Breaking News

Monthly Archives: ಜುಲೈ 2020

ಗಾಲ್ವನ್ ಸಂಘರ್ಷದಲ್ಲಿ 100 ಚೀನಿ ಸೈನಿಕರ ಸಾವು..! ಪಿಎಎ ಮಾಜಿ ಸೇನಾಧಿಕಾರಿಯಿಂದ ಸತ್ಯ ಬಹಿರಂಗ

ಬೀಜಿಂಗ್/ನವದೆಹಲಿ, ಜು.7- ಪೂರ್ವ ಲಡಾಖ್‍ನ ಗಾಲ್ವಾನ್ ಕಣಿವೆಯ ವಾಸ್ತವ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ಜೂನ್ 15ರಂದು ನಡೆದ ಸಂಘರ್ಷದಲ್ಲಿ ಭಾರತದ ಯೋಧರ ದಾಳಿಗೆ ನೂರಕ್ಕೂ ಹೆಚ್ಚು ಚೀನಿ ಸೈನಿಕರು ಹತರಾಗಿದ್ದಾರೆ ಎಂಬ ಸಂಗತಿ ಮತ್ತೊಮ್ಮೆ ದೃಢಪಟ್ಟಿದೆ. ಲಡಾಖ್-ಲಡಾಯಿಯಲ್ಲಿ ಚೀನಾದ 150ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆಂದು ಕಮ್ಯುನಿಸ್ಟ್ ದೇಶದ ರಾಜಕಾರಣಿಗಳು ಹೇಳಿಕೆ ನೀಡಿದ ಬೆನ್ನಲ್ಲೇ ಈಗ ಚೀನಾದ ನಿವೃತ್ತ ಉನ್ನತ ಸೇನಾಧಿಕಾರಿ ಜಿಯಾನ್‍ಲಿ ಯಾಂಗ್ ಸಹ ಇದೇ ಮಾತನ್ನು ಖಚಿತಪಡಿಸಿದ್ದಾರೆ. …

Read More »

ಅಮೆರಿಕದಲ್ಲೂ ಚೀನಿ ಆ್ಯಪ್ ಬ್ಯಾನ್..?

ವಾಷಿಂಗ್‍ಟನ್,ಜು.7- ಜಾಗತಿಕ ಮಹಾಮಾರಿ ಕೊರೊನಾ ಹರಡುವಿಕೆಗೆ ಕಾರಣವಾಗಿರುವ ಚೀನಾದ ಬಗ್ಗೆ ಅಸಮಾಧಾನಗೊಂಡಿರುವ ಅಮೆರಿಕವೂ ಭಾರತದಂತೆಯೇ ಚೀನಾದ ಟಿಕ್‍ಟಾಕ್‍ನಂತಹ ಹಲವು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್( ಆ್ಯಪ್)ಗಳನ್ನು ನಿಷೇಧಿಸಲು ಚಿಂತನೆ ನಡೆಸುತ್ತಿದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಯುನೈಟೆಡ್ ಸ್ಟೇಟ್‍ನ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ಖಂಡಿತವಾಗಿಯೂ ಇದನ್ನು ಪರಿಗಣಿಸುತ್ತದೆ. ಅಮೆರಿಕ ಅಧ್ಯಕ್ಷರ ಡೊನಾಲ್ಡ್ ಟ್ರಂಪ್ ಕೂಡ ಇದನ್ನೇ ಬಯಸಿದ್ದಾರೆ ಎಂದು ಹೇಳಿದ್ದಾರೆ. ಯುಎಸ್ ಶಾಸಕರು ಟಿಕ್‍ಟಾಕ್ ಬಳಕೆದಾರರ ಡೇಟಾವನ್ನು ನಿರ್ವಹಿಸುವುದರ ಬಗ್ಗೆ ಹಾಗೂ ರಾಷ್ಟ್ರೀಯ …

Read More »

ಬಿ.ಎಲ್.ಸಂತೋಷ್ ರಕ್ಷಣಾ ಸಚಿವರೇ, ಸೇನಾ ಮುಖ್ಯಸ್ಥರೇ?- ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೇನು ರಕ್ಷಣಾ ಸಚಿವರೇ, ಇಲ್ಲವೇ ಸೇನಾ ಮುಖ್ಯಸ್ಥರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರುವ ಮಾಜಿ ಸಿಎಂ ಬಿ.ಎಲ್.ಸಂತೋಷ್ ಅವರ ಮುಂದೆ ಕೆಲ ಪ್ರಶ್ನೆಗಳನ್ನಿಟ್ಟಿದ್ದಾರೆ ಟ್ವೀಟ್ 1: ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಬಿ.ಎಲ್.ಸಂತೋಷ್ ಅವರೇನು ರಕ್ಷಣಾ ಸಚಿವರೇ, ಇಲ್ಲವೇ ಸೇನಾ ಮುಖ್ಯಸ್ಥರೇ? ಈ ಹೇಳಿಕೆ ನೀಡಬೇಕಾಗಿರುವುದು ಪ್ರಧಾನಿಗಳು …

Read More »

ಕೊರೊನಾಗೆ ಮೊದಲ ಬಲಿಯಾದ ಕಲಬುರಗಿಯಲ್ಲಿ ಇನ್ನೂ ಪ್ರಾರಂಭಿಸಿಲ್ಲ ಲ್ಯಾಬ್: ಪ್ರಿಯಾಂಕ್ ಖರ್ಗೆ ಆಕ್ರೋಶ

ಕಲಬುರಗಿ: ದೇಶದಲ್ಲೇ ಕಿಲ್ಲರ್ ಕೊರೊನಾಗೆ ಮೊದಲು ಬಲಿ ಪಡೆದಿದ್ದೇ ಕಲಬುರಗಿ ಜಿಲ್ಲೆಯಲ್ಲಿ. ಆದರೆ ಇಲ್ಲಿವರಗೆ ಜಿಲ್ಲೆಯಲ್ಲಿ ಇರುವುದು ಒಂದೇ ಪರೀಕ್ಷಾ ಕೇಂದ್ರ. ಸರ್ಕಾರದ ನಿರ್ಲಕ್ಷ್ಯದಿಂದ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಕೊರೊನಾ ಟೆಸ್ಟ್ ಲ್ಯಾಬ್ ಇದೆ. ಇಲ್ಲಿ ಪ್ರತಿನಿತ್ಯ ಸಾವಿರ ಸ್ಯಾಂಪಲ್ಸ್ ಗಳನ್ನು ಮಾತ್ರ ಟೆಸ್ಟ್ ಮಾಡಲಾಗುತ್ತಿದೆ. ಇನ್ನೂ …

Read More »

ಹಾಸನದಲ್ಲಿ ಕೊರೊನಾಗೆ ಇಂದು ಇಬ್ಬರು ಬಲಿ- ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಹಾಸನ: ಜಿಲ್ಲೆಯಲ್ಲಿ ಕೊರೊನಾ ಮರಣಮೃದಂಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಕೂಡ ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಹಾಸನದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಹೊಳೆನರಸೀಪುರ ಮೂಲದ 88 ವರ್ಷದ ವ್ಯಕ್ತಿ ಮತ್ತು ಅರಸೀಕೆರೆ ಮೂಲದ 47 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಹೊಳೆನರಸೀಪುರ ಮೂಲದ 88 ವರ್ಷದ ವ್ಯಕ್ತಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಜೂನ್ 29ರಂದು ಡಯಾಲಿಸಿಸ್‍ಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ ನಾಲ್ಕರಂದು ಐಸಿಯುಗೆ …

Read More »

ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ನಿರಂತರ ತರಾಟೆಗೆ ತೆಗೆದುಕೊಳ್ಳುತ್ತಿದ್ದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.

ಹೊಸದಿಲ್ಲಿ: ಭಾರತ-ಚೀನಾ ಗಡಿ ತಕರಾರು ಹಾಗೂ ಯೋಧರ ನಡುವಿನ ಹಿಂಸಾತ್ಮಕ ಘರ್ಷಣೆ ಕುರಿತು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ನಿರಂತರ ತರಾಟೆಗೆ ತೆಗೆದುಕೊಳ್ಳುತ್ತಿದ್ದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ರಾಹುಲ್ ಗಾಂಧಿ, ಮತ್ತೆ ಕೇಂದ್ರ ಸರ್ಕಾರಕ್ಕೆ ಗಡಿ ಘರ್ಷಣೆ ಕುರಿತು ಮೂರು ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಮುಖವಾಗಿ ರಾಷಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ನಡುವಿನ ದೂರವಾಣಿ ಸಂಭಾಷಣೆ ಬಳಿಕ ಗಲ್ವಾನ್ …

Read More »

ಕರ್ನಾಟಕ ರಾಜ್ಯವನ್ನು ಇಟಲಿ ನ್ಯೂಯಾರ್ಕ್ ಮಾಡಬೇಡಿ ಎಂದು ಪತ್ರ ಬರೆದು ಎಚ್ ಕೆ ಪಾಟೀಲ್

ಬೆಂಗಳೂರು: ಕರ್ನಾಟಕವನ್ನು ಇಟಲಿ, ನ್ಯೂಯಾರ್ಕ್ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರಿಗೆ ಹಿರಿಯ ಕಾಂಗ್ರೆಸ್ ಮುಖಂಡ ಎಚ್‌. ಕೆ ಪಾಟೀಲ್‌ ಅವರು ಪತ್ರವನ್ನು ಬರೆದಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು ಕೂಡಲೇ ಕೆಲವೊಂದು ತುರ್ತು ಕ್ರಮಗಳನ್ನು ಕೈಗೊಳ್ಳಿ ಎಂದು ಅವರು ಪತ್ರದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಶಂಕಿತರು, ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ. ಉತ್ತಮ ಚಿಕಿತ್ಸೆ ಆಂಬುಲೆನ್ಸ್, ಗೌರವಯುತ ಅಂತ್ಯಸಂಸ್ಕಾರಗಳು ಮಾನವ ಹಕ್ಕುಗಳು. ಜನರ ಅಪೇಕ್ಷೆ, ನಿರೀಕ್ಷೆಗಳನ್ನು …

Read More »

ಬೆಳಗಾವಿಯಲ್ಲಿ ಕೊರೊನಾ ಭೀತಿ ನಡುವೆ ಡೆಂಗ್ಯೂಗೆ ಬಾಲಕ ಬಲಿ

ಬೆಳಗಾವಿ, ಜುಲೈ 6: ಕೊರೊನಾ ವೈರಸ್ ಭೀತಿ ನಡುವೆಯೇ ಬೆಳಗಾವಿಯಲ್ಲಿ ಡೆಂಗ್ಯೂ ಪ್ರಕರಣ ಕಾಣಿಸಿಕೊಂಡಿದೆ. ಬೆಳಗಾವಿಯ ವಡಗಾವಿಯ ವಿಷ್ಣು ಗಲ್ಲಿ ನಿವಾಸಿ, 12 ವರ್ಷದ ಬಾಲಕ ಡೆಂಗ್ಯೂಗೆ ಬಲಿಯಾದ್ದಾನೆ ವರದ್ ಕಿರಣ್ ಪಾಟೀಲ್ (12) ಡೆಂಗ್ಯೂಗೆ ಬಲಿಯಾದ ಬಾಲಕ. ಕೆಎಲ್‌ಎಸ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿಯಾಗಿದ್ದ ವರದ ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ನಿನ್ನೆ ಜುಲೈ 5ರಂದು ಸಾವನ್ನಪ್ಪಿದ್ದಾನೆ ಕೊರೊನಾ ವೈರಸ್ ನಿಂದಾಗಿ ಈಗಾಗಲೇ …

Read More »

ಕೋವಿಡ್ ಕೇರ್‌ ಕೇಂದ್ರಗಳಲ್ಲಿ 20,000 ಬೆಡ್ ಮತ್ತು ಐಸಿಯು ವ್ಯವಸ್ಥೆ

ಬೆಂಗಳೂರು: ಕೋವಿಡ್- 19 ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲಿಯೇ ಎದುರಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವ ರಾಜ್ಯ ಸರಕಾರ, ನಗರದ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿನ ಬೆಡ್‌ಗಳ ಪ್ರಮಾಣವನ್ನು ೨0 ಸಾವಿರದವರೆಗೂ ಹೆಚ್ಚಿಸಲು ನಿರ್ದರಿದೆ. ಬೆಂಗೂರಿನಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದ ಕೋವಿಡ್‌ ಕೇರ್‌ ಕೇಂದ್ರಗಳ (ಸಿಸಿಸಿ) ಉಸ್ತುವಾರಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಈಗಾಗಲೇ ನಮ್ಮಲ್ಲಿ 1250 ಬೆಡ್ ಗಳು ಲಭ್ಯ ಇವೆ. ಬೆಂಗಳೂರು …

Read More »

ಕೊರೋನಾ ವಾರಿಯರ್ಸ್‍ಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರದ ಚಿಂತನೆ …….

ಬೆಂಗಳೂರು –ಕೋವಿಡ್ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಯೋಧರಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಡಿ’ ಗ್ರೂಪ್ ನೌಕರರಿಗೆ ವೇತನ ದುಪ್ಪಟ್ಟು ಮಾಡುವುದು ಸೇರಿದಂತೆ ಎಲ್ಲಾ ಆರೋಗ್ಯ ಯೋಧರಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ಚಿಂತನೆ ನಡೆಸಿದ್ದು 2-3 ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಹೇಳಿದರು. ಆರೋಗ್ಯ ಯೋಧರಾಗಿ ಕೆಲಸ ಮಾಡುತ್ತಿರುವ …

Read More »