Breaking News

Monthly Archives: ಜೂನ್ 2020

ಕೆಲಸಕ್ಕೆ ಹಾಜರಾಗದ ಹಾಪ್‍ಕಾಮ್ಸ್ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಿಎಂ ಸೂಚನೆ

ಬೆಂಗಳೂರು, ಜೂ.02- ಕೋವಿಡ್ ಹಿನ್ನೆಲೆಯಲ್ಲಿ ಕಳೆದ 3 ತಿಂಗಳಿನಿಂದ ಕೆಲಸಕ್ಕೆ ಹಾಜರಾಗದ 150 ಜನ ಹಾಪ್‍ಕಾಮ್ಸ್ ನೌಕರರ ವಿರುದ್ಧ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದ 550 ಹಾಪ್‍ಕಾಮ್ಸ್ ಮಳಿಗೆಗಳ ಪೈಕಿ ಕೇವಲ 250 ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು . ಮಳಿಗೆ ತೆರೆಯದೇ ಇರುವವರ ವಿರುದ್ಧ …

Read More »

ಔಷಧಿ ಪೂರೈಕೆ ಬಿಲ್ ಬಿಡುಗಡೆಗೂ ಕಮಿಷನ್..!

ಬೆಂಗಳೂರು, ಜೂ.2- ಲಾಕ್‍ಡೌನ್‍ನಿಂದ ಔಷಧ ಪೂರೈಕೆ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನ ಕರ್ನಾಟಕ ಸ್ಟೇಟ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಗೆ ಹತ್ತಾರು ಕೋಟಿ ಮಲ್ಯದ ಔಷಧ ಪೂರೈಸಲಾಗಿದ್ದರೂ ಬಿಲ್ ಕ್ಲಿಯರ್ ಆಗುತ್ತಿಲ್ಲ. ಇದೀಗ ಬರೀ ಕೋವಿಡ್‍ಗೆ ಸಂಬಂಧಪಟ್ಟ ಔಷಧಿಗಳಿಗೆ ಮಾತ್ರ ಪೇಮೆಂಟ್ ಆಗುತ್ತಿದ್ದು, ಸೋಂಕಿನ ನೆಪವೊಡ್ಡಿ ಬಾಕಿ ಬಿಲ್‍ಗಳನ್ನು ಚುಕ್ತಾ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಔಷಧ ಪೂರೈಸಿದ್ದ ಸರಬರಾಜುದಾರರಿಗೆ …

Read More »

ಜಾರಕಿಹೊಳಿ, ಗೋಪಾಲಯ್ಯ, ಕುಮಟಳ್ಳಿಗೆ ಸರ್ಕಾರದಿಂದ ಸಿಹಿಸುದ್ದಿ………..

ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಗೋಪಾಲಯ್ಯ ಮತ್ತು ಶಾಸಕ ಮಹೇಶ್ ಕುಮಟಳ್ಳಿಯಯವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಬೆಳಗಾವಿ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ನೀಡಲಾಗಿದೆ. ಮಹೇಶ್ ಕುಮಟಳ್ಳಿಗೆ ಕರ್ನಾಟಕ ಕೊಳಗೆರೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.   https://youtu.be/OYEMtBeW6b0 ಶಾಸಕ …

Read More »

ನಮಗೆ ಚಪ್ಪಾಳೆ ಬೇಡ ಸೌಲಭ್ಯ ನೀಡಿ ಎಂದು ಕೊರೊನಾ ವಾರಿಯರ್ಸ್‍………………

ಬೆಂಗಳೂರು: ನಮಗೆ ಚಪ್ಪಾಳೆ ಬೇಡ ಸೌಲಭ್ಯ ನೀಡಿ ಎಂದು ಕೊರೊನಾ ವಾರಿಯರ್ಸ್‍ಗಳು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ಸಿದ್ಧವಾಗಿದ್ದಾರೆ. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಜೂನ್ ನಾಲ್ಕರಂದು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ಕರೆ ನೀಡಲಾಗಿದೆ. ಈ ಮೂಲಕ ಕೊರೊನಾ ಸಮಯದಲ್ಲೇ ಕರ್ನಾಟಕಕ್ಕೆ ಮಹಾ ಶಾಕ್ ಕಾದಿದೆ. ಕೊರೊನಾ ಸಮಯದಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ …

Read More »

ಕರ್ನಾಟಕ ಕರಾವಳಿಯಲ್ಲಿ 60 ರಿಂದ 70 ಕಿಲೋಮೀಟರ್ ವೇಗದಲ್ಲಿ ಈ ಚಂಡಮಾರುತ ಬೀಸಲಿದೆ……….

ಉಡುಪಿ: ಕರ್ನಾಟಕಕ್ಕೆ ಮಾನ್ಸೂನ್ ಅಪ್ಪಳಿಸುವ ಮೊದಲೇ ‘ನಿಸರ್ಗ’ ಚಂಡಮಾರುತ ಅಬ್ಬರಿಸಲು ಸಿದ್ಧವಾಗಿದೆ. ಏಳು ವರ್ಷದ ಬಳಿಕ ಅರಬ್ಬಿ ಸಮುದ್ರದಲ್ಲಿ ಒಂದು ಶಕ್ತಿಶಾಲಿ ಚಂಡಮಾರುತ ಬೀಸಲಿದೆ. ಅರಬ್ಬಿ ಕಡಲ ತೀರದಲ್ಲಿ ಹುಟ್ಟುವ ಈ ಚಂಡಮಾರುತ ಸಮುದ್ರದ ತೀರದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಮಳೆ ತರಲಿದೆ. ಕರ್ನಾಟಕ ಕರಾವಳಿಯಲ್ಲಿ 60 ರಿಂದ 70 ಕಿಲೋಮೀಟರ್ ವೇಗದಲ್ಲಿ ಈ ಚಂಡಮಾರುತ ಬೀಸಲಿದೆ. ದಕ್ಷಿಣ ಮತ್ತು ಉತ್ತರ ಭಾರತಕ್ಕೆ ಇದು ಸಂಚಾರ ಮಾಡಲಿದೆ ಎಂದು ಹವಾಮಾನ ಇಲಾಖೆ …

Read More »

ಜೂ. 19 ಕ್ಕೆ ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಒಟ್ಟು 18 ರಾಜ್ಯಸಭಾ   ಸ್ಥಾನಗಳಿಗೆ ಚುನಾವಣೆ

ಬೆಂಗಳೂರು: ಇದೇ ಜೂ. 19 ಕ್ಕೆ ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಒಟ್ಟು 18 ರಾಜ್ಯಸಭಾ   ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ರಾಜಕೀಯ ಚಟುವಟಿಗೆಗಳು ತೀವ್ರತೆ ಪಡೆದುಕೊಂಡಿವೆ.  ಮುಖ್ಯವಾಗಿ ಪ್ರಭಾಕರ್ ಕೋರೆ, ರಮೇಶ್ ಕತ್ತಿ, ತೇಜಸ್ವಿನಿ ಅನಂತಕುಮಾರ್, ರಾಜ್ಯ ಬಿಜೆಪಿ ಉಸ್ತುವಾರಿ ಪಿ ಮುರುಳೀಧರ ರಾವ್ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಅಂದಿನ ಸಭೆಯಲ್ಲಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಈಗಾಗಲೇ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತಕ್ಕೆ …

Read More »

ಮುಂಬೈನಿಂದ ಆಗಮಿಸಿದ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗದೇಪೊಲೀಸರ ಮುಂದೆಯೇ ಆಟೋ ಹತ್ತಿ ಎಸ್ಕೇಪ್

ಬೆಂಗಳೂರು: ಮುಂಬೈನಿಂದ ಆಗಮಿಸಿದ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗದೇ ಆಟೋ ಹತ್ತಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮುಂಬೈನಿಂದ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಇಂದು 1700ಕ್ಕೂ ಹೆಚ್ಚು ಪ್ರಯಾಣಿಕರು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದು, ಅದರಲ್ಲಿ ಇಬ್ಬರು ಪ್ರಯಾಣಿಕರು ಪೊಲೀಸರ ಮುಂದೆಯೇ ಆಟೋ ಹತ್ತಿ ಎಸ್ಕೇಪ್ ಆಗಿದ್ದಾರೆ. ರೈಲಿನಲ್ಲಿ ರಾಜ್ಯದ ಕಾರ್ಮಿಕರು ಆಗಮಿಸಿರಬಹುದು ಎಂಬ ಗೊಂದಲಕ್ಕೀಡಾದ ಪೊಲೀಸರು ಹಾಗೂ ಅಧಿಕಾರಿಗಳು ಇಬ್ಬರು ಪ್ರಯಾಣಿಕರ ತಪಾಸಣೆ ಕೂಡ …

Read More »

ಜಿಲ್ಲಾಧಿಕಾರಿ, ಜಿಪಂ ಇಸಿಒ, ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ವಿಡಿಯೋ ಸಂವಾದದಲ್ಲಿ ಬಿ.ಎಸ್. ಯಡಿಯೂರಪ್

ಬೆಂಗಳೂರು:  ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು  ತಾಲೂಕು ಕೇಂದ್ರಗಳಲ್ಲಿ  ವಾಸ ಮಾಡಿ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚನೆ ನೀಡಿದ್ರು.  ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ,  ರಾಯಚೂರು ಮತ್ತು ಉಡುಪಿ   ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಪಂ ಇಸಿಒ, ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಅಧಿಕಾರಿಗಳು  ತಾಲೂಕುಗಳನ್ನು ವಿಭಾಗಿಸಿಕೊಂಡು ತಾಲೂಕು  ಕೇಂದ್ರದಲ್ಲಿ  ಮೊಕ್ಕಾಂ …

Read More »

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಬದಲಾಗಿ,ರಮೇಶ್ ಜಾರಕಿಹೊಳಿ…..

ಬೆಳಗಾವಿ- ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಬದಲಾಗಿ,ರಮೇಶ್ ಜಾರಕಿಹೊಳಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ರಮೇಶ್ ಜಾರಕಿಹೊಳಿ ಅವರು ಈಗ ಬೆಳಗಾವಿ ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಾರೆ.ಕೋರೆ,ಕತ್ತಿ ಸಹೋದರರ ಕಿತ್ತಾಟದ ಬಳಿಕ ಜಾರಕಿಹೊಳಿ ಸಾಹುಕಾರ್ ಗೆ ಅದೃಷ್ಠ ಒಲಿದಿದೆ. ಮೈತ್ರಿ ಸರ್ಕಾರದ ಪತನದ ರೂವಾರಿ ರಮೇಶ್ ಜಾರಕಿಹೊಳಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಲ್ಲದೇ ಬಿಜೆಪಿ ಸರ್ಕಾರದಲ್ಲಿ …

Read More »

ಧಾರ್ಮಿಕ ಪ್ರಚಾರ ನಡೆಸಿದ ಆರೋಪ ಮೇಲೆ, ಇಂಡೋನೇಷ್ಯಾದ 10, ದೆಹಲಿಯ ಇಬ್ಬರು ಸೇರಿ 12 ಜನರನ್ನು ಪೋಲೀಸರ ವಶಕ್ಕೆ

ಬೆಳಗಾವಿ- ವೀಸಾ ನಿಯಮ ಉಲ್ಲಂಘಿಸಿ ದೆಹಲಿಯಿಂದ ಬೆಳಗಾವಿಗೆ ಆಗಮಿಸಿ, ಧಾರ್ಮಿಕ ಪ್ರಚಾರ ನಡೆಸಿದ ಆರೋಪ ಮೇಲೆ, ಇಂಡೋನೇಷ್ಯಾದ 10, ದೆಹಲಿಯ ಇಬ್ಬರು ಸೇರಿ 12 ಜನರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಐವರು ಮಹಿಳೆಯರು ಸೇರಿ , 12 ಜನರು ಪೊಲೀಸ್ ವಶದಲ್ಲಿದ್ದು ಬೆಳಗಾವಿ ನಗರದ ಮಾಳಮಾರುತಿ ಠಾಣೆ ಪೊಲೀಸರು 12 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೇ ಮಾಳಮಾರುತಿ ಪೋಲೀಸರು ಈ ಹನ್ನೆರಡು ಜನರ ವಿರುದ್ಧ ಎಫ ಐ …

Read More »