Breaking News

ಬೆಳಗಾವಿ ಜಿಲ್ಲೆಯಲ್ಲಿ 36 ಪೊಲೀಸರಿಗೆ ಕೊರೋನಾ ಬಂದಿದೆ. ಎಲ್ಲರೂ 2ನೇ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದು, ಯಾರಿಗೂ ಜೀವಾಪಾಯವಿಲ್ಲ

Spread the love

ಜೀವದ ಹಂಗು ತೊರೆದು ಜನರ ರಕ್ಷಣೆಗಾಗಿ ಬೀದಿಯಲ್ಲಿ ನಿಂತು ಹೋರಾಡುತ್ತಿರುವ ಕೊರೋನಾ ಫ್ರಂಟೈ ಲೈನ್ ವಾರಿಯರ್ಸ್ ಪೊಲೀಸರು ಎಷ್ಟು ಸುರಕ್ಷಿತರಾಗಿದ್ದಾರೆ?

ಬೆಳಗಾವಿ ನಗರ ಒಂದರಲ್ಲೇ 66 ಪೊಲೀಸರು ಕೊರೋನಾದಿಂದಾಗಿ ಬಳಲುತ್ತಿದ್ದಾರೆ. ಆದರೆ ಅವರೆಲ್ಲ ಜೀವಾಪಾಯದಿಂದ ಪಾರಾಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ 2 ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡವರೇ ಆಗಿದ್ದಾರೆ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 36 ಪೊಲೀಸರಿಗೆ ಕೊರೋನಾ ಬಂದಿದೆ. ಎಲ್ಲರೂ 2ನೇ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದು, ಯಾರಿಗೂ ಜೀವಾಪಾಯವಿಲ್ಲ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿತಿಳಿಸಿದ್ದಾರೆ.

ಒಂದಿಬ್ಬರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದವರೆಲ್ಲ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನರಿಗೆ ಮನೆಯಲ್ಲೇ ಇರುವ ಅವಕಾಶವಿದ್ದರೂ ಹೊರಗೆ ಬರುತ್ತಿದ್ದಾರೆ. ಆದರೆ ಪೊಲೀಸರಿಗೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಕರ್ತವ್ಯಕ್ಕಾಗಿ ಹೊರಗೆ ಬರಬೇಕಾಗಿದೆ. ಕರ್ತವ್ಯ ಮುಗಿಸಿ ಮನೆಗೆ ಹೋಗಿ ಕುಟುಂಬದೊಂದಿಗೆ ಬೆರೆಯಬೇಕಾಗಿದೆ. ಮನೆಯಲ್ಲಿ ಸಣ್ಣ ಮಕ್ಕಳಿರುತ್ತಾರೆ, ವೃದ್ದ ತಂದೆ, ತಾಯಿ ಇರುತ್ತಾರೆ, ಗರ್ಭಿಣಿ ಪತ್ನಿ ಇರುತ್ತಾಳೆ, ಬಾಣಂತಿ ಪತ್ನಿ ಇರುತ್ತಾಳೆ. ಇಂತಹ ಪರಿಸ್ಥಿತಿಗಳಲ್ಲೂ ಕರ್ತವ್ಯ ನಿರ್ವಹಿಸುತ್ತಾರೆ.ಜನರು ಸಂಯಮದಿಂದ ಮನೆಯಲ್ಲೇ ಇದ್ದರೆ, ತೀರಾ ಅವಶ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರುತ್ತೇನೆ ಎಂದು ಪ್ರತಿಜ್ಞೆ ಮಾಡಿದರೆ ಎಲ್ಲರೂ ಸೇಫ್ ತಾನೆ? ಪೊಲೀಸರೊಂದಿಗೆ ಸಹಕರಿಸೋಣ. ಅವರ ತಾಳ್ಮೆ ಪರೀಕ್ಷಿಸುವ ಕೆಲಸ ಮಾಡುವುದು ಬೇಡ 

https://twitter.com/explore/tabs/covid-19?ref_src=twsrc%5Etfw%7Ctwcamp%5Etweetembed%7Ctwterm%5E1393204937828421637%7Ctwgr%5E%7Ctwcon%5Es1_&ref_url=https%3A%2F%2Fpragativahini.com%2Fkarnataka-news%2Fhow-many-cops-infected-by-coronoa-in-belgaum-shocking-news%2F

 

 


Spread the love

About Laxminews 24x7

Check Also

ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿ

Spread the loveಚಾಮರಾಜನಗರ: ಪ್ರಿಯಕರನ ಜೊತೆ ಸೇರಿ ತನ್ನ ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿ ಹಾಗೂ ವ್ಯಕ್ತಿಗೆ ಅಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ