Breaking News

Daily Archives: ಜುಲೈ 24, 2020

ಬೆಂಗಳೂರಿಗರೇ ಹುಷಾರ್, ಯಾಮಾರಿದ್ರೆ ಕೊರೋನಾ ಹೆಗಲೇರುವುದು ಗ್ಯಾರಂಟಿ..!

ಬೆಂಗಳೂರು, ಜು.24- ಪ್ರತಿ ವಾರ್ಡ್‍ಗಳಲ್ಲೂ ಕೊರೊನಾ ತನ್ನ ರೌದ್ರನರ್ತನವನ್ನು ಮುಂದುವರಿಸುತ್ತಿದೆ. ಕ್ಷಣ ಕ್ಷಣಕ್ಕೂ ಕೊರೊನಾ ಪ್ರಕರಣಗಳು ದುಪ್ಪಟ್ಟಾಗುತ್ತಿವೆ. ನಮ್ಮ ವಾರ್ಡ್‍ಗಳಲ್ಲಿ ಹೆಚ್ಚೇನೂ ಕೊರೊನಾ ಕೇಸ್‍ಗಳಿಲ್ಲ ಎಂದು ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಬೆಂಗಳೂರಿನ 198 ವಾರ್ಡ್‍ಗಳ ಪೈಕಿ 197 ವಾರ್ಡ್‍ಗಳಲ್ಲಿ ಕೊರೊನಾ ತನ್ನ ಕಬಂಧಬಾಹುವನ್ನು ಚಾಚಿದೆ. 197 ವಾರ್ಡ್‍ಗಳು ಕೂಡ ಡೇಂಜರ್ ಝೋನ್‍ನಲ್ಲಿವೆ. ಬೆಂಗಳೂರಿನ 41 ವಾರ್ಡ್‍ಗಳಲ್ಲಿ 100ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಇವೆ. 33 ವಾರ್ಡ್‍ಗಳಲ್ಲಿ 80 ರಿಂದ …

Read More »

ಬಾಬರಿ ಮಸೀದಿ ಧ್ವಂಸ ಪ್ರಕರಣ : ಅಡ್ವಾಣಿ ಹೇಳಿಕೆ ದಾಖಲು

ಲಖನೌ, ಜು.24- ಅಯೋಧ್ಯೆಯಲ್ಲಿನ ಪ್ರಾಚೀನ ಬಾಬರಿ ಮಸೀದಿ ಧ್ವಂಸ ಪ್ರಕರಣದ ಸಂಬಂಧ ಬಿಜೆಪಿ ಧುರೀಣ ಮತ್ತು ಮಾಜಿ ಉಪ ಪ್ರಧಾನಮಂತ್ರಿ ಲಾಲ್‍ಕೃಷ್ಣ ಅಡ್ವಾಣಿ ಅವರ ಹೇಳಿಕೆಗಳನ್ನು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಇಂದು ದಾಖಲಿಸಿಕೊಂಡಿದೆ. ಅಡ್ವಾಣಿ ಅವರು ವಿಡಿಯೋ ಲಿಂಕ್ ಮೂಲಕ ನೀಡಿದ ಹೇಳಿಕೆಯನ್ನು ವಿಶೇಷ ನ್ಯಾಯಮೂರ್ತಿ ಎಸ್.ಕೆ.ಯಾದವ್ ಅವರ ನೇತೃತ್ವದ ನ್ಯಾಯಾಲಯವು ದಾಖಲಿಸಿಕೊಂಡಿತ್ತು. ನಿನ್ನೆ ಬಿಜೆಪಿ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಡಾ.ಮುರಳಿ ಮನೋಹರ್ ಜೋಷಿ ವಿಡಿಯೋ …

Read More »

ರಾಜ್ಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಗಣೇಶೋತ್ಸವ ಆಚರಿಸಲು ಅವಕಾಶ ನೀಡಲಾಗುವುದು’

ಬೆಳಗಾವಿ: ‘ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಗಣೇಶೋತ್ಸವ ಆಚರಿಸಲು ಅವಕಾಶ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ನಗರದ ಗಣೇಶೋತ್ಸವ ಮಂಡಳಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿರುವುದರಿಂದ ಇದನ್ನು ತಡೆಗಟ್ಟುವ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಿದೆ. ಆದ್ದರಿಂದ ಸರ್ಕಾರದ ನಿರ್ದೇಶನದ ಮೇರೆಗೆ ಅವಕಾಶ ಕಲ್ಪಿಸಲಾಗುವುದು. ‘ಗಣೇಶೋತ್ಸವ ಮಂಡಳಿಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿ …

Read More »

ದೇವದುರ್ಗದಲ್ಲಿ ಗುಡ್ಡ ಕುಸಿತ- ಇಬ್ಬರು ಬಾಲಕರು ಸಾವು………

ರಾಯಚೂರು: ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ದೇವದುರ್ಗ ಪಟ್ಟಣದ ಗೌರಂಪೇಟೆ ಕಾಲೋನಿ ಬಳಿ ಗುಡ್ಡ ಕುಸಿದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಇನ್ನೋರ್ವ ಬಾಲಕನ ಕಾಲು ಮುರಿದಿದೆ. 13 ವರ್ಷದ ವಿರೇಶ್, 10 ವರ್ಷದ ರಮೇಶ್ ಮೃತ ಬಾಲಕರು. ಇನ್ನೋರ್ವ ಬಾಲಕ ಮೌನೇಶ್‍ಗೆ ಕಾಲು ಮುರಿದಿದ್ದು, ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.ನಿರಂತರ ಮಳೆಯಿಂದಾಗಿ ಗುಡ್ಡದ ಮಣ್ಣು ಸಡಿಲವಾಗಿದ್ದು, ಬಂಡೆ ಕೆಳೆಗೆ ಉರುಳಿದೆ. ಗುಡ್ಡದ ಪಕ್ಕದಲ್ಲೇ ಮನೆಗಳಿದ್ದು, ಬಾಲಕರು ಆಟವಾಡುತ್ತಿದ್ದ ವೇಳೆ ಬಂಡೆ …

Read More »

ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ವಾಪಸ್ ಕೊಡಿಸುವೆ: ಸೋನು ಸೂದ್

ಶಿಮ್ಲಾ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ತಾನು ಸಾಕಿದ ಹಸುವನ್ನೇ ಮಾರಿ ಆನ್‍ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಕೊಡಿಸಿದ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಸದಾ ಮಾನವೀಯತೆಯ ಮೂಲಕ ರಿಯಲ್ ಲೈಫ್‍ನಲ್ಲಿ ಹೀರೋ ಆಗಿರೋ ಬಾಲಿವುಡ್ ನಟ ಸೋನು ಸೂದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೌದು. ಹಸು ಮಾರಿದ ತಂದೆಯ ಸುದ್ದಿಗೆ ಟ್ವೀಟ್ ಮಾಡಿರುವ ಸೋನು ಸೂದ್, ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ಮಕ್ಕಳ ತಂದೆಗೆ ವಾಪಸ್ ಕೊಡಿಸುತ್ತೇನೆ. ಸದ್ಯ ನಂಗೆ ಅವರ …

Read More »

ರೋಚಕ ಸ್ಟೋರಿಗಳನ್ನೇ ವರದಿ ಮಾಡ್ತಿದ್ದ ರಿಪೋರ್ಟರ್ ಅಪಘಾತದಲ್ಲಿ ಸಾವು

ಆಲ್ಬನಿ: ಅಮೆರಿಕದ ಪ್ರಖ್ಯಾತ ಟಿವಿಯಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಭಾರತ ಮೂಲದ ಯುವತಿ ನ್ಯೂಯಾರ್ಕ್‌ನಲ್ಲಿ ಮೃತಪಟ್ಟಿದ್ದಾರೆ. ನೀನಾ ಕಪೂರ್ (26) ಮೃತ ವರದಿಗಾರ್ತಿ. ನೀನಾ ಕಪೂರ್ ಅಮೆರಿಕದ ಸಿಬಿಎಸ್ ಚಾನೆಲ್‍ನಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಬಾಡಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ನೀನಾ ಕಪೂರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೀನಾ ಕಪೂರ್ ಶೇರಿಂಗ್ ಆಧಾರದ ಮೇರೆಗೆ ಸ್ಕೂಟರ್ ಅನ್ನು ಬಾಡಿಗೆ ತೆಗೆದುಕೊಂಡಿದ್ದರು. ಬೇರೊಬ್ಬ ವ್ಯಕ್ತಿ ಸ್ಕೂಟರ್ ಓಡಿಸುತ್ತಿದ್ದನು. ಸ್ಕೂಟರ್ ಹಿಂದೆ …

Read More »

ಕೊರೊನಾ ಸಂಕಷ್ಟವೇ ಬಂಡವಾಳ- ಮಾಟಕ್ಕೆ ಪರಿಹಾರ ಮಾಡುತ್ತೇನೆಂದು ಪೂಜಾರಿ ವಂಚನೆ

ಹಾಸನ: ಕೊರೊನಾ ಸಂಕಷ್ಟವನ್ನೇ ಬಂಡವಾಳ ಮಾಡಿಕೊಂಡ ಪೂಜಾರಿಗಳ ತಂಡ, ನಿಮಗೆ ಆಗದವರು ನಿಮ್ಮ ಜಮೀನಿನಲ್ಲಿ ಹಂದಿ ತಲೆ ಹೂತಿಟ್ಟು ಮಾಟ ಮಾಡಿಸಿದ್ದಾರೆ. ತಲೆಯನ್ನು ನಾವು ಹೊರ ತೆಗೆದು ಮಾಟದಿಂದ ಮುಕ್ತಿ ಕೊಡಿಸುತ್ತೇವೆ ಎಂದು ವಂಚಿಸುತ್ತಿದೆ. ಜಿಲ್ಲೆಯ ಗಾಣಿಗರ ಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ತಂಡವನ್ನು ಗ್ರಾಮಸ್ಥರು ಪತ್ತೆಹಚ್ಚಿದ್ದಾರೆ. ದೇವರ ವಿಗ್ರಹದೊಂದಿಗೆ ಆಗಮಿಸಿದ ದಿಲೀಪ್, ತಾನೇ ತಂದಿರುವ ಹಂದಿ ತಲೆಯನ್ನು ಮೊದಲೇ ಹೂತಿಟ್ಟು, ನಂತರ ಅದೇ ಜಾಗದಲ್ಲಿ ಗುಂಡಿ ತೆಗೆಸಿ …

Read More »

ಸರಳವಾಗಿ ಸ್ವಾತಂತ್ರ್ಯೋತ್ಸವ ಅಚರಣೆಗೆ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ನವದೆಹಲಿ, ಜು.24-ದೇಶದಾದ್ಯಂತ ಕೊರೊನಾ ವೈರಸ್ ಹಾವಳಿ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಆಗಸ್ಟ್ 15ರ ಸ್ವಾತಂತ್ರೋತ್ಸವ ದಿನಾಚರಣೆ ಸಡಗರ-ಸಂಭ್ರಮಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸುತ್ತೋಲೆಗಳನ್ನು ಹೊರಡಿಸಿ ಅತ್ಯಂತ ಸರಳವಾಗಿ ಮತ್ತು ಜಾಗ್ರತೆಯಿಂದ ರಾಷ್ಟ್ರ ಹಬ್ಬ ಆಚರಿಸುವಂತೆ ತಿಳಿಸಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಸ್ವಾತಂತ್ರ ದಿನಾಚರಣೆಯಂದು ಅನುಸರಿಸಬೇಕಾದ ಕ್ರಮಗಳ ಕುರಿತು ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಅತಿ ಹೆಚ್ಚು ಜನರು ಸೇರಬಾರದು. ಅತ್ಯಂತ …

Read More »

ಬಿಗ್ ಬ್ರೇಕಿಂಗ್ : ರಾಜ್ಯದಲ್ಲಿ ಕೊರೋನಾ ಆಸ್ಫೋಟ, ಇಂದು 5007 ಮಂದಿಗೆ ಪಾಸಿಟಿವ್, 110 ಸಾವು..!

ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೋನಾ ಆಸ್ಫೋಟಗೊಂಡಿದ್ದು ಕಳೆದ 24 ಗಂಟೆಯಲ್ಲಿ ಬರೋಬ್ಬರಿ 5007 ಮಂದಿಗೆ ಪಾಸಿಟಿವ್ ಬಂದಿದ್ದು, 110 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಸಂಖ್ಯೆ 85870ಕ್ಕೆ ಏರಿಕೆಯಾಗಿದೆ. ಹಾಗೂ ಒಟ್ಟು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1724 ಏರಿಕೆಯಾಗಿದೆ.   ಇತ್ತ ರಾಜಧಾನಿ ಬೆಂಗಳೂರಲ್ಲೂ ಸಹ ಮಹಾಮಾರಿ ಅಟ್ಟಹಾಸ ಮುಂದುವರೆದಿದ್ದು ಇಂದು 2267 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಜೊತೆಗೆ 50 ಮಂದಿ …

Read More »

ಕೊರೊನಾ ಪರಿಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿಲ್ಲ.: ಡಾ.ಕೆ.ಸುಧಾಕರ್

ಬೆಂಗಳೂರು: ಕೊರೊನಾ ಪರಿಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿಲ್ಲ. ಪ್ರಮಾಣಿಕವಾಗಿ ಕೆಲಸ ಮಾಡಿದ್ದೆವೆ ಎಂದರೆ ಭಯವೇಕೆ ? ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಿ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ  ಸಚಿವ ಡಾ.ಕೆ.ಸುಧಾಕರ್ ಅವರಿಗೆ ಸವಾಲು ಹಾಕಿದ್ದಾರೆ. ನಿನ್ನೆ ಸಚಿವ ಸುಧಾಕರ್ ಅವರ ಮಾತಿಗೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ಪ್ರಸ್ತಾವನೆ, ಮಂಜೂರಾತಿ, ಅನುಮೋದನೆ, ವೆಚ್ಚ ಅಂದರೆ ಏನು ಎಂದು ಗೊತ್ತಿಲ್ಲದೇ ನಾನು 13 ಬಜೆಟ್ ಮಂಡಿಸಿದ್ದೇನಾ..? ನಾನು …

Read More »