Breaking News

Monthly Archives: ಜುಲೈ 2020

ಕೊನೆಯ ರೈತರ ತಲುಪದ ಕೃಷ್ಣೆ……?

ಹುಣಸಗಿ: ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ವ್ಯಾಪ್ತಿಯ ಎಲ್ಲ ರೈತರಿಗೂ ನೀರು ಸಿಗಬೇಕು. ರೈತರು ಸ್ವಾವಲಂಬಿಗಳಾಗಬೇಕು’ ಎನ್ನುವ ಮೂಲ ಉದ್ದೇಶವೇ ಮಾಯವಾಗಿದೆ. ಕಾಲುವೆ ಗೇಟ್ ಬಳಿ ಇರುವ ರೈತರು ಮಾತ್ರ ನೀರು ಪಡೆಯುತ್ತಿದ್ದು, ಇಂದಿಗೂ ಕಾಲುವೆ ಅಂಚಿನ ರೈತರು ನೀರಾವರಿಯಿಂದ ವಂಚಿತರಾಗಿದ್ದಾರೆ. ಇದರಿಂದಾಗಿ ಕಾಲುವೆ, ಜಾಲ ಕಾಲುವೆ, ರಸ್ತೆ ಇದ್ದರೂ ಒಣ ಬೇಸಾಯವನ್ನೇ ಮಾಡಿಕೊಂಡಿದ್ದು, ನೀರಾವರಿ ಮರೀಚಿಕೆಯಂತಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ವಿತರಣಾ ಕಾಲುವೆ 6 ಇದ್ದು, ಶೇ 50ರಷ್ಟು …

Read More »

ರಾತ್ರೋ ರಾತ್ರಿ ಸುರಿದ ಮಳೆಯಿಂದ ತುಂಬಿದ ರೈತರ ಕೆರೆ

ತುಮಕೂರು: ಭಾನುವಾರ ರಾತ್ರಿ ಮಧುಗಿರಿ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ಮಾವಿನ ಕೃಷಿಕ ಅಂಜಿನಪ್ಪ ಅವರ ಭವಿಷ್ಯವೇ ಬದಲಾಯಿತು. 1 ಕೋಟಿ ಲೀಟರ್ ಸಾಮರ್ಥ್ಯದ ಅವರ ಬೃಹತ್ ಕೃಷಿ ಕೊಳವು ತುಂಬಿದೆ, , ಬೆಂಗಳೂರು ಗ್ರಾಮೀಣ ಜಿಲ್ಲೆಯ ದೇವನಹಳ್ಳಿ ಮೂಲದ ಬಿ.ಇ (ಸಿವಿಲ್) ಎಂಜಿನೀಯರ್ ಅಂಜಿನಪ್ಪ ಹಲವು ವರ್ಷಗಳ ಹಿಂದೆ ಕೆರೆ ನಿರ್ಮಿಸಿದ್ದರು. ಅವರು ಕೊರೆಸಿದ್ದ ಮೂರು ಬೋರ್ ವೆಲ್ ಗಳ ನೀರು ಬತ್ತಿ ಹೋದ ಹಿನ್ನೆಲೆಯಲ್ಲಿ ತಮ್ಮ 40 ಎಕರೆ …

Read More »

ರಾಜ್ಯದಲ್ಲಿ ಒಂದೇ ದಿನ 61 ಜನರ ಬಲಿ.

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಮಂಗಳವಾರ ಒಂದೇ ದಿನ ಬರೋಬ್ಬರಿ 61 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1464ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 22 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 61 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ತಿಳಿಸಿದ್ದಾರೆ. ಇಂದು ಬೆಂಗಳೂರು ನಗರವೊಂದರಲ್ಲೆ ಅತಿ …

Read More »

ಸಿಗರೇಟ್ ಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟ ಭೂಪ

ನಾಲ್ಕು ಪ್ಯಾಕ್ ಸಿಗರೇಟಿಗೆ ತನ್ನ ಜೀವವನ್ನೇ ಪಣಕ್ಕಿಟ್ಟ ವ್ಯಕ್ತಿಯೊಬ್ಬ ನೆಟ್‌ನಲ್ಲಿ ಸುದ್ದಿಯಾಗಿದ್ದಾನೆ. ಸಮುದ್ರದ ನೀರಿನಲ್ಲಿ ಮುಳುಗಿಹೋಗಿದ್ದ ತನ್ನ ವ್ಯಾನ್‌ನಲ್ಲಿ ನಾಲ್ಕು ಪ್ಯಾಕ್ ಸಿಗರೇಟ್‌ ಇದ್ದ ಕಾರಣ, ಆ ನೀರಿನಲ್ಲೇ ಈಜಿಕೊಂಡು ಹೋದ ಆತ ಕೊನೆಗೂ ಸಿಗರೇಟ್‌ನೊಂದಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾನೆ. ಈ ಪ್ರಸಂಗವನ್ನು ಫೋಟೋಗ್ರಾಫರ್‌ಗಳು ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ. ಈ ಘಟನೆಯು ಬ್ರಿಟನ್‌ನ ಟೀಸೈಡ್ ಬಳಿಯ ರೆಡ್‌ಕಾರ್‌ ಬೀಚ್‌ನಲ್ಲಿ ಸಂಭವಿಸಿದೆ. ಸಮುದ್ರದಲ್ಲಿ ಮುಳುಗಿದ್ದ ವ್ಯಾನ್‌ ಅನ್ನು ಟ್ರಾಕ್ಟರ್‌ ನೆರವಿನಿಂದ ತೀರಕ್ಕೆ ಎಳೆಯುವ …

Read More »

ಕುಮಾರಸ್ವಾಮಿ ಸರ್ಕಾರ ಪತನವಾಗಿ ಒಂದು ವರ್ಷ : ಮಾಜಿ ಸಿಎಂ ನಾಳೆ ಸಾರ್ವಜನಿಕರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.

ಬೆಂಗಳೂರು: ಕುಮಾರಸ್ವಾಮಿ ಸರ್ಕಾರ ಪತನವಾಗಿ ಒಂದು ವರ್ಷವಾದ ಹಿನ್ನಲೆಯಲ್ಲಿ ಮಾಜಿ ಸಿಎಂ ನಾಳೆ ಸಾರ್ವಜನಿಕರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಒಂದು ವರ್ಷದ ಬಿಜೆಪಿ ಸರ್ಕಾರದ ಆಡಳಿತ , ಕಾರ್ಯವೈಖರಿ ಬಗ್ಗೆ ಸಂವಾದ ನಡೆಸಲಿದ್ದು, ಕುಮಾರಸ್ವಾಮಿ ಸಾರ್ವಜನಿಕರ ಜೊತೆ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಪ್ರಸ್ತುತ ಕೊರೋನಾ ಪರಿಸ್ಥಿತಿ ಯನ್ನು ಸರ್ಕಾರ ನಿಭಾಯಿಸುತ್ತಿರುವ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಮಧ್ಯರಾತ್ರಿ ನಡು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ..! ಈಗಾಗಲೇ ಕುಮಾರಸ್ವಾಮಿಗೆ ಮೋಸ ಮಾಡಿ ಒಂದು …

Read More »

ಲಾಕ್ ಡೌನ್ ವಿಸ್ತರಣೆ ಬಗ್ಗೆ ಮುಖ್ಯ ಮಂತ್ರಿಗಳ ಹೇಳಿಕೆ

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜ್ಯದ ಜನತೆಯನ್ನ ಉದ್ದೇಶಿಸಿ ಇಂದು (ಮಂಗಳವಾರ) ಸಂಜೆ ಭಾಷಣ ಮಾಡಿದರು. ಇದೇ ಮೊದಲ ಬಾರಿ ಸಮಾಜಿಕ ಜಾಲತಾಣಗಳ ಮೂಲಕ ಕರ್ನಾಟಕದ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ನಿರೀಕ್ಷೆಯಂತೆ ಕೊರೋನಾ ವೈರಸ್‌ ಬಗ್ಗೆ ಮಾತನಾಡಿದರು. ಈ ವೇಳೆ ಕರ್ನಾಟಕ ಜನತೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ದೇಶದೆಲ್ಲೆಡೆ ಕೊರೋನಾ ವೈರಸ್​ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಕೋವಿಡ್​ ನಿಯಂತ್ರಣ ಮಾಡುವುದರಲ್ಲಿ ಪ್ರಾರಂಭದಲ್ಲಿ ನಾವು ಯಶಸ್ವಿಯಾಗಿದ್ದೆವು. ಆದ್ರೆ, ಇತ್ತೀಚಿನ ದಿನಗಳಲ್ಲಿ …

Read More »

ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ 23 ಮಂದಿಗೆ ಕೊರೊನಾ…..

ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ 23 ಮಂದಿಗೆ ಕೊರೊನಾ ಕೊರೊನಾ ಸೋಂಕು ದೃಢವಾಗಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 1102 ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಮಂಗಳವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದು, ಇಂದು ಮೃತರಾದ ನಾಲ್ವರು ಬೆಳಗಾವಿ ತಾಲೂಕಿಗೆ ಸೇರಿದವರಾಗಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಮೃತರ ಸಂಖ್ಯೆ 30 ಕ್ಕೆ ತಲುಪಿದೆ. ಜಿಲ್ಲೆಯ 1102 ಸೋಂಕಿತರ ಪೈಕಿ 461 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 611 ಪ್ರಕರಣ …

Read More »

, ಕೃಷ್ಣಾದಲ್ಲಿ ಧೂಳು ತಿನ್ನುತ್ತಿವೆ ಪ್ರಮುಖ ಕಡತಗಳು.. ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

ಬೆಂಗಳೂರು, ಜು.21- ಸಕಾಲಕ್ಕೆ ಸರಿಯಾಗಿ ಕಡತಗಳನ್ನು ವಿಲೇವಾರಿ ಮಾಡಲೇಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಕಾರಣ, ಮುಖ್ಯಮಂತ್ರಿಗಳ ಅಕೃತ ಕಚೇರಿ ಕೃಷ್ಣಾದಲ್ಲೇ ಪ್ರಮುಖ ಇಲಾಖೆಗಳ ಸಾವಿರಾರು ಕಡತಗಳು ಎರಡರಿಂದ ಮೂರು ತಿಂಗಳಾದರೂ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಪ್ರಮುಖವಾಗಿ ಆರ್ಥಿಕ, ಕಂದಾಯ, ಲೋಕೋಪಯೋಗಿ, ನಗರಾಭಿವೃದ್ಧಿಘಿ, ಪೌರಾಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲಸಂಪನ್ಮೂಲ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಉನ್ನತ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, …

Read More »

ಜುಬ್ಲಿಯಂಟ್, ಜಿಂದಾಲ್ ಆಯ್ತು ಈಗ ಟಾಟಾ ಮಾರ್ಕೋಪೊಲೊ ಕಂಪನಿಗೂ ಕೊರೊನಾ ಕಂಟಕ

ಧಾರವಾಡ: ಮೈಸೂರಿನ ಜುಬ್ಲಿಯಂಟ್, ಬಳ್ಳಾರಿಯ ಜಿಂದಾಲ್ ಆಯ್ತು. ಈಗ ಧಾರವಾಡದ  ಟಾಟಾ ಮಾರ್ಕೋಪೊಲೊ ಕಂಪನಿಗೂ ಕೊರೊನಾ ಕಂಟಕ ಆರಂಭವಾಗಿದೆ. ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದ 3500 ಕಾರ್ಮಿಕರು ಕೆಲಸ ಮಾಡುವ ಮಾರ್ಕೋಪೊಲೊ ಕಂಪನಿಯ 8 ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಈಗ ಉಳಿದ ಕಾರ್ಮಿಕರಿಗೂ ಕೊರೊನಾ ಆತಂಕ ಎದುರಾಗಿದೆ. ಇಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿದ್ದರಿಂದ ಜಿಲ್ಲಾಡಳಿತ 10 ದಿನಗಳ ಕಾಲ ಜಿಲ್ಲೆಯಲ್ಲಿ ಲಾಕಡೌನ್ ಮಾಡಿ …

Read More »

ಹಳ್ಳಿಗಳಲ್ಲಿ ಕೊರೊನಾ ಮರಣ ಮೃದಂಗ ಭಾರಿಸಲಿದೆ: ಕೋಡಿಶ್ರೀ ಭವಿಷ್ಯ

ಹಾಸನ: ಆಸ್ವೀಜ ಮಾಸ, ಕಾರ್ತಿಕ ಮಾಸದಲ್ಲಿ ಕೊರೊನಾ ಹೆಚ್ಚಾಗಲಿದ್ದು ಹಳ್ಳಿಗಳಲ್ಲಿ ಕೊರೊನಾ ಮರಣ ಮೃದಂಗ ಭಾರಿಸಲಿದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕೋಡಿಮಠದಲ್ಲಿ ಮಾತನಾಡಿದ ಶ್ರೀ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮೀಜಿ, ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು. ಜನರು ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.ಸ್ವಚ್ಛತೆ, ಸಾಮಾಜಿಕ ಅಂತರದ ಕಡೆ ಗಮನ ಕೊಡಬೇಕು. ಇನ್ನೂ ಕೆಲ ತಿಂಗಳು ಕೊರೊನಾ ಅಟ್ಟಹಾಸ …

Read More »