ಬೀದರ್/ಚಿತ್ರದುರ್ಗ: ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಅವ್ಯವಸ್ಥೆ ತಾಂಡವವಾಡುತ್ತಿದೆ. ಜೀವ ಉಳಿಸಿ ಅಂತ ಹೋದರೆ ಅದೊಂದು ಪ್ರಸಿದ್ಧ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಹೌದು. ಆರೋಗ್ಯ ಸಚಿವ ಶ್ರೀರಾಮುಲುರ ತವರು ಜಿಲ್ಲೆ ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಒಂದೆಡೆ ಖಾಲಿ ಖಾಲಿಯಾಗಿರುವ ಡಯಾಲಿಸಿಸ್ ವಾರ್ಡಿನ ಬೆಡ್‍ಗಳು, ಇನ್ನೊಂದೆಡೆ ಆಸ್ಪತ್ರೆ ಹೊರಗೆ ಡಯಾಲಿಸಿಸ್ ಚಿಕಿತ್ಸೆ ಸಿಗಲಾರದೇ ಕಂಗಾಲಾಗಿ ಕುಳಿತ ರೋಗಿಗಳು. ಕೊರೊನಾ ಮಧ್ಯೆ ಮುಖ್ಯವಾಗಿ ಸಿಗಬೇಕಿರುವ ಡಯಾಲಿಸಿಸ್ ಚಿಕಿತ್ಸೆ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. …
Read More »Daily Archives: ಜೂನ್ 22, 2020
ಕೆಮ್ಮಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊರೊನಾ ಇದೆ ಎಂದು ರೈತ ತಮಾಷೆ- ಮಾರುಕಟ್ಟೆ ಅಲ್ಲೋಲ ಕಲ್ಲೋಲ……
ಚಾಮರಾಜನಗರ: ರೈತರೊಬ್ಬರು ರೇಷ್ಮೆ ಮಾರುಕಟ್ಟೆಯಲ್ಲಿ ಕೆಮ್ಮಿದ್ದು, ಪ್ರಶ್ನಿಸಿದ್ದಕ್ಕೆ ಕೊರೊನಾ ಇದೆ ಎಂದು ತಮಾಷೆ ಮಾಡಿದ್ದಾರೆ. ಇಷ್ಟಕ್ಕೆ ಮಾರುಕಟ್ಟೆಯಲ್ಲಿ ರಾದ್ಧಾಂತ ನಡೆದಿದೆ. ಜಿಲ್ಲೆಯ ಕೊಳ್ಳೇಗಾಲದ ಮುಡಿಗುಂಡ ಬಳಿ ಘಟನೆ ನಡೆದಿದ್ದು, ಪದೇ ಪದೇ ಕೆಮ್ಮಿದ್ದರಿಂದ ಆತಂಕಗೊಂಡು ಅಕ್ಕಪಕ್ಕದವರು ವಿಚಾರಿಸಿದ್ದಾರೆ. ಈ ವೇಳೆ ತನಗೆ ಕೊರೊನಾ ಇದೆ ಎಂದು ರೈತ ತಮಾಷೆಗೆ ಹೇಳಿದ್ದಾರೆ. ಇದರಿಂದ ಬೆಚ್ಚಿಬಿದ್ದ ರೇಷ್ಮೆಗೂಡಿನ ಮಾರುಕಟ್ಟೆ ವ್ಯಾಪಾರಿಗಳು, ತೀವ್ರ ಆತಂಕಗೊಂಡಿದ್ದು, ತಕ್ಷಣವೇ ರೇಷ್ಮೆ ರೀಲರ್ಸ್ ಗಳು ತಹಸೀಲ್ದಾರ್‍ಗೆ ದೂರು ನೀಡಿದ್ದಾರೆ. …
Read More »ಮದುವೆ ಮನೆ ಅಡುಗೆ ಭಟ್ಟನಿಗೆ ಕೊರೊನಾ ದೃಢಪಟ್ಟ ,ಹಿನ್ನೆಲೆಯಲ್ಲಿ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್
ತುಮಕೂರು: ದಿನೇ ದಿನೇ ಕೊರೊನಾ ತನ್ನ ಅಟ್ಟಹಾಸ ಮಿತಿಮೀರುತ್ತಿದೆ. ಮದುವೆ ಮನೆ ಅಡುಗೆ ಭಟ್ಟನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮದುವೆಗೆ ಬಂದವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ. ಬೆಳಗ್ಗೆ ತಾನೇ ಮದುವೆ ಮುಗಿಸಿದ ನವಜೋಡಿ ಕೊರೊನಾದಿಂದ ಸಂಜೆ ವೇಳೆಗೆ ಕ್ವಾರಂಟೈನ್‍ನಲ್ಲಿ ಲಾಕ್ ಆಗಿದ್ದಾರೆ. ಈ ಕೊರೊನಾ ಜಿಲ್ಲೆಯ ಗುಬ್ಬಿಯ ಹೇರೂರಿನ ನವ ಜೋಡಿಯೊಂದು ಕ್ವಾರಂಟೈನ್ ಸೇರುವಂತೆ ಮಾಡಿದೆ. ವಧುವರರಿಗೆ ಕೊರೊನಾ ಬಂದಿಲ್ಲ. ಬದಲಾಗಿ ಮದುವೆ ಮನೆಯಲ್ಲಿ ಅಡುಗೆ ಮಾಡಿದ್ದ ಅಡುಗೆ ಭಟ್ಟನಿಗೆ ಕೊರೊನಾ …
Read More »ಸಿಲಿಕಾನ್ ಸಿಟಿಯಲ್ಲಿಗಲ್ಲಿ ಗಲ್ಲಿಗೂ ಸದ್ದಿಲ್ಲದೇ ಎಂಟ್ರಿಯಾಗ್ತಿದೆ,ಕಿಲ್ಲರ್ ಕೊರೊನಾ……..
ನಿಮ್ಹಾನ್ಸ್ ಬಾಗಿಲು ತಟ್ಟಿದ ಕೊರೊನಾ- ಆಸ್ಪತ್ರೆಯ ಐಸಿಯು ಕಂಪ್ಲೀಟ್ ಕ್ಲೋಸ್ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಿಲ್ಲರ್ ಕೊರೊನಾ ಅಟ್ಟಾಡಿಸ್ತಿದೆ. ಪರಿಸ್ಥಿತಿ ಬಿಗಡಾಯಿಸ್ತಿದ್ದು, ಗಲ್ಲಿ ಗಲ್ಲಿಗೂ ಈ ಹೆಮ್ಮಾರಿ ಸದ್ದಿಲ್ಲದೇ ಎಂಟ್ರಿಯಾಗ್ತಿದೆ. ನಿಮ್ಹಾನ್ಸ್ ಆಸ್ಪತ್ರೆಗೂ ಈ ಹೆಮ್ಮಾರಿ ಲಗ್ಗೆ ಇಟ್ಟಿದ್ದು, ಈ ವೈರಸ್ ನ ಆರ್ಭಟಕ್ಕೆ ಆಸ್ಪತ್ರೆಯ ಐಸಿಯು ವಾರ್ಡ್ ಕಂಪ್ಲೀಟ್ ಕ್ಲೋಸ್ ಆಗಿದೆ. ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಕೈ ಮೀರಿ ಹೋಗ್ತಿದೆ. ತಜ್ಞರು …
Read More »ನಾಲ್ವರಿಂದ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ………….
ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಾಲ್ಕು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರೋದು ಧೃಡವಾಗಿದೆ. ಪರಿಣಾಮ ನಲವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಈಗಾಗಲೇ ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆರು ತಿಂಗಳಿಂದ ಜೈಲಿನಲ್ಲಿದ್ದ ಕೈದಿಗೂ ಕೊರೊನಾ ತಗುಲಿದ್ದು, ಆತನಿಗೆ ಸೋಂಕು ಹೇಗೆ ಬಂತು ಎಂದು ಹುಡುಕಾಡುವಷ್ಟರಲ್ಲಿಯೇ ಜಿಲ್ಲೆಯ ನಾಲ್ವರು ಪೊಲೀಸರಿಗೆ ಕೋವಿಡ್-19 ತಗುಲಿದೆ. ಇದೀಗ ಜಿಲ್ಲಾಡಳಿತತ ಜೊತೆಗೆ ಇತರೆ ಪೊಲೀಸರಿಗೆ ಕೊರೊನಾ ಢವ ಢವ ಶುರುವಾಗಿದೆ. …
Read More »