Breaking News
Home / ಜಿಲ್ಲೆ / ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರದ ಎರಡನೇ ಮೋಷನ್ ಪೋಸ್ಟರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರದ ಎರಡನೇ ಮೋಷನ್ ಪೋಸ್ಟರ್

Spread the love

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರದ ಎರಡನೇ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್, “ಎಲ್ಲರಿಗೂ ವರ್ಷದ ಮೊದಲನೆಯ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಎಳ್ಳು, ಬೆಲ್ಲ ಸವಿಯುತ್ತಾ ನಮ್ಮ ರಾಬರ್ಟ್ ಚಿತ್ರದ ಎರಡನೇ ಲುಕ್ ಪೋಸ್ಟರ್ ನಿಮಗಾಗಿ ಬಿಡುಗಡೆ ಮಾಡುತ್ತಿದ್ದೇವೆ. ನೋಡಿ ಆಶೀರ್ವದಿಸಿ” ಎಂದು ಬರೆದುಕೊಂಡಿದ್ದಾರೆ.

ರಿಲೀಸ್ ಆಗಿರುವ ಮೋಷನ್ ಪೋಸ್ಟರ್ 53 ಸೆಕೆಂಡ್‍ಗಳಿದ್ದು, ಅದ್ಭುತವಾಗಿ ಮೂಡಿ ಬಂದಿದೆ. ದರ್ಶನ್ ಆಂಜನೇಯ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಹೆಗಲ ಮೇಲೆ ರಾಮನ ಪಾತ್ರದ ಮಗುವನ್ನು ಕೂರಿಸಿಕೊಂಡಿದ್ದಾರೆ. ಪುಟ್ಟ ರಾಮ, ರಾವಣ ನ ಪ್ರತಿಕೃತಿಯನ್ನು ದಹಿಸಲು ಬಿಲ್ಲು ಹಿಡಿದಿರುವುದನ್ನು ಕಾಣಬಹುದಾಗಿದೆ.

ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ನೋಡಿದ್ದ ಅಭಿಮಾನಿಗಳು ‘ರಾಬರ್ಟ್’ ಸಿನಿಮಾದಲ್ಲಿ ಆಂಜನೇಯನ ಅವತಾರದಲ್ಲಿ ದರ್ಶನ್ ನೋಡಿ ಖುಷಿಯಾಗಿದ್ದಾರೆ.


Spread the love

About Laxminews 24x7

Check Also

ಲಕ್ಷ್ಮಣ ಸವದಿ ಟಿಕೇಟ್‌ ವಿಷಯದಲ್ಲಿ ಮುನಿಸಿಕೊಂಡಿದ್ದು ಕಾಂಗ್ರೆಸ್‌ ಸೇರ್ಪಡೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

Spread the love ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ