ಗದಗ: ಜಿಲ್ಲೆಯಲ್ಲಿ ಹೊಸದಾಗಿ 46 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,399ಕ್ಕೆ ಏರಿದೆ. ಈ ವರೆಗೆ 1321 ಜನರು ಗುಣಮುಖರಾಗಿದ್ದು, 1027 ಪ್ರಕರಣಗಳು ಸಕ್ರಿಯವಾಗಿವೆ. ಗದಗ-28, ಮುಂಡರಗಿ-4, ನರಗುಂದ-6, ರೋಣ-6, ಶಿರಹಟ್ಟಿ-1, ಹೊರಜಿಲ್ಲೆಯ ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಜೆ.ಟಿ. ಕಾಲೇಜು ರಸ್ತೆ, ನರಸಾಪುರ, ವಿವೇಕಾನಂದ ನಗರ,ಬೆಟಗೇರಿ, ಕಳಸಾಪುರ ರಸ್ತೆಯ ಬಾಪೂಜಿ ನಗರ, ಹುಡ್ಕೊ ಕಾಲೋನಿ, ಮದೀನಾ ಮಸೀದಿ ಹತ್ತಿರ, ಎಸ್.ಎಂ. ಕೃಷ್ಣಾ ನಗರ, ಗಣೇಶ ಕಾಲೋನಿ, ಹೆಲ್ತ್ ಕ್ಯಾಂಪ್, ಮುಳಗುಂದ ನಾಕಾ, ವಕೀಲ ಚಾಲ, ಗದಗ ತಾಲೂಕಿನ ಬಿಂಕದಕಟ್ಟಿ, ಮುಳಗುಂದ, ಲಕ್ಕುಂಡಿ, ಮುಂಡರಗಿ ಪಟ್ಟಣದ ಎ.ಡಿ. ನಗರ, ಮುಂಡರಗಿ ತಾಲೂಕಿನ ಕೊರ್ಲಳ್ಳಿ, ಪೇಠಾಲೂರ, ರೋಣ ತಾಲೂಕಿನ ಚಿಕ್ಕಮಣ್ಣೂರ, ಹಿರೇಮಣ್ಣೂರ, ಬೆಳವಣಕಿ, ಹಿರೇಹಾಳ, ನರೇಗಲ್ ಪಟ್ಟಣದ ತೆಗ್ಗಿನಕೇರಿ ಓಣಿ, ಶಿರಹಟ್ಟಿ ತಾಲೂಕಿನ ಅಡರಕಟ್ಟಿ, ನರಗುಂದ, ನರಗುಂದ ತಾಲೂಕಿನ ಶಿರೋಳ ಭಾಗದ ಜನರಿಗೆ ಸೋಂಕು ದೃಢಪಟ್ಟಿದೆ.
ಮತ್ತಿಬ್ಬರು ಸಾವು: ಜಿಲ್ಲೆಯಲ್ಲಿ ಮತ್ತಿಬ್ಬರು ಕೋವಿಡ್ ಸೋಂಕಿನಿಂದ ಕೊನೆಯುಸಿರಿಳೆದಿದ್ದು, ಒಟ್ಟು 51 ಜನರು ಬಲಿಯಾದಂತಾಗಿದೆ. ನರಗುಂದ ಪಟ್ಟಣದ ಹೊಸೂರ ಓಣಿ ನಿವಾಸಿ 55 ವರ್ಷದ ಮಹಿಳೆ (ಪಿ-163276)ಗೆ ಆ.5ರಂದು ಸೋಂಕು ದೃಢಪಟ್ಟಿದ್ದು, ಶ್ವಾಸಕೋಶದ ತೊಂದರೆ ಹಾಗೂ ನಿಮೋನಿಯಾದಿಂದಾಗಿ ಆ.10ರಂದು ಮೃತಪಟ್ಟಿದ್ದಾರೆ.
ಲಕ್ಷ್ಮೇಶ್ವರ ಪಟ್ಟಣದ ಲಕ್ಷ್ಮೀ ನಗರದ 55 ವರ್ಷದ ವ್ಯಕ್ತಿಗೆ (ಪಿ-181733) ಆ.8ರಂದು ಸೋಂಕು ತಗುಲಿದ್ದು, ಶ್ವಾಸಕೋಶ ತೊಂದರೆ, ನಿಮೋನಿಯಾ ಹಾಗೂ ಹೃದಯಾಘಾತದಿಂದಾಗಿ ಅದೇ ದಿನ ಕೊನೆಯುಸಿರೆಳೆದಿದ್ದಾರೆ. ಕೋವಿಡ್-19ರ ಮಾರ್ಗಸೂಚಿಗಳನ್ವಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಡಿಸಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.