ಗೋಕಾಕ:ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರು ದಿ.6, 7, 8ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸಕೈಗೊಳ್ಳಲಿದ್ದಾರೆ.
ದಿ.6 ಶುಕ್ರವಾರದಂದು ಬೆಳಿಗ್ಗೆ 9ಗಂ ಬೆಂಗಳೂರು ರಸ್ತೆ ಮೂಲಕ ಸಂಜೆ ಗೋಕಾಕ ಆಗಮಿಸಿ ಗೋಕಾಕನಲ್ಲಿ ವಾಸ್ತವ್ಯ. ದಿ.7 ಶನಿವಾರದಂದು ಬೆಳಿಗ್ಗೆ 10.30ಗಂ ಎಮ್ ಕೆ ಹುಬ್ಬಳ್ಳಿಯಲ್ಲಿ ಜರುಗಲಿರುವ ಅಭಿನಂಧನಾ ಸಮಾರಂಭದಲ್ಲಿ ಭಾಗವಹಿಸಿ, ಮಧ್ಯಾಹ್ನ 11.30ಗಂ ಬೆಳಗಾವಿಯಲ್ಲಿ ನಗರಾಭಿವೃದ್ಧಿ ಸಚಿವರೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಹಾಗೂ ಸ್ಮಾರ್ಟಸಿಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು , ಮಧ್ಯಾಹ್ನ 2.30ಕ್ಕೆ ದಿಗ್ಗೇವಾಡಿ ಬಾಂದಾರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಧ್ಯಾಹ್ನ 4ಗಂ ಅಥಣಿಯ ಕೃಷ್ಣಾ ನದಿ ತೀರದ ಹಿತರಕ್ಷಣಾ ಸಮಿತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ 4.30ಕ್ಕೆ ಜುಂಜರವಾಡ ಕೃಷ್ಣಾ ನದಿ ಬ್ಯಾರೇಜನ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಗೋಕಾಕನಲ್ಲಿ ವಾಸ್ತವ್ಯ.
ದಿ.8 ರವಿವಾರ ಬೆಳಿಗ್ಗೆ 10ಗಂಟೆಗೆ ಗೋಕಾಕ ನಗರದಿಂದ ನಿರ್ಗಮಿಸಿ ಬೆ.11.30ಕ್ಕೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ನಡೆಸಿ, ಸಂಜೆ 4.30ಕ್ಕೆ ವಿಮಾನದ ಮೂಲಕ ಬೆಂಗಳೂರು ಕೇಂದ್ರಸ್ಥಾನಕ್ಕೆ ಪ್ರಯಾಣ ಬೆಳೆಸುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
