ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು 1839 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 21549ಕ್ಕೆ ಏರಿಕೆಯಾಗಿದೆ. ಇವರಲ್ಲಿ 9244 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 11966 ಆಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ …
Read More »Monthly Archives: ಜುಲೈ 2020
ಬೆಳಗಾವಿ ಜಿಲ್ಲಾಡಳಿತಕ್ಕೆ ತಲೆನೋವಾಯ್ತು ಸೋಂಕಿತ ಮಹಿಳೆಯ ಟ್ರಾವೆಲ್ ಹಿಸ್ಟರಿ
ಬೆಳಗಾವಿ:ರಾಜ್ಯಾದ್ಯಂತ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮಹಾಮಾರಿ ವೈರಸ್ ಯಾರಿಗೆ, ಹೇಗೆ, ಯಾವಾಗ ತಲುಪುತ್ತದೆ ಎನ್ನುವುದೇ ತಿಳಿಯುವುದಿಲ್ಲ. ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕ ವ್ಯಾಪಕವಾಗಿ ಸೋಂಕು ಹೆಚ್ಚಳವಾಗುತ್ತಿದ್ದು, ಇದರ ತಡೆಗೆ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ. ಏತನ್ಮಧ್ಯೆ ಬೆಳಗಾವಿಯಲ್ಲಿ ಬಳೆ ಮಾರುವ ಹೆಂಗಸಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ. ಹೌದು, ಜಿಲ್ಲೆಯಲ್ಲಿ ಪ್ರತಿ ದಿನ …
Read More »ಚೀನಾ ಜೊತೆಗಿನ 900 ಕೋಟಿ ಒಪ್ಪಂದ ರದ್ದುಗೊಳಿಸಿದ ‘ಹೀರೋ’ಸೈಕಲ್
ನವದೆಹಲಿ: ಗಾಲ್ವಾನ ಕಣಿವೆ ಪ್ರದೇಶದಲ್ಲಿ ನಡೆದ ಭಾರತ ಮತ್ತು ಚೀನಾದ ನಡುವೆ ಸಂಘರ್ಷದ ಬಳಿಕ ದೇಶದಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಕೇಂದ್ರ ಸರ್ಕಾರ 59 ಚೀನಾ ಆ್ಯಪ್‍ಗಳನ್ನು ನಿಷೇಧಿಸಿದ ಬೆನ್ನಲ್ಲೆ ಉದ್ಯಮಿದಾರರು ಸಹ ವೈರಿ ರಾಷ್ಟ್ರದ ಜೊತೆಗಿನ ವ್ಯವಹಾರಿಕ ಸಂಬಂಧವನ್ನು ಕಡಿತಗೊಳಿಸಿಕೊಳ್ಳುತ್ತಿದ್ದಾರೆ. ಇದೀಗ ಹೀರೋ ಸೈಕಲ್ ಕಂಪನಿ ಚೀನಾ ಜೊತೆಗಿನ 900 ಕೋಟಿ ವ್ಯವಹಾರವನ್ನ ರದ್ದುಗೊಳಿಸಿದೆ. ಸೈಕಲ್ ತಯಾರಿಕೆಗಾಗಿ ಹೀರೋ ಕಂಪನಿ ಬಿಡಿ ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಈಗ …
Read More »ಕೊರೋನಾ ವಾರಿಯರ್ ತುಂಬು ಗರ್ಭಿಣಿ ಪತ್ನಿ ಬಿಚ್ಚಿಟ್ಟ ಕರಾಳ ಸತ್ಯ!
ಒಂಬತ್ತು ತಿಂಗಳ ಹೆಂಡತಿ ಹಾಗೂ ಆಕೆಯ ಗರ್ಭದಲ್ಲಿರುವ ದಿನ ತುಂಬಿದ ಮಗುವಿನ ಮೇಲೆ ಪ್ರಾಣವನ್ನೇ ಇಟ್ಟುಕೊಂಡ ಡಾಕ್ಟರ್ ಕೋವಿಡ್ ರೋಗಿಗಳನ್ನು ನೋಡುವ ಡ್ಯೂಟಿಯಲ್ಲಿರುವುದರಿಂದ 15 ದಿನಗಳಿಂದ ಮನೆಯತ್ತ ಮುಖ ಮಾಡಿಲ್ಲ. ಲಾಕ್‌ಡೌನ್ ಕಾರಣಕ್ಕೆ ಅತ್ತೆಮಾವರಾಗಲೀ, ಅಪ್ಪಅಮ್ಮರಾಗಲೀ ಗರ್ಭಿಣಿ ಮಿಸಸ್ ಕುಲಕರ್ಣಿಯ ಜೊತೆಗಿರಲು ಬರಲು ಸಾಧ್ಯವಾಗಿಲ್ಲ. ಮನೆಯಲ್ಲೊಬ್ಬಳೇ ಇರುವ ಮಿಸಸ್ ಕುಲಕರ್ಣಿ ತನ್ನ ಹೊಟ್ಟೆಯಲ್ಲಿರುವ ಕಂದನೊಡನೆ ಮಾತಾಡುತ್ತಾ ಪತಿ ಹಾಗೂ ಮಗುವಿನ ಕುರಿತ ತನ್ನ ನೆನಪು ಹಾಗೂ ಕನಸುಗಳನ್ನು ಬಿಚ್ಚಿಡುತ್ತಾ ಹೋಗುತ್ತಾಳೆ. …
Read More »ಲಾಕ್ ಡೌನ್ : ಎಣ್ಣೆಗಾಗಿ ಮಗುಬಿದ್ದ ಮದ್ಯಪ್ರಿಯರು..
ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೇ, ಜನರು ಮಾತ್ರ ಯಾವುದೇ ಭಯವಿಲ್ಲದೇ ಓಡಾಡುತ್ತಿದ್ದಾರೆ. ಭಾನುವಾರದ ದಿನವಾದ ನಾಳೆ ಸಂಪೂರ್ಣ ಲಾಕ್ ಡೌನ್ ಇರುವ ಕಾರಣದಿಂದಾಗಿ, ಮದ್ಯಪ್ರಿಯರು ಮಾತ್ರ ನಾಳೆ ಎಲ್ಲಿ ಎಣ್ಣೆ ಸಿಗೋದಿಲ್ಲವೋ ಎನ್ನುವಂತೆ ಬಾರ್, ವೈನ್ ಶಾಪ್ ಗಳ ಮುಂದೆ ಕ್ಯೂ ನಿಂತು ಮದ್ಯ ಖರೀದಿಸಲು ಮುಗಿ ಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದೆಡೆ ಆದ್ರೇ.. ಸೋಂಕಿನ ಭೀತಿಯಿಂದ ತಮ್ಮ ಊರುಗಳತ್ತ ಗುಳೇ …
Read More »ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರನನು…
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರನನು ಪಕ್ಷದ ಪದಾಧಿಕಾರಿಗಳು, ಬೆಂಬಲಿಗರು ಅದ್ದೂರಿಯಾಗಿ ಬರ ಮಾಡಿಕೊಂಡು, ಸತ್ಕರಿಸಿದರು. ಸಾಂಬ್ರಾ ವಿಮಾನ ನಿಲ್ದಾಣದಿಂದ ನೇವರಾಗಿ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರಿಗೆ ಮಾಜಿ ಶಾಸಕ ರಾಜುಗೌಡ ಕಾಗೆ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ, ರಾಜು ಸೇಠ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ …
Read More »ಡಿಕೆಶಿ ಕೆಪಿಸಿಸಿ ಪಟ್ಟ ಏರಿದ ತಕ್ಷಣವೇ ಲಕ್ಷ್ಮಿ ಪುತ್ರನಿಗೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿರ್ಯದರ್ಶಿ ಸ್ಥಾನ.
ಬೆಳಗಾವಿ: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಪಟ್ಟ ಏರುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ ಹೆಬ್ಬಾಳಕರ್ ಗೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಮೃಣಾಲ್ ಅವರು ವಿದ್ಯಾರ್ಥಿ ಕಾಂಗ್ರೆಸ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಆದ್ರೆ ಈಗ ಕೆಪಿಸಿಸಿ ನಾಯಕರು ಸಂಘಟನೆ ಚತುರತೆ ಕಂಡು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿಸಿದ್ದಾರೆ. ಜತೆಗೆ ಕಾಂಗ್ರೆಸ್ ನಲ್ಲಿ …
Read More »ಕೊರೊನಾ ಮೂಲ ಹುಡುಕಲು ಹೊರಟ ಡಬ್ಲ್ಯೂಹೆಚ್‍ಓ- ಚೀನಾಕ್ಕೆ ಸಂಕಷ್ಟ ಶುರು
ನವದೆಹಲಿ: ವಿಶ್ವಾದ್ಯಂತ ಐದು ಲಕ್ಷ ಮಂದಿಯನ್ನು ಬಲಿ ಪಡೆದಿರುವ ಕೊರೊನಾ ಸೋಂಕಿನ ಮೂಲ ಪತ್ತೆ ಹಚ್ಚಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವೊಂದು ಮುಂದಿನ ವಾರ ಚೀನಾಕ್ಕೆ ತೆರಳುವುದಾಗಿ ಡಬ್ಲ್ಯೂಹೆಚ್‍ಓ ಹೇಳಿದೆ. ಕೊರೊನಾ ಸೋಂಕು ಕಾಣಿಸಿಕೊಂಡು ವಿಶ್ವಕ್ಕೆ ಹರಡಿದ ಆರು ತಿಂಗಳು ಬಳಿಕ ಅಧ್ಯಯನಕ್ಕೆ ಮುಂದಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡ ವುಹಾನ್‍ಗೆ ಭೇಟಿ ನೀಡಲಿದೆ. ಅಲ್ಲಿ ಕೊರೊನಾ ವೈರಸ್ ಹುಟ್ಟಿದ್ದೇಗೆ ಹಾಗೂ …
Read More »ಎಂಎಲ್‍ಸಿ ಪುಟ್ಟಣ ಅವರಿಗೂ ಕೊರೊನಾ ಸೋಂಕು
ಬೆಂಗಳೂರು: ಎಂಎಲ್‍ಸಿ ಪುಟ್ಟಣ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಪುಟ್ಟಣ ಅವರು ನಿಮ್ಮ ಆಶೀರ್ವಾದದಿಂದ ಬೇಗ ಗುಣಮಖನಾಗಿ ಬರುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಜ್ವರ ಇದ್ದುದರಿಂದ, ಕ್ವಾರಂಟೈನ್ ನಲ್ಲಿ ಇದ್ದೆ. ಗುರುವಾರ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ತಪಾಸಣೆಯ ವರದಿ ಪಾಸಿಟಿವ್ ಬಂದಿರುವುದರಿಂದ ಶುಕ್ರವಾರ ಅಂದರೆ ನಿನ್ನೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದೇವರ …
Read More »ನಾಲ್ವರು ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಗಳು ಸೇರಿದಂತೆ ಇಂದು 25 ಜನರಿಗೆ ಕೊರೊನಾ ಪಾಸಿಟಿವ್
ಹಾಸನ: ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಗಳು ಸೇರಿದಂತೆ ಹಾಸನದಲ್ಲಿ ಇಂದು 25 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ನಾಲ್ವರು ನಿರ್ವಾಹಕರು ಅರಸೀಕೆರೆ, ತುಮಕೂರು, ಬೆಂಗಳೂರು ಮಾರ್ಗದ ಬಸ್‍ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸೋಂಕಿತ ಕಂಡಕ್ಟರ್ ಗಳು ಹಲವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಇವರಷ್ಟೇ ಅಲ್ಲದೆ 25 ಜನರಲ್ಲಿ ಓರ್ವ ಪೊಲೀಸ್, ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಗೂ ಇಂದು ಕೊರೊನಾ ಪಾಸಿಟಿವ್ ಬಂದಿರುವುದು …
Read More »