ಯಮಕನಮರಡಿ: ಲಾಕ್‌ಡೌನ್ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಧಾನ್ಯ ಕಿಟ್ ವಿತರಣಾ ಕಾರ್ಯಕ್ರಮವನ್ನು ಇಂದು ಶಾಸಕ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಸತೀಶ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಸುಮಾರು ಏಳು ನೂರು ಬಡಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಿಸುವ ಕಾರ್ಯಕ್ರವನ್ನು ಇಲ್ಲಿನ ಗುರುಸಿದ್ಧ ಮಹಾಸ್ವಾಮಿಗಳ ಸಭಾಭವನದಲ್ಲಿ ಶ್ರೀ ರಾಚ್ಯೋಟಿ ಶ್ರೀಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬಡಜನರ ಸಂಕಷ್ಟಕ್ಕೆ ನೆರವಾಗುವ ಈ ಕಾರ್ಯಕ್ಕೆ ಜನ ಕೆಪಿಸಿಸಿ ಕಾರ್ಯಾಧ್ಯಕ್ಷ ಕೂಡ ಆದ ಸತೀಶ ಜಾರಕಿಹೊಳಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಹಾದೇವ ಪಟೋಳ್ಳಿ, ದಸ್ತಗೀರ ಬಸ್ಸಾಪುರೆ, ಈರಣ್ಣಾ ಬಿಸಿರೊಟ್ಟಿ, ಶಿವಶಂಕರ ಜುಟ್ಟಿ, ಕಿರಣಸಿಂಗ್ ರಜಪೂತ, ಅಸ್ಲಂ ಪಕಾಲಿ, ಧರ್ಮಾ ದುಪದಾಳೆ, ಸಿದ್ದಪ್ಪಾ ಸಿಡಿ, ದೇವಪ್ಪಾ ಹುಣ್ಣರಗಿ ಸೇರಿ ಇತರರು ಇದ್ದರು.