ಹುಬ್ಬಳ್ಳಿ: ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ವೀರಶೈವ – ಲಿಂಗಾಯತ ಅಂತ ಬರೆಯಿಸಿ ಎಂದು ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ನೇರೆದಿದ್ದ ನೂರಾರು ಸ್ವಾಮೀಜಿಗಳು ಏಕ ರೂಪದ ನಿರ್ಧಾರ ತಗೆದುಕೊಂಡಿದ್ದಾರೆ.
ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿದ ವೀರಶೈವ – ಲಿಂಗಾಯತ ಏಕತಾ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ವೀರಶೈವ – ಲಿಂಗಾಯತ ಸಮಾಜ ಕವಲು ದಾರಿಯಲ್ಲಿದೆ. ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟದ್ದು ವೀರಶೈವ ಸಮಾಜ. ಬಸವಾದಿ ಶರಣರ ಕೊಡುಗೆ ಅನನ್ಯ. ಮಠ ಮಾನ್ಯಗಳ ಕೊಡುಗೆ ಅವಿಸ್ಮರಣೀಯ. ಕರ್ನಾಟಕ ಕಾಡಿದ್ದಂತಹದ್ದು ನಾಡಾಗಿದೆ. ಅಂದರೆ ಅದಕ್ಕೆ ಲಿಂಗಾಯತ ವೀರಶೈವ ಸಂಸ್ಥೆಗಳ ಕೊಡುಗೆ ಕಾರಣ. ವೀರಶೈವ – ಲಿಂಗಾಯತ ಸಮಾಜ ಕವಲು ದಾರಿಯಲ್ಲಿದೆ. ಸಮಾಜಕ್ಕೆ ಬಹಳಷ್ಟು ಸಮಸ್ಯೆಗಳಿವೆ. ನಿರುದ್ಯೋಗ, ಬಡತನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇದೆಲ್ಲಕ್ಕೂ ಪರಿಹಾರ ಸಂಘಟನೆಯಲ್ಲಿದೆ ಎಂದರು.
ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಹೊರಗಿಟ್ಟು ಎಲ್ಲರೂ ಒಂದಾಗಬೇಕಿದೆ. ಮಾಠಾಧೀಶರು ತಮ್ಮ ಭಿನ್ನಾಭಿಪ್ರಾಯ ಬಿಡಬೇಕು. ವೈಯಕ್ತಿಕವಾಗಿ ಕೆಲವರು ಚೆನ್ನಾಗಿದ್ದಾರೆ. ಆದರೆ, ಸಮಾಜ ಕೆಡುಕಿನಲ್ಲಿದೆ. ವೀರಶೈವ – ಲಿಂಗಾಯತ ಬೇರೆ ಬೇರೆ ಅಲ್ಲ. ಎರಡೂ ಒಂದೇ ಧರ್ಮ. ಇದು ಒಗ್ಗಟ್ಟಾಗೋ ಕಾಲ. ಇಂತಹ ಸಂದರ್ಭದಲ್ಲಿ ಒಡಕಿನ ಮಾತು ಸರಿಯಲ್ಲ. ಎಲ್ಲ ಒಳ ಪಂಗಡಗಳನ್ನು ಒಗ್ಗೂಡಿಸೋ ಕೆಲಸ ನಡೀತಿದೆ. ವೀರಶೈವ – ಲಿಂಗಾಯತ ಪ್ರತ್ಯೇಕ ಧರ್ಮ ಪಡೆಯೋ ಕಾಲ ಸನ್ನಿಹಿತವಾಗಿದೆ. ಹಿಂದಿನಿಂದಲೂ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಹೋರಾಟ ಮಾಡಲಾಗಿದೆ. ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂ ನಲ್ಲಿ ವೀರಶೈವ – ಲಿಂಗಾಯತ ಅಂತ ಬರೆಸಬೇಕು. ಇದನ್ನು ಕಾರ್ಯಗತ ಮಾಡಲು ವೀರಶೈವ ಲಿಂಗಾಯತ ಮಹಾಸಭಾ ಯತ್ನಿಸುತ್ತದೆ. ಉಪ ಜಾತಿ ಕಾಲಂ ಒಳ ಪಂಗಡಗಳ ಹೆಸರನ್ನು ನಮೂದು ಮಾಡಿ. ಜಾತಿ ಕಲಂ ನಲ್ಲಿ ವೀರಶೈವ – ಲಿಂಗಾಯತ ಅಂತ ಬರೆಯಿಸಿ. ಒಳ ಪಂಗಡ ಸೇರಿಸಿ ನಮ್ಮ ನೈಜ ಸಂಖ್ಯೆ ಬರುತ್ತೆ. ಸಂಖ್ಯೆ ಕಡಿಮೆ ಆದರೆ ಸಮಾಜ ದುರ್ಬಲ ಆಗುತ್ತೆ ಎಂದರು.