ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಬಿಗಿ ನಿಯಮ ರೂಪಿಸಿ ಮಾಸ್ಕ್ ವಿಚಾರದಲ್ಲಿ ಸಾವಿರ ರೂ. ದಂಡ ವಿಧಿಸಿದ್ದ ಸರ್ಕಾರ, ಹೊರಡಿಸಿ ದಂಡದ ಮೊತ್ತವನ್ನು ನಗರದ ಪ್ರದೇಶದಲ್ಲಿ 1 ಸಾವಿರ ರೂಗಳಿಂದ 250 ರೂ.ಗೆ ಇಳಿಸಿದೆ. ಗ್ರಾಮೀಣ ಭಾಗದಲ್ಲಿ ನಿಗದಿಯಾಗಿದ್ದ 500 ರೂ. ದಂಡ ಈಗ 100 ರೂ.ಗೆ ಇಳಿಕೆಯಾಗಿದೆ.ಮಾಸ್ಕ್ ಧರಿಸದ್ದಕ್ಕೆ 1 ಸಾವಿರ ರೂ. ದಂಡ ವಿಧಿಸುತ್ತಿದ್ದ ಕ್ರಮಕ್ಕೆ ಸಾರ್ವಜನಿಕಾ ವಲಯದಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಕೆಲಸ ಇಲ್ಲ ನಾವು ಸಂಕಷ್ಟದಲ್ಲಿರುವಾಗ …
Read More »8 ತಾಸಿನ ದಾರಿಯನ್ನು 3 ಗಂಟೆಯಲ್ಲಿ ಕ್ರಮಿಸಿದ ಅಂಬುಲೆನ್ಸ್ ಚಾಲಕನಿಗೆ ಮೆಚ್ಚುಗೆ
ಚಿಕ್ಕಮಗಳೂರು: ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿದ್ದ ಅಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟ ಕಾಫಿನಾಡ ಪೊಲೀಸರಿಗೆ ಚಿಕ್ಕಮಗಳೂರು ಜನ ಶ್ಲಾಘಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಮೂಲದ ಎರಡು ತಿಂಗಳ ಮಗುವಿಗೆ ತುರ್ತಾಗಿ ಹೃದಯ ಸಂಬಂಧಿ ಚಿಕಿತ್ಸೆ ನೀಡಬೇಕಿತ್ತು. ಆದರೆ ಬಡ ಕುಟುಂಬದ ಮಗುವಿನ ಪೋಷಕರು ಆಸ್ಪತ್ರೆಯಲ್ಲಿನ ಅಂಬುಲೆನ್ಸ್ ಹಣ ಹೆಚ್ಚಾಗಿದ್ದರಿಂದ ಟ್ರಸ್ಟ್ ಮೂಲಕ ಚಿಕ್ಕಮಗಳೂರಿನ ಅಂಬುಲೆನ್ಸ್ ಗೆ ಸಂಪರ್ಕಿಸಿದ್ದರು. ಕೂಡಲೇ ಶಿವಮೊಗ್ಗಕ್ಕೆ ಹೋಗಿ ಮಗುವನ್ನು ಕರೆದುಕೊಂಡು ಹೊರಟ ಅಂಬುಲೆನ್ಸ್ ಚಾಲಕ …
Read More »ಡಿ.ಕೆ ಶಿವಕುಮಾರ್ ಅವರು ಗಳಿಸಿದ್ದು ಸಾರ್ವಜನಿಕರ ಹಣ.ಶ್ರೀರಾಮುಲು 100 ಕೋಟಿ ರೂಪಾಯಿ ಮೌಲ್ಯದ ಮನೆ ಕಟ್ಟಲು ಹಣ ಎಲ್ಲಿಂದ ಬಂತು?:ಎಸ್.ಆರ್ ಹಿರೇಮಠ
ಧಾರವಾಡ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಗಳಿಸಿದ್ದು ಸಾರ್ವಜನಿಕರ ಹಣ. ಅವರ ಮೇಲೆ ಎಫ್‍ಐಆರ್ ದಾಖಲಿಸಬೇಕು. ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿದ್ದು ಸ್ವಾಗತಾರ್ಹ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಹೇಳಿದರು.ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮೇಲೆ ಎಫ್‍ಐಆರ್ ದಾಖಲಿಸಿ ಬೇರೆ ಯಾರೂ ಇಂತಹ ಕೆಲಸ ಮಾಡದಂತೆ ಮಾಡಬೇಕು. ಅವರ ಅಕ್ರಮ ಸಂಪಾದನೆ ಮೇಲೆ ಸಿಬಿಯ ದಾಳಿ ಮಾಡಿರುವುದು ಬಹಳ ಮಹತ್ವದ …
Read More »ಕೋವಿಡ್ ತಡೆಗಟ್ಟಲು ಕ್ರಮ ಕೈಗೊಂಡ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಹಿರಿಯ ಅಧಿಕಾರಿಗಳ ಸಭೆ
ಬೆಳಗಾವಿ: ಕೋವಿಡ್ ಸೋಂಕು ಹಾಗೂ ಮರಣ ಪ್ರಮಾಣ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಕೋವಿಡ್ ತಡೆಗಟ್ಟಲು ಕ್ರಮ ಕೈಗೊಂಡ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು. ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸುವ ಮೂಲಕ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಸಾಮಾಜಿಕ …
Read More »ಮಾಹಿತಿ ಹಕ್ಕು ಆಯುಕ್ತ ಕೆ.ಪಿ. ಮಂಜುನಾಥ್, ಕೆಪಿಎಸ್‍ಸಿಗೆ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಬೆಂಗಳೂರು: ಹಲವು ಬಾರಿ ಅಕ್ರಮಗಳ ಆರೋಪಗಳಿಗೆ ಗುರಿಯಾಗಿರುವ ಕೆಪಿಎಸ್‌ಸಿ ಈಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಮಾಹಿತಿ ಹಕ್ಕು ಕಾಯ್ದೆ ಅನ್ವಯ ಮಾಹಿತಿ ಒದಗಿಸದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮಾಹಿತಿ ಹಕ್ಕು ಆಯೋಗ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶ ಮಾಡಿದೆ. ದಂಡದ ಹಣವನ್ನು ಮಾಹಿತಿ ಕೇಳಿರುವ ಅರ್ಜಿದಾರರಿಗೆ ನೀಡುವಂತೆ ಸೂಚಿಸಿದೆ. ಸುಧನ್ವ ಭಂದೋಲ್ಕರ್ ಎನ್ನುವವರು 2015ರ ಕೆಪಿಎಸ್‌ಸಿ ಪ್ರೊಬೇಷನರಿ ಹುದ್ದೆಯ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು …
Read More »ಭಾರತದ ವಾಯುಪಡೆ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು
ನವದೆಹಲಿ,ಅ.7- ವಿಶ್ವದ ಅತ್ಯಂತ ಪ್ರಬಲ ವಾಯುಪಡೆಗಳಲ್ಲಿ ಒಂದಾದ ಇಂಡಿಯನ್ ಏರ್ ಫೋರ್ಸ್ (ಐಎಎಫ್)ನ 88ನೇ ವಾರ್ಷಿಕ ದಿನಾಚರಣೆ ಪ್ರಯುಕ್ತ ನಾಳೆ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಒಂದೆಡೆ ಚೀನಾ, ಇನ್ನೊಂದೆಡೆ ಪಾಕಿಸ್ತಾನದಿಂದ ಗಡಿಭಾಗಗಳಲ್ಲಿ ಆಗಾಗ ಉಪಟಳ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಐಎಎಫ್ ಡೇ ಸಮಾರಂಭದಲ್ಲಿ ಭಾರತೀಯ ವಾಯುಪಡೆಯ ಅಗಾಧ ಶಕ್ತಿ ಅನಾವರಣಗೊಳ್ಳಲಿದೆ. ಐಎಎಫ್‍ನ ಜಾಗ್ವಾರ್, ಮಿಗಿ 29, ಮಿಗಿ 21, ಸುಕೋಯ್ ಯುದ್ಧ ವಿಮಾನಗಳು ನಾಳಿನ ವಾಯುಪಡೆ ದಿನಾಚರಣೆ ಸಂದರ್ಭದಲ್ಲಿ ಬಾನಾಂಗಳದಲ್ಲಿ ರೋಚಕ …
Read More »ಕೊರೋನಾ ಆತಂಕದಲ್ಲಿದ್ದ ವಿಶ್ವಕ್ಕೆ ಸಮಾಧಾನಕರ ಸುದ್ದಿ ಕೊಟ್ಟ WHO..!
ವಿಶ್ವಸಂಸ್ಥೆ,ಅ.7-ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೊನಾ ಸೋಂಕು ಪೀಡಿತರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಹಲವು ಏಳುಬೀಳುಗಳ ನಡುವೆಯೇ ಕೋವಿಡ್-19 ಸೋಂಕಿನ ಚಿಕಿತ್ಸೆಗೆ ಈ ವರ್ಷಾಂತ್ಯಕ್ಕೆ ಔಷ ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅದನೌ ಗೆಬ್ರಿಯಾಸಿಸ್ ಇದನ್ನು ಪ್ರಕಟಿಸಿದ್ದು, ಈ ವರ್ಷದ ಅಂತ್ಯದವರೆಗೆ ಕೊರೊನಾಗೆ ಔಷ ಲಭ್ಯವಾಗಲಿದೆ. ವರ್ಷಾಂತ್ಯಕ್ಕೆ ಔಷ ಸಿಗಲಿದೆ ಎಂಬ ಆಶಾ ಭಾವನೆಯನ್ನು ಹೊಂದಿದ್ದೇವೆ. ಇನ್ನು …
Read More »ಮುನಿರತ್ನಗೆ ಟಿಕೆಟ್ ಕೊಡಿಸಲು ಅಖಾಡಕ್ಕಿಳಿದ ರಮೇಶ್ ಜಾರಕಿಹೊಳಿ..!
ಬೆಂಗಳೂರು,ಅ.7-ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಾಜಿ ಶಾಸಕ ಮುನಿರತ್ನ ಅವರಿಗೆ ಟಿಕೆಟ್ ನೀಡಲೇಬೇಕೆಂದು ಸಚಿವ ರಮೇಶ್ ಜಾರಕಿಹೊಳಿ ಅಖಾಡಕ್ಕಿಳಿದಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಂದು ಕಾವೇರಿ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಮುನಿರತ್ನ ಭೇಟಿಯಾಗಿ ಮಾತುಕತೆ ನಡೆಸಿದರು. ಬೆಳಗಾವಿಗೆ ತೆರಳುತ್ತಿದ್ದ ಸಿಎಂ ಅವರನ್ನು ಭೇಟಿಯಾಗಿ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಉಭಯ ನಾಯಕರು ಟಿಕೆಟ್ ಸಂಬಂಧ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ …
Read More »ಈಗ ಸಿ.ಟಿ.ರವಿ ಏಕಕಾಲಕ್ಕೆ ಐದು ರಾಜ್ಯ, ಎರಡು ಕೇಂದ್ರಾಡಳಿತ ಪ್ರದೇಶಗಳ ಉಸ್ತುವಾರಿ
ಬೆಂಗಳೂರು,ಅ.7- ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಸಚಿವ ಸಿ.ಟಿ.ರವಿ ಅವರಿಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಉಸ್ತುವಾರಿಯನ್ನು ನೀಡಲಾಗಿದೆ. ನವದೆಹಲಿಯಲ್ಲಿ ನಿನ್ನೆ ನಡೆದ ಪಕ್ಷದ ಪ್ರಮುಖ ಪದಾಕಾರಿಗಳ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿ ಸಚಿವ ಸಿ.ಟಿ.ರವಿ ಅವರಿಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಮತ್ತು ಲಕ್ಷದ್ವೀಪಗಳ ಉಸ್ತುವಾರಿಯನ್ನು ವಹಿಸಲಾಗಿದೆ. …
Read More »ಅವಳಿನಗರದ ವಿವಿಧೆಡೆ ಕಳ್ಳತನ ಮಾಡಿದ ಇಬ್ಬರನ್ನೂ ಹುಬ್ಬಳ್ಳಿಯ ನವನಗರ ಪೊಲೀಸರು ಬಂಧಿಸುವಲ್ಲಿ ಯಶ್ವಸಿ
ಹುಬ್ಬಳ್ಳಿ: ಅವಳಿನಗರದ ವಿವಿಧೆಡೆ ಕಳ್ಳತನ ಮಾಡಿದ ಇಬ್ಬರನ್ನೂ ಹುಬ್ಬಳ್ಳಿಯ ನವನಗರ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಹುಬ್ಬಳ್ಳಿಯ ವೀರಮಾರುತಿ ನಗರದ ಭೀಮಣ್ಣ ಕ್ವಾಟಿ ಮತ್ತು ನಾಗರಾಜ ಕ್ವಾಟಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 6.32 ಲಕ್ಷ ಮೌಲ್ಯದ 158 ಗ್ರಾಂ ಬಂಗಾರ ಹಾಗೂ 3, 800 ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಬ್ಬರು ಭೈರಿದೇವರಕೊಪ್ಪದಲ್ಲಿ ನಡೆದ ಎರಡು ಮನೆ ಹಾಗೂ ನವನಗರದ ಕೆಸಿಸಿ ಕಾಲೋನಿಯಲ್ಲಿ ಒಂದು ಮನೆ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. …
Read More »