Breaking News

Daily Archives: ಆಗಷ್ಟ್ 9, 2020

ಅನಾಥಾಶ್ರಮದಲ್ಲೇ 14 ವರ್ಷದ ಬಾಲಕಿ ಮೇಲೆ ಅನಾಥಾಶ್ರಮದ ದಾನಿ ಒಂದು ವರ್ಷ ನಿರಂತರವಾಗಿ ಅತ್ಯಾಚಾರ

ಹೈದರಾಬಾದ್: ಅನಾಥಾಶ್ರಮದಲ್ಲೇ 14 ವರ್ಷದ ಬಾಲಕಿ ಮೇಲೆ ಅನಾಥಾಶ್ರಮದ ದಾನಿ ಒಂದು ವರ್ಷ ನಿರಂತರವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಡೆದಿದೆ.ತೆಲಂಗಾಣದ ಮೆಡ್ಚಲ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಅನಾಥಾಶ್ರಮದಲ್ಲಿದ್ದ ಬಾಲಕಿ ಮೇಲೆ ದಾನಿ ಸತತ ಒಂದು ವರ್ಷ ಕಾಲ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅನಾಥಾಶ್ರಮದ ಮಾಲೀಕನನ್ನು ಚೀಲುಕುರಿ ವಿಜಯ್ ಎಂದು ಗುರುತಿಸಲಾಗಿದ್ದು, ಈತ ಹಾಸ್ಟೆಲ್ ವಾರ್ಡನ್ ಸಹ ಆಗಿದ್ದಾನೆ. ಈತನ ಸಹೋದರ …

Read More »

ಸರ್ಕಾರಿ ಶಿಶುಗೃಹದಲ್ಲಿ ಅನಾಥ ಮಗುವಿನ ಹುಟ್ಟುಹಬ್ಬ ಆಚರಣೆ

ಬಳ್ಳಾರಿ: ಸರ್ಕಾರಿ ಶಿಶುಗೃಹದಲ್ಲಿ ಒಂದು ವರ್ಷದ ಹಿಂದೆ ರೈಲ್ವೆ ಬೋಗಿಯಲ್ಲಿ ಸಿಕ್ಕಿದ್ದ ಅನಾಥ ಮಗುವಿನ ಹುಟ್ಟುಹಬ್ಬವನ್ನು ಅಧಿಕಾರಿಗಳು ಆಚರಣೆ ಮಾಡಿದ್ದಾರೆ. ಒಂದು ವರ್ಷದ ಹಿಂದೆ ಬಳ್ಳಾರಿ ರೈಲ್ವೆ ನಿಲ್ದಾಣದ ಬೋಗಿಯಲ್ಲಿ ನವಜಾತ ಶಿಶು ಸಿಕ್ಕಿತ್ತು. ನಂತರ ಮಗುವನ್ನು ರಕ್ಷಿಸಿ ಸರ್ಕಾರಿ ಶಿಶುಗೃಹದಲ್ಲಿ ಸೇರಿಸಲಾಗಿತ್ತು. ಅಲ್ಲದೇ ಮಗುವಿಗೆ ನಿಶ್ವಿತಾ ಎಂದು ನಾಮಕರಣ ಮಾಡಲಾಗಿತ್ತು. ಇಂದು ಆ ಮಗುವಿಗೆ ಒಂದು ವರ್ಷದ ಸಂಭ್ರಮ. ನಿಶ್ವಿತಾಳ ಹುಟ್ಟುಹಬ್ಬವನ್ನು ಸಿಬ್ಬಂದಿ ಸೇರಿಕೊಂಡು ಸಂಭ್ರಮದಿಂದ ಆಚರಿಸಿದರು. ಜಿಲ್ಲಾ …

Read More »

ಜೆಸಿಬಿ ಇಳಿಸಿ ರಸ್ತೆ ಕ್ಲೀನ್ ಮಾಡಿದ ಜನಪ್ರತಿನಿಧಿಗಳು….

ಉಡುಪಿ: ರಸ್ತೆಯಲ್ಲಿದ್ದ ಮರಳನ್ನು ಕಾಪುವಿನ ಜನಪ್ರತಿನಿಧಿಗಳು ಮುಂದೆ ನಿಂತು ಸ್ವಚ್ಛಗೊಳಿಸಿದ್ದಾರೆ. ಭಾರೀ ಮಳೆಯಾಗುತ್ತಿರುವುದರಿಂದ ಅರಬ್ಬಿ ಸಮುದ್ರದ ಅಬ್ಬರ ಕೂಡ ಜಾಸ್ತಿಯಾಗಿದೆ. ಕಾಪು ತಾಲೂಕಿನ ಉದ್ಯಾವರ ತೀರದಲ್ಲಿ ಕಡಲು ಕೊರೆತದಿಂದ ರಸ್ತೆ ಸಂಪರ್ಕ ಸಮಸ್ಯೆ ಉಂಟಾಗಿದೆ.ಭಾರಿ ಮಳೆ ಹಿನ್ನೆಲೆ ಕನಕೋಡ ಉದ್ಯಾವರ ಪಡುಕರೆಯಲ್ಲಿ ಕಡಲಬ್ಬರ ಜಾಸ್ತಿಯಾಗಿದ್ದು, ಕಡಲಿನ ಆರ್ಭಟಕ್ಕೆ ರಾಶಿ ರಾಶಿ ಮರಳು ದಡಕ್ಕೆ ಉಕ್ಕಿ ಬರುತ್ತಿದೆ. ಅಲೆಗಳ ಜೊತೆ ಭಾರಿ ಪ್ರಮಾಣದ ಮರಳು ಕೂಡ ಮೀನುಗಾರಿಕಾ ರಸ್ತೆಯನ್ನು ಸೇರುತ್ತಿದೆ. ಕಡಲು …

Read More »

ಗೋಕಾಕ: ನಗರಸಭೆ ಹಿರಿಯ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಶೇಖ್ ಫತೆವುಲ್ಲಾ .ಎ.ಖೋತವಾಲ (ಗೌಡರು) ಅವರು ಇಂದು ನಿಧನರಾಗಿದ್ದಾರೆ.

ಗೋಕಾಕ: ನಗರಸಭೆ ಹಿರಿಯ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಶೇಖ್ ಫತೆವುಲ್ಲಾ .ಎ.ಖೋತವಾಲ (ಗೌಡರು) ಅವರು ಇಂದು ನಿಧನರಾಗಿದ್ದಾರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗೋಕಾಕ ನಗರಸಭೆಗೆ 8 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಂಜುಮನ್ ಇಸ್ಲಾಂ ಕಮಿಟಿ ಗೋಕಾಕ ಮತ್ತು ತಂಜೀಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ‌ ಮತ್ತು ಗ್ರಾಮ ದೇವತೆ …

Read More »

ನಗರಸಭೆ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಎಸ್ ಎ ಕೋತ್ವಾಲ್ ಗೌಡರು ನಿಧನ : ಸಚಿವ ರಮೇಶ ಜಾರಕಿಹೊಳಿ ಸಂತಾಪ.

ನನ್ನ ಹಿರಿಯ ಸ್ನೇಹಿತ, ಗೋಕಾಕ್ ನಗರಸಭೆಯ ಸದಸ್ಯರಾಗಿದ್ದ *ಶ್ರೀಯುತ ಜನಾಬ್ ಶೇಖ್ ಫತೇವುಲ್ಲಾ ಕೋತ್ವಾಲ್* ಅವರ ಅಕಾಲಿಕ ಮರಣದಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. *ನನ್ನ ಬಾಲ್ಯದ ಗೆಳೆಯನಾಗಿದ್ದ ಕೋತ್ವಾಲ್* ನನ್ನ ರಾಜಕೀಯ ಪ್ರಗತಿಯಲ್ಲಿ ಹೆಜ್ಜೆ ಹೆಜ್ಜೆಗೂ ನನ್ನೊಂದಿಗೆ ನಿಂತು ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದ್ದರು. ಗೋಕಾಕ್ ನಗರಸಭೆಗೆ ಸತತ *ಆರನೇ ಬಾರಿ ಆಯ್ಕೆ* ಯಾಗಿದ್ದರು ಮತ್ತು ನಗರಸಭೆಯ ಅಧ್ಯಕ್ಷರಾಗಿ ನಗರದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದರು. ಜಾತ್ಯಾತೀತ ವ್ಯಕ್ತಿಯಾಗಿದ್ದ ಕೋತ್ವಾಲ್, ಗೋಕಾಕ್ ನಗರದ *ಅಂಜುಮನ್ …

Read More »

ಅನಗತ್ಯವಾಗಿ ಮಹಾರಾಷ್ಟ್ರ ವಿಷಬೀಜ ಬಿತ್ತುವ ಮೂಲಕ ಉದ್ವಿಗ್ನ ವಾತಾವರಣ ನಿರ್ಮಾಣಕ್ಕೆ ಯತ್ನ

  ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ತಾಂತ್ರಿಕ ಕಾರಣಕ್ಕಾಗಿ ಸ್ಥಳ ಬದಲಾಯಿಸಲು ತೆಗೆದಿರಿಸಲಾಗಿರುವ   ಛತ್ರಪತಿ ಶಿವಾಜಿ ಪುತ್ಥಳಿಯನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಲಾಗಿದೆ ಎಂದು ಮಹಾರಾಷ್ಟ್ರ ಆರೋಪಿಸಿದ್ದು, ಪುತ್ಥಳಿ ಮರುಸ್ಥಾಪನೆಗೆ ಆಗ್ರಹಿಸಿದೆ. ತನ್ಮೂಲಕ ಕರ್ನಾಟಕದ ಪಕ್ಕಾ ಆಂತರಿಕ ವಿದ್ಯಮಾನದಲ್ಲಿ ಅನಗತ್ಯವಾಗಿ ಮಹಾರಾಷ್ಟ್ರ ಮೂಗು ತೂರಿಸುವ ಯತ್ನ ನಡೆಸುತ್ತಿದೆ. ಅಲ್ಲದೆ ಅನಗತ್ಯಾವಾಗಿ ವಿಷಬೀಜ ಬಿತ್ತುವ ಮೂಲಕ ಉದ್ವಿಗ್ನ ವಾತಾವರಣ ನಿರ್ಮಾಣಕ್ಕೆ ಯತ್ನಿಸುತ್ತಿದೆ. ಸ್ಥಳೀಯ ಕೆಲವು ಸಮಸ್ಯೆಗಳ ಕಾರಣಕ್ಕಾಗಿ ಶಿವಾಜಿ …

Read More »

ನಂದಿಬೆಟ್ಟದಲ್ಲಿ ಮುಂದುವರಿದ ಲಾಕ್‍ಡೌನ್- ನಿರಾಸೆಯಿಂದ ವಾಪಸ್ಸಾಗ್ತಿರೋ ಪ್ರವಾಸಿಗರು

ಚಿಕ್ಕಬಳ್ಳಾಪುರ: ಕೊರೊನಾ ಹಿನ್ನೆಲೆಯಲ್ಲಿ ಜಗದ್ವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಹೇರಲಾಗಿದ್ದ ನಿರ್ಬಂಧ ಇನ್ನೂ ಮುಂದುವರಿದಿದೆ. ಹೀಗಾಗಿ ಲಾಕ್‍ಡೌನ್ ಸಡಿಲಿಕೆ ಆಗಿದೆ ಅಂತ ಭಾವಿಸಿ ನಂದಿಗಿರಿಧಾಮಕ್ಕೆ ಬಂದ ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ಸಾಗುತ್ತಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ನಂದಿಗಿರಿಧಾಮಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದು, ನಿರಾಸೆಯಿಂದ ವಾಪಸ್ಸುಗುವಂತಾಗಿದೆ. ಅಂದಹಾಗೆ ಲಾಕ್‍ಡೌನ್ ಬಹುತೇಕ ಸಡಿಲಿಕೆ ಆಗಿದ್ದರೂ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ ಇನ್ನೂ ಮುಂದುವರಿದಿದೆ. ಮುಂಜಾಗ್ರತಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ …

Read More »

ಕೋವಿಡ್‌: ಸೋಂಕಿತರಿಗಿಂತ ಗುಣಮುಖರಾದವರ ಹೆಚ್ಚಳ

ಬೆಳಗಾವಿ: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 312 ಜನರಿಗೆ ಕೋವಿಡ್‌-19 ದೃಢಪಟ್ಟಿದೆ. ಇದೇ ವೇಳೆ, 378 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದುವರೆಗೆ ಸೋಂಕು ತಗುಲಿದವರ ಸಂಖ್ಯೆ 5,174ಕ್ಕೆ ತಲುಪಿದೆ. ಇವರಲ್ಲಿ 3,431 ಸಕ್ರಿಯ ಪ್ರಕರಣಗಳಿವೆ. ಬೆಳಗಾವಿ, ಗೋಕಾಕ, ಖಾನಾಪುರ, ಸವದತ್ತಿ, ಚಿಕ್ಕೋಡಿ, ರಾಮದುರ್ಗ, ಹುಕ್ಕೇರಿ, ರಾಯಬಾಗ ಸೇರಿದಂತೆ ಬಹುತೇಕ ಜಿಲ್ಲೆಯ ಎಲ್ಲ ಭಾಗಗಳಲ್ಲೂ ಸೋಂಕು ಕಂಡುಬಂದಿದೆ. ಬೆಳಗಾವಿಯ 60 ವರ್ಷದ ವೃದ್ಧೆಯೊಬ್ಬರು …

Read More »

ಆಸ್ತಿ ವಿವಾದಕ್ಕೆ ಬೆಳಗಾವಿ ಅಂಬೇವಾಡಿ ಗ್ರಾಮದಲ್ಲಿ ಫೈರಿಂಗ್

ಬೆಳಗಾವಿ:ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ  ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ. ಅಮಿತ್ ಪಾವಲೆ (35) ಎಂಬಾತನ  ಬಲಗೈ ಭುಜಕ್ಕೆ ಗುಂಡು ತಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅಂಬೇವಾಡಿ ಗ್ರಾಮದಲ್ಲಿ ನೆಲೆಸಿರುವ ಕಾತ್ಸು ತರಳೆ (47) ಎಂಬಾತನಿಂದ ಕೃತ್ಯ ನಡೆದಿದೆ. ಗಾಯಗೊಂಡಿರುವ ಅಮಿತ್ ಎಂಬಾತ ಕಾತ್ಸು ಸಹೋದರಿ ಪುತ್ರನಾಗಿದ್ದಾನೆ. ಎರಡು ಕುಟುಂಬ ನಡುವಿನ ಜಮೀನು ವಿವಾದ ಕೋರ್ಟ್ ಅಲ್ಲಿಇತ್ತೀಚಿಗೆ ಇತ್ಯರ್ಥಗೊಂಡಿತ್ತು. …

Read More »

ಗೋಕಾಕ್ ತಾಲೂಕಿನ ಯುವಕ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ

ಬೆಳಗಾವಿ- ನಿನ್ನೆ ಸಂಜೆ ಹೊತ್ತಿಗೆ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋದ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗ್ಗೆ 8 ಗಂಟೆಯಿಂದ ಯುವಕನಿಗಾಗಿ ಶೋಧ ಕಾರ್ಯಚರಣೆ ಆರಂಭವಾಗಿದೆ. ಡುಮ್ಮ‌ಉರುಬಿನಟ್ಟಿ ಗ್ರಾಮದ ಬಳಿ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಜಲಾವೃತವಾದ ಗದ್ದೆಯಲ್ಲಿ ಮುಳುಗಡೆಯಾದ ಪಂಪ್‌ಸೆಟ್ ನೋಡಲು‌ ಹೋಗಿದ್ದ ಯುವಕ ಕಾಲು ಜಾರಿ ಬಳ್ಳಾರಿ ನಾಲೆಗೆ ಬಿದ್ದು ನೀರಿನ ಸೆಳುವಿಗೆ ಕೊಚ್ಚಿ ಹೋಗಿದ್ದಾನೆ.   18 ವರ್ಷದ ನಾಗರಾಜ್ ಹೆಬ್ಬಳ್ಳಿ‌ ಬಳ್ಳಾರಿ …

Read More »