Breaking News

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಅದೃಷ್ಟವೇ ಸರಿ ಇಲ್ಲ ಅನಿಸುತ್ತೆ.

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಅದೃಷ್ಟವೇ ಸರಿ ಇಲ್ಲ ಅನಿಸುತ್ತೆ. ಕಳೆದ ಮೂರು ತಿಂಗಳಿನಿಂದ ಸರ್ಕಾರದ ವಿರುದ್ಧ ಒಂದಾದ ಮೇಲೊಂದರಂತೆ ಆರೋಪ ಕೇಳಿ ಬರ್ತಿದೆ. ಸುಶಾಂತ್ ಸಿಂಗ್ ಪ್ರಕರಣದಿಂದ ಹಿಡಿದು ನೌಕಾಪಡೆಯ ಮಾಜಿ ಅಧಿಕಾರಿ ಮೇಲಿನ ಹಲ್ಲೆವರೆಗೆ ಸಾಕಷ್ಟು ಘಟನೆಗಳು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸುವಂತೆ ಮಾಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋ ಆರೋಪಗಳನ್ನ ಮಾಡಲಾಗ್ತಿದೆ. ಇದೆಲ್ಲದರ ನಡುವೆ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಶರ್ಮಾ ಇವತ್ತು ಮಹಾರಾಷ್ಟ್ರ ರಾಜ್ಯಪಾಲ …

Read More »

ಮನೆಯ ಹಿತ್ತಲಲ್ಲೇ ಅಕ್ರಮ ಗಾಂಜಾ ಗಿಡ ಬೆಳೆಸಿದ ಆರೋಪಿಗಳು: ಓರ್ವನ ಬಂಧನ

ಮಂಡ್ಯ: ತಮ್ಮ ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಇಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿರುವ ಕೆ.ಆರ್.ಪೇಟೆ ಗ್ರಾಮಾಂತರ ಪೋಲೀಸರು ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಬೂಕನಕೆರೆ ಹೋಬಳಿಯ ಬಳ್ಳೆಕೆರೆ ನಾಟನಹಳ್ಳಿಯ ಜೇಟ್ ಕುಂಟಣ್ಣನ ಬೋರೇಗೌಡರ ಮಗ ಮಂಜೇಗೌಡ(45) ಬಂಧಿತ ಆರೋಪಿಯಾಗಿದ್ದು ಇದೇ ಗ್ರಾಮದ ಮತ್ತೊಬ್ಬ ಆರೋಪಿ ರಾಜೇಗೌಡ ಬಿನ್ ಲೇಟ್ ಈರೇಗೌಡ(58) ತಲೆ ಮರೆಸಿಕೊಂಡಿದ್ದಾನೆ. ಘಟನೆಯ ವಿವರ: ಆರೋಪಿಗಳಾದ ಮಂಜೇಗೌಡ ಮತ್ತು ರಾಜೇಗೌಡ ಅವರು ತಮ್ಮ ವಾಸದ ಮನೆಯ …

Read More »

ಕೋವಿಡ್ ಕಳವಳ- ಸೆ.15: 7576 ಹೊಸ ಪ್ರಕರಣ ; 7406 ಡಿಸ್ಚಾರ್ಜ್ ; 97 ಸಾವು

ಬೆಂಗಳೂರು: ಸೋಮವಾರ ಸಾಯಂಕಾಲದಿಂದ ಮಂಗಳವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 7576 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ. ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 7406 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 97 ಸೋಂಕಿತರು ಮೃತಪಟ್ಟಿದ್ದಾರೆ. ಇದೀಗ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 4,75,265ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಇದೀಗ ಒಟ್ಟು 3,69,229 ಕೋವಿಡ್ ಸೊಂಕಿತರು …

Read More »

ಮಾಲೀಕ ಸತ್ತನೆಂದು ಆಹಾರ ತ್ಯಜಿಸಿ ಪ್ರಾಣಬಿಟ್ಟ ನಾಯಿ: ಬೆಳಗಾವಿಯಲ್ಲಿ ಮನಕಲಕುವ ಘಟನೆ

ಬೆಳಗಾವಿ: ನಾಯಿಯನ್ನು ನಿಯತ್ತಿಗೆ ಹೋಲಿಸಲಾಗುತ್ತದೆ. ಅದರ ಪ್ರೀತಿ, ನಿಯತ್ತು ಮನುಷ್ಯನಿಗೂ ಇಲ್ಲ ಎಂದೇ ಬಿಂಬಿತವಾಗಿದೆ. ಒಂದೇ ಒಂದು ಹೊತ್ತು ಊಟ ಹಾಕಿದರೂ, ಅವರ ಮನೆಯನ್ನು ಜೀವನಪೂರ್ತಿ ಕಾಯುವ ಏಕೈಕ ನಿಯತ್ತಿನ ಪ್ರಾಣಿ ನಾಯಿ ಎಂದೇ ಹೇಳಲಾಗುತ್ತದೆ. ಅಂಥದರಲ್ಲಿ ಜೀವನಪೂರ್ತಿ ಸಾಕಿ ಸಲುಹಿದ ಮಾಲೀಕನ ಮೇಲೆ ಅದೆಷ್ಟು ಪ್ರೀತಿ ಇರಬೇಡ ಈ ನಾಯಿಗೆ. ಇಂಥದ್ದೇ ಪ್ರೀತಿ, ವಿಶ್ವಾಸಹೊಂದಿದ ಬೆಳಗಾವಿಯ ನಾಯಿಯೊಂದು ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಗಲಿದ ಮಾಲೀಕನ ನೆನಪಲ್ಲಿ …

Read More »

ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗ್ತಿರುವ ಬೆನ್ನಲ್ಲೆ ಭಾರತಕ್ಕೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ.

ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗ್ತಿರುವ ಬೆನ್ನಲ್ಲೆ ಭಾರತಕ್ಕೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಕೊರೊನಾ ಗೆದ್ದು ಬಂದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ವಿಷ್ಯದಲ್ಲಿ ಭಾರತ ಬ್ರೆಜಿಲ್ ಹಿಂದಿಕ್ಕಿ ವಿಶ್ವದ ಅಗ್ರ ಸ್ಥಾನವನ್ನು ತಲುಪಿದೆ. ಇಲ್ಲಿಯವರೆಗೆ ಭಾರತದಲ್ಲಿ 38 ಲಕ್ಷ 59 ​​ಸಾವಿರ 399 ರೋಗಿಗಳು ಕೊರೊನಾ ಸೋಲಿಸಿದ್ದಾರೆ. ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಬ್ರೆಜಿಲ್ ನಲ್ಲಿ 37 ಲಕ್ಷ 23 ಸಾವಿರ 206 ಸೋಂಕಿತರು ಗುಣಮುಖರಾಗಿದ್ದಾರೆ. ಬ್ರೆಜಿಲ್ …

Read More »

ನಾಲ್ವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು  : ರಾಜ್ಯ ಸರ್ಕಾರವು ಸೋಮವಾರ ಎಂ.ಎಸ್‌. ಶ್ರೀಕರ, ಟಿ.ಎಚ್‌.ಎಂ. ಕುಮಾರ್‌ ಸೇರಿದಂತೆ ನಾಲ್ಕು ಮಂದಿ ಐಎಎಸ್‌ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಾಣಿಜ್ಯ ತೆರಿಗೆಗಳ ಆಯುಕ್ತರಾಗಿದ್ದ ಎಂ.ಎಸ್‌. ಶ್ರೀಕರ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕೆಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಹಾಗೂ ಉಳಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಟಿ.ಎಚ್‌.ಎಂ. ಕುಮಾರ್‌ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು …

Read More »

ಶುರುವಾಗಿದೆ ಐಪಿಎಲ್‌ ಜ್ವರ: ಪಂದ್ಯಗಳ ನೇರ ಪ್ರಸಾರವನ್ನ ಈ ಚಾನಲ್‌ಗಳಲ್ಲಿ ನೋಡಿ..!

ಡಿಜಿಟಲ್‌ ಡೆಸ್ಕ್‌: ದೇಶದಲ್ಲಿ ಈಗಾಗ್ಲೇ ಐಪಿಎಲ್‌ ಜ್ವರ ಶುರುವಾಗಿದೆ. ಇನ್ನು ಪಿಎಲ್ ಟೂರ್ನಿಯ ನೇರಪ್ರಸಾರ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಪಡೆದುಕೊಂಡಿರುವುದು. ಬರೋಬ್ಬರಿ 16,347.5 ಕೋಟಿ ರೂಪಾಯಿ ಕೊಟ್ಟು 5 ವರ್ಷಗಳಿಗೆ ಐಪಿಎಲ್ ಪಂದ್ಯಗಳ ನೇರಪ್ರಸಾರ ಹಕ್ಕು ಪಡೆದ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಸಹಿತ ಒಟ್ಟು 8 ಭಾಷೆಗಳಲ್ಲಿ ಐಪಿಎಲ್ ಪಂದ್ಯಗಳ ವೀಕ್ಷಕ ವಿವರಣೆಯನ್ನ ನೀಡಲು ಸಿದ್ಧವಾಗಿದೆ. ಹಾಗಾಗಿ ತನ್ನ ನೆಟ್‌ವರ್ಕ್‌ನ ಹಲವು ರಾಷ್ಟ್ರೀಯ …

Read More »

ಕೋವಿಡ್ ದಿಂದ ಗುಣಮುಖರಾದವರ ಸಂಖ್ಯೆ ಅಧಿಕ

ಚಿತ್ರದುರ್ಗ: ಜಿಲ್ಲೆಯಲ್ಲಿ 5034 ಕೋವಿಡ್ ಸೋಂಕಿತರಿದ್ದು, ರಾಜ್ಯಕ್ಕೆ ಹೋಲಿಸಿದಾಗ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ರೇಟ್‌ ಶೇ. 9.70 ಇದೆ. ಮರಣ ಪ್ರಮಾಣ ಶೇ. 0.65 ಹಾಗೂ ಗುಣಮುಖರಾದವರ ಪ್ರಮಾಣ ಶೇ. 75.66 ಇದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ತಿಳಿಸಿದರು. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್‌-19ಗೆ ಚಿಕಿತ್ಸೆ ನೀಡುತ್ತಿದ್ದು, ಸಾರ್ವಜನಿಕರು ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು. ಎಲ್ಲರಿಗೂ ಜಿಲ್ಲಾ …

Read More »

ಭಾರತ-ಚೀನಾ ಗಡಿ ಸಂಘರ್ಷ: ‘ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ’ ಎಂದ ಕೇಂದ್ರ ಸಚಿವ ರಾಜನಾಥ್​​ ಸಿಂಗ್​​

ನವದೆಹಲಿ : ಎಂದಿನಂತೆಯೇ ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಮುಂದುವರಿದಿದೆ. ಅದನ್ನು ಬಗೆಹರಿಸಲು ಆಗುತ್ತಿಲ್ಲ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಂಡಿಲ್ಲ. ಗಡಿಯಲ್ಲಿ ಚೀನಾ ಸೈನಿಕರು ತೀವ್ರ ಅಸಮ್ಮತಿ ತೋರುತ್ತಿದ್ದಾರೆ ಎಂದೇಳಲಾಗುತ್ತಿತ್ತು. ಈ ಮಧ್ಯೆಯೇ ಭಾರತ ಮತ್ತು ಚೀನಾ ಗಡಿ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತಾಡಿದ್ದಾರೆ. ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ. ದ್ವಿಪಕ್ಷೀಯ ಸಂಬಂಧಗಳ …

Read More »

ಬೆಂಗಳೂರು, : ರಾಜ್ಯದ ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ

ಬೆಂಗಳೂರು, : ರಾಜ್ಯದ ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ ಅವಧಿ ಜೂನ್ ತಿಂಗಳಲ್ಲೇ ಮುಗಿದಿದ್ದು, ನಿಯಮದ ಪ್ರಕಾರ ಅಧಿಕಾರವದಿ ಕೊನೆಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕು. ಆದರೆ ಕೊರೋನಾ ಭೀತಿಯಿಂದ ಮುಂದೂಡಲಾಗಿದ್ದು. ಇದೀಗ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ಕೊರೋನಾ ಭೀತಿ ನಡುವೆಯೂ ಕರ್ನಾಟಕದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ ಕಂದಾಯ ಇಲಾಖೆಗೆ ಮಹತ್ವದ ಸೂಚನೆ ಕಂದಾಯ ಇಲಾಖೆಯಲ್ಲಿನ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ …

Read More »