿಸಿ ಮುಷ್ಕರ ನಡೆಸುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಘೋಷಿಸಿದೆ. ಅಲ್ಲದೆ, ಸರ್ಕಾರ ಕೂಡಲೇ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಂಗಳವಾರದಿಂದ ಕೊರೋನಾ ರೋಗಿಗಳು ಹಾಗೂ ತುರ್ತು ಚಿಕಿತ್ಸಾ ಸೇವೆ ಹೊರತುಪಡಿಸಿ ಉಳಿದ …
Read More »