Breaking News

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮೂರು ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

Spread the love

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮೂರು ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ರವಿಶಂಕರ್ ಆಶ್ರಮ, ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣಗಳನ್ನು ರೋಗ ಲಕ್ಷಣವಿಲ್ಲದ ಕೊರೊನಾ ಸೋಂಕಿತರ ಚಿಕಿತ್ಸಾ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲಿವೆ. ಖಾಸಗಿ ಆಸ್ಪತ್ರೆಯಲ್ಲೂ ಕೊರೊನಾ ಚಿಕಿತ್ಸೆ ನೀಡಲು ನಿರ್ಧಾರ ಮಾಡಲಾಗಿದೆ. ಖಾಸಗಿ ವೈದ್ಯಕೀಯ ಆಸ್ಪತ್ರೆ, ಕಾಲೇಜುಗಳಲ್ಲಿ ಕೂಡ ಚಿಕತ್ಸೆಗೆ ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ ಏರಿಕೆ:
ರಾಜಧಾನಿ ಬೆಂಗಳೂರಿನ ಸುತ್ತ ಆವರಿಸಿರುವ ಕೊರೊನಾ ಸಾವಿರ ಗಡಿ ದಾಟಿದ್ದು, ಕಂಟೈನ್ಮೆಂಟ್ ಝೂನ್ ಗಳ ಸಂಖ್ಯೆ 279ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಮೂಲೆ ಮೂಲೆಯಲ್ಲೂ ಕಂಟೈನ್ಮೆಂಟ್ ವಲಯಗಳು ಹುಟ್ಟಿಕೊಂಡಿವೆ.  ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ಕಂಟೈನ್ಮೆಂಟ್ ಝೋನ್‍ಗಳು:
ಬೊಮ್ಮನಹಳ್ಳಿ ವಲಯ- 38 ಕಂಟೈನ್ಮೆಂಟ್ ಝೂನ್ ಗಳು
ದಾಸರಹಳ್ಳಿ ವಲಯ- 9 ಕಂಟೈನ್ಮೆಂಟ್ ಝೂನ್ ಗಳು
ಬೆಂಗಳೂರು ಪೂರ್ವ ವಲಯ- 45 ಕಂಟೈನ್ಮೆಂಟ್ ಝೂನ್
ಮಹದೇವಪುರ ವಲಯ- 31 ಕಂಟೈನ್ಮೆಂಟ್ ಝೂನ್
ರಾಜರಾಜೇಶ್ವರಿ ನಗರ- 12 ಕಂಟೈನ್ಮೆಂಟ್ ಝೂನ್  ಬೆಂಗಳೂರು ದಕ್ಷಿಣ ವಲಯ- 81 ಕಂಟೈನ್ಮೆಂಟ್ ಝೂನ್
ಬೆಂಗಳೂರು ಪಶ್ಚಿಮ ವಲಯ- 38 ಕಂಟೈನ್ಮೆಂಟ್ ಝೂನ್
ಯಲಹಂಕ ವಲಯ- 17 ಕಂಟೈನ್ಮೆಂಟ್ ಝೂನ್


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ