Breaking News

Daily Archives: ಆಗಷ್ಟ್ 27, 2020

ಕೆಲವು ಸಲ ನಾನು ಮಾತು ಬಿಟ್ಟಾಗ ಗೌಡರು ಫೋನ್ ಮಾಡಿಯೇ ಮಾಡುತ್ತಿದ್ದರು.: ಅಶೋಕ ಚಂದರಗಿ,

ಟೀಕೆ,ಟಿಪ್ಪಣಿಯನ್ನು ಕ್ರೀಡಾಮನೋಭಾವನೆಯಿಂದ ಸ್ವೀಕರಿಸುತ್ತಿದ್ದಸಿದ್ದನಗೌಡರು ಉದ್ಯೋಗ ಮಾಡಿಕೊಂಡೇ ಕನ್ನಡ ಹೋರಾಟದಲ್ಲಿ ತೊಡಗಬೇಕೆಂದುಕಟ್ಟು ನಿಟ್ಟಾಗಿಯೇ ಹೇಳುತ್ತಿದ್ದರು! ಬಹುಶಃ ನಾನು ಮತ್ತು ಹಿರಿಯ ಕನ್ನಡ ಹೋರಾಟಗಾರ,ಹಿರಿಯ ಪತ್ರಕರ್ತ ಶ್ರೀ ರಾಘವೇಂದ್ರ ಜೋಶಿಯವರು ಮಾಜಿ ಮಹಾಪೌರ ದಿ.ಸಿದ್ದನಗೌಡ ಪಾಟೀಲರ ವಿರುದ್ಧ ಬರೆದಷ್ಟು,ಜಗಳಾಡಿದಷ್ಟು ಬೇರೆ ಯಾರೂ ಜಗಳಾಡಿರಲಿಕ್ಕಿಲ್ಲ!! 1980 ರಲ್ಲಿ ನಾನು ರಾಮದುರ್ಗದಿಂದ ಬೆಳಗಾವಿಗೆ ಬಂದು ಪತ್ರಿಕೋದ್ಯಮ ಪ್ರವೇಶಿಸಿದಾಗ ಗೌಡರು ಕನ್ನಡ ಹೋರಾಟಗಾರರ ಅಗ್ರಗಣ್ಯ ನಾಯಕರು.1982 ರಲ್ಲಿ ಪತ್ರಕರ್ತರಾಗಿದ್ದುಕೊಂಡೇ ಐತಿಹಾಸಿಕ ಗೋಕಾಕ ಚಳವಳಿಯ ಮೂಲಕ ಕನ್ನಡ ಹೋರಾಟದಲ್ಲಿ …

Read More »

ಭರವಸೆ ನೀಡಿದ ಎರಡೇ ದಿನಕ್ಕೆ ಮುಂಬೈಯಿಂದ ದಿನಸಿ ಕಳುಹಿಸಿದ್ದಾರೆ.:ಸೋನು ಸೂದ್

ಯಾದಗಿರಿ: ತ್ರಿವಳಿ ಮಕ್ಕಳ ಜನನದಿಂದಾಗಿ ಚಿಂತೆಗೀಡಾಗಿದ್ದ, ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಪದ್ಮಾ ಕುಟುಂಬಕ್ಕೆ ನಟ ಸೋನು ಸೂದ್ ಕೊಟ್ಟ ಮಾತಿನಂತೆ ಸಹಾಯವನ್ನು ಮಾಡಿದ್ದಾರೆ. ಈ ತಿಂಗಳ 22ರಂದು ಪದ್ಮಾ ದಂಪತಿಗೆ ಏಕಕಾಲದಲ್ಲಿ ಮೂರು ಗಂಡು ಮಕ್ಕಳು ಜನಿಸಿದ್ದವು. ಕಡು ಬಡತನದಲ್ಲಿದ್ದ ಈ ಕುಟುಂಬ ಸಹಾಯ ಹಸ್ತವನ್ನು ಚಾಚಿದ್ದರು, ಈ ಸುದ್ದಿಯನ್ನು ಯಾದಗಿರಿಯ ಮಲ್ಲಿಕಾರ್ಜುನ ರೆಡ್ಡಿಯವರು ನಟ ಸೋನು ಸೂದ್‍ಗೆ ಕಳುಹಿಸಿದ್ದರು. ಸುದ್ದಿ ನೋಡಿದ ಸೋನು ಸೂದ್ ಪದ್ಮಾ ಕುಟುಂಬಕ್ಕೆ …

Read More »

ನಿರ್ವಹಣೆ ಇಲ್ಲದೆ ರೈತರಿಗೆ ಉಪಯೋಗಕ್ಕಿಂತ ಅಪಾಯವನ್ನೇ ತಂದೊಡ್ಡುತ್ತಿದೆ ಈ ಚೆಕ್ ಡ್ಯಾಮ್

ಕಾರವಾರ; ಒಂದು ಚೆಕ್ ಡ್ಯಾಮ್ ನಿರ್ಮಾಣ ಮಾಡೋದು ಆ ಭಾಗದ ರೈತರಿಗೆ ವರದಾನವಾಗಲಿ. ಅಲ್ಲಿನ ಕೃಷಿ ಭೂಮಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗಲಿ ಎನ್ನುವ ನಿಟ್ಟಿನಲ್ಲಿ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಗ್ರಾಮೀಣ ಭಾಗದಲ್ಲೊಂದು ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ಇದರ ನಿರ್ವಹಣೆ ಸರಿಯಾಗಿ ಆಗದ ಕಾರಣ ಅಲ್ಲಿನ ಕೃಷಿ ಭೂಮಿಗೂ ಇದರ ನೀರು ಪೂರೈಕೆ ಆಗುತ್ತಿಲ್ಲ. ಬದಲಾಗಿ ಈ ಡ್ಯಾಮ್​ನಿಂದ ಅನೇಕ ಸಮಸ್ಯೆಗಳೇ ರೈತರಿಗೆ ಎದುರಾಗುತ್ತಿದೆ. ಇದು …

Read More »

ಸರ್ಕಾರ ಒಪ್ಪಿದ್ರೆ ಸದ್ಯದಲ್ಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆಗೆ ಅವಕಾಶ ನೀಡಲಾಗುವುದು.

ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ಭಕ್ತರ ಪ್ರವೇಶ ನಿಷೇಧ ಹಾಗೂ ಕೆಲವೊಂದು ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದೀಗ ಸೆಪ್ಟೆಂಬರ್ 1 ರಿಂದ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ. ಈ ಮೂಲಕ ಭಕ್ತರಿಗೆ ಮುಜರಾಯಿ ಇಲಾಖೆಯಿಂದ ಗುಡ್ ನ್ಯೂಸ್ ದೊರೆತಿದ್ದು, ಇನ್ನು ಮುಂದೆ ದೇವಸ್ಥಾನಗಳಲ್ಲಿ ಮಾಮೂಲಿ ಪೂಜೆ ನಡೆಯಲಿದೆ. ಅದು ಕೂಡ ಕೊರೊನಾ ಮಾರ್ಗಸೂಚಿ ಅನ್ವಯವೇ ಎಲ್ಲಾ ಸೇವೆಗಳು ಲಭ್ಯವಾಗಲಿವೆಹೀಗಾಗಿ ಸೆಪ್ಟೆಂಬರ್ 1ರಿಂದಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆ …

Read More »

600 ಬಾಕ್ಸ್ ಮದ್ಯವನ್ನು ಬೆಳಗಾವಿ ಉತ್ತರ ವಲಯ ಅಬಕಾರಿ ಪೊಲೀಸರು ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ: ಅಕ್ರಮವಾಗಿ ಸಾಗಿಸುತ್ತಿದ್ದ 600 ಬಾಕ್ಸ್ ಮದ್ಯವನ್ನು ಬೆಳಗಾವಿ ಉತ್ತರ ವಲಯ ಅಬಕಾರಿ ಪೊಲೀಸರು ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಧ್ಯಪ್ರದೇಶದ ರಾಜ್ಯದ ಇಂದೋರ ಗ್ರಾಮದ ಧನಪಾಲಸಿಂಗ  ತೋಮರ, ರಾಜು ಕಂಠಿ ಬಂಧಿತ ಆರೋಪಿಗಳು. ರಾಷ್ಟೀಯ ಹೆದ್ದಾರಿ-04ರ  ನಿಪ್ಪಾನಿ ರಾಧನಗರ್ ರಸ್ತೆಯ ಮೂಲಕ ಗೋವಾದಿಂದ ಗುಜರಾತ್ ಗೆ ಮದ್ಯವನ್ನು ಸಾಗಿಸುತ್ತಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.  20 ಲಕ್ಷದ ಬೆಲೆ ಬಾಳುವ ಲಾರಿ ಹಾಗೂ …

Read More »

ರಾಯಣ್ಣ ಪ್ರತಿಮೆ ಮರು ಪ್ರತಿಷ್ಠಾಪಿಸುವ ವಿವಾದ29ರಂದು ಕುರುಬ ಸಮಾಜದ ಮುಖಂಡರು, ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಚರ್ಚೆ

ಬೆಳಗಾವಿ: ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಮರು ಪ್ರತಿಷ್ಠಾಪಿಸುವ ವಿವಾದ ಇದೇ 29 ರಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ  ಪ್ರತಿಭಟನಾಕಾರರನ್ನುದ್ದೇಶಿಸಿ ಸಚಿವ ರಮೇಶ್ ಮಾತನಾಡಿ,  ಪೀರನವಾಡಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ನಾನೇ ಮೊದಲು ಸರ್ಕಾರಕ್ಕೆ 2018ರಲ್ಲಿ ಪತ್ರ ಬರೆದಿದ್ದೆ ಎಂದು ತಿಳಿಸಿದರು. ರಸ್ತೆ ಅಗಲೀಕರಣ ವೇಳೆ ಸಮಸ್ಯೆಯಾಗಲಿದೆ ಎಂಬ ಕಾರಣ ಆಗ ಪ್ರತಿಷ್ಠಾನೆ ಸಾಧ್ಯ ಆಗಿರಲಿಲ್ಲ. ಕಾನೂನು …

Read More »

ಬಿಜೆಪಿ ರಾಜ್ಯಾಧ್ಯಕ್ಷರಾಗಿ 1 ವರ್ಷ ಪೂರೈಸಿದ ಕಟೀಲ್ ಗೆ ಸಿಎಂ ಶುಭಾಶಯ

ಬೆಂಗಳೂರು,ಆ.27-ಆಡಳಿತಾರೂಢ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಂಸದ ನಳೀನ್ ಕುಮಾರ್ ಕಟೀಲ್ ಅಕಾರ ಸ್ವೀಕಾರ ಮಾಡಿ ಒಂದು ವರ್ಷ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಶುಭ ಕೋರಿದ್ದಾರೆ. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಾ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆಗಳು. ಸಂಘಟನೆಗೆ ಶಕ್ತಿ, ಕಾರ್ಯಕರ್ತರಿಗೆ ಸೂರ್ತಿ ತುಂಬಿ ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯತೆಯಿಂದ ಕೆಲಸ ಮಾಡುತ್ತಿರುವ ನಿಮಗೆ ಶುಭ …

Read More »

ಒನ್ ಮ್ಯಾನ್ ತ್ರಿಬಲ್ ಆ್ಯಕ್ಟಿಂಗ್………….

ಚಿಕ್ಕಬಳ್ಳಾಪುರ: ತಾನು ಹೋಂ ಮಿನಿಸ್ಟರ್ ತಮ್ಮ ಮಹೇಶ್ ಬೊಮ್ಮಾಯಿ. ನಮ್ಮ ಸಂಬಂಧಿ ನಿಮ್ಮ ಸ್ಟೇಷನ್‍ಗೆ ಬರುತ್ತಾನೆ ಅವನ ಪರವಾಗಿ ಕೆಲಸ ಮಾಡಿಕೊಡಿ ಎಂದು ಕಾಲ್ ಮಾಡಿದ ನಕಲಿ ಮಿನಿಸ್ಟರ್ ತಮ್ಮ ಈಗ ಜೈಲುಪಾಲಾಗಿರೋ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಅಂದಹಾಗೆ ಮೂಲತಃ ದೊಡ್ಡಬಳ್ಳಾಪುರ ತಾಲೂಕಿನವನಾದ ಟಿಎನ್ ಬಸವರಾಜು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪಿಎಸ್‍ಐ ಲಕ್ಷ್ಮೀನಾರಾಯಣ ಅವರ ಮೊಬೈಲ್‍ಗೆ ಕರೆ ಮಾಡಿ ತಾನು ಗೃಹಸಚಿವ ಬಸವರಾಜು ಬೊಮ್ಮಾಯಿ ಸೋದರ ಮಹೇಶ್ …

Read More »

ರೈಲ್ವೆ ಬೈಸಿಕಲ್- ಇಂಡಿಯನ್ ರೈಲ್ವೆ ನೂತನ ಆವಿಷ್ಕಾರ

ನವದೆಹಲಿ: ಇಂಡಿಯನ್ ರೈಲ್ವೆ ಹೊಸ ರೈಲ್ವೆ ಬೈಸಿಕಲ್‍ನ್ನು ಆವಿಷ್ಕಾರಿಸಿದ್ದು, ರೈಲ್ವೆ ಟ್ರ್ಯಾಕ್ ಪರಿಶೀಲನೆ ಹಾಗೂ ರಿಪೇರಿ ಮಾಡುವ ಸಂದರ್ಭದಲ್ಲಿ ಸಿಬ್ಬಂದಿಗೆ ಸಹಕಾರಿ ಆಗಲಿದೆ. ಈ ಕುರಿತ ವಿಡಿಯೋವನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಜುಲೈನಲ್ಲಿ ಮಾಹಿತಿ ನೀಡಿ ಟ್ವೀಟ್ ಮಾಡಿದ್ದರು. ನೂತನವಾಗಿ ಅವಿಷ್ಕಾರಿಸಿರುವ ರೈಲ್ವೆ ಸೈಕಲ್ ಗಂಟೆಗೆ ಗರಿಷ್ಠ 15 ಕಿಮೀ ವೇಗದಲ್ಲಿ ತುಳಿಯಬಹುದಾಗಿದೆ. ಈಸ್ಟ್ ಕೋಸ್ಟ್ ರೈಲ್ವೆ ವಿಭಾಗ ಈ ರೈಲ್ವೆ ಸೈಕಲ್‍ಗಳನ್ನು ಅವಿಷ್ಕಾರಿಸಿದೆ. 30 ಕೆಜಿ ತೂಕವಿರುವುದರಿಂದ …

Read More »

ಸಿಲಿಕಾನ್ ಸಿಟಿಯ ಸಿಸಿಬಿ ಪೊಲೀಸರು ಮೊಟ್ಟಮೊದಲ ಬಾರಿಗೆ ಎರಡು ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಸಿಸಿಬಿ ಪೊಲೀಸರು ಮೊಟ್ಟಮೊದಲ ಬಾರಿಗೆ ಎರಡು ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ. ಏಕಕಾಲದಲ್ಲಿ 204 ಕೆಜಿ ಗಾಂಜಾ ಸಿಸಿಬಿ ಪೊಲೀಸರು ಬೇಟೆಯಾಡಿದ್ದು, ಈ ಮೂಲಕ ಇದೇ ಮೊದಲ ಬಾರಿಗೆ ಪೊಲೀಸ್ ಇತಿಹಾಸದಲ್ಲೇ ಇಷ್ಟು ಪ್ರಮಾಣದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಗಾಂಜಾ ಬರೋಬ್ಬರಿ ಒಂದು ಕೋಟಿ ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಈ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಸಮೀರ್, ಕೈಸರ್ ಪಾಷಾ, ಇಸ್ಮಾಯಿಲ್ ಎಂದು …

Read More »