Breaking News

ಹೆಲ್ಮೆಟ್ ಹಾಕಿಲ್ಲವೆಂದು ಸವಾರನ ಹಣೆಗೆ ಕೀಯಿಂದ ಇರಿದೇ ಬಿಟ್ಟ ಪೊಲೀಸ್!

ಡೆಹ್ರಾಡೂನ್: ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದ್ದು, ಹಾಕದವರಿಗೆ ದಂಡ ವಿಧಿಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ ಹಾಗೆ ದಂಡ ಕಟ್ಟಿಯೂ ಇದ್ದೇವೆ. ಆದರೆ ಉತ್ತರಾಖಂಡ್ ನಲ್ಲಿ ಹೆಲ್ಮೆಟ್ ಹಾಕದ ಯುವಕನೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು. ಉತ್ತರಾಖಂಡ್‍ನ ಉಧಮ್ ಸಿಂಗ್ ಜಿಲ್ಲೆಯ ರುದ್ರಾಪುರದಲ್ಲಿ ಪೊಲೀಸರು ಯುವಕನ ಹಣೆಗೆ ಕೀಯಿಂದ ತಿವಿದಿದ್ದಾರೆ. ಪರಿಣಾಮ ಯುವಕನ ಹಣೆಗೆ ಗಂಭೀರ ಗಾಯಗಳಾಗಿದ್ದು, ಘಟನೆ ಸಂಬಂಧ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ರುದ್ರಾಪುರ …

Read More »

ಸುರಕ್ಷಿತ ವಾತಾವರಣ ಇರೋ ಕಡೆ ತರಗತಿ ಪ್ರಾರಂಭಿಸಿದರೆ ತಪ್ಪೇನು ಇಲ್ಲʼ

ಬೆಂಗಳೂರು: ಸುರಕ್ಷಿತ ವಾತಾವರಣವೆಂದು ಕಂಡುಬಂದ ಕಡೆಗಳಲ್ಲಿ ಶಾಲಾ ತರಗತಿಗಳನ್ನೇ ಪ್ರಾರಂಭಿಸಿದರೆ ತಪ್ಪೇನು ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೊರೊನಾ ಸಾಮಾಜಿಕ ಸಂದರ್ಭದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮಂಗಳವಾರ ಶೈಕ್ಷಣಿಕ ವಲಯದಲ್ಲಿ ತೊಡಗಿಸಿಕೊಂಡಿರುವ 36ಕ್ಕೂ ಹೆಚ್ಚು ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಚಿವ ಸುರೇಶ್‌ ಕುಮಾರ್‌ ಸಂವಾದ ನಡೆಸಿದರು ಅಜೀಂ ಪ್ರೇಮ್‍ಜಿ ಪ್ರತಿಷ್ಠಾನ, ಗ್ರಾಮ್ಸ್, ಅಕ್ಷರ ಫೌಂಡೇಷನ್, ಯೂನಿಸೆಫ್, ಶಿಕ್ಷಣ, ಸಿಇಇ (ವಾಷ್ ಪ್ರೋಗ್ರಾಂ), ಪೋರ್ತ್ ಫೌಂಡೇಷನ್, …

Read More »

ಗೆಳೆಯನ ಜೊತೆ ಎಂಗೇಜ್ ಆದ ಹಾಟ್ ಬೆಡಗಿ ಪೂನಂ ಪಾಂಡೆ

ಮುಂಬೈ: ನಟಿ ಮತ್ತು ರೂಪದರ್ಶಿ ಪೂನಂ ಪಾಂಡೆ ತನ್ನ ಬಾಯ್ ಫ್ರೆಂಡ್ ಸ್ಯಾಮ್ ಬಾಂಬೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತನ್ನ ನಿಶ್ಚಿತಾರ್ಥದ ವಿಚಾರವಾಗಿ ಪೂನಂ ಪಾಂಡೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ತಮ್ಮ ನಿಶ್ಚಿತಾರ್ಥದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿರುವ ಸ್ಯಾಮ್ ಬಾಂಬೆ ಕೊನೆಗೂ ನಾವು ನಿಶ್ಚಿತಾರ್ಥ ಮಾಡಿಕೊಂಡೆವು ಎಂದು ಬರೆದುಕೊಂಡಿದ್ದಾರೆ. ಸ್ಯಾಮ್ ಮತ್ತು ಪೂನಂ ಕಳೆದ ಕೆಲದಿನಗಳಿಂದ ಪ್ರೀತಿಸುತ್ತಿದ್ದರು ಸ್ಯಾಮ್ ಹಂಚಿಕೊಂಡಿರುವ ಫೋಟೋದಲ್ಲಿ ಇಬ್ಬರು ಬೆರಳುಗಳಲ್ಲಿ …

Read More »

ರಾಜ್ಯದಲ್ಲಿ ಇಂದು 5,536 ಮಂದಿಗೆ ಕೊರೊನಾ – ಬೆಂಗ್ಳೂರಿನಲ್ಲಿ 1,898 ಜನರಿಗೆ ಸೋಂಕು, 102 ಬಲಿ

ಬೆಂಗಳೂರು: ರಾಜ್ಯದಲ್ಲಿ ಕಳೆದ ಆರು ದಿನಗಳಿಂದ 5 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಬರುತ್ತಿದೆ. ಇಂದು ಕೂಡ ಒಟ್ಟು 5,536 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ಗಡಿ ದಾಟಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ ಕೋವಿಡ್ ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿದೆ. ಇಂದು 102 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 2,055 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು …

Read More »

ಸಂಜಯ್‌ ದತ್‌ ವಿರುದ್ಧ ಹೈಕೋರ್ಟ್‌ಗೆ ಹೋದ ರಾಜೀವ್‌ಗಾಂಧಿ ಹಂತಕ!

ಮುಂಬೈ: ಬಾಲಿವುಡ್‌ ನಟ ಸಂಜಯ್‌ ದತ್‌ಗೆ ನಾಳೆ  60ನೇ ಹುಟ್ಟುಹಬ್ಬದ ಸಂಭ್ರಮ. ಆದರೆ ಅದರ ಮುನ್ನಾದಿನವೇ ಅವರಿಗೆ ಶಾಕ್‌ ಆಗುವಂಥ ವಿಚಾರವೊಂದು ನಡೆದಿದೆ. ಅದೇನೆಂದರೆ ಅವರ ವಿರುದ್ಧ ಇಂದು ಬಾಂಬೆ ಹೈಕೋರ್ಟ್‌ಗೆ ಕೇಸೊಂದು ದಾಖಲಾಗಿದೆ. ಈ ಕೇಸ್‌ ದಾಖಲು ಮಾಡಿರುವವರು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಿ ಪೆರರಿವಾಲನ್‌. ಅಷ್ಟಕ್ಕೂ ಈತನಿಗೂ, ಸಂಜಯ್‌ ದತ್‌ಗೂ ಸಂಬಂಧ ಏನೆಂದರೆ, ರಾಜೀವಗಾಂಧಿ ಹತ್ಯೆ ಪ್ರಕರಣದಲ್ಲಿ ಅವರನ್ನು ಹತ್ಯೆ ಮಾಡಲು …

Read More »

ಲಕ್ಷ್ಮಣ ಸವದಿ ಮುಂದಿನ ಸಿಎಂ’ – ಡಿಸಿಎಂ ಬೆಂಬಲಿಗರಿಂದ ಪೋಸ್ಟ್

ಬೆಂಗಳೂರು: ಡಿಸಿಎಂ ಲಕ್ಷ್ಮಣ ಸವದಿ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಸವದಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಅಭಿಯಾನ ನಡೆಸುತ್ತಿದ್ದಾರೆ. ಈಗ ಈ ಪೋಸ್ಟ್ ಎಲ್ಲ ಕಡೆ ವೈರಲ್ ಆಗಿದ್ದು, ಈಗ ಬಿಜೆಪಿಯಲ್ಲಿ ಒಳಾಂಗಣ ರಾಜಕೀಯ ನಡೆಯುತ್ತಿದೆಯಾ ಎಂಬ ಅನುಮಾನಗಳು ಮೂಡಿವೆ. ಲಕ್ಷ್ಮಣ ಸವದಿಯವರು ದೆಹಲಿಗೆ ಹೋಗಿ ಕೇಂದ್ರ ನಾಯಕರನ್ನು ಭೇಟಿಯಾಗಿ ಬಂದ ನಂತರ ಈ ಪೋಸ್ಟ್ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಹಲವಾರು ಅನುಮಾನಗಳು ಮೂಡಿವೆ. ಈಗ …

Read More »

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ: ಜಿಪಂ ಸಿಇಒಗೆ ಕೇಂದ್ರ ಸಚಿವ ಪ್ರಹ್ಲಾದ್​​​ ಜೋಶಿ ತರಾಟೆ

ಧಾರವಾಡ(ಜು.28): ಧಾರವಾಡ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಬೇರೆಯವರ ಹೆಸರಲ್ಲಿ ಜಮಾ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿಯವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.ಕೇಂದ್ರ ಸಚಿವ ಪ್ರಹ್ಲಾದ್​ ದೆಹಲಿಯಿಂದ ಆನ್​​ಲೈನ್​​ಲ್ಲೇ ವಿಡಿಯೋ ಸಂವಾದ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ದಿಶಾ ಸಭೆ ನಡೆಸಿದರು. ಈ ವೇಳೆ ಜಿಲ್ಲಾ ಪಂಚಾಯತ್​​ ಸಿಇಒ ವಿರುದ್ಧ ಜೋಶಿ ಗರಂ ಆಗಿದ್ದರು. …

Read More »

ನಾಲ್ಕು ಜಿಲ್ಲೆಗಳಿಗೆ ಸಚಿವ ಸ್ಥಾನ ಮರೀಚಿಕೆ?

ಕಲಬುರ್ಗಿ: ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದ ಮೂವರೂ ಸೇರಿದಂತೆ ಕಲ್ಯಾಣ ಕರ್ನಾಟಕದ ಐವರು ಶಾಸಕರನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಿಗಮ-ಮಂಡಳಿಗೆ ನೇಮಕ ಮಾಡಿದ್ದಾರೆ. ಆ ಮೂಲಕ ಈ ಜಿಲ್ಲೆಗಳಿಗೆ ಸದ್ಯ ಸಚಿವ ಸ್ಥಾನ ದೊರೆಯುವುದಿಲ್ಲ ಎಂಬ ಸಂದೇಶವೂ ರವಾನೆಯಾದಂತಾಗಿದೆ. ಬಳ್ಳಾರಿ ಜಿಲ್ಲೆಯ ಆನಂದ ಸಿಂಗ್‌ ಹಾಗೂ ಬೀದರ್‌ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ ಅವರು ಸಚಿವರಾಗಿದ್ದಾರೆ. ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ …

Read More »

ಜೈಲಿನಲ್ಲೇ ಮರ್ಡರ್​ಗೆ ಸ್ಕೆಚ್; ₹1 ಕೋಟಿ ಸುಪಾರಿ ಪಡೆದಿದ್ದ ಆರೋಪಿಗಳು ಅರೆಸ್ಟ್​​

ಬೆಂಗಳೂರು: ಜೈಲಿನಲ್ಲೇ ಇದ್ದು ಮರ್ಡರ್ ಮಾಡೋಕೆ ಸ್ಕೆಚ್ ಹಾಕಿದ್ದ ಖತರ್ನಾಕ್ ಗ್ಯಾಂಗ್​ನ ಒಂಬತ್ತು ಜನ ಆರೋಪಿಗಳನ್ನು ಪೊಲೀಸರು ಹೆರೆಮುರಿ ಕಟ್ಟಿದ್ದಾರೆ. ಕಾಮಾಕ್ಷಿಪಾಳ್ಯ ನಿವಾಸಿ ವರಲಕ್ಷ್ಮೀ ಎಂಬುವವರ ಪತಿ ಗೋವಿಂದೇ ಗೌಡನ ಹತ್ಯೆಯ ಪ್ರತೀಕಾರವಾಗಿ ಕೊಲೆ ಮಾಡಿದ ಆರೋಪಿಗಳ ಹತ್ಯೆಗೆ ವರಲಕ್ಷ್ಮೀ ಸುಪಾರಿ ನೀಡಿದ್ದರು ಎನ್ನಲಾಗಿದೆ. ವರಲಕ್ಷ್ಮೀ ಹಾಗೂ ಗೋವಿಂದೇಗೌಡನಿಗೆ ಆತ್ಮೀಯನಾಗಿದ್ದ ಚಿಕ್ಕತಿಮ್ಮೇಗೌಡ, ತಾನು ಬೆಳೆಯುತ್ತಿದ್ದಂತೆ ಇಬ್ಬರನ್ನ ದೂರ ಮಾಡಿದ್ದ. ವರಲಕ್ಷ್ಮೀ ದಂಪತಿಗೆ ಮಕ್ಕಳಿಲ್ಲದ ಕಾರಣ ಚಿಕ್ಕತಿಮ್ಮೇಗೌಡನನ್ನು ಬೆಳೆಸಿ, ಆತನಿಗೆ ಒಳ್ಳೆಯ …

Read More »

ಹೋಟೆಲ್​​ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಮೂವರು ಅರೆಸ್ಟ್​

ಬೆಂಗಳೂರು: ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಗೌರವ್, ಹೀನಾ ಹಾಗೂ ಅಣ್ಣಪ್ಪ ಬಂಧಿತರು. ಆರೋಪಿಗಳು ಲಾಡ್ಜ್ ನಡೆಸಲು ಪರವಾನಗಿ ಪಡೆದು ಅನಧಿಕೃತವಾಗಿ ವೇಶ್ಯಾವಾಟಿಕೆಗೆ ಇಳಿದಿದ್ದರು. ಕೆಲಸದ ಆಮಿಷವೊಡ್ಡಿ ಹೊರರಾಜ್ಯದಿಂದ ಹುಡುಗಿಯರನ್ನು ಕರೆಯಿಸಿ ಕಂಫರ್ಟ್ ಹೋಟೆಲ್​​​ನಲ್ಲಿ ದಂಧೆ ನಡೆಸುತ್ತಿದ್ದರು. ಆನ್​ಲೈನ್​​ನಲ್ಲಿ ಮೊಬೈಲ್ ನಂಬರ್ ಹಾಕಿಕೊಂಡು, ಟೆಲಿಕಾಲರ್ ಮೂಲಕ ಗಿರಾಕಿಗಳನ್ನ ಕರೆಸುತ್ತಿದ್ದರು. ಇದು ಯಾರಿಗೂ ಗೊತ್ತಾಗದಂತೆ ಒಂದೊಂದು ನಂಬರ್ ಯ್ಯೂಸ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ …

Read More »