ನವದೆಹಲಿ: ಕೋವಿಡ್ ಚಿಕಿತ್ಸೆಗೆ ಸನ್ ಫಾರ್ಮಾಸ್ಯುಟಿಕಲ್ಸ್ ಇಂಡಸ್ಟ್ರೀಸ್ ವತಿಯಿಂದ ಫೆವಿಪಿರಾವಿರ್ ಮಾತ್ರೆಯನ್ನು ಪ್ಲೂಗಾರ್ಡ್ ಹೆಸರಲ್ಲಿ ಬಿಡುಗಡೆ ಮಾಡಲಾಗಿದ್ದು 35 ರೂ. ದರ ನಿಗದಿ ಮಾಡಲಾಗಿದೆ.
ಪ್ಲೂಗಾರ್ಡ್ ಹೆಸರಿನ ಫೆವಿಪಿರಾವಿರ್ 200 ಎಂಜಿ ಮಾತ್ರೆಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ತಿಳಿಸಿದೆ. ಕಡಿಮೆ ಮತ್ತು ಮಧ್ಯಮ ಪ್ರಮಾಣದ ಕೊರೋನಾ ಲಕ್ಷಣವಿರುವ ರೋಗಿಗಳಿಗೆ ಇದನ್ನು ಬಿಡುಗಡೆ ಮಾಡಲಾಗಿದೆ.
ವೈರಾಣು ನಿರೋಧಕವಾಗಿರುವ ಒಂದು ಮಾತ್ರೆಗೆ 35 ರೂ. ದರ ನಿಗದಿ ಮಾಡಲಾಗಿದೆ. ಸನ್ ಫಾರ್ಮಾ ವತಿಯಿಂದ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದು, ಕಡಿಮೆ ಮತ್ತು ಮಧ್ಯಮ ಪ್ರಮಾಣದ ಕೊರೊನಾ ಸೋಂಕಿತರ ಸಂಭಾವ್ಯ ಚಿಕಿತ್ಸೆಗೆ ದೇಶದಲ್ಲಿ ಅಂಗೀಕರಿಸಲ್ಪಟ್ಟ ಏಕೈಕ ಮಾತ್ರೆ ಇದಾಗಿದೆ ಎಂದು ಹೇಳಲಾಗಿದೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??