ಘಟಪ್ರಭಾ:ಸ್ಥಳೀಯ ಮಲ್ಲಾಪೂರ ಪಿಜಿ ಪಟ್ಟಣದಲ್ಲಿ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ವತಿಯಿಂದ ಅಲೆಮಾರಿ ಜನಾಂಗದವರಿಗೆ ಮತ್ತು ಬಡ. ಕುಟುಂಬದವರಿಗೆ ದಿನಸಿ ಸಾಮಾನುಗಳು ವಿತರಣೆ
ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ರಿಜಿಸ್ಟರ್ ಕರ್ನಾಟಕ ರಾಜ್ಯ ನಮ್ಮ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಮತಿ ಗಾಯತ್ರಿ ಚಂದ್ರಶೇಖರ ವಿಶ್ವ ಕರ್ಮ ಅವರ ಮಾರ್ಗದರ್ಶನದಂತೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣದಲ್ಲಿ ಸಮಿತಿಯ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಸುರೇಶ ಪತ್ತಾರ ರವರು 19 ಕುಟುಂಬದ ಅಲೆಮಾರಿ ಜನಾಂಗಕ್ಕೆ ಹಾಗೂ ಬಡ ಕುಟುಂಬಗಳಿಗೆ ಮನೆಗೆ ಬೇಕಾಗುವ ದಿನಸಿ ಸಾಮಾನುಗಳನ್ನು ಸ್ಥಳೀಯ ಠಾಣೆಯ PSI ಹಾಲಪ್ಪ ಬಾಲದಂಡಿ ಸಾಹೇಬ್ರು ಹಸ್ತಾಂತರದ ಮುಖಾಂತರ ವಿತರಿದರು.
ಮಾತನಾಡಿದ ಸಮಿತಿಯ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ರಂಗಪ್ಪ ಪತ್ತಾರ ರವರು ದೇಶದಲ್ಲಿ, ರಾಜ್ಯದಲ್ಲಿ ಕೊರೋನ ಸೋಂಕು ಹಬ್ಬಿದೆ ಇದರಿಂದ ಅಲೆಮಾರಿ ಜನಾಂಗದವರು, ಕಾರ್ಮಿಕರು,ಬಡಜನರು ಆಹಾರ ಹಾಗೂ ದಿನಸಿ ಪದಾರ್ಥಗಳಿಲ್ಲದೆ ಪರದಾಡುವಂತಾಗಿದೆ.ಇದರಿಂದಾಗಿ ಜನ ಹಸಿವಿನಿಂದ ಬಳಲುತ್ತಿದ್ದಾರೆ.ಅಂತರವನ್ನು ಗುರುತಿಸಿ ಗೋಕಾಕ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ನಮ್ಮ ವಿಶ್ವ ಕರ್ಮ ಹೋರಾಟಗಾರ ಸಮಿತಿಯಿಂದ ದಿನಬಳಕೆಯ ಬೇಕಾದ ವಸ್ತುಗಳನ್ನು ಪೂರೈಸಲು ನಮ್ಮ ಸಮಿತಿ ಮುಂದಾಗಿದೆ. ಪ್ರತಿಯೊಬ್ಬರು ಮಾಸ್ಕನ್ನು ಧರಿಸಬೇಕು. ವಿನಾಕಾರಣ ರಸ್ತೆ ಮಧ್ಯೆ ತಿರುಗಾಡದೇ ಸಮಾಜದ ಅಂತರವನ್ನು ಕಾಯ್ದು ಕೊಳ್ಳಿ ಕೇಂದ್ರ, ರಾಜ್ಯ ಸರ್ಕಾರ ನೀಡಿರುವ ಆದೇಶ ಪರಿಪಾಲನೆ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಸಿದ್ದಾರೋಡ ಬಡಿಗೇರ. ತಾಲೂಕಾ ಉಪಾಧ್ಯಕ್ಷರಾದ ಮಹೇಶ್ ಪತ್ತಾರ. ಆನಂತ ಪತ್ತಾರ. ರಾಘವೇಂದ್ರ ಪತ್ತಾರ. ಮೌನೇಶ ಪತ್ತಾರ. ಶಿವಾನಂದ ಪತ್ತಾರ. ರಮೇಶ ಖಾನಪ್ಪನವರ.ಸಿದ್ದು ಖಾನಪ್ಪನವರ.ಮುನ್ನಾ.ಮಲ್ಲಾಪೂರ ಪಿಜಿ ಪಟ್ಟಣದ ಸಮಿತಿಯ ಸರ್ವ ಸದಸ್ಯರು, ಹಾಗೂ ಬೈಲಪತ್ತಾರ ಸಮಾಜದ ಸರ್ವ ಸದಸ್ಯರು ಹಾಜರಿದ್ದರು.
Check Also
ರಾಣಿ ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆ: ಜನ- ಪೊಲೀಸರ ಮಧ್ಯೆ ವಾಗ್ವಾದ
Spread the love ಬೆಳಗಾವಿ: ತಾಲ್ಲೂಕಿನ ಕಣಬರಗಿಯ ಮುಖ್ಯವೃತ್ತದಲ್ಲಿ ಎರಡು ದಿನಗಳ ಹಿಂದೆ ಪ್ರತಿಷ್ಠಾಪಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆ …