ಚಿಕ್ಕಬಳ್ಳಾಪುರ,ಫೆ.7- ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಂಬಾಲಿಸಿ ಶಿರ ಕಡಿದು ಹತ್ಯೆ ಮಾಡಿರುವ ಘಟನೆ ಗುಂಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡಿಬಂಡೆ ತಾಲ್ಲೂಕಿನ ಬೋಗೇನಹಳ್ಳಿ ಗ್ರಾಮದ ನರಸಿಂಹಪ್ಪ(47) ಕೊಲೆಯಾದ ವ್ಯಕ್ತಿ.ಮೃತ ನರಸಿಂಹಪ್ಪ ತನ್ನ ದ್ವಿಚಕ್ರ ವಾಹನದಲ್ಲಿ ಬೋಗೇನಹಳ್ಳಿಯಿಂದ ವರದಯ್ಯಗಾರಹಳ್ಳಿಗೆ ತೆರಳುತ್ತಿದ್ದಾಗ ಅಪರಿಚಿತರು ಹಿಂಬದಿಯಿಂದ ಬಂದು ಮಚ್ಚಿನಿಂದ ಶಿರ ಕಡಿದು ಕೊಲೆ ಮಾಡಿದ್ದಾರೆ. ಹಾಡುಹಗಲೇ ಈ ಕೃತ್ಯ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ದುಷ್ಕರ್ಮಿಗಳ ಗುರುತು ಪತ್ತೆಯಾಗಿಲ್ಲ. ಕೊಲೆಗೆ ಕಾರಣವೇನೆಂಬುದು ಕೂಡ …
Read More »ಕನ್ನಡಿಗ ಲಾರಿ ಚಾಲಕನ ಮೇಲೆ ಪುಂಡರ ಗುಂಪೊಂದು ಹಲ್ಲೆ
ಬೆಳಗಾವಿ,ಫೆ.7-ಮರಾಠಿ ಮಾತನಾಡದ ಕಾರಣಕ್ಕಾಗಿ ಮಹಾರಾಷ್ಟ್ರದಲ್ಲಿ ಕನ್ನಡಿಗ ಲಾರಿ ಚಾಲಕನ ಮೇಲೆ ಪುಂಡರ ಗುಂಪೊಂದು ಹಲ್ಲೆ ಮಾಡಿದ್ದು, ಈ ಸಂಬಂಧ ನಾಲ್ಕು ಮಂದಿ ಬಂಸಲಾಗಿದೆ. ಮಹಾರಾಷ್ಟ್ರದ ಸತಾರಾ ಟೋಲ್ ಬಳಿ ಈ ಘಟನೆ ನಡೆದಿದ್ದು, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಲಕ್ಕೇನಹಳ್ಳಿ ನಿವಾಸಿ ಲಾರಿ ಚಾಲಕ ಗೋವಿಂದರಾಜು ಹಲ್ಲೆಗೊಳಗಾಗಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿ ವಿವಾದವನ್ನು ಕೆಣಕಿ ಎರಡೂ ರಾಜ್ಯಗಳ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿದ ಬೆನ್ನಲ್ಲೇ ಕನ್ನಡಿಗ ಲಾರಿ …
Read More »ಬಡ ಹೆಣ್ಣು ಮಕ್ಕಳನ್ನು ಕೆಟ್ಟ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ ಪಾಪಿಗಳನ್ನು ಬಂಧಿಸಿದ ಎಪಿಎಂಸಿ ಠಾಣೆ ಪೊಲೀಸರು
ಬೆಳಗಾವಿ: ಅಮಾಯಕ ಹೆಣ್ಣು ಮಕ್ಕಳನ್ನು ಕರೆತಂದು ಅನೈತಿಕ ಚಟುವಟಿಕೆಗಳಿ ಬಳಸಿಕೊಳ್ಳುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಖದೀಮರನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು, ಹೊರ ರಾಜ್ಯಗಳಿಂದ ಬಡ ಹೆಣ್ಣುಮಕ್ಕಳನ್ನು ಕೆಲಸ ಕೊಡಿಸುವುದಾಗಿ ಹೇಳಿ ಕರೆತಂದು ಮನೆಯಲ್ಲಿರಿಸಿಕೊಂಡು ಅವರನ್ನು ಅನೈತಿಕ ಚಟುವಟಿಕೆಗಳ ದಂಧೆಗೆ ಬಳಸಿಕೊಳ್ಳುತ್ತಿದ್ದರು. ಪ್ರತಿ ಗಿರಾಕಿಗಳಿಂದ 2500ರೂ ಪಡೆಯುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಆದರಿಸಿ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು 30 ವರ್ಷದ ಮಾರುತಿ ಬಾಳಪ್ಪ …
Read More »ಕತ್ತಲು ಬೆಳಕಿನ ಆಟದಲ್ಲಿ ಶ್ಯಾಡೊ ಹುಡುಕಾಟ
ಮಾಸ್ ಆಡಿಯನ್ಸ್‌ನ ಸಿನಿಮಾ ಥಿಯೇಟರ್‌ನತ್ತ ಆಕರ್ಷಿಸಲು ಮುಂದಾಗಿರುವ ಸಿನಿಮಾ ಮಂದಿ ಒಂದರ ಹಿಂದೊಂದು ಮಾಸ್ ಕಂಟೆಂಟ್ ಸಿನಿಮಾಗಳನ್ನ ಸಿನಿಪ್ರಿಯರ ಮುಂದೆ ತರುತ್ತಿದ್ದಾರೆ. ಈ ವಾರ ಕೂಡ ಅಂಥದ್ದೇ ಚಿತ್ರ “ಶ್ಯಾಡೊ’ ತೆರೆಗೆ ಬಂದಿದೆ. ಸುಮಾರು ಎರಡು ವರ್ಷದಿಂದ ವಿನೋದ್ ಪ್ರಭಾಕರ್ ಸಿನಿಮಾಗಳನ್ನ ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡಿದ್ದ ಆಯಕ್ಷನ್ ಪ್ರಿಯರ ಮುಂದೆ, ವರ್ಷದ ಆರಂಭದಲ್ಲಿಯೇ “ಶ್ಯಾಡೊ’ ಎಂಬ ಆಯಕ್ಷನ್ – ಥ್ರಿಲ್ಲರ್ ಸಿನಿಮಾ ಬಂದಿದೆ. ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ, ಇದ್ದಕ್ಕಿದ್ದಂತೆ …
Read More »ಚಿತ್ರಮಂದಿರದೊಳಗೆ ಹಾಗೂ ಹೊರಗೆ ಅಭಿಮಾನಿಗಳಸಂಭ್ರಮ, ಶಿಳ್ಳೆ, ಕೇಕೆ, ಜೈಕಾರ ಕೇಳದೇ ದೊಡ್ಡ ಗ್ಯಾಪ್ ಆಗಿತ್ತು
ಚಿತ್ರಮಂದಿರದೊಳಗೆ ಹಾಗೂ ಹೊರಗೆ ಅಭಿಮಾನಿಗಳಸಂಭ್ರಮ, ಶಿಳ್ಳೆ, ಕೇಕೆ, ಜೈಕಾರ ಕೇಳದೇ ದೊಡ್ಡ ಗ್ಯಾಪ್ ಆಗಿತ್ತು. ಆದರೆ, ಈಗ ನೀರಸವಾಗಿದ್ದ ಚಿತ್ರಮಂದಿರಗಳು ಮತ್ತೆ ಆಯಕ್ಟೀವ್ ಆಗಿವೆ. ಶುಕ್ರವಾರ ಬಿಡುಗಡೆಯಾಗಿರುವ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ ಅಭಿಮಾನಿಗಳ ಸಂಭ್ರಮ ಮರುಕಳಿಸಲು ಸಾಕ್ಷಿಯಾಯಿತು. ಇದಕ್ಕೆ ಕಾರಣ “ಇನ್ಸ್‌ಪೆಕ್ಟರ್ ವಿಕ್ರಂ’ ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಮಾಸ್ ಡೈಲಾಗ್, ಹೈವೋಲ್ಟೆàಜ್ ಫೈಟ್, ಕ್ಯೂಟ್ ಲವ್‌ಸ್ಟೋರಿ, ಟ್ವಿಸ್ಟ್, ಚಾಲೆಂಜಿಂಗ್ ಸ್ಟಾರ್ ಗ್ರ್ಯಾಂಡ್ ಎಂಟ್ರಿ ಜೊತೆಗೆ ಕುತೂಹಲ …
Read More »ವಿನಯ್‌ಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ
ಡಾ ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ‘ಅದೊಂದಿತ್ತು ಕಾಲ’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ವಿನಯ್‌ಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಈ ಚಿತ್ರಕ್ಕೆ ಕೀರ್ತಿ ನಿರ್ದೇಶನ ಮಾಡುತ್ತಿದ್ದು, ಇದು ಇವರ ಚೊಚ್ಚಲ ಸಿನಿಮಾ ಆಗಿದೆ. 90ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ಪೋಸ್ಟರ್‌ನಲ್ಲಿ ಪುಟ್ಟ ಹುಡುಗನೊಬ್ಬ ಗಾಳಿಪಟ …
Read More »ಸುದೀಪ್ ಅಭಿಮಾನಿ ಬಳಗ ಸೇರಿದ 5000 ಮಹಿಳೆಯರು!
ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ ಸುದೀಪ್, ಹೊರ ರಾಜ್ಯ, ದೇಶಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಬಹುತೇಕ ನಟರಿಗೆ ಅಭಿಮಾನಿ ಸಂಘಗಳು ಇರುತ್ತವೆ, ಇದು ಬಹುತೇಕ ಸಹಜ ಸಹ. ಬಹುತೇಕ ನಟರಿಗೆ ಪುರುಷ ಅಭಿಮಾನಿ ಸಂಘಗಳು ಮಾತ್ರವೇ ಇರುತ್ತವೆ. ಆದರೆ ಸುದೀಪ್ ಅವರಿಗೆ ಮಹಿಳಾ ಅಭಿಮಾನಿ ಸಂಘವೂ ಇದೆ. ಈ ರೀತಿ ಮಹಿಳಾ ಅಭಿಮಾನಿ ಸಂಘ ಹೊಂದಿರುವ ವಿರಳ ನಟರಲ್ಲಿ ಸುದೀಪ್ ಸಹ ಒಬ್ಬರು. 5000 ಮಹಿಳಾ …
Read More »ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ‘ಏಕಾಂಗಿ ಪ್ರತಿಭಟನೆ’ ನಡೆಸಿದ ರೈತ
ಬಾಗಲಕೋಟೆ: ನಗರದ ಬಸವೇಶ್ವರ ವೃತ್ತದಲ್ಲಿ ರೈತರೊಬ್ಬರು ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸುಮಾರು ಎರಡೂವರೆ ಗಂಟೆ ಏಕಾಂಗಿಯಾಗಿ ಪ್ರತಿಭಟಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಗಳೊಳ್ಳಿ ಗ್ರಾಮದ ರೈತ ಬಿ.ಎಸ್.ಬಜನ್ನವರ್ ಎಂಬುವವರು ಏಕಾಂಗಿಯಾಗಿ ನಿಂತು ಪ್ರತಿಭಟನೆ ನಡೆಸಿದ್ದಾರೆ. ಇಂದು ದೇಶಾದ್ಯಂತ ಹಮ್ಮಿಕೊಂಡಿರುವ ಹೆದ್ದಾರಿ ಬಂದ್ಗೆ ಬೆಂಬಲ ಸೂಚಿಸಿ ರೈತ ಈ ರೀತಿ ಹೋರಾಟ ನಡೆಸಿದ್ದಾರೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾ ನಿರತ ರೈತ ಒತ್ತಾಯಿಸಿದ್ದಾರೆ.
Read More »ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ಆನೆಗಳ ಸಾವು
ಬೆಂಗಳೂರು :ಇತ್ತೀಚೆಗೆ ತಮಿಳುನಾಡಿನ ಮಡುಮಲೈನಲ್ಲಿ ಆನೆಗೆ ಬೆಂಕಿ ಹಚ್ಚಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ದೇಶಾದ್ಯಂತ, ಆನೆಗಳ ರಕ್ಷಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಆನೆಗಳ ತವರೂರಾದ ಕರ್ನಾಟಕದಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಸುಮಾರು 78 ಆನೆಗಳು ಮಾನವನ ದುಷ್ಕೃತ್ಯಕ್ಕೆ ಬಲಿಯಾಗಿವೆ ಎಂದು ತಿಳಿದು ಬಂದಿದೆ. ಇವುಗಳಲ್ಲಿ ಕ್ರಿಮಿನಾಶಕ ಔಷಧ ಸೇವನೆಯಿಂದ, ವಿದ್ಯುತ್ ಶಾಕ್ ನಿಂದ, ರಸ್ತೆ ಆಘಾತಗಳಿಂದ ಮತ್ತು ಬಂದೂಕುಗಳಿಂದ ಕೊಲ್ಲಲ್ಪಟ್ಟ ಘಟನೆಗಳು ನಡೆದಿವೆ. ಆರು ವರ್ಷಗಳ …
Read More »ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸದಸ್ಯನ ಮನೆಗೆ ಬೆಂಕಿ
ಕೋಲಾರ: ಗ್ರಾಮ ಪಂಚಾಯತಿ ಚುನಾವಣೆಯ ದ್ವೇಷದ ಹಿನ್ನೆಲೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸದಸ್ಯನ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮುಳಬಾಗಲು ತಾಲೂಕಿನ ರಾಜೆಂದ್ರಹಳ್ಳಿಯಲ್ಲಿ ನಡೆದಿದೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿತ ನೂರ್ ಜಾನ್ ಮನೆಗೆ ವಿರೋಧಿ ಗುಂಪಿನಿಂದ ಬೆಂಕಿ ಹಾಕಿರುವ ಅರೋಪ ಕೇಳಿ ಬಂದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಹಾಗೂ ನಷ್ಟ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ …
Read More »