ಗೋಕಾಕ :ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಆರೋಗ್ಯ ನಿರೀಕ್ಷಕರ ಸಂಘ ಗೋಕಾಕ ತಾಲ್ಲೂಕು ವತಿಯಿಂದ ಪ್ರದಾನಮಂತ್ರಿ ವಿಪತ್ತು ಪರಿಹಾರ ನಿಧಿಗೆ 10ಸಾವಿರ ರೂಪಾಯಿ ನೀಡಲಾಯಿತು.
ಗೋಕಾಕ ತಾಲೂಕಿನ ಆರೋಗ್ಯ ನಿರೀಕ್ಷಕರ ಸಂಘದಿಂದ ಕೊರೋನಾ ವೈರಸ್ ಹಿನ್ನಲೆಯಲ್ಲಿ ಕೇಂದ್ರಸರ್ಕಾರ ಕೋರಿರುವ ಆರ್ಥಿಕ ನೆರವಿಗೆ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ॥ಅಂಟಿನ್ ಸರ್ ಮುಖಾಂತರ ಹತ್ತು ಸಾವಿರ ರೂಪಾಯಿಗಳನ್ನು ಸಂದಾಯ ಮಾಡಲಾಯಿತು .
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ನಿರೀಕ್ಷಕರ ಸಂಘದ ಪದಾಧಿಕಾರಿಗಳಾದ ಶ್ರೀ ಎಸ್. ಎಮ್. ಅಂಗಡಿ, ಶ್ರೀ ರಾಮಚಂದ್ರ ಸಣ್ಣಕ್ಕಿ, ಶ್ರೀ ಸತೀಶ್ ಹೇರೂರ, ಶ್ರೀ ಡಿ. ಎಚ್. ಶೇಖ್, ಶ್ರೀ ಎ. ಎಸ್. ತಹಶೀಲದಾರ್ , ಶ್ರೀಮತಿ ಮಲ್ಲಮ್ಮ ನಾಯಿಕ್, ಶ್ರೀ ಸಂಜೀವ ಕೌಜಲಗಿ, ಶ್ರೀ ಡಿ. ಕೆ. ಪತ್ತಾರ ಮತ್ತಿತರು ಭಾಗವಹಿಸಿದರು

ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಆರೋಗ್ಯ ನಿರೀಕ್ಷಕರ ಸಂಘದಿಂದ ಹಣ ಸಹಾಯ ಮಾಡಿದರು
Spread the love
Spread the love