ಮುಂಬೈ: ಉತ್ತರ ಪ್ರದೇಶ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್ ಸ್ಟೋರಿಯನ್ನು ವೆಬ್ ಸಿರೀಸ್ ಮಾಡಲು ಬಾಲಿವುಡ್ ನಿರ್ಮಾಪಕರೊಬ್ಬರು ಮುಂದಾಗಿದ್ದು, ಟೈಟಲ್ ಕೂಡ ಫಿಕ್ಸ್ ಮಾಡಲಾಗಿದೆ. ಬೀದಿ ರೌಡಿಯಾಗಿ ಜೀವನ ಆರಂಭಿಸಿದ್ದ ದುಬೆ ರಾಜಕೀಯ ನಾಯಕರ ಬೆಂಬಲದೊಂದಿಗೆ ಗ್ಯಾಂಗ್‍ಸ್ಟರ್ ಆಗಿ ಬೆಳೆದಿದ್ದು ಹೇಗೆ ಎಂಬ ಬಗ್ಗೆ ವೆಬ್ ಸಿರೀಸ್ ಮಾಡಲು ನಿರ್ಮಾಪಕ ಮನೀಶ್ ವಾತ್ಸಲ್ಯ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಕ್ರೈಂ ಆಧರಿಸಿ ಹಲವು ವೆಬ್ ಸಿರೀಸ್‍ಗಳು ನಿರ್ಮಾಣ ಮಾಡಿ ಯಶಸ್ಸು ಪಡೆದಿದ್ದಾರೆ. …
Read More »Daily Archives: ಜುಲೈ 18, 2020
ಆಗಸ್ಟ್ ಮೂರು ಅಥವಾ ನಾಲ್ಕನೇ ತಾರೀಖಿನಂದು ರಾಮಮಂದಿರದ ಶಿಲಾನ್ಯಾಸ ನೆರವೇರುವ ಸಾಧ್ಯತೆ
ಉಡುಪಿ: ಆಗಸ್ಟ್ ಮೂರು ಅಥವಾ ನಾಲ್ಕನೇ ತಾರೀಖಿನಂದು ರಾಮಮಂದಿರದ ಶಿಲಾನ್ಯಾಸ ನೆರವೇರುವ ಸಾಧ್ಯತೆಗಳಿವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್ ಮೂಲಕ ಟ್ರಸ್ಟಿಗಳು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದರು. ಇವತ್ತು ನಡೆದ ಸಭೆಯಲ್ಲಿ ಮಂದಿರ ನಿರ್ಮಾಣ ಕ್ಕೆ ಭೂಮಿಯ ಧಾರಣಾ ಸಾಮರ್ಥ್ಯ ಅಧ್ಯಯನ ಮತ್ತು ಮಂದಿರ ನಿರ್ಮಾಣ ಮೊತ್ತದ ಕ್ರೋಢೀಕರಣದ ಬಗ್ಗೆ ಚರ್ಚೆಯಾಗಿದೆ. ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳಿಗೆ ಪೇಜಾವರ …
Read More »ರಾಜ್ಯದಲ್ಲಿ ವೆಂಟಿಲೇಟರ್ ಖರೀದಿ ಹಗರಣ ಆರೋಪ- ‘ಉತ್ತರ ಕೊಡಿ ಬಿಜೆಪಿ’ ಎಂದ ಡಿಕೆಶಿ
ಬೆಂಗಳೂರು: ಕೊರೊನಾ ಚಿಕಿತ್ಸಾ ಉಪಕರಣ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಲೆಕ್ಕಕೊಡಿ ಅಭಿಯಾನ ಆರಂಭಿಸಿದ್ದರು. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಉತ್ತರ ಕೊಡಿ ಬಿಜೆಪಿ’ ಅಂತಾ ಸಮರ ಸಾರಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ವೆಂಟಿಲೇಟರ್ ಹಗರಣದ ಆರೋಪ ಮಾಡಿದ್ದಾರೆ. ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂಪಾಯಿಗೆ ಖರೀದಿಸಿದ ವೆಂಟಿಲೇಟರ್ ಗೆ ಕರ್ನಾಟಕ ಸರ್ಕಾರ 18.20 ಲಕ್ಷ ರೂಪಾಯಿ …
Read More »ಬೆಂಗಳೂರಲ್ಲಿ ಲಾಕ್‍ಡೌನ್ ಮುಂದುವರಿಯುತ್ತಾ?- ಸಚಿವರಲ್ಲಿ ಗೊಂದಲವೋ, ಗೊಂದಲ
ಬೆಂಗಳೂರು: ಲಂಗು ಲಗಾಮಿಲ್ಲದೇ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕೊರೊನಾ ಮಾರಿ ಬೆಂಗಳೂರಲ್ಲಿ ಕಂಟ್ರೋಲ್ ಸಿಗುತ್ತಿಲ್ಲ. ಒಂದು ವಾರ ಸಾವಿರ ರೇಂಜ್‍ನಲ್ಲಿದ್ದ ಸೋಂಕು ಈಗ 2 ಸಾವಿರ ರೇಂಜ್‍ಗೆ ಬಂದಿದೆ. ಕಳೆದ ಮೂರು ದಿನಗಳಿಂದ 2 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗ್ತಿವೆ. ಇದನ್ನರಿತ ಸರ್ಕಾರ ಒಂದು ವಾರ ಬೆಂಗಳೂರಿಗೆ ಬೀಗ ಜಡಿದಿದೆ. ಅದರಲ್ಲಿ ಈಗ 3 ದಿನ ಕಳೆದು ಹೋಗಿದೆ. ಉಳಿದಿರೋದು ಇನ್ನೂ ನಾಲ್ಕು ದಿನ ಮಾತ್ರ. ಅಷ್ಟರಲ್ಲಿ ಕೊರೊನಾ ಕಂಟ್ರೋಲ್‍ಗೆ ಸಿಗುತ್ತಾ? …
Read More »ಉಸಿರಾಟದ ತೊಂದರೆಯಿಂದ ನಡುರಸ್ತೆಯಲ್ಲೇ ನರಳಾಡಿದ ಕೊರೊನಾ ಶಂಕಿತ
ಗದಗ: ಕೊರೊನಾ ಶಂಕಿತ ವ್ಯಕ್ತಿಯೋರ್ವ ನಡುರಸ್ತೆಯಲ್ಲಿ ಬಿದ್ದು ನರಳಾಡುತ್ತಿರುವ ದೃಶ್ಯ ಗದಗ ನಗರದ ಬೆಟಗೇರಿ ಭಾಗದಲ್ಲಿ ಕಂಡು ಬಂದಿದೆ. ನಡುರಸ್ತೆಯಲ್ಲಿ ನರಳಾಡಿದ ವ್ಯಕ್ತಿ ನಗರದ ಕುರಹಟ್ಟಿಪೆಟೆ ನಿವಾಸಿ ಎನ್ನಲಾಗಿದೆ. ಗಂಟಲು ನೋವು, ಹೊಟ್ಟೆ ಉರಿ, ಎದೆ ಉರಿ ಎಂದು ಎದೆ ಬಡಿದುಕೊಂಡು ನರಳಾಡುತ್ತಿದ್ದರೂ ಯಾರು ಮುಟ್ಟಿಲ್ಲ. ಕೂಡಲೇ 108 ವಾಹನಕ್ಕೆ ಫೋನ್ ಮಾಡಿದರೂ ವಾಹನ ಬರಲಿಲ್ಲ. ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ಸ್ಥಳೀಯರು ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. …
Read More »ಮೂಡಲಗಿ ತಾಲೂಕಿನಲ್ಲಿ ಮೊದಲ ಬಲಿ ಪಡೆದ ಕೊರೋನಾ
ಮೂಡಲಗಿ : ನಿನ್ನೆ ತಾನೇ ಮೂಡಲಗಿಗೆ ಪ್ರವೇಶಿಸಿದ ಕೊರೋನಾ ಇಂದು ಮೊದಲ ಬಲಿ ಪಡೆದು ಮೂಡಲಗಿ ಜನತೆಗೆ ಆತಂಕ ಹೆಚ್ಚಿಸುವಂತೆ ಮಾಡಿದೆ. ಹೌದು ನಿನ್ನೆ ತಾನೆ ಮೊದಲಿಗೆ ಪಟ್ಟಣದ ತಳವಾರ ಓಣಿಯಲ್ಲಿ 38 ವರ್ಷದ ಮಹಿಳೆಗೆ ಕೊರೋನಾ ದೃಢವಾಗಿತ್ತು. ಇಂದು ಆ ಮಹಿಳೆ ಮೃತಪಟ್ಟಿದ್ದು, ಮೂಡಲಗಿಯ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಡಿ ಜಿ ಮಹಾತ್, ಪೊಲೀಸ್ ಇಲಾಖೆಯ ಸಿಪಿಐ ವೆಂಕಟೇಶ್ ಮುರನಾಳ, ಪಿಎಸ್ಐ …
Read More »ಕಂಟೈನ್ಮೆಂಟ್ ಪ್ರದೇಶದಲ್ಲೇ ವೈನ್‍ಶಾಪ್ ಓಪನ್- ಪಾನಮತ್ತರಿಂದ ಬೇಸತ್ತ ಸ್ಥಳೀಯರು
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕಂಟೈನ್ಮೆಂಟ್ ಪ್ರದೇಶದಲ್ಲಿ ಎಲ್ಲವೂ ಬಂದ್ ಇದ್ದು, ವೈನ್‍ಶಾಪ್ ಮಾತ್ರ ಓಪನ್ ಮಾಡಲಾಗಿದೆ. ಗ್ರಾಮದಲ್ಲಿ ಪಾಸಿಟಿವ್ ಕೇಸ್ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಅನೇಕ ಏರಿಯಾಗಳನ್ನಿ ಸೀಲ್ ಡೌನ್ ಮಾಡಲಾಗಿದೆ. ಕಂಟೈನ್ಮೆಂಟ್ ಪ್ರದೇಶದಲ್ಲಿರುವ ಎಲ್ಲಾ ಅಂಗಡಿ ಮುಗ್ಗಟ್ಟುಗಳು, ಜನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಆದರೆ ಕಂಟೈನ್ಮೆಂಟ್ ಪ್ರದೇಶದಲ್ಲಿ ಪ್ರಭಾವಿಯೊಬ್ಬರ ವೈನ್‍ಶಾಪ್ ಮಾತ್ರ ಓಪನ್ ಮಾಡಿದ್ದಾರೆ. ಪಾನಮತ್ತರ ಹಾವಳಿಯಿಂದ ಸ್ಥಳೀಯರು ಬೆಸತ್ತಿದ್ದಾರೆ. …
Read More »ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಮಗುವಿನ ತಂದೆ ಮುಖ್ಯಮಂತ್ರಿ ಮನೆಯ ಮುಂದೆ ಪ್ರತಿಭಟನೆ
ಬೆಂಗಳೂರು: ಕೊರೊನಾ ನಡುವೆ ಸುಮಾರು 10 ಆಸ್ಪತ್ರೆಯನ್ನು ಸುತ್ತಿದರೂ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಮಗುವಿನ ತಂದೆ ಮುಖ್ಯಮಂತ್ರಿ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದರು. ಇದೀಗ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಬೆಂಗಳೂರಿನ ಧವಳಗಿರಿ ನಿವಾಸದ ಮುಂದೆ ಮಗುವಿನ ತಂದೆ ಧರಣಿ ಕುಳಿತು ಪ್ರತಿಭಟನೆ ಮಾಡುತ್ತಿದ್ದರು. ತನಗಾದ ಅನ್ಯಾಯ ಬೇರೆಯವರಿಗೆ ಆಗದಿರಲಿ ಎಂದು ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದರು. ಜುಲೈ 11 ರಂದು …
Read More »ಪಟ್ಟಣದ ಲಕ್ಷ್ಮಿ ನಗರದಲ್ಲಿ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೊರೊನಾ ಸೋಂಕು ತಗಲಿದ್ದು, ಆ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 2 ಕ್ಕೆ ಏರಿಕೆಯಾಗಿದೆ.
ಮೂಡಲಗಿ: ಪಟ್ಟಣದ ಲಕ್ಷ್ಮಿ ನಗರದಲ್ಲಿ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೊರೊನಾ ಸೋಂಕು ತಗಲಿದ್ದು, ಆ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 2 ಕ್ಕೆ ಏರಿಕೆಯಾಗಿದೆ. ಲಕ್ಷ್ಮಿ ನಗರ ನಿವಾಸಿಯಾಗಿದ್ದ ಅಂಗನವಾಡಿ ಕಾರ್ಯಕರ್ತೆಗೆ ಸೋಂಕು ಅಂಟಿದ್ದು, ಆರೋಗ್ಯ ಇಲಾಖೆಯ ಈ ಬಗ್ಗೆ ಇಂದು ಸಂಜೆ ಅಧಿಕೃತ ಪ್ರಕಟಣೆ ನೀಡಬೇಕಿದೆ. ಸೋಂಕಿತೆ ವಾಸವಿದ್ದ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು, ಪುರಸಭೆ ಅಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ಪರಿಶ್ರಮಪಟ್ಟು ಕೊರೊನಾ ಸೋಂಕು …
Read More »ಕರದಂಟು ನಾಡಿನಲ್ಲಿ ಕೊರೋನಾದ ಕಹಿ
ಕರದಂಟು ನಾಡು ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಇವತ್ತು ಒಂದೆ ದಿನ 41 ಕೊರಾನಾ ಪ್ರಕರಣಗಳು ದೃಡಪಟ್ಟಿದ್ದು ಕರದಂಟು ನಾಡಿಗೆ ಕೊರಾನಾ ಕಹಿ ನೀಡಿ ತನ್ನ ಅಟ್ಟಹಾಸ ಮೆರೆದಿದೆ ಇಂದು ಒಂದೇ ದಿನ ನಲವತ್ತು ಒಂದು ಸೋಂಕಿತರು ದೃಢಪಟ್ಟಿದ್ದಾರೆ. ನಾಲ್ವರು ವೈದ್ಯರಿಗೆ ಪಾಸಿಟಿವ್ ಕಂಡು ಬಂದಿದ್ದು, ಗೋಕಾಕ ಪಟ್ಟಣ -18, ತವಗ-9 ಕುಲಗೋಡ-1, ಬೇಡಕಿಹಾಳ-8, ಬೆಟಗೇರಿ- 1, ಮೂಡಲಗಿ- 1ತುಕ್ಕಾನಟ್ಟಿ- 1, ದೊಡವಾಡ 2 ಪ್ರಕರಣಗಳು ಪ್ರಕರಣಗಳು ದಾಖಲಾಗಿವೆ …
Read More »