Breaking News

ಚಿನ್ನಸ್ವಾಮಿ ಕಾಲ್ತುಳಿತ ಘಟನೆಗೆ ಆಯೋಜಕರು ಹೆಚ್ಚಿನ ಕಾರಣೀಕರ್ತರಾಗಿದ್ದಾರೆ: ಸಚಿವ ಜಿ.ಪರಮೇಶ್ವರ್

Spread the love

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಆಯೋಜನೆ ಮಾಡಿದವರು ಹೆಚ್ಚಿನ ಕಾರಣೀಕರ್ತರಾಗಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು. ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ಸಂಬಂಧ ಚರ್ಚೆಗೆ ಅವರು ಉತ್ತರಿಸಿದರು.

ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಇಂತಹ ಘಟನೆ ನಡೆದಿರಲಿಲ್ಲ.‌ ಪ್ರಗತಿಶೀಲ ರಾಜ್ಯ ಇದನ್ನು ಲಘುವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ತಪ್ಪು ಆದ ಮೇಲೆ ಕ್ರಮ ಕೈಗೊಳ್ಳುವುದು ಅದು ಬಹಳ ಮುಖ್ಯವಾಗಿದೆ. ಐಪಿಎಲ್​ನ್ನು ಕ್ರೀಡೆಯೂ ಆಗಬೇಕು, ಮನರಂಜನೆಯನ್ನೂ ಕೊಡಬೇಕು, ಜೊತೆಗೆ ಹಣವೂ ಬರಬೇಕು ಎಂಬ ಪರಿಕಲ್ಪನೆಯಲ್ಲಿ ಆರಂಭಿಸಲಾಗಿದೆ. ಈ ಐಪಿಎಲ್​ನಲ್ಲಿ ಸುಮಾರು 15 ಬಿಲಿಯನ್ ಡಾಲರ್ ಆದಾಯ ಸಿಗುತ್ತಿದೆ. ಐಪಿಎಲ್ ಹಣದ ದೃಷ್ಟಿಕೋನದಿಂದ ಆಗುತ್ತಿದೆಯೇ, ಹೊರತು ಕ್ರೀಡೆಯಾಗಿ ಆಗುತ್ತಿಲ್ಲ ಎಂದರು.

ಕಾಲ್ತುಳಿತ ಪ್ರಕರಣ ಒಂದು ಬ್ಲ್ಯಾಕ್ ಡೇ ಆಗಿದೆ. ಆ ಘಟನೆಯಿಂದ ಬಹಳ ನೋವಾಗುತ್ತದೆ. ನಮ್ಮ ಸ್ವಂತ ಮನೆಗಳಲ್ಲಿ ಸಾವಿಗೀಡಾದಾಗ ಏನು ನೋವಾಗುತ್ತದೆಯೋ, ಅದಕ್ಕಿಂತ ಹೆಚ್ಚಿನ ನೋವಾಗಿದೆ. ಹೀಗಾಗಿ, ಆರ್​​ಸಿಬಿ, ಕೆಎಸ್​​ಸಿಎ, ಡಿಎನ್ಎ ಮೇಲೆ ಎಫ್​ಐಆರ್ ದಾಖಲು ಮಾಡಿದೆವು. ಆರ್​​ಸಿಬಿ ತಂಡ ಫೈನಲ್ ಪಂದ್ಯ ಆಡುತ್ತಿರುವಾಗಲೇ ಮೇ 29ರಂದು ಏನು ಮಾಡಬೇಕು ಎಂದು ಚರ್ಚೆ ಮಾಡಿ, ಬೆಂಗಳೂರಿಗೆ ಬಂದು ಕೆಎಸ್​​ಸಿಎ ಜೊತೆ ಚರ್ಚಿಸಿ ಸಂಭ್ರಮಾಚರಣೆಗೆ ತೀರ್ಮಾನಿಸಿದ್ದರು. ಮ್ಯಾಜಿಸ್ಟೀರಿಯಲ್ ತನಿಖೆಯಲ್ಲೂ, ಆಯೋಗದಲ್ಲೂ ಕೆಲ ವಿಚಾರವನ್ನು ಪ್ರಸ್ತಾಪ ಮಾಡಲಾಗಿದೆ. ಕಾಲ್ತುಳಿತ ಆಗುತ್ತೆ ಅಂತ ಯಾರೂ ಮೊದಲೇ ಊಹೆ ಮಾಡಲಾಗುವುದಿಲ್ಲ. ದೇಶದಲ್ಲಿ ಅನೇಕ ಕಡೆ ಕಾಲ್ತುಳಿತ ಆಗಿದೆ. ಹಾಗಂತ ನಾನು ಅದನ್ನು ಸಮರ್ಥನೆ ಮಾಡುತ್ತಿಲ್ಲ ಎಂದು ತಿಳಿಸಿದರು.


Spread the love

About Laxminews 24x7

Check Also

ಡ್ರಗ್ಸ್ ನಿರ್ಮೂಲನೆ ಒಂದೇ ವರ್ಷದಲ್ಲಿ ಮಾಡಲು ಸಾಧ್ಯವಿಲ್ಲ: ಗೃಹ ಸಚಿವ

Spread the loveಬೆಂಗಳೂರು: ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಒಂದು ವರ್ಷದಲ್ಲಿ ಡ್ರಗ್ಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ