Breaking News

ಬೆಳಗಾವಿ ನಗರ ಸಿಸಿಬಿ ತಂಡ ದಾಳಿ ನಡೆಸಿ ಅಕ್ರಮವಾಗಿ ರೆಮ್‌ಡಿಸಿವರ್ ಔಷಧಿಯನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದೆ.

Spread the love

ಬೆಳಗಾವಿ – ಬೆಳಗಾವಿ ನಗರ ಸಿಸಿಬಿ ತಂಡ ದಾಳಿ ನಡೆಸಿ ಅಕ್ರಮವಾಗಿ ರೆಮ್‌ಡಿಸಿವರ್ ಔಷಧಿಯನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದೆ.
ನಗರದಲ್ಲಿ ಕೋವಿಡ್-೧೯ ರೋಗಿಗಳಿಗೆ ನೀಡುವ ರೆಮ್‌ಡಿಸಿವರ್ ಔಷಧಿಯನ್ನು ಅಕ್ರಮ/ಕಾಳ ಸಂತೆಯಲ್ಲಿ ಮಾರಾಟ ಮಾಡುವಂಥರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಡಾ|| ತ್ಯಾಗರಾಜನ್. ಕೆ. ಪೊಲೀಸ್ ಆಯುಕ್ತರು, ಸಿಟಿ ಕ್ರೈಂ ಬ್ರಾಂಚನ್ ಪಿಐ   ನಿಂಗನಗೌಡ ಪಾಟೀಲ ರವರಿಗೆ ಸೂಚಿಸಿದ್ದರು.

 ಸಿಕ್ಕ ಖಚಿತ ಮಾಹಿತಿಯಂತೆ  ಆರೋಪಿಯೊಂದಿಗೆ ತಮ್ಮ ಸಿಬ್ಬಂದಿಯೊಬ್ಬರ ಮುಖಾಂತರ ಸಾಮಾನ್ಯ ನಾಗರಿಕರಂತೆ ದೂರವಾಣಿಯಲ್ಲಿ ಮಾತನಾಡಿ ತಮ್ಮ ಕುಂಟುಂಬ ಸದಸ್ಯರಿಗೆ ರೆಮ್‌ಡಿಸಿವರ್ ಔಷಧಿ ಅವಶ್ಯವಿದ್ದು ಔಷಧಿ ಕೊಡಲು ತಿಳಿಸಿ ಅವರು ಹೇಳಿದ ಹಣವನ್ನು ಆತನ ಖಾತೆಗೆ ವರ್ಗಾವಣೆ ಮಾಡಿ, ನಗರದ ಪ್ರಮುಖ ಹೋಟೇಲ್ ಬಳಿ ಬರಲು ತಿಳಿಸಿ ಅಕ್ರಮ ಚುಚ್ಚುಮದ್ದನ್ನು ಮಾರಾಟ ಮಾಡುವುದು ಖಚಿತವಾದಾಗ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಯಿತು.
ಆರೋಪಿತರಾದ  ಮಂಜುನಾಥ ದುಂಡಪ್ಪ ದಾನವಾಡಕರ, (೩೫) (ಸಾ: ರಾಮಪೂರ, ತಾ: ರಬಕವಿ-ಬನಹಟ್ಟಿ, ಜಿ: ಬಾಗಲಕೋಟೆ, ಸಧ್ಯ ಸಮರ್ಥಗಲ್ಲಿ ಶಾಹೂನಗರ, ಬೆಳಗಾವ ಮತ್ತು ಸಂಜೀವ ಚಂದ್ರಶೇಖರ ಮಾಳಗಿ, (೩೩) (ಸಾ: ನಯಾನಗರ, ತಾ: ಬೈಲಹೊಂಗಲ, ಜಿ: ಬೆಳಗಾವಿ, ಸಧ್ಯ ಶಿವಾಜಿ ನಗರ, ಬೆಳಗಾವಿ) ಇವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

 


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ