ಬೆಳಗಾವಿ: ಮಹಾರಾಷ್ಟ್ರದಿಂದ ಬಂದ ಜನರನ್ನು ಕ್ವಾರಂಟೈನ್ ಆಗಿ ಎಂದು ಹೇಳಲು ಹೋದ ಕೊರೋನಾ ವಾರಿಯರ್ಸ್ ಮೇಲೆ ರಾಷ್ಟ್ರೀಯ ಪಕ್ಷದ ಮುಖಂಡನ ಕುಮ್ಮಕ್ಕಿನಿಂದ ಹಲ್ಲೆ ನಡೆದಿರುವ ಘಟನೆ ಹುಕ್ಕೇರಿ ತಾಲೂಕಿನ ಮರಣಹೋಳ ಗ್ರಾಮದಲ್ಲಿ ಜರುಗಿದೆ. ನೀವು ಮಹಾರಾಷ್ಟ್ರದಿಂದ ಬಂದಿದ್ದೀರಾ,ನೀವು ಹೋಮ್ ಕ್ವಾರಂಟೈನ್ ಆಗಬೇಕು,ಎಂದು ತಿಳುವಳಿಕೆ ಹೇಳಲು ಹೋದ,ಪಿಡಿಓ ಮತ್ತು ಗ್ರಾಮಲೆಕ್ಕಾಧಿಕಾರಿ ಮೇಲೆ ಹಲ್ಲೆ ಮಾಡಲಾಗಿದೆ. ಮರಣಹೋಳ ಗ್ರಾಮದಲ್ಲಿ ಮಹಾರಾಷ್ಟ್ರದಿಂದ ಹನ್ನೆರಡು ಜನ ಬಂದಿರುವ ಸುದ್ಧಿ ಜಿಲ್ಲಾಡಳಿತಕ್ಕೆ ಗೊತ್ತಾಗಿದೆ.ಮಾಹಿತಿ ಗೊತ್ತಾದ ಬಳಿಕ ತಾಲೂಕಾ …
Read More »Monthly Archives: ಜೂನ್ 2020
ತಿರುಪತಿ ತಿಮ್ಮಪ್ಪ ದೇಗುಲದ ಸಿಬ್ಬಂದಿಗೆ ಕೊರೊನಾ : 2 ದಿನ ಭಕ್ತರಿಗೆ ಪ್ರವೇಶ ನಿರ್ಬಂಧ
ತಿರುಪತಿ : ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಎರಡು ದಿನ ತಿರುಪತಿ ತಿಮ್ಮಪ್ಪ ದೇಗುಲ ಬಂದ್ ಮಾಡಲಾಗಿದೆ. ತಿರುಪತಿ ತಿರುಮಲ ದೇವಸ್ಥಾನಂಗೆ ಸಂಬಂಧಿಸಿದ ಪುರಾತನ ಶ್ರೀ ಗೋವಿಂದರಾಜಸ್ವಾಮಿ ಮಂದಿರದ ಸಿಬ್ಬಂದಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಎರಡು ದಿನ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಕೊರೊನಾ ಲಾಕ್ …
Read More »ಅರ್ಧ ಹುಬ್ಬಳ್ಳಿಗೇ ಹಬ್ಬಿದ ಕೊರೋನಾ: ಜನತೆಯಲ್ಲಿ ಹೆಚ್ಚಿದ ಆತಂಕ
ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ದೃಢಪಟ್ಟ 19 ಕೊರೋನಾ ಪ್ರಕರಣಗಳ ಪೈಕಿ 13 ಸೋಂಕಿತರು ಹುಬ್ಬಳ್ಳಿ ಮೂಲದವರು. ಇದರಿಂದಾಗಿ ಅರ್ಧ ಹುಬ್ಬಳ್ಳಿಗೇ ಕೊರೋನಾ ಹಬ್ಬಿದಂತಾಗಿದ್ದು, ವಾಣಿಜ್ಯನಗರಿಯನ್ನು ಅಕ್ಷರಶಃ ತಲ್ಲಣಗೊಳಿಸಿದೆ. 19 ಜನರಲ್ಲಿ 6 ಜನ ಮಾತ್ರ ಕ್ವಾರಂಟೈನ್‌ನಲ್ಲಿದ್ದವರು. 13 ಜನ ಹೋಂ ಕ್ವಾರಂಟೈನ್ ಅಥವಾ ಬಿಂದಾಸ್ ಆಗಿ ಓಡಾಡಿಕೊಂಡಿದ್ದವರಿಗೆ ಕೊರೋನಾ ದೃಢಪಟ್ಟಿದೆ. ಇದರಲ್ಲಿ ನಾಲ್ಕು ಜನರಿಗೆ ಕೆಮ್ಮು, ನೆಗಡಿ, ತೀವ್ರ ಜ್ವರದ ಕಾರಣದಿಂದಾಗಿ ಪಾಸಿಟಿವ್ ಪತ್ತೆಯಾಗಿದೆ. ಇವರಾರಯರು ಕ್ವಾರಂಟೈನ್‌ನಲ್ಲಿ …
Read More »ಚಿಕಿತ್ಸೆ ಕುರಿತಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ‘ಕೊರೊನಾ’ ಸೋಂಕು ಪೀಡಿತ ಸ್ವಾಮೀಜಿ
ಶಿವಮೊಗ್ಗ :ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಕಲ್ಲಗಂಗೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ವಿನಯಾನಂದ ಸರಸ್ವತಿ ಅವರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಾಮೀಜಿಯವರಿಗೆ ಅಲೋಪತಿ ವೈದ್ಯ ಪದ್ಧತಿಯಂತೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೀಗಾಗಿ ಸ್ವಾಮಿ ಶ್ರೀ ವಿನಯಾನಂದ ಸರಸ್ವತಿ ಚಿಕಿತ್ಸಾ ಪದ್ಧತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಬಾಲ್ಯದಿಂದಲೂ ತಮ್ಮ ಶರೀರ ಆಯುರ್ವೇದ ಚಿಕಿತ್ಸೆಗೆ ಒಗ್ಗಿಕೊಂಡಿದ್ದು, ಜೊತೆಗೆ ಋಷಿ …
Read More »ಉದ್ಯೋಗ’ ಸಿಗದೆ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂಎಸ್ಸಿ ಪದವೀಧರೆ.!
ದಾವಣಗೆರೆ :ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ವಿದ್ಯೆಗೆ ತಕ್ಕ ಹುದ್ದೆ ಸಿಕ್ಕುವುದು ಮರೀಚಿಕೆಯಾಗಿದೆ. ಅದರಲ್ಲೂ ಈಗ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಕಾರಣಕ್ಕೆ ನಿರುದ್ಯೋಗ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಎಂಎಸ್ಸಿ ಪದವೀಧರೆಯೊಬ್ಬರು ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಸಮೀಪದ ಅಂಜಿನಾಪುರದಲ್ಲಿ ಎಂಎಸ್ಸಿ ಪದವೀಧರೆ ದೀಪಶ್ರೀ ಕೂಲಿ ಕೆಲಸ ಮಾಡುತ್ತಿದ್ದವರಾಗಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗಣಿತ ವಿಷಯದಲ್ಲಿ ಎಂಎಸ್ಸಿ ಮಾಡಿರುವ ದೀಪಶ್ರೀ, …
Read More »ಬೆಳಗಾವಿಯಲ್ಲಿ ಎ ಪಿ ಮ್ ಸಿ ಚುನಾವಣೆ: ಯಾರಿಗೆ ಜಯ ಎಂದು ಕಾದು ನೋಡಬೇಕು
ಬೆಳಗಾವಿ :ಬೆಳಗಾವಿ ಎಪಿಎಂಸಿಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದಿದ್ದರೂ,ಎಲ್ಲ ಹನ್ನೊಂದು ಜನ ಚುನಾಯಿತ ಸದಸ್ಯರು ಒಗ್ಗಟ್ಟಾಗಿ,ಅಧ್ಯಕ್ಷ ಉಪಾದ್ಯಕ್ಷರ ಹೆಸರನ್ನು ನೀವೇ ಸೂಚಿಸಿ ಎಂದು ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದಾರೆ. ಇಂದು ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಇಬ್ಬರು ಮಾತುಕತೆ ಮಾಡಿ,ಅದ್ಯಕ್ಷ ಉಪಾದ್ಯಕ್ಷರ ಹೆಸರನ್ನು ಅಂತಿಮಗೊಳಿಸುತ್ತಾರೆ ,ಎಂದು ತಿಳಿದು ಬಂದಿದೆ. ಅದ್ಯಕ್ಷ ಉಪಾದ್ಯಕ್ಷ ಸ್ಥಾನಕ್ಕೆ 11ಜನ ಚುನಾಯಿತ ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ.ಸತೀಶ್ ಜಾರಕಿಹೊಳಿ ಅವರು ಕೈಗೊಳ್ಳುವ ತೀರ್ಮಾಣವೇ ಅಂತಿಮ ಎಂದು …
Read More »ಕಿಸ್ಸಿಂಗ್ ಬಾಬಾ’ ಮುತ್ತಿನ ಮಹಿಮೆ; 24 ಮಂದಿಗೆ ಕೊರೊನಾ ಗಿಫ್ಟ್ ಕೊಟ್ಟು ತಾನೂ ಬಲಿಯಾದ
ಭೋಪಾಲ್: ಕೊರೊನಾದಿಂದಾಗಿ ಕೆಲ ಢೋಂಗಿಗಳ ಅಸಲೀಯತ್ತು ಕೂಡಾ ಬಯಲಿಗೆ ಬರ್ತಿದೆ. ಮಧ್ಯಪ್ರದೇಶದ ಕಿಸ್ಸಿಂಗ್ ಬಾಬಾ ಅಲಿಯಾಸ್ ಅಸ್ಲಮ್ ಬಾಬಾ , ಕಳೆದ ವಾರ ಕೊರೊನಾ ಸೋಂಕಿನಿಂದಲೇ ಮೃತಪಟ್ಟಿದ್ದಾರೆ. ದುರಾದೃಷ್ಟವಶಾತ್ ತನ್ನಿಂದ ಕಿಸ್ ಪಡೆದಿದ್ದ 24 ಮಂದಿಗೆ ಕೊರೊನಾ ಹರಡಲು ಕಾರಣನಾಗಿದ್ದಾನೆ. ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿದ್ದ ಅಸ್ಲಮ್ ಬಾಬಾ, ತನ್ನ ಬಳಿ ಕೊರೊನಾ ಗುಣಪಡಿಸಲು ಮದ್ದಿದೆ. ಆ ಮದ್ದೇ ತನ್ನಿಂದ ಕಿಸ್ ಪಡೆಯುವುದು..! ಹೌದು, ನನ್ನ ಕಿಸ್ನಲ್ಲಿ ಅಂಥ ಶಕ್ತಿ ಇದೆ.. …
Read More »ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೀಡಾಗಿ ಉಪನ್ಯಾಸಕರಿಬ್ಬರು ಆತ್ಮಹತ್ಯೆ
ಮಂಡ್ಯ: ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೀಡಾಗಿ ಉಪನ್ಯಾಸಕರಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಳವಳ್ಳಿ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಾದ ಸುರೇಶ್ (29), ವಾಣಿಜ್ಯ ವಿಭಾಗದ ಉಪನ್ಯಾಸಕಿ ಕೋಕಿಲ (35) ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಒಂದೇ ಕಾಲೇಜಿನ ಉಪನ್ಯಾಸಕರಾಗಿದ್ದಾರೆ. ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ. ಮೇ 11ರಂದು ಕೋಕಿಲ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನೂ ಜೂನ್ 4 ರಂದು …
Read More »ಶನಿವಾರ ಬೆಳಗಾವಿಗೆ ಆಗಮಿಸಲಿರುವ ನೂತನ ರಾಜ್ಯಸಭಾ ಸದಸ್ಯ
ಬೆಳಗಾವಿ :ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಈರಣ್ಣ ಕಡಾಡಿ ಶನಿವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ನಗರದ ಸಂಕಮ್ ಹೊಟೆಲ್ ಬಳಿ ಅವರನ್ನು ಸ್ವಾಗತಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಆಗಮಿಸಲಿರುವ ಅವರು ನಂತರ ಚನ್ನಮ್ಮ ವೃತ್ತದ ಬಳಿ ಗಣೇಶ ಮಂದಿರದಲ್ಲಿ ಪೂಜೆ ನೆರವೇರಿಸುವರು. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ, ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಕ್ಷದ ಕಾರ್ಯಾಲಯಕ್ಕೆ ಭೇಟಿ ನೀಡುವರು. ನಂತರ ಬಸವೇಶ್ವರ ಪುತ್ಥಳಿಗೆ, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ …
Read More »ಕರ್ನಾಟಕದ ನಾಲ್ವರು ಅಭ್ಯರ್ಥಿಗಳೂ ಅವಿರೋಧ ಆಯ್ಕೆ
ರಾಜ್ಯಸಭೆ ಚುಣಾವಣೆ ಫಲಿತಾಂಶ ಹೊರಬಿದ್ದಿದ್ದು, ಕರ್ನಾಟಕದ ನಾಲ್ವರು ಅಭ್ಯರ್ಥಿಗಳಾದ ಬಿಜೆಪಿ ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿ ಹಾಗೂ ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ನಿಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯಸಭಾ ಚುನಾವಣೆ-2020ರಲ್ಲಿ ಕರ್ನಾಟಕದಲ್ಲಿ ನಾಲ್ಕೂ ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅವಿರೋಧವಾಗಿ ಆಯ್ಕೆಯಾದ ಅಧಿಕೃತ ಘೋಷಣಾ ಪತ್ರವನ್ನು ಕಾಂಗ್ರೆಸ್‍ನ ಮಲ್ಲಿಕಾರ್ಜುನ …
Read More »