ಶಿವಮೊಗ್ಗ :ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಕಲ್ಲಗಂಗೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ವಿನಯಾನಂದ ಸರಸ್ವತಿ ಅವರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಾಮೀಜಿಯವರಿಗೆ ಅಲೋಪತಿ ವೈದ್ಯ ಪದ್ಧತಿಯಂತೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೀಗಾಗಿ ಸ್ವಾಮಿ ಶ್ರೀ ವಿನಯಾನಂದ ಸರಸ್ವತಿ ಚಿಕಿತ್ಸಾ ಪದ್ಧತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.
ಬಾಲ್ಯದಿಂದಲೂ ತಮ್ಮ ಶರೀರ ಆಯುರ್ವೇದ ಚಿಕಿತ್ಸೆಗೆ ಒಗ್ಗಿಕೊಂಡಿದ್ದು, ಜೊತೆಗೆ ಋಷಿ ಪ್ರಣೀತ ಆಯುರ್ವೇದ ಔಷಧೀಯ ಪದ್ಧತಿಗಳಲ್ಲಿ ತಮಗೆ ಹೆಚ್ಚು ನಂಬಿಕೆ ಇದೆ ಎಂದು ಹೇಳಿದ್ದಾರೆ. ಹೀಗಾಗಿ ತಮಗೆ ಅಲೋಪತಿ ವೈದ್ಯ ಪದ್ಧತಿ ಬದಲು ಆಯುರ್ವೇದ ಪದ್ಧತಿ ಪ್ರಕಾರ ಚಿಕಿತ್ಸೆ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.