ಕನಕಪುರ ನಗರಸಭೆಯ ಸಭಾಂಗಣದಲ್ಲಿ ನಡೆದ ತಾಲ್ಲೂಕು ಕೆಡಿಪಿ ಸಭೆಯಲ್ಲಿ ಪಾಲ್ಗೊಂಡೆನು. ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವಷ್ಟು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಪ್ರಮುಖವಾಗಿ 1) ಕನಕಪುರ ತಾಲ್ಲೂಕಿನಲ್ಲಿ ಇಲ್ಲಿಯವರೆಗೂ Covid19 ನಿಯಂತ್ರಣಕ್ಕೆ ತಗೆದುಕೊಂಡ ಕ್ರಮಗಳು ಮತ್ತು ಮುಂದೆ ತಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ 2) ಕೊರೋನಾ ಹೊಡೆತದಿಂದ ಬಹಳಷ್ಟು ತೊಂದರೆಗೀಡಾದ ಅಸಂಘಟಿತ ಕಾರ್ಮಿಕ ವರ್ಗ, ವಲಸೆ ಕಾರ್ಮಿಕರು, ಆಟೋ/ಕ್ಯಾಬ್ ಚಾಲಕರು, ನೇಕಾರರಿಗೆ ವಿತರಣೆ ಮಾಡಿರುವ ಮತ್ತು ಭಾಕಿ …
Read More »Daily Archives: ಜುಲೈ 23, 2020
ಸರಿಯಾದ ಸಮಯಕ್ಕೆ ಊಟ, ನಿದ್ರೆ, ಬಿಸಿ ನೀರು ಸೇವನೆ ಸೇರಿದಂತೆ ಉತ್ತಮ ದಿನಚರಿ ಅಳವಡಿಸಿಕೊಂಡರೆ ಕರೊನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಮತ್ತು ಸೋಂಕಿತರು ಬೇಗ ಗುಣ ಹೊಂದಬಹುದು..
ಹುಬ್ಬಳ್ಳಿ: ಸರಿಯಾದ ಸಮಯಕ್ಕೆ ಊಟ, ನಿದ್ರೆ, ಬಿಸಿ ನೀರು ಸೇವನೆ ಸೇರಿದಂತೆ ಉತ್ತಮ ದಿನಚರಿ ಅಳವಡಿಸಿಕೊಂಡರೆ ಕರೊನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಮತ್ತು ಸೋಂಕಿತರು ಬೇಗ ಗುಣ ಹೊಂದಬಹುದು.. ಇದು ಕರೊನಾ ಗೆದ್ದು ಬಂದ ಇಲ್ಲಿನ ಘಂಟಿಕೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಾಂತೇಶ ಹೊಳಿ ಅವರ ಅನುಭವದ ಮಾತು. ಜು. 15ರಂದು ಸೋಂಕು ಪತ್ತೆಯಾಗಿ ಧಾರವಾಡದ ಬಿ.ಡಿ. ಜತ್ತಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬುಧವಾರ ಬಿಡುಗಡೆಯಾಗಿದ್ದಾರೆ. 24 ಗಂಟೆ ಕರೊನಾ …
Read More »ಜಿಲ್ಲೆಯಲ್ಲಿ ಹೊಸದಾಗಿ 219 ಜನರಿಗೆ ಬುಧವಾರ ಕೋವಿಡ್ 19 ದೃಢಪಟ್ಟಿದ್ದು, ಇದುವರೆಗೆ ಸೋಂಕಿತರಾದವರ ಸಂಖ್ಯೆ 1,315ಕ್ಕೆ ತಲುಪಿದೆ.
ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 219 ಜನರಿಗೆ ಬುಧವಾರ ಕೋವಿಡ್ 19 ದೃಢಪಟ್ಟಿದ್ದು, ಇದುವರೆಗೆ ಸೋಂಕಿತರಾದವರ ಸಂಖ್ಯೆ 1,315ಕ್ಕೆ ತಲುಪಿದೆ. ಆಸ್ಪತ್ರೆ, ಅಗ್ನಿ ಶಾಮಕದಳ, ಲೋಕೋಪಯೋಗಿ ಇಲಾಖೆ ಹಾಗೂ ಅಬಕಾರಿ ಇಲಾಖೆಯ ಸಿಬ್ಬಂದಿಯೂ ಇದರಲ್ಲಿ ಸೇರಿದ್ದಾರೆ. ಸಾಂಬ್ರಾದಲ್ಲಿರುವ ಏರ್‌ಮನ್ ತರಬೇತಿ ಶಾಲೆಯ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದೆ. ಈ ದಿನ ಯಾರೊಬ್ಬರೂ ಗುಣಮುಖರಾಗಿ ಬಿಡುಗಡೆಯಾಗಿಲ್ಲ. ಅಲ್ಲದೇ, ಯಾವುದೇ ಸಾವು ಸಂಭವಿಸಿಲ್ಲ. 830 ಪ್ರಕರಣಗಳು ಸಕ್ರಿಯವಾಗಿದ್ದು, ಇವುಗಳಲ್ಲಿ 9 ಜನರಿಗೆ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. …
Read More »ರಕ್ಷಣೆಗೆ ಆಗ್ರಹಿಸಿ ಬಿಮ್ಸ್ ಸಿಬ್ಬಂದಿ ಪ್ರತಿಭಟನೆ
ಬೆಳಗಾವಿ: ಇಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಗುಂಪೊಂದು ಕಲ್ಲುತೂರಾಟ ನಡೆಸಿದ್ದನ್ನು ಖಂಡಿಸಿ ಮತ್ತು ತಮಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ವೈದ್ಯಕೀಯ ಸಿಬ್ಬಂದಿ ಗುರುವಾರ ಪ್ರತಿಭಟಿಸಿದರು. ಬೆಳಿಗ್ಗೆಯೇ ಬಿಮ್ಸ್ ಕಾಲೇಜಿನ ಆವರಣದಲ್ಲಿ ಜಮಾಯಿಸಿದ ಅವರು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಯಾವುದಾದರೂ ವ್ಯಕ್ತಿಗೆ ಕೊರೊನಾ ಬಂದಿದೆ ಎಂದಾಕ್ಷಣ ಜನರು ದೂರ ಹೋಗುತ್ತಿರುವ ಸಂದರ್ಭವಿದು. ಆದರೆ, ವೈದ್ಯರು ಹಾಗೂ ವೈದ್ಯಕೀಯ …
Read More »ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿ ಸ್ಥಳಾಂತರಿಸಿ: ಭಾರತೀಯ ಕೃಷಿಕ ಸಮಾಜ
ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆ ನೇತೃತ್ವದಲ್ಲಿ ರೈತರು ಮತ್ತು ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ವ್ಯಾಪಕ ಪ್ರತಿರೋಧ ನಡೆಯೂ ರಾಜ್ಯ ಸರ್ಕಾರವು ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುತ್ತಿರುವುದು ರೈತರ ಮರಣ ಶಾಸನ ಬರೆದಂತಾಗಿದೆ. ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು. ಕೊರೊನಾ ವೈರಸ್ …
Read More »ಸಿದ್ದಿ ಜನಾಂಗಕ್ಕೆ ಒಲಿದು ಬಂತು ಎಂಎಲ್‍ಸಿ ಪಟ್ಟ…………
ಕಾರವಾರ: ವಿಧಾನ ಪರಿಷತ್ ಸದಸ್ಯರಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬುಡಕಟ್ಟು ಜನಾಂಗದ ಶಾಂತಾರಾಮ ಬುದ್ನಾ ಸಿದ್ಧಿ ಆಯ್ಕೆಯಾಗುವ ಮೂಲಕ ಇಡೀ ರಾಜ್ಯದ ಜನರೇ ಆಶ್ಚರ್ಯ ಪಡುವಂತಾಗಿದೆ. ಇವರ ಕುರಿತು ಅಧಿಕೃತ ಪ್ರಕಟಣೆಯನ್ನು ರಾಜ್ಯಪಾಲರಾದ ವಜುಬಾಯಿ ವಾಲಾ ಹೊರಡಿಸಿದ್ದಾರೆ. ಅಷ್ಟಕ್ಕೂ ಇವರು ಯಾರು? ಏನು ಸಾಧನೆ ಎಂದು ತಿಳಿದರೆ ಇವರ ಮೇಲೆ ಗೌರವ ಹೆಚ್ಚಾಗಲಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದಲ್ಲಿ ಶಾಂತರಾಮ್ ಸಿದ್ದಿ ಅವರ ಹೆಸರು ದೊಡ್ಡದು. 55 …
Read More »ಐಪಿಎಲ್ 2020ರ ಆವೃತ್ತಿಗೆ ಮನೆಯಿಂದಲೇ ಕಾಮೆಂಟರಿ!
ಮುಂಬೈ: ಕೊರೊನಾ ವೈರಸ್ ಕಾರಣದಿಂದ ಕ್ರಿಕೆಟ್‍ನಲ್ಲಿ ಸಾಕಷ್ಟು ಬದಲಾವಣೆಗಳಿಗೆ ಅವಕಾಶ ನೀಡಲಾಗುತ್ತಿದೆ. ಕ್ರೀಡಾಂಗಣದಲ್ಲಿ ಆಟಗಾರರು ಚೆಂಡಿಗೆ ಎಂಜಲು ಉಜ್ಜುವುದನ್ನು ಐಸಿಸಿ ನಿಷೇಧ ಮಾಡಿತ್ತು. ಅಲ್ಲದೇ ಆಟಗಾರರು ಹ್ಯಾಂಡ್ ಶೇಕ್ ಮಾಡುವುದರಿಂದಲೂ ದೂರ ಉಳಿದಿದ್ದರು. ಸದ್ಯ ಐಪಿಎಲ್ ಟೂರ್ನಿಗೆ ಮನೆಯಿಂದಲೇ ಕಾಮೆಂಟರಿ ನೀಡುವ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಚಿಂತನೆ ನಡೆಸಿದೆ. ದುಬೈನಲ್ಲಿ ಸೆ.26ರಿಂದ ನ.08ರ ಅವಧಿಯಲ್ಲಿ ಐಪಿಎಲ್ ನಡೆಯುವ ಸೂಚನೆಗಳು ಲಭಿಸುತ್ತಿವೆ. 44 ದಿನಗಳ ಅವಧಿಯಲ್ಲಿ 60 ಪಂದ್ಯ ಆಯೋಜಿಸಲು ಸಿದ್ಧತೆ …
Read More »ಕೊಪ್ಪಳದಲ್ಲಿ ನಾಪತ್ತೆಯಾಗಿದ್ದ ಬಾಲಕ ಹಳ್ಳದಲ್ಲಿ ಶವವಾಗಿ ಪತ್ತೆ ; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ಕೊಪ್ಪಳ(ಜುಲೈ.23): ಕಾಣೆಯಾಗಿದ್ದ ಬಾಲಕನೊಬ್ಬ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ದುರಂತ ಘಟನೆ ನಡೆದಿದ್ದು ಕೊಪ್ಪಳದ ತಾಲೂಕಿನ ಹಲಗೇರಿ ಹಳ್ಳದಲ್ಲಿ. ಆಡಿ ಬೆಳೆಯುವ ವಯಸ್ಸಿನ 4ನೇ ತರಗತಿಯಲ್ಲಿ ಓದುತ್ತಿದ್ದ ಆ ಬಾಲಕ ಮಂಜುನಾಥ ಬುರ್ಲಿ ಬದುಕಿನ ಬಗ್ಗೆ, ಹೆತ್ತವರು ಅಗಾಧ ಕನಸು ಕಂಡಿದ್ದರು. ಕೆಲ ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಈ ಬಾಲಕ ಬುಧವಾರ ಶವವಾಗಿ ಪತ್ತೆಯಾಗಿದ್ದಾನೆ. ಮಗನ ಶವವನ್ನು ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕವಯಸ್ಸಿನ ಮಗನನ್ನು ಕಳೆದುಕೊಂಡ ತಾಯಿಯ ಸಂಕಟ …
Read More »ಗದಗ್ನಲ್ಲಿ ಮೂಲಭೂತ ಸೌಕರ್ಯವಿಲ್ಲದೇ ಪರದಾಡುತ್ತಿರುವ ಸ್ಥಳೀಯರು: ಕ್ಯಾರೇ ಎನ್ನದ ಜನಪ್ರತಿನಿಧಿಗಳು
ಗದಗ(ಜು.23): ಗದಗ ಜಿಲ್ಲೆ ನರಗುಂದ ತಾಲೂಕಿನ ಮೂಗನೂರು ಎನ್ನುವ ಗ್ರಾಮದಲ್ಲಿ ಸಾಕಷ್ಟು ವರ್ಷಗಳ ನಂತರ ಸುಮಾರು ನಲವತ್ತು ಕುಟುಂಬಗಳಿಗೆ ಇಂದಿರಾ ಆವಾಸ್ ಯೋಜನೆಯಡಿ ಅರ್ಹ ಫಲಾನುಭವಿಗಳ ಅನ್ವಯ ಆಶ್ರಯ ಮನೆ ದೊರೆತಿವೆ. ಮೂಲಭೂತ ಸೌಕರ್ಯಗಳ ಸಮೇತ ಆಶ್ರಯ ಕಾಲೋನಿ ನಿರ್ಮಿತವಾಗಬೇಕಾಗಿತ್ತು. 1995ರಲ್ಲಿಯೇ ಜನತಾ ಮನೆಗಳು ನಿರ್ಮಾಣವಾಗಿವೆ. ಆದರೆ ಅಂದಿನಿಂದ ಈವರೆಗೂ ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲಿನ ನಿವಾಸಿಗಳಿಗೆ ಸಿಕ್ಕಿಲ್ಲ. ಮಳೆಗಾಲ ಬಂತೆಂದರೆ ಸಾಕು ಇಲ್ಲಿನ ರಸ್ತೆಗಳೆಲ್ಲ ಕೆಸರುಗದ್ದೆಗಳಾಗಿ ಮಾರ್ಪಾಡಾಗುತ್ತವೆ. ಇಂತಹ …
Read More »ಬೈಕ್ ಡಿಕ್ಕಿ – ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಸಾವು
ಕೋಲಾರ: ಎರಡು ಬೈಕ್‍ಗಳ ನಡುವೆ ನಡೆದ ಅಪಘಾತದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಶ್ರೀನಿವಾಸಪುರ ಪೊಲೀಸ್ ಠಾಣೆಯ ಎಎಸ್‍ಐ ಮಂಜುನಾಥ್ (52) ಮೃತಪಟ್ಟವರು. ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಶಿವಪುರ ಗ್ರಾಮದ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಕರ್ತವ್ಯಕ್ಕೆ ತೆರಳುವ ವೇಳೆ ಎದುರಿಗೆ ಬಂದ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಎಎಸ್‍ಐ ಸಾವನ್ನಪ್ಪಿದ್ದಾರೆ.ಬುಧವಾರ ರಾತ್ರಿ ಕೋಲಾರದಿಂದ ಶ್ರೀನಿವಾಸಪುರಕ್ಕೆ ಕರ್ತವ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಈ ಘಟನೆ …
Read More »