Breaking News

Monthly Archives: ಜುಲೈ 2020

ಸೋಂಕಿತರ ಸೇವೆ ಮಾಡಿದ ವೈದ್ಯ ಕೊರೊನಾಗೆ ಬಲಿ- ಸರ್ಕಾರದಿಂದ ಸಿಗಲಿಲ್ಲ ನೆರವು

ನವದೆಹಲಿ: ನನ್ನ ಪತಿ ಕೊರೊನಾ ಸೋಂಕಿತರಿಗಾಗಿ ಮೂರು ತಿಂಗಳು ರಜೆ ಪಡೆಯದೇ ಕೆಲಸ ಮಾಡಿದ್ದರಿಂದ ಅವರಿಗೂ ಸೋಂಕು ತಗುಲಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪತಿ ನಿಧನರಾದರು. ಆದರೆ ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಮೃತ ವೈದ್ಯನ ಪತ್ನಿ ಡಾ.ಹೀನಾ ಅಲಿ ಬೇಸರ ವ್ಯಕ್ತಪಡಿಸಿದ್ದಾರೆ. ಖಾಸಗಿ ಪತ್ರಿಕೆ ಜೊತೆ ಮಾತನಾಡಿರುವ ಹೀನಾ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪತಿ ಡಾ.ಜಾವೇದ್ ಅಲಿ ಮಾರ್ಚ್ ನಿಂದ ಜೂನ್ ವರೆಗೆ ನಿರಂತರವಾಗಿ …

Read More »

ಆಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನ………..

ಶ್ರೀನಗರ: ಆಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನಿಸಿದ ಇಬ್ಬರನ್ನು ಬಂಧಿಸಿರುವ ಘಟನೆ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರೋಡೆಗೆ ಯತ್ನಿಸಿದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಇಬ್ಬರು ಯುವಕರು ಆಟಿಕೆ ಬಂದೂಕು ಹಿಡಿದು ನಾಥನುಸಾ ಗ್ರಾಮದ ಗ್ರಾಮೀಣ ಬ್ಯಾಂಕ್ ಪ್ರವೇಶ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿಗೆ ಗನ್ ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಬ್ಯಾಂಕಿನಲ್ಲಿದ್ದ ಗ್ರಾಹಕರಿಗೆ ಕೈಯಲ್ಲಿರುವ ಗನ್ ಆಟಿಕೆ ಎಂದು …

Read More »

ಕೊರೊನಾ ಎಫೆಕ್ಟ್- ಬೆಂಗಳೂರು ತೊರೆದು ಹಳ್ಳಿಗಳಲ್ಲಿ ಕೃಷಿ ಮಾಡುತ್ತಿರುವ ಯುವಕರು

ಮಡಿಕೇರಿ: ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದು, ಕೋಟ್ಯಂತರ ಉದ್ಯೋಗಗಳು ಕಡಿತವಾಗಿವೆ. ಇಷ್ಟು ದಿನ ಹಳ್ಳಿಗಳನ್ನು ಬಿಟ್ಟು ದುಡಿಮೆಗಾಗಿ ಮಹಾನಗರಗಳತ್ತ ಧಾವಿಸಿದ್ದ ಲಕ್ಷಾಂತರ ಯುವಕರು ಇದೀಗ ಮತ್ತೆ ಹಳ್ಳಿಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿಯೋ ಕೊಡಗು ಜಿಲ್ಲೆಯನ್ನು ಬಿಟ್ಟು ಸಾವಿರಾರು ಯುವಕರು ಮಡಿಕೇರಿಗೋ ಅಥವಾ ದೂರದ ಬೆಂಗಳೂರಿಗೋ ಇಲ್ಲವೇ ಹೊರ ರಾಜ್ಯ, ದೇಶಗಳಿಗೋ ಹೋಗಿ ದುಡಿಯುತ್ತಿದ್ದರು. ಹೀಗಾಗಿ …

Read More »

ಸಂಬಂಧಿಕರಿಗೆ ಕರೊನಾ ತಗುಲಿದೆ ಎಂಬ ಗಾಳಿ ಸುದ್ದಿ ಕೇಳಿ ಆಘಾತಕ್ಕೊಳಗಾದ ಮಹಿಳೆ ಆತ್ಮಹತ್ಯೆ

ಚಿಕ್ಕೋಡಿ: ಸಂಬಂಧಿಕರಿಗೆ ಕರೊನಾ ತಗುಲಿದೆ ಎಂಬ ಗಾಳಿ ಸುದ್ದಿ ಕೇಳಿ ಆಘಾತಕ್ಕೊಳಗಾದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೊರೊನಾ ಭೀತಿಗೆ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಷಾರಿಲ್ಲದ್ದಕ್ಕೆ ಯೋಗಕ್ಷೇಮ ವಿಚಾರಿಸಿ ಬಂದಿದ್ದ ಸಂಬಂಧಿಕರಿಗೆ ಕರೊನಾ ತಗುಲಿದೆ ಎಂಬ ಗಾಳಿ ಸುದ್ದಿಯನ್ನು ಕೇಳಿ ಶೋನಾಬಾಯಿ ಪುಂಡಲೀಕ ಪಾಟೋಳ(57) ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾನು ಭೇಟಿಯಾಗಿ ಬಂದವರಿಗೆ ಪಾಸಿಟಿವ್ ಇದೆಯೋ …

Read More »

ಆಯುಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು……

ಬೆಂಗಳೂರು: ಕೊರೊನಾ ತಡೆಗಾಗಿ ಮುಂಜಾಗ್ರತ ಕ್ರಮಗಳ ಜೊತೆಯಲ್ಲಿ ಪೌಷ್ಠಿಕಾಂಶವುಳ್ಳ ಆಹಾರವನ್ನು ಬಳಸುವುದು ಉತ್ತಮ. ಸೋಂಕಿಕತರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನೇ ನೀಡಲಾಗುತ್ತದೆ. ಮಕ್ಕಳು, ಗರ್ಭಿಣಿ ಮತ್ತು ಹಿರಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರೋದರಿಂದ ಉತ್ತಮ ಆಹಾರ ಸೇವನೆ ಮಾಡಬೇಕು. ಸೋಂಕಿತರು ಗುಣಮುಖರಾಗಿ ಬಂದ ಮೇಲೆಯೂ ವೈದ್ಯರ ಸಲಹೆಯ ಮೇರೆಗೆ ಆಹಾರ ಸೇವಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು: * ಕುಡಿಯಲು ಯಾವಾಗ ಬಿಸಿನೀರು ಉಪಯೋಗಿಸುವುದು. * …

Read More »

ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಿಎಂಟಿಸಿ ಬಸ್ ಸಂಚಾರ ಆರಂಭ

ಬೆಂಗಳೂರು: ಬುಧವಾರ ಬೆಳಗ್ಗೆಯಿಂದ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದ್ದು, 1500 ಬಸ್ಸುಗಳು ಸಂಚರಿಸಲಿವೆ. ಬಿಎಂಟಿಸಿ ಅಧಿಕೃತ ಆದೇಶ ಹೊರಡಿಸಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಲ್ಲ ಕಡೆ ಬಸ್‍ಗಳು ಓಡಾಡಲಿದ್ದು, ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಡ್ರೈವರ್ ಮತ್ತು ಕಂಡಕ್ಟರ್ ಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿದ್ದು, ಮಾಸ್ಕ್ ಧರಿಸಿ ಬರುವ ಪ್ರಯಾಣಿಕರರಿಗೆ ಮಾತ್ರ ಬಸ್ ನಲ್ಲಿ ಪ್ರಯಾಣಿಸಲು ತಿಳಿಸಲಾಗಿದೆ. ಜ್ವರ …

Read More »

ಸೋಂಕಿತರಿಗೆ ನೆಗೆಟಿವ್‌, ಆರೋಗ್ಯವಂತರಿಗೆ ಪಾಸಿಟಿವ್‌/ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಫಲಿತಾಂಶದ ಬಗ್ಗೆ ಗೊಂದಲ

ಬೆಂಗಳೂರು: ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಫಲಿತಾಂಶದ ನಿಖರತೆ ಬಗ್ಗೆ ಹಲವು ಸಂದೇಹಗಳು ಎದ್ದಿವೆ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವಡೆ ಆಟಿಜೆನ್ ಟೆಸ್ಟ್‌ಗಳ ಅಸಲಿ ಬಂಡವಾಳ ಬಯಲಾಗ್ತಿದೆ. ಪರೀಕ್ಷೆಯ ವೇಳೆ ಸೋಂಕಿತರಿಗೆ ನೆಗೆಟಿವ್ ಎಂದು, ಆರೋಗ್ಯವಂತರಿಗೆ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಆಂಟಿಜೆನ್ ಟೆಸ್ಟ್‌ಗಳ ಖಚಿತತೆ ಬಗ್ಗೆ ವೈದ್ಯರೇ ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಆಂಟಿಜೆನ್ ಟೆಸ್ಟ್ ಮಾಡಿಸಿದ್ದರೂ ಆರ್‌ಟಿ – ಪಿಸಿಆರ್ ಟೆಸ್ಟ್ ಮಾಡಿಸಲು ಸೂಚಿಸುತ್ತಿದ್ದಾರೆ. ಹೊತ್ತಲ್ಲಿ ರಾಜ್ಯ ಸರ್ಕಾರ, ಇನ್ನೂ 5 …

Read More »

ಇಷ್ಟು ದಿನ ಬೆಂಗಳೂರಷ್ಟೇ ಕೊರೋನಾ ಹಾಟ್ ಸ್ಪಾಟ್ ಆಗಿತ್ತು. ಆದರೆ ಈಗ ಜಿಲ್ಲೆಗಳು ಹಾಟ್‍ಸ್ಪಾಟ್ ಆಗಿ ಮಾರ್ಪಡುತ್ತಿವೆ.

ಬೆಂಗಳೂರು: ಇಷ್ಟು ದಿನ ಬೆಂಗಳೂರಷ್ಟೇ ಕೊರೋನಾ ಹಾಟ್ ಸ್ಪಾಟ್ ಆಗಿತ್ತು. ಆದರೆ ಈಗ ಜಿಲ್ಲೆಗಳು ಹಾಟ್‍ಸ್ಪಾಟ್ ಆಗಿ ಮಾರ್ಪಡುತ್ತಿವೆ. ಬೆಂಗಳೂರು ಹೊರತುಪಡಿಸಿ ರಾಜ್ಯದ 12 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. ಇದರಲ್ಲಿ ಐದು ಜಿಲ್ಲೆಗಳು ಎರಡು ಸಾವಿರದ ಗಡಿ ದಾಟಿವೆ. ದಕ್ಷಿಣ ಕನ್ನಡ ಬೆಂಗಳೂರಿಗೆ ಸ್ಪರ್ಧೆ ನೀಡುವ ರೀತಿಯಲ್ಲಿ ಹವಣಿಸುತ್ತಿರುವಂತಿದ್ದು, ನಾಲ್ಕು ಸಾವಿರದ ಸನಿಹದಲ್ಲಿದೆ.   ಜಿಲ್ಲೆಗಳಲ್ಲಿ ಯಾಕೆ ಸೋಂಕು ಹೆಚ್ಚಾಗುತ್ತಿದೆ ಎಂದು ಕೇಳಿದರೆ ಬೆಂಗಳೂರಿನತ್ತ ಸಚಿವ ಮಾಧುಸ್ವಾಮಿ …

Read More »

ಶಾರುಖ್ ಬಂಗಲೆಗೆ ಪ್ಲಾಸ್ಟಿಕ್ ಹೊದಿಕೆ

ಮುಂಬೈ: ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕೋವಿಡ್​-19 ಪಿಡುಗಿನ ಭರಾಟೆ ಜೋರಾಗಿದೆ. ಬಾಲಿವುಡ್​ನ ಹಿರಿಯ ನಟ ಅಮಿತಾಭ್​ ಬಚ್ಚನ್​ ಹಾಗೂ ಅವರ ಪುತ್ರ ಅಭಿಷೇಕ್​ ಬಚ್ಚನ್​, ಸೊಸೆ ಐಶ್ವರ್ಯ ರೈ ಬಚ್ಚನ್​ ಮತ್ತು ಮೊಮ್ಮಗಳು ಆರಾಧ್ಯ ಕೂಡ ಕರೊನಾ ಸೋಂಕಿಗೆ ತುತ್ತಾದ ಮೇಲಂತೂ ಬಾಲಿವುಡ್​ನ ಮಂದಿಗೆ ಕರೊನಾ ಭಾರಿ ನಡುಕವನ್ನೇ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಸೋಂಕಿನಿಂದ ದೂರವುಳಿಯಲು ಅವರೆಲ್ಲರೂ ವಿವಿಧ ರೀತಿಯ ತಂತ್ರಗಾರಿಕೆಯನ್ನೂ ಅನುಸರಿಸುತ್ತಿದ್ದಾರೆ. ಇಂತಿಪ್ಪ, ಬಾಲಿವುಡ್​ನಲ್ಲಿ ವಿಶಿಷ್ಟ …

Read More »

ದ್ರೋಣ ಪ್ರತಾಪ್ ಈಗ ಪೊಲೀಸ್ ರ ವಶಕ್ಕೆ

ಬೆಂಗಳೂರು: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಡ್ರೋನ್ ಪ್ರತಾಪ್‍ನನ್ನು ಬಿಬಿಎಂಪಿ ಅಧಿಕಾರಿಗಳು ಮತ್ತು ತಲಘಟ್ಟಪುರ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಡ್ರೋನ್ ಪ್ರತಾಪ್ ತಲೆಮರೆಸಿಕೊಂಡಿದ್ದ. ಅಧಿಕಾರಿಗಳು ಅವನ ಹುಡುಕಾಟದಲ್ಲಿ ತೊಡಗಿದ್ದರು. ಇದೀಗ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರತಾಪ್‍ನನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಕೆಂಗೇರಿ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ …

Read More »