Breaking News

Daily Archives: ಜುಲೈ 25, 2020

ಮಾನವ ಬಂಧುತ್ವ ವೇದಿಕೆ ಮೂಲಕ ಯಶಸ್ವಿಯಾಗಿ ಬಸವ ಪಂಚಮಿ ಆಚರಣೆ.

ಗೋಕಾಕ: ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯಾದ್ಯಂತ ನಮ್ಮ ಬೆಂಬಲಿಗರು ಯಶಸ್ವಿಯಾಗಿ ಬಸವ ಪಂಚಮಿ ಆಚರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗರ ಪಂಚಮಿಯಂದು ಪ್ರತಿ ಬಸವ ಪಂಚಮಿಯಾಗಿ ಆಚರಿಸಲಾಗುತ್ತಿದೆ. ಹಾವುಗಳು ಎಂದು ಹಾಲು ಕುಡಿಯುವುದಿಲ್ಲ. ಮೂಢನಂಬಿಕೆ ಆಚರಿಸುವ ಬದಲು ಅದೇ ಹಾಲನ್ನು ಬಡ ಮಕ್ಕಳಿಗೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುಲು ಅಭಿಯಾನ ಆರಂಭಿಸಿದ್ದೇವೆ. ರಾಜ್ಯಾದ್ಯಂತ ಯಶಸ್ವಿಯಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದ್ರು.

Read More »

ನಾಳೆ ಬೆಳಗಾವಿ ಜಿಲ್ಲಾದ್ಯಂತ ಲಾಕ್ ಡೌನ್ ಜಾರಿ……..

ಬೆಳಗಾವಿ: ನಾಳೆ (ಭಾನುವಾರ) ಜಿಲ್ಲಾದ್ಯಂತ ಲಾಕ್ ಡೌನ್ ಜಾರಿ ಇರಲಿದೆ. ಅಗತ್ಯ ಸೇವೆಗಳಾದ ಮೆಡಿಕಲ್ ಶಾಪ್, ಹಾಲು, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೋಟೆಲ್, ಬಸ್, ಆಟೋ ಸೇರಿದಂತೆ ಎಲ್ಲ ಅಂಗಡಿ ಮುಗ್ಗಟ್ಟು, ಎಲ್ಲವೂ ಬಂದ್ ಆಗಲಿವೆ. ಅನಗತ್ಯವಾಗಿ ಬೀದಿಗಿಳಿಯುವವರ ವಿರುದ್ದ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಹೇರಲಾಗಿದ್ದ ಲಾಕ್ ಡೌನ್ ತೆರವುಗೊಳಿಸಿದ್ದಾರೆ. ಆದ್ರೆ ಭಾನುವಾರದ ಲಾಕ್ ಡೌನ್ ಮುಂದುವರೆಯಲಿದೆ.

Read More »

ಅಲ್ಪ ಪ್ರಮಾಣದ ಲಕ್ಷ ಇದ್ದರೆ ಮನೆಯಲ್ಲೇ ಐಸೋಲೇಷನ್ ಮಾಡ್ಕೊಳ್ಳಿ- ಬಿಬಿಎಂಪಿ ಆಯುಕ್ತ ಮನವಿ

ಬೆಂಗಳೂರು: ಕೊರೊನಾ ವೈರಸ್‍ನ ಅಲ್ಪ ಪ್ರಮಾಣದ ಲಕ್ಷಣ ಇದ್ದರೆ ದಯವಿಟ್ಟು ಮನೆಯಲ್ಲೇ ಐಸೋಲೇಷನ್ ಮಡಿಕೊಳ್ಳಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅಯುಕ್ತರು, ಸಿಲಿಕಾನ್ ಸಿಟಿಯಲ್ಲಿ ಕೋವಿಡ್ -19 ನಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದು, ಸಂಕಷ್ಟ ತಪ್ಪಿಸಲು ಹರಸಾಹಸ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ತೀರಾ ಸಮಸ್ಯೆ ಇರುವವರಿಗೆ ಮಾತ್ರ ಬೆಡ್ ಸಿಗುತ್ತದೆ. ರೋಗ ಲಕ್ಷಗಳು, ಮೈಲ್ಡ್ ಸಿಂಪ್ಟಮ್ಸ್ ಇರುವವರು …

Read More »

ಖಾಸಗಿ ಆಸ್ಪತ್ರೆಗಳವರ ಕರಾಳ ಮುಖಗಳು ಒಂದೊಂದೇ ಬಯಲಾಗತೊಡಗಿವೆ.

ಬೆಂಗಳೂರು,ಜು.25- ಖಾಸಗಿ ಆಸ್ಪತ್ರೆಗಳವರ ಕರಾಳ ಮುಖಗಳು ಒಂದೊಂದೇ ಬಯಲಾಗತೊಡಗಿವೆ. ಕೋವಿಡ್ ಪೇಷೆಂಟ್‍ಗಳಿಗೆ ಹಾಸಿಗೆ ಕೊರತೆ ನೆಪ ಹೇಳಿ ಸುಲಿಗೆ ಮಾಡುತ್ತಿದ್ದ ಪ್ರಕರಣಗಳಿಗೆ ಸರ್ಕಾರ ಬ್ರೇಕ್ ಹಾಕುತ್ತಿದ್ದಂತೆ ನಾನ್ ಕೋವಿಡ್ ಪೇಷೆಂಟ್‍ಗಳಿಗೆ ಕೊರೋನಾ ಸೋಂಕಿನ ಭಯ ಮೂಡಿಸಿ ಸುಲಿಗೆ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಸರ್ಕಾರ ಚಾಪೆ ಕೆಳಗೆ ನುಸುಳಿದರೆ ಖಾಸಗಿ ಆಸ್ಪತ್ರೆಯವರು ರಂಗೋಲಿ ಕೆಳಗೆ ನುಸುಳಿ ತಮ್ಮ ಸುಲಿಗೆ ದಂಧೆಯನ್ನು ಮುಂದುವರೆಸಿದ್ದಾರೆ.ಕೊರೋನಾ ಸೋಂಕು ಹೆಚ್ಚಾದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲದಿದ್ದಾಗ …

Read More »

ಪ್ರಥಮ ಹಬ್ಬವಾದ ನಾಗರಪಂಚಮಿ ಮೇಲೆ ಈ ಬಾರಿ ಕೊರೊನಾ ಕರಿನೆರಳು ಆವರಿಸಿದೆ.

ಬೆಂಗಳೂರು,ಜು.25-ಹಿಂದೂಗಳ ಪವಿತ್ರ ಹಬ್ಬವಾದ ಹಾಗೂ ಶ್ರಾವಣ ಮಾಸದ ಪ್ರಥಮ ಹಬ್ಬವಾದ ನಾಗರಪಂಚಮಿ ಮೇಲೆ ಈ ಬಾರಿ ಕೊರೊನಾ ಕರಿನೆರಳು ಆವರಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅದ್ಧೂರಿಯಾಗಿ ವಿಶಿಷ್ಟವಾಗಿ ನಾಗರಪಂಚಮಿಯನ್ನು ಆಚರಿಸಲಾಗುತ್ತಿತ್ತು. ಆದರೆ ಸಾಂಕ್ರಾಮಿಕ ರೋಗ ಕೊರೊನಾ ಆವರಿಸಿರುವುದರಿಂದ ನಾಗರಪಂಚಮಿ ಆಚರಣೆ ವಿರಳವಾಗಿತ್ತು. ಜನ ಸಂಪ್ರದಾಯಿಕವಾಗಿ ಸರಳವಾಗಿ ನಾಗರಪಂಚಮಿಯನ್ನು ಆಚರಿಸಿದರು. ಕೆಲವರು ತಮ್ಮ ಮನೆಯಲ್ಲಿ ಆಚರಿಸಿದರೆ ಮತ್ತೆ ಕೆಲವರು ದೇವಸ್ಥಾನಗಳಿಗೆ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಂಡು ನಾಗದೇವರಿಗೆ ಹಾಲನ್ನೆರೆದು ಪಂಚಮಿ …

Read More »

ವಿಷಾ ಸೇವಿಸಿ ರೈತ ಆತ್ಮಹತ್ಯೆ……..

: ವಡಗೇರಾ ತಾಲೂಕಿನ ಅನಕಸೂಗೂರು ಗ್ರಾಮದ ದೇವಪ್ಪ .ತಂಆಜಪ್ಪ ದೇವದುರ್ಗ ಕ್ರೀಮಿನಾಷಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತನ ಭಾವಚಿತ್ರ ವಡಗೇರಾ : ಸಾಲ ಬಾಧೆ ತಾಳಲಾರದೆ ವಿಷ ಕ್ರಿಮಿನಾಶಕ )ಸೇವಿಸಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ತಾಲೂಕಿನ ಅನಕಸೂಗೂರು ಗ್ರಾಮದಲ್ಲಿ ನಡೆದಿದೆ ಇದೇ ಗ್ರಾಮದ ದೇವಪ್ಪ ದೇವದುರ್ಗ ವ.(50) ಎಂಬುವರೇ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಅನಕಸೂಗೂರು ಗ್ರಾಮದ ಸರ್ವೆ ನಂ 50ರಲ್ಲಿ ನಾಲ್ಕು …

Read More »

ತಪಾಸಣೆ ವೇಳೆ ಮೈಸೂರು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕೊರೊನಾ ಸೋಂಕಿತನೊಬ್ಬನ ಕಿತಾಪತಿ

ಮೈಸೂರು: ತಪಾಸಣೆ ವೇಳೆ ಮೈಸೂರು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕೊರೊನಾ ಸೋಂಕಿತನೊಬ್ಬ ಕಿತಾಪತಿ ಮಾಡಿರುವ ಘಟನೆ ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ನಡೆದಿದೆ. ಕೊರೊನಾ ತಪಾಸಣೆಗೆ ಬಂದ ವ್ಯಕ್ತಿಯೋರ್ವ ಪರೀಕ್ಷೆ ವೇಳೆ ತನ್ನ ನಂಬರ್ ಬದಲಿಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಅವರ ನಂಬರ್ ಅನ್ನು ಜಿಲ್ಲಾಡಳಿತಕ್ಕೆ ಕೊಟ್ಟು ಯಾಮಾರಿಸಿದ್ದಾನೆ. ಇದಾದ ಬಳಿಕ ಆ ವ್ಯಕ್ತಿಯ ಕೊರೊನಾ ವರದಿ ಬಂದಿದ್ದು, ಆತನಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಕೊರೊನಾ ದೃಢಪಟ್ಟ ವ್ಯಕ್ತಿ ನೀಡಿದ ನಂಬರ್ …

Read More »

ನೂರಾರು ಪಾರಿವಾಳಗಳಿಗೆ ಕಾಳು ನೀಡುವ ಕೆಲಸ:ನಿಡಸೋಸಿ ಗ್ರಾಮದಶಿವಲಿಂಗೇಶ್ವರ ಸ್ವಾಮೀಜಿ

ಚಿಕ್ಕೋಡಿ(ಬೆಳಗಾವಿ): ಮಳೆಗಾಲ ಸಂದರ್ಭದಲ್ಲಿ ಪಕ್ಷಿಗಳಿಗೆ ಆಹಾರ ಸಿಗದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿರುತ್ತೆ. ಇಂಥ ಸಂದರ್ಭದಲ್ಲಿ ನೂರಾರು ಪಾರಿವಾಳಗಳಿಗೆ ಕಾಳು ನೀಡುವ ಕೆಲಸವನ್ನ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾಡುತ್ತಿದ್ದಾರೆ. ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ಶ್ರೀಗಳು ಬಂದರೆ ಅವರ ಸುತ್ತ ನೂರಾರು ಪಾರಿವಾಳಗಳು ಜಮಾವಣೆಗೊಳ್ಳುತ್ತವೆ. ಆ ಪಾರಿವಾಳಗಳಿಗೆ ಸ್ವಾಮಿಜಿ ಜೋಳ ಹಾಗೂ ಅಕ್ಕಿ ಕಾಳುಗಳನ್ನ ಹಾಕುತ್ತಿದ್ದಾರೆ. …

Read More »

ಇದು ಮದುವೆಯ ಸಮಯ’ – ಪ್ರೇಯಸಿ ಮಿಹೀಕಾ ಬಗ್ಗೆ ರಾಣಾ ಮೆಚ್ಚುಗೆಯ ಮಾತು

ಹೈದರಾಬಾದ್: ಬಾಹುಬಲಿ ಖ್ಯಾತಿಯ ರಾಜ ಬಲ್ಲಾಳದೇವ ರಾಣಾ ದಗ್ಗುಬಾಟಿಯವರು ಮುಂದಿನ ತಿಂಗಳು ತಮ್ಮ ಪ್ರೇಯಸಿ ಮಿಹೀಕಾ ಬಜಾಜ್ ಅವರ ಜೊತೆ ಮದುವೆಯಾಗಲಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ತಾನು ಪ್ರೀತಿ ಬಲೆಯಲ್ಲಿ ಸಿಲುಕಿದ್ದೇನೆ ಎಂದು ಟ್ವೀಟ್ ಮಾಡಿದ್ದ ರಾಣಾ, ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗುವುದಾಗಿ ತಿಳಿಸಿದ್ದರು. ಅದರಂತೆ ಲಾಕ್‍ಡೌನ್ ನಡುವೆ ಆಗಸ್ಟ್ 8ರಂದು ರಾಣಾ ಮತ್ತು ಮಿಹೀಕಾ ಅವರ ಮದುವೆಯನ್ನು ಕುಟುಂಬದವರು ಫಿಕ್ಸ್ ಮಾಡಿದ್ದರು. ಆದರೆ ಈ ಕೊರೊನಾ ಆರ್ಭಟದ ನಡುವೆಯೂ …

Read More »

ಶಾಸಕ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಕೊರೊನಾ ವಾರಿಯರ್ಸ್ ಶನಿವಾರ ಸನ್ಮಾನ

ಹುಕ್ಕೇರಿ:  ತಾಲ್ಲೂಕಿನ ಬಸಾಪೂರ ಆರೋಗ್ಯ ಕೇಂದ್ರದಲ್ಲಿ  ಶಾಸಕ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಕೊರೊನಾ ವಾರಿಯರ್ಸ್ ಶನಿವಾರ ಸನ್ಮಾನ ಮಾಡಲಾಯಿತು. ಜೀವದ ಹಂಗು ತೊರೆದು ಕೊರೊನಾ ನಿಯಂತ್ರಣಕ್ಕೆ ಹಗಲಿರುಳ ಶ್ರಮ ಪಡುತ್ತಿರುವ  ಅಂಗನವಾಡಿ ಆಶಾ  ಕಾರ್ಯಕರ್ತರು, ಆರೋಗ್ಯ ಇಲಾಖೆ ಅಧಿಕಾರಿಗಳು , ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು  ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಪಾಟೀಲ ಹೇಳಿದರು. ಈ ಸಂದರ್ಭದಲ್ಲಿ ಕರಗುಪ್ಪಿ ಬಸಾಪೂರ ತಾಲ್ಲೂಕು ಪಂಚಾಯಿತಿ ಸದಸ್ಯ  ಸೋಮನಗೌಡ ಪಾಟೀಲ …

Read More »