Breaking News

ಸಿ.ಪಿ ಯೋಗೇಶ್ವರ್‌ಗೆ ಸಿಎಂ ಬಿಎಸ್‍ವೈ ಖಡಕ್ ವಾರ್ನಿಂಗ್…………

Spread the love

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಆರೋಪ ಮಾಡಿರುವ ಸಿಪಿ ಯೋಗೇಶ್ವರ್‌ಗೆ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಪಕ್ಷ, ಸರ್ಕಾರಕ್ಕೆ ಮುಜುಗರ ಆಗುವಂಥ ಹೇಳಿಕೆ ಕೊಡಬೇಡಿ. ಕೊರೊನಾ ಸಮಯದಲ್ಲಿ ಅನಗತ್ಯ ಹೇಳಿಕೆ ಕೊಡಬೇಡಿ. ನಿಮ್ಮ ಕಿತ್ತಾಟ ಕ್ಷೇತ್ರದ ಮಟ್ಟಿಗೆ ಇಟ್ಕೊಳ್ಳಿ. ಸುಮ್ನೆ ನಿಮ್ ಜಂಜಾಟದಲ್ಲಿ ನಮ್ಮನ್ನ್ಯಾಕೆ ಎಳೀತೀರಾ ಅಂದಿದ್ದಾರೆ ಅಂತ ತಿಳಿದುಬಂದಿದೆ.

ಸಚಿವ ಸಂಪುಟ ವಿಸ್ತರಣೆ ಚರ್ಚೆ ಬೆನ್ನಲ್ಲೇ ರಾಜ್ಯಪಾಲರನ್ನು ಸಿಎಂ ಭೇಟಿಯಾಗಿದ್ದರು. ಸುಮಾರು 20 ನಿಮಿಷಗಳ ಚರ್ಚೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡದೆ ಹೊರ ನಡೆದರು. ಜೊತೆಯಲ್ಲಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಆಗಿಲ್ಲ. ಕೊರೊನಾ ನಿರ್ವಹಣೆ ಬಗ್ಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಕ್ರಮವಹಿಸಿ, ಆಯುರ್ವೇದಕ್ಕೆ ಒತ್ತು ಕೊಡಿ. ಡ್ರಗ್ಸ್ ಮಾಫಿಯಾ ವಿರುದ್ಧದ ಸಮರವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ ಅಂತ ಹೇಳಿದ್ದಾರೆ ಅಂದ್ರು.

 

ಇತ್ತ ಮಡಿಕೇರಿಯಲ್ಲಿ ಮಾತನಾಡಿರೋ ಶಾಸಕ ಅಪ್ಪಚ್ಚು ರಂಜನ್, ನಾನೂ ಸಚಿವ ಸ್ಥಾನದ ಆಕಾಂಕ್ಷಿ ಅನುಮಾನವೇ ಬೇಡ ಅಂದ್ರು. ಈ ಮಧ್ಯೆ, ಹೆಚ್. ವಿಶ್ವನಾಥ್ ಪರಿಷತ್ ಸ್ಥಾನ ಅಸಿಂಧುಗೊಳಿಸಿ ಅಂತ ಸಾರಾ ಮಹೇಶ್ ಅವರು ರಾಜ್ಯಪಾಲರು, ಸಭಾಪತಿಗಳು, ವಿಧಾನ ಪರಿಷತ್ ಕಾರ್ಯದರ್ಶಿ, ಎಜಿಗೆ ಪತ್ರ ಬರೆದಿದ್ದಾರೆ.


Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ