ಬೆಳಗಾವಿ : ಇತ್ತಿಚೀನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಡ್ರಗ್ ಮಾಫಿಯಾ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳು ಚಿತ್ರರಂಗದ ದೊಡ್ಡ ದೊಡ್ಡ ನಟ, ನಟಿಯರು ಡ್ರಗ್ ಮಾಫಿಯಾ ದಲ್ಲಿ ಸಿಲುಕಿಕೊಂಡಿದ್ದಾರೆ. ಒಂದೆಡೆ ಡ್ರಗ್ ಮಾಫಿಯಾ ಸದ್ದು ಮಾಡುತ್ತಿದ್ದರೆ ಇತ್ತ ಬೆಳಗಾವಿಯಲ್ಲಿ ಗಾಂಜಾ ನಶೆ ಸದ್ದು ಮಾಡುತ್ತಿದೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಅವ್ಯಾಹತವಾಗಿ ಗಾಂಜಾ ಬೆಳೆದು ರಾಜ್ಯದ ಜೊತೆಗೆ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಮಾರಾಟ …
Read More »Daily Archives: ಸೆಪ್ಟೆಂಬರ್ 7, 2020
ಮದುವೆಗಳಲ್ಲಿ ಬ್ಯಾಂಡ್‌ಗೆ ಅನುಮತಿ: ಅಗ್ರಹ
ಬೆಳಗಾವಿ: ಮದುವೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಮಂಗಳವಾದ್ಯ ಮತ್ತು ಬ್ರಾಸ್ ಬ್ಯಾಂಡ್‌ಗಳನ್ನು ನುಡಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಮಂಗಳವಾದ್ಯ ಹಾಗೂ ಬ್ಯಾಂಡ್ ಕಲಾವಿದರ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ‘ಈ ವೃತ್ತಿಯನ್ನು ಸಾವಿರಾರು ಮಂದಿ ಅವಲಂಬಿಸಿದ್ದೇವೆ. ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಸಭೆ, ಸಮಾರಂಭ, ಮದುವೆ, ಜಯಂತಿ, ಜಾತ್ರೆ ಮೊದಲಾದ ಕಾರ್ಯಕ್ರಮಗಳಿಗೆ ಹಲವು ತಿಂಗಳವರೆಗೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ದುಡಿಮೆ ಇಲ್ಲದೆ, ಗಳಿಕೆಯೂ ಇಲ್ಲದೆ ನಾವು …
Read More »ಬಸ್ ಕಡೆ ಜನರ ಒಲವು: ಸಾರಿಗೆ ಆದಾಯ ಚೇತರಿಕೆ
ಚಿಕ್ಕೋಡಿ: ಕಳೆದ ಆರು ತಿಂಗಳಿಂದ ಕೋವಿಡ್ ಹೊಡೆತಕ್ಕೆ ನಷ್ಟ ಅನುಭವಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗವು ಈಗ ಹಂತ ಹಂತವಾಗಿ ಆದಾಯದಲ್ಲಿ ಚೇತರಿಸಿಕೊಳ್ಳುತ್ತಿದೆ. ಲಾಕ್‌ಡೌನ್ ತೆರವುಗೊಂಡಿರುವ ಪರಿಣಾಮ ದಿನದಿಂದ ದಿನಕ್ಕೆ ಪ್ರಯಾಣಿಕರು ಬಸ್ ಕಡೆ ವಾಲುತ್ತಿದ್ದಾರೆ. ಕಳೆದ ಮಾರ್ಚ್ ಮೂರನೇ ವಾರದಿಂದ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ಕೇಂದ್ರ ಮತ್ತು ರಾಜ್ಯ ಸರಕಾರ ಲಾಕ್‌ಡೌನ್ ಜಾರಿ ಮಾಡಿ ಬಸ್ ಸಂಚಾರ ನಿಷೇಧಿಸಿತ್ತು. ಹೀಗಾಗಿ ನಾಲ್ಕು ತಿಂಗಳು ಬಸ್ …
Read More »ಬೆಳಗಾವಿ: ಸಕ್ಕರೆ ಕಾರ್ಖಾನೆ ಎದುರು ರೈತರ ಧರಣಿ
ಎಂ.ಕೆ. ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ಕಬ್ಬಿನ ಬಾಕಿ ಬಿಲ್ ಹಾಗೂ ಕಾರ್ಮಿಕರ ವೇತನ ಪಾವತಿಗೆ ಆಗ್ರಹಿಸಿ ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಎದುರು ರೈತರು ಸೋಮವಾರ ಧರಣಿ ಆರಂಭಿಸಿದ್ದಾರೆ. ‘2017-18ನೇ ಸಾಲಿನ ಕಬ್ಬಿನ ಬಾಕಿ ಬಿಲ್ ₹ 7.8 ಕೋಟಿ, 2018-19 ಮತ್ತು 2019-20ನೇ ಸಾಲಿನ ಕಬ್ಬು ಕಟಾವು ಮತ್ತು ಸಾಗಾಣಿಕೆಯ ಬಾಕಿ ₹ 1.2 ಕೋಟಿ ಹಾಗೂ 2019-20ನೇ ಸಾಲಿನಲ್ಲಿ ಜನವರಿ ನಂತರ ಕಬ್ಬು ಪೂರೈಸಿದ ರೈತರ ₹ …
Read More »ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿಗೆ ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಇಂದು ಸಿಸಿಬಿ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ನಟಿ ರಾಗಿಣಿಯನ್ನು 1 ನೇ ಎಸಿಎಂಎಂ ಕೋರ್ಟ್ ಗೆ ಹಾಜರು ಪಡಿಸಿದ್ದರು. ರಾಗಿಣಿ 3 ದಿನ ಕಸ್ಟಡಿಯಲ್ಲಿ ವಿಚಾರಣೆಗೆ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಮತ್ತೆ ಮತ್ತೆ 5 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಕೋರ್ಟ್ …
Read More »ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ ಅಂತಾ ಕಾಣುತ್ತದೆ. : ಲಕ್ಷ್ಮಣ ಸವದಿ
ಕಲಬುರಗಿ : ಮೈತ್ರಿ ಸರ್ಕಾರ ಕೆಡವಲು ಡ್ರಗ್ಸ್ ದಂಧೆ ಹಣ ಬಳಕೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ ಅಂತಾ ಕಾಣುತ್ತದೆ. ತಮ್ಮ ಸರ್ಕಾರ ಆಡಳಿತದಲ್ಲಿ ಇರುವಾಗ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂದು ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೊಲೀಸರಿಂದ ತನಿಖೆ ನಡೆಸಬೇಕಿತ್ತು. ಸಿಎಂಯಾಗಿ ಅಸಮರ್ಥರಾಗಿದ್ದದನ್ನು ಹೇಳಿಕೆ ಮೂಲಕ …
Read More »ತನ್ನ ತಂದೆಯ ಅಂಗಡಿಯಿಂದಲೇ ಬರೋಬ್ಬರಿ 14 ಕೆ.ಜಿ ಚಿನ್ನ ಕದ್ದಮಗ
ಚೆನ್ನೈ: ಮಗನೊಬ್ಬ ತನ್ನ ತಂದೆಯ ಅಂಗಡಿಯಿಂದಲೇ ಬರೋಬ್ಬರಿ 14 ಕೆ.ಜಿ ಚಿನ್ನ ಕದ್ದ ಘಟನೆ ಚೆನ್ನೈನಲ್ಲಿ ನಡೆದಿದೆ.ಆರೋಪಿ ಮಗನನ್ನು ಎಸ್ ಹರ್ಷ ಬೋತ್ರಾ(24) ಎಂದು ಗುರುತಿಸಲಾಗಿದೆ. ಸದ್ಯ ಈತನನ್ನ ಪೊಲೀಸರು ಬಂಧಿಸಿದ್ದಾರೆ. ಸುಭಾಶ್ ಚಂದ್ರ ಬೋತ್ರಾ ಮಗನಾಗಿರುವ ಹರ್ಷ ಆನ್‍ಲೈನ್ ವಹಿವಾಟಿನಲ್ಲಿ ಆಗಿರುವ 1.5 ಕೋಟಿ ನಷ್ಟವನ್ನು ಸರಿದೂಗಿಸಲು ಚಿನ್ನ ಕದ್ದಿದ್ದಾನೆ ಎಂದು ಹೇಳಿದ್ದಾನೆ. ಆರಂಭದಲ್ಲಿ ಪೊಲೀಸರು ಹೊರಗಿನವರ ಕೈವಾಡ ಇರಬಹುದೆಂದು ಶಂಕಿಸಿದ್ದಾರೆ. ಆದರೆ ಈ ಸಂಬಂಧ ಸ್ಥಳೀಯ ಸಿಸಿಟಿವಿ …
Read More »ನಿವೃತ್ತ ಸೈನಿಕನೊಬ್ಬ ಮಹಿಳೆಯ ಪ್ರಚೋದನೆಯಿಂದ ಯುವಕನ ಕೊಲೆ
ಹುಬ್ಬಳ್ಳಿ: ನಿವೃತ್ತ ಸೈನಿಕನೊಬ್ಬ ಮಹಿಳೆಯ ಪ್ರಚೋದನೆಯಿಂದ ಯುವಕನ ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ. ತಿಪ್ಪೆ ಹಾಕುವ ವಿಚಾರದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಕಲಘಟಗಿ ತಾಲೂಕಿನ ಕಲಕುಂಡಿ ಗ್ರಾಮದ ಜಗದೀಶ್ ಹನಮಂತಪ್ಪ ತಾಂಬೆ ಎಂಬ ಯುವಕನನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ದೇವಿಕೊಪ್ಪ ಗ್ರಾಮದ ನಿವೃತ್ತ ಸೈನಿಕ ಗಂಗಾಧರ ನಿಂಗಪ್ಪ ನೂಲ್ವಿ ಹಾಗೂ ಶಾರದಾ ಪಾಟೀಲ್ …
Read More »ಪೊಲೀಸರಿಂದ ಬಂಧನಕ್ಕೆ ಒಳಗಾದ ನಟಿ ರಾಗಿಣಿಗೆ ಅಲರ್ಜಿ ಸಮಸ್ಯೆ
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರಿಂದ ಬಂಧನಕ್ಕೆ ಒಳಗಾದ ನಟಿ ರಾಗಿಣಿಗೆ ಅಲರ್ಜಿ ಸಮಸ್ಯೆ ಕಾಣಿಸಿದೆ. ನನಗೆ ಅಲರ್ಜಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಡಾಕ್ಟರ್ ಸೇವೆ ಅಗತ್ಯವಿದೆ ಎಂದು ರಾಗಿಣಿ ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಈ ಹಿಂದೆ ರಾಗಿಣಿಗೆ ಜ್ವರ ಮತ್ತು ಬೆನ್ನು ನೋವು ಕಾಣಿಸಿಕೊಂಡಿತ್ತು. ರಾಗಿಣಿಯ ಮನವಿಯಂತೆ ವೈದ್ಯರು ಆಗಮಿಸಿ ಚಿಕಿತ್ಸೆ ನೀಡಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿದ್ದ ರಾಗಿಣಿ ಸದ್ಯ ಸಾಮಾನ್ಯ ಕೊಠಡಿಯಲ್ಲಿ ಕಾಲ …
Read More »ಪಬ್ ಜಿ ಮೊಬೈಲ್ ಗೇಮ್ ಬ್ಯಾನ್ 21 ವರ್ಷದ ಯುವಕ ಆತ್ಮಹತ್ಯೆ
ಕೋಲ್ಕತ್ತಾ: ಪಬ್ ಜಿ ಮೊಬೈಲ್ ಗೇಮ್ ಬ್ಯಾನ್ ಆದ ಬಳಿಕ ಬೇಸರಗೊಂಡ 21 ವರ್ಷದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ನಡೆದಿದೆ. ಐಟಿಐ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರೀತಮ್ ಹಲ್ದರ್ ಆತ್ಮಹತ್ಯೆಗೆ ಶರಣಾದ ವಿದ್ಯರ್ಥಿ ಎಂದು ಗುರುತಿಸಲಾಗಿದೆ. ಚಕ್‌ದಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರ್ಬಾ ಲಾಲ್‌ಪುರ್ ಪ್ರದೇಶದಲ್ಲಿರುವ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗಿನ ಉಪಹಾರ ಸ್ವೀಕರಿಸಿದ ಬಳಿಕ ಆತ ಕೊಠಡಿಗೆ ತೆರಳಿದ್ದ …
Read More »