ಬೆಂಗಳೂರು: ಪವನ್ ಒಡೆಯರ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಗೂಗ್ಲಿ ಸಿನಿಮಾ ತೆರೆಕಂಡ ನಿನ್ನೆಗೆ 7 ವರ್ಷವಾಗಿದೆ. ಈ ಸಮಯದಲ್ಲಿ ಚಿತ್ರತಂಡ ಸಿನಿಮಾದ ಯಶಸ್ಸನ್ನು ನೆನಪಿಸಿಕೊಂಡಿದೆ. 2013ರ ಜುಲೈ 19ರಂದು ಗೂಗ್ಲಿ ಸಿನಿಮಾ ತೆರೆಕಂಡಿತ್ತು. ಯಶ್ ನಾಯಕನಾಗಿ, ಕೃತಿ ಕರಬಂಧ ನಾಯಕಿಯಾಗಿ ಮಿಂಚಿದ್ದರು. ಲವ್, ಕಾಲೇಜ್ ಲೈಫ್, ಸಕ್ಸಸ್ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡಿದ್ದ ಸಿನಿಮಾ ಅಂದು ಕಾಲೇಜು ಯುವಕ-ಯುವತಿಯರಿಗೆ ಬಹಳ ಇಷ್ಟ ಆಗಿತ್ತು. …
Read More »Monthly Archives: ಜುಲೈ 2020
ಮೈ-ಕೈ ಕೆಸರಿನ ಫೋಟೋದ ಬಳಿಕ ಟ್ರ್ಯಾಕ್ಟರ್ ಏರಿದ ಸಲ್ಲು ಭಾಯ್
ಮುಂಬೈ: ಮೈ-ಕೈ ಕೆಸರು ತುಂಬಿಕೊಂಡ ಫೋಟೋ ಭಾರೀ ಚರ್ಚೆಗೆ ಗುರಿಯಾದ ಬಳಿಕ ಇದೀಗ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಕೃಷಿ ಮಾಡುತ್ತಿರುವ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಹೌದು. ಕೊರೊನಾ ವೈರಸ್ ಎಂಬ ಚೀನಿ ಕಾಯಿಲೆ ನಮ್ಮ ದೇಶಕ್ಕೆ ಕಾಲಿಟ್ಟ ಬಳಿಕ ಅದು ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಹೇರಲಾಯಿತು. ಪರಿಣಾಮ ಹಲವು ಮಂದಿ ಕೃಷಿಯತ್ತ ಮುಖಮಾಡಿದ್ದಾರೆ. ಅಂತೆಯೇ …
Read More »ಕೊರೊನಾ ವೈರಸ್‌ನಿಂದ ನಲುಗುತ್ತಿರುವ ವಿಶ್ವಕ್ಕೆ ಸಿಹಿ ಸುದ್ದಿ ಸಿಕ್ಕಿದೆ.
ಲಂಡನ್: ಕೊರೊನಾ ವೈರಸ್‌ನಿಂದ ನಲುಗುತ್ತಿರುವ ವಿಶ್ವಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಲಸಿಕೆ ಸುರಕ್ಷಿತವಾಗಿದೆ. ಆಕ್ಸ್‌ಫರ್ಡ್ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ AZD1222 ಹೆಸರಿನ ಲಸಿಕೆಯ ಸುರಕ್ಷಿತವಾಗಿದೆ ಎಂದು ವೈದ್ಯ ಕ್ಷೇತ್ರಕ್ಕೆ ಸಂಬಂಧಿಸಿದ ‘ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್’ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ. 1,077 ಮಂದಿ ಆರೋಗ್ಯಕರ ಸ್ವಯಂಸೇವಕರ ಮೇಲೆ ನಡೆಸಿದ ಆರಂಭಿಕ ಹಂತದ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದ್ದು, ಈ ವೇಳೆ ಲಸಿಕೆ ರೋಗನಿರೋಧಕ …
Read More »ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋಸಾಗಾಟ- ವಾಹನ ತಡೆದ ಭಜರಂಗದಳ ಕಾರ್ಯಕರ್ತರು
ಮಂಗಳೂರು: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮೂರು ದನ, ಎರಡು ಕರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದಾಗ ಭಜರಂಗ ದಳ ಸಂಘಟನೆ ಕಾರ್ಯಕರ್ತರು ತಡೆದ ಘಟನೆ ಇಂದು ನಸುಕಿನ ಜಾವ ಬೆಳ್ತಂಗಡಿ ಸಮೀಪ ನಡೆದಿದೆ. ಈ ವೇಳೆ ಗೋಸಾಗಾಟಗಾರ ರಾಜೇಶ್ ಹಾಗೂ ಇನ್ನೋರ್ವ ಆರೋಪಿ ಭಜರಂಗದಳ ಕಾರ್ಯಕರ್ತರ ಮೇಲೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್ ವಾಹನದಲ್ಲಿ ನಗರದ ಕಂಕನಾಡಿಯ ಪಿ.ಕೆ.ಚಿಕನ್ ಸೆಂಟರ್ ಮಾಲಕ ಅಬ್ದುಲ್ …
Read More »ಜಮೀನಿನಲ್ಲಿ ಕೆಲಸ ಮಾಡ್ತಿದ್ದಾಗ ಸಿಡಿಲು ಬಡಿದು ರೈತ ಸಾವು
ಗದಗ: ಜಮೀನಿನಲ್ಲಿ ಬಿತ್ತನೆ ಕಾರ್ಯ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ. 34 ವರ್ಷದ ಕೃಷ್ಣಪ್ಪ ಭಜಮ್ಮನವರ್ ಮೃತ ದುರ್ದೈವಿ ರೈತ. ನಾಲ್ಕು ಜನ ಸೇರಿಕೊಂಡು ಜಮೀನಿನಲ್ಲಿ ಮೆಣಸಿನ ಬೀಜ ಬಿತ್ತನೆ ಮಾಡ್ತಿದ್ದರು. ಮಳೆ ಬಂದ ಹಿನ್ನೆಲೆಯಲ್ಲಿ ಇತರೆ 3 ಬೇರೆ ಮರದಡಿ ನಿಂತುಕೊಂಡಿದ್ದಾರೆ. ಆದರೆ ಕೃಷ್ಣಪ್ಪ ಒಬ್ಬನೇ ಒಂದು ಮರದಡಿ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದರು. ಈ …
Read More »ಅರಣ್ಯ ಸಚಿವ ಆನಂದ್ ಸಿಂಗ್ ಕಾರು ಚಾಲಕನಿಗೆ ಕೊರೊನಾ ಸೋಂಕು
ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಚಾಲಕನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಹೊಸಪೇಟೆ ನಗರದ ರಾಣಿಪೇಟೆಯ ಕಚೇರಿಯನ್ನು ಇಂದು ಸೀಲ್‍ಡೌನ್ ಮಾಡಲಾಗಿದೆ. ಸಚಿವ ಆನಂದ್ ಸಿಂಗ್ ಅವರ ಕಾರು ಚಾಲಕರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಸ್ವಯಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗಿದೆ. ಸೋಂಕು ತಗುಲಿದ ವಾಹನ ಚಾಲಕನನ್ನು ಹೊಸಪೇಟೆ ನಗರದ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾರು ಚಾಲಕನ ಕುಟುಂಬ ಸದಸ್ಯರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಸಚಿವ …
Read More »ಬೆಳಗಾವಿ – ಜಿಲ್ಲೆಯಲ್ಲಿ ಇಂದು ಒಟ್ಟೂ 60 ಜನರಿಗೆ ಕೊರೋನಾ ಸೋಂಕು
ಬೆಳಗಾವಿ – ಜಿಲ್ಲೆಯಲ್ಲಿ ಇಂದು ಒಟ್ಟೂ 60 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಬೆಳಗಾವಿ ನಗರದಲ್ಲಿ 35, ಚಿಕ್ಕೋಡಿಯಲ್ಲಿ 9, ಅಥಣಿ 15, ಸಂಕೇಶ್ವರದಲ್ಲಿ 1 ಪ್ರಕರಣ ದೃಢಪಟ್ಟಿದೆ. ಚಿಕ್ಕೋಡಿಯಲ್ಲಿ ಒಂದು ವರ್ಷ ಹಾಗೂ 8 ವರ್ಷದ ಗಂಡು ಮಕ್ಕಳಲ್ಲಿ ಸಹ ಕೊರೋನಾ ಸೋಂಕು ಪತ್ತೆಯಾಗಿದೆ. ಬೆಳಗಾವಿಯಲ್ಲಿ ಸಾವಿನ ಸಂಖ್ಯೆ 26 ಆಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 618. ಇನ್ನೂ 2079 ಜನರ ಗಂಟಲು ದ್ರವದ ವರದಿ ಬರಬೇಕಿದೆ.
Read More »ದ್ರೋಣ ಅಂತಾ ಕಾಗೆ ಹಾರಸಿರೋ ಪ್ರತಾಪ ನನ್ನ ಪೊಲೀಸರು ಬಂಧಿಸಿದ್ದಾರೆ..
ಬೆಂಗಳೂರು(ಜು.20): ಕ್ವಾರಂಟೈನ್ ನಿಯಮ ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್ ಈಗ ಬೆಂಗಳೂರು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಕ್ಕಿಬಿದ್ದ ಡ್ರೋನ್ ಪ್ರತಾಪ್ನನ್ನು ವಶಕ್ಕೆ ಪಡೆದ ಪೊಲೀಸರು ಈಗ ಬೆಂಗಳೂರು ಕರೆ ತಂದಿದ್ದಾರೆ. ಡ್ರೋನ್ ಪ್ರತಾಪ್ ಜುಲೈ 15ರಂದು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದ. ತಲಘಟ್ಟಪುರದ ಅಪಾರ್ಟ್ಮೆಂಟ್ವೊಂದರಲ್ಲಿ ಈತ ಕ್ವಾರಂಟೈನ್ ಆಗಿದ್ದ. ಆತನ ಕೈಗೆ ಬಿಬಿಎಂಪಿಯಿಂದ ಕ್ವಾರಂಟೈನ್ ಸ್ಟಿಕರ್ ಕೂಡ ಅಂಟಿಸಲಾಗಿತ್ತು. ಆದರೆ, ಅದಾಗಿ ಎರಡೇ ದಿನಕ್ಕೆ ಈತ ಖಾಸಗಿ …
Read More »ತಮ್ಮ ತಮ್ಮ ಮನೆಯಲ್ಲಿಯೇ ಬಸವ ಪಂಚಮಿ ಆಚರಿಸುವಂತೆ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ ಅವರು ಕರೆ ನೀಡಿದ್ದಾರೆ.
ಬೆಳಗಾವಿ: ಜು. 25 ರಂದು ತಮ್ಮ ತಮ್ಮ ಮನೆಯಲ್ಲಿಯೇ ಬಸವ ಪಂಚಮಿ ಆಚರಿಸುವಂತೆ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ ಅವರು ಕರೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಭಾರೀ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಬದಲು ತಮ್ಮ ತಮ್ಮ ಮನೆಗಳಲ್ಲಿಯೇ ಬಸವ ಪಂಚಮಿ ಆಚರಿಸುವಂತೆ ಅಭಿಮಾನಿಗಳಿಗೆ, ಸ್ವಾಮೀಜಿಗಳಿಕೆ ಹಾಗೂ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರಿಗೆ ಸತೀಶ ಜಾರಕಿಹೊಳಿ ಅವರು ಮನವಿ …
Read More »ರೈತರೊಬ್ಬರಿಂದ ಆರು ಸಾವಿರ ರೂಪಾಯಿ ಗಳ ಲಂಚ ಪಡೆಯುತ್ತಿದ್ದ ವೇಳೆ ಗಂಗಾವತಿ ತಹಸೀಲ್ದಾರಎಸಿಬಿ ಬಲೆಗೆ
ಕೊಪ್ಪಳ: ಜಮೀನಿನ ಖಾತಾ ಉತಾರ ಬದಲಾವಣೆಗೆ ಸಂಬಂಧಿಸಿದಂತೆ ರೈತರೊಬ್ಬರಿಂದ ಆರು ಸಾವಿರ ರೂಪಾಯಿ ಗಳ ಲಂಚ ಪಡೆಯುತ್ತಿದ್ದ ವೇಳೆ ಗಂಗಾವತಿ ತಹಸೀಲ್ದಾರ, ಮತ್ತು ಭೂಮಿ ಕೇಂದ್ರದ ತಹಸೀಲ್ದಾರ್ ಎಸಿಬಿ ಬಲೆಗೆ ಬಿದಿದ್ದಾರೆ. ಎಸಿಬಿ ಡಿಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಗಂಗಾವತಿ ತಹಸೀಲ್ದಾರ ಎಲ್.ಡಿ.ಚಂದ್ರಕಾಂತ ಹಾಗೂ ಭೂಮಿ ಕೇಂದ್ರದ ಶಿರಸ್ತೆದಾರ ಶರಣಪ್ಪ ಅವರು ವಡ್ಡರಹಟ್ಟಿಯ ಸುಂದರರಾಜ ಎಂಬ ರೈತರಿಂದ ಜಮೀನಿನ ಖಾತಾ ಬದಲಾವಣೆಗೆ ರೂ.6 ಸಾವಿರ …
Read More »