ಮುಂಬೈ: ಕೊರೊನಾ ಸೋಂಕಿತರ ಸಂಖ್ಯೆ ಇನ್ನೂ ಕಡಿಮೆಯಾಗದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಆಗಸ್ಟ್ 31ರವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ.
ಬುಧವಾರಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಮಹಾರಾಷ್ಟ್ರದಲ್ಲಿ ನಾಲ್ಕು ಲಕ್ಷ ದಾಟಿದೆ. ಆಗಸ್ಟ್ 5 ರಿಂದ ಮಾಲ್‌ಗಳು, ವಾಣಿಜ್ಯ ಕಟ್ಟಡಗಳು ತೆರೆದಿರಲಿವೆ. ಚಿತ್ರಮಂದಿರಗಳು ಬಂದ್ ಇರಲಿವೆ. ಫುಡ್ ಕೋರ್ಟ್, ರೆಸ್ಟೋರೆಂಟ್‌ಗಳು ಬೆಳಗ್ಗೆ 9 ರಿಂದ ಸಂಜೆ 7ರವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಕೊವಿಡ್-19 ಸೋಂಕಿತರಿಗಿಂತ ಗುಣಮುಖರೇ ಹೆಚ್ಚು
ಮಹಾರಾಷ್ಟ್ರ ಸರ್ಕಾರವು ಕಳೆದ ತಿಂಗಳು ಜುಲೈ 31ವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿತ್ತು.
ಆದರೆ ರಾಜ್ಯದಲ್ಲಿ ಕೊರೊನಾ ಸೋಂಕು ವಿಪರೀತವಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಿದ್ದಾರೆ.
ಯಾವುದೇ ಸಮಾರಂಭವಿರಲಿ 50ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ. ಯಾರಾದರೂ ಮೃತಪಟ್ಟಲ್ಲಿ ಅಂತ್ಯಕ್ರಿಯೆಯಲ್ಲಿ 20 ಮಂದಿ ಪಾಲ್ಗೊಳ್ಳಬಹುದಾಗಿದೆ. ಮಾಲ್‌ಗಳಲ್ಲಿ ರೆಸ್ಟೋರೆಂಟ್, ಫುಡ್ ಕೋರ್ಟ್ ಕಿಚನ್‌ಗಳು ತೆರೆದಿರಲಿವೆ. ಹೋಮ್ ಡೆಲಿವರಿಗೆ ಮಾತ್ರ ಅವಕಾಶವಿದೆ.
ಜಿಮ್ನಾಸ್ಟಿಕ್ಸ್, ಗಾಲ್ಫ್, ಫೈರಿಂಗ್ ರೇಂಜ್, ಟೆನ್ನಿಸ್, ಬ್ಯಾಡ್‌ಮಿಂಟನ್‌ಗೆ ಅವಕಾಶವಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸ್ವಿಮ್ಮಿಂಗ್ ಪೂಲ್ ತೆರೆಯಲು ಅವಕಾಶವಿಲ್ಲ.
ಅನ್ ಲಾಕ್-3.0 ಮಾರ್ಗಸೂಚಿ ಬಿಡುಗಡೆ: ಪ್ರಮುಖ ಅಂಶಗಳು ಇಲ್ಲಿವೆ
ಬ್ಯೂಟಿ ಪಾರ್ಲರ್, ಹೇರ್ ಸಲೂನ್, ಸ್ಪಾ ತೆರೆಯಲು ಜೂನ್ 25ರಿಂದಲೇ ಅನುಮತಿ ದೊರೆತಿದೆ. ಮಹಾರಾಷ್ಟ್ರದಲ್ಲಿ ಬುಧವಾರ 9211 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 4,00,651 ಪ್ರರಣಗಳಿವೆ.